ಸೂರತ್ (ಗುಜರಾತ್): ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 11 ಜನರು ಶಾಖದ ಹೊಡೆತಕ್ಕೆ ಸಾವನ್ನಪ್ಪಿದ್ದಾರೆ. ಬಿಸಿಲಿನ ತಾಪದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾ.ನೀಲಂ ಪಟೇಲ್ ಇಂದು ಸೂರತ್‌ಗೆ ಭೇಟಿ ನೀಡಿದ್ದರು. ಡಾ. ನೀಲಂ ಪಟೇಲ್ ಅವರು ಸಿವಿಲ್ ಆಸ್ಪತ್ರೆ, ಸ್ಮೀರ್ ಆಸ್ಪತ್ರೆ ಸೇರಿದಂತೆ ಆರೋಗ್ಯ ಇಲಾಖೆಯ ವೈದ್ಯರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
24 ಗಂಟೆಯಲ್ಲಿ 11 ಸಾವು: ಮೇ 27ರವರೆಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕಳೆದ ಎರಡು ದಿನಗಳಿಂದ ಸೂರತ್‌ನಲ್ಲಿ ಬಿಸಿಲಿನ ತಾಪದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಆರೆಂಜ್ ಅಲರ್ಟ್ ಇದ್ದ ಕಾರಣ ಹೀಟ್‌ಸ್ಟ್ರೋಕ್ ಸಾಧ್ಯತೆಯೂ ಹೆಚ್ಚಿದೆ. ಈ ತೀವ್ರ ಶಾಖದ ನಡುವೆ ಕಳೆದ 24 ಗಂಟೆಗಳಲ್ಲಿ ಹಠಾತ್ ಮೂರ್ಛೆ, ಅಸ್ವಸ್ಥ ಮತ್ತು ಜ್ವರದಿಂದ ಒಟ್ಟು 11 ಜನರು ಸಾವನ್ನಪ್ಪಿದ್ದಾರೆ.
ಆರೋಗ್ಯ ಇಲಾಖೆ ದೌಡು: ಸಭೆಯಲ್ಲಿ ಬಿಸಿಲಿನ ಶಾಖ ಹೆಚ್ಚಾದ ಸಂದರ್ಭದಲ್ಲಿ ಯಾವ ಮುಂಜಾಗ್ರತೆ ವಹಿಸಬೇಕು ಮತ್ತು ಜನರು ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯಬೇಕು ಎಂದು ಚರ್ಚಿಸಲಾಯಿತು. ನಾಲ್ಕೈದು ಜಿಲ್ಲೆಗಳಲ್ಲಿ ಬಿಸಿಲಿನ ಪರಿಣಾಮ ಅತಿ ಹೆಚ್ಚು ಎಂದು ಹೇಳಿದರು. ಇದರಿಂದ ಪ್ರಕರಣಗಳೂ ಹೆಚ್ಚಿವೆ. ಶಾಖದ ಹೊಡೆತದ ಸಂಭವ ಹೆಚ್ಚಾಗಿದೆ ಎಂದು ಚರ್ಚೆ ಮಾಡಿದರು.
ಒಂದೇ ದಿನದಲ್ಲಿ 224 ಪ್ರಕರಣಗಳು ವರದಿ: ಇಡೀ ರಾಜ್ಯದಲ್ಲಿ ಬರುತ್ತಿರುವ ಬಿಸಿಗಾಳಿ ಸಂಬಂಧಿತ ತುರ್ತು ಪ್ರಕರಣಗಳನ್ನು ನಾವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ವೈದ್ಯ ನೀಲಂ ಪಟೇಲ್ ಹೇಳಿದರು. ಏಪ್ರಿಲ್ ಮತ್ತು ಮೇ ತಿಂಗಳ ಆರಂಭದಲ್ಲಿ ದಿನಕ್ಕೆ 50 ರಿಂದ 60 ಪ್ರಕರಣಗಳು ದಾಖಲಾಗಿವೆ. ಕ್ರಮೇಣ, ಶಾಖದ ಮಟ್ಟವು ಹೆಚ್ಚಾದಂತೆ, ಪ್ರಕರಣಗಳ ಸಂಖ್ಯೆಯೂ ಹೆಚ್ಚಾಯಿತು ಎಂದು ಹೇಳಿದರು.
ಇದು ಸರಾಸರಿ 80-90 ಕ್ಕಿಂತ ಹೆಚ್ಚಿತ್ತು. ಕಳೆದ ನಾಲ್ಕು ದಿನಗಳಿಂದ ತಾಪಮಾನ ಭೀಕರವಾಗಿ ಹೆಚ್ಚುತ್ತಿದೆ. ಇದರಿಂದಾಗಿ 108 ತುರ್ತು ಸೇವೆಗಳು 188 ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸುತ್ತಿವೆ. ಮೇ 23 ರಂದು 224 ಪ್ರಕರಣಗಳು ವರದಿಯಾಗಿವೆ. ಸೂರತ್‌ನಲ್ಲಿ ಹೀಟ್‌ಸ್ಟ್ರೋಕ್ ಲಕ್ಷಣಗಳಿಂದ 10 ಜನರು ಸಾವನ್ನಪ್ಪಿದ್ದಾರೆ. ಆದ್ರೆ ಈ ಕುರಿತು ನಿಖರವಾದ ಮಾಹಿತಿಗಾಗಿ ಪ್ರಸ್ತುತ ತನಿಖೆ ಮಾಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ನಿನ್ನೆಯಷ್ಟೇ ರಾಜಸ್ಥಾನದಲ್ಲಿ ಐವರು ಸೂರ್ಯನ ಆಟಾಟೋಪಕ್ಕೆ ಬಲಿಯಾಗಿದ್ದರು. ಹಲವುರ ಅಸ್ವಸ್ಥಗೊಂಡಿರುವ ಸುದ್ದಿಗಳು ಬಂದಿದ್ದವು.
ಓದಿ: ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು - Horrific Road Accident