ETV Bharat / bharat

ಅಡ್ಡ ಮತದಾನ; ಹಿಮಾಚಲ ಪ್ರದೇಶ ಕಾಂಗ್ರೆಸ್​ನ 6 ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್​ - ಅಡ್ಡ ಮತದಾನ

Himachal Political Crisis: ಇತ್ತೀಚಿಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಹಿಮಾಚಲ ಪ್ರದೇಶ ಕಾಂಗ್ರೆಸ್​ನ 6 ಜನ ಶಾಸಕರನ್ನು ಅಲ್ಲಿನ ಸ್ಪೀಕರ್​ ಅನರ್ಹಗೊಳಿಸಿದ್ದಾರೆ.

ಕಾಂಗ್ರೆಸ್​ನ 6 ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್​
congress mlas disqualified
author img

By ETV Bharat Karnataka Team

Published : Feb 29, 2024, 11:46 AM IST

Updated : Feb 29, 2024, 12:25 PM IST

ಶಿಮ್ಲಾ (ಹಿಮಾಚಲ ಪ್ರದೇಶ): ಪಕ್ಷದ ವಿಪ್​ ಉಲ್ಲಂಘಿಸಿ ಸ್ವಪಕ್ಷದ ನಿಲುವಿಗೆ ವಿರುದ್ಧವಾಗಿ ಅಡ್ಡ ಮತದಾನ ಮಾಡಿದ ಆರು ಜನ ಶಾಸಕರನ್ನು ಸ್ಪೀಕರ್ ಕುಲ್​ದೀಪ್​ ಸಿಂಗ್​ ಪಠಾನಿಯಾ ಅವರು​ ಅನರ್ಹಗೊಳಿಸಿದ್ದಾರೆ. ಇತ್ತೀಚಿಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕ್ರಾಸ್​ ವೋಟಿಂಗ್​ ನಿಂದ ಕಾಂಗ್ರೆಸ್​ ಪಕ್ಷ ಮುಖಭಂಗ ಅನುಭವಿಸಿತ್ತು.

ಈ ಆರು ಮಂದಿ ಶಾಸಕರ ವಿಚಾರದಲ್ಲಿ ತೆಗೆದುಕೊಂಡ ಅನರ್ಹತೆಯ ನಿರ್ಧಾರವನ್ನು ಇಂದು ಮಾಧ್ಯಮಗೋಷ್ಟಿಯಲ್ಲಿ ಸ್ಪೀಕರ್ ಪ್ರಕಟಿಸಿದರು.

ಇತ್ತೀಚೆಗೆ ಮುಕ್ತಾಯಗೊಂಡ ಬಜೆಟ್ ಅಧಿವೇಶನದ ಉತ್ಪಾದಕತೆ ಮತ್ತು ಸದನದಲ್ಲಿ ಮಂಡಿಸಿದ ಹಣಕಾಸು ಮಸೂದೆ ವಿರುದ್ಧವಾಗಿಯೂ ಈ ಶಾಸಕರು ಮತ ಚಲಾಯಿಸಿದ್ದರು ಎಂದು ಸ್ಪೀಕರ್ ಮಾಹಿತಿ ನೀಡಿದರು.

ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಸೋಲನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವರು ಅಡ್ಡ ಮತದಾನ ಮಾಡಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಆರು ಶಾಸಕರನ್ನು ಸದನದಿಂದ ಅನರ್ಹಗೊಳಿಸಬೇಕೆಂದು ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಸ್ಪೀಕರ್​ ಪರಿಗಣಿಸಿರುವ ಸಭಾಧ್ಯಕ್ಷರು ಇಂದು ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಬಿಟ್ಟು ಬಿಜೆಪಿ ಸೇರಲ್ಲ, ಜನ ಬಯಸಿದರೆ ರಾಜಕೀಯದಿಂದ ನಿವೃತ್ತಿಗೆ ಸಿದ್ಧ: ಕಮಲ್​ನಾಥ್​

Last Updated : Feb 29, 2024, 12:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.