ETV Bharat / bharat

ಹತ್ರಾಸ್ ಕಾಲ್ತುಳಿತ: ಮೃತದೇಹ ಕಂಡ ಕಾನ್ಸ್​​​​ಟೇಬಲ್​ , ಬಾಲಕಿಗೆ ಹೃದಯಾಘಾತ ; ಸತ್ತವರ ಪಟ್ಟಿ ಬಿಡುಗಡೆಗೊಳಿಸಿದ ಜಿಲ್ಲಾಡಳಿತ - hathras satsang stampede

author img

By ETV Bharat Karnataka Team

Published : Jul 3, 2024, 5:38 PM IST

Updated : Jul 3, 2024, 5:45 PM IST

ಹತ್ರಾಸ್ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಇದುವರೆಗೆ 116 ಮಂದಿ ಸತ್ತವರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಲ್ಲಿ ಮೃತದೇಹಗಳನ್ನು ಕಂಡು ಕಾನ್ಸ್​​ಟೇಬಲ್​​ ಹಾಗೂ ಬಾಲಕಿಗೆ ಹೃದಯಾಘಾತವಾಗಿದೆ.

hathras-satsang
ಹತ್ರಾಸ್ ಕಾಲ್ತುಳಿತ (ETV Bharat)

ಹತ್ರಾಸ್ (ಉತ್ತರ ಪ್ರದೇಶ) : ಹತ್ರಾಸ್ ಸತ್ಸಂಗದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟವರನ್ನು ಕಂಡು ಇಟಾಹ್ ಜಿಲ್ಲೆಯ ಅವಘರ್ ಪೊಲೀಸ್ ಠಾಣೆಯ ಕಾನ್ಸ್​​ಟೇಬಲ್​ ರವಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಇನ್ನೊಂದೆಡೆ ಆಸ್ಪತ್ರೆಯಲ್ಲಿ ಮೃತದೇಹಗಳನ್ನು ನೋಡಿದ ಬಾಲಕಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಹತ್ರಾಸ್ ಅಪಘಾತದಲ್ಲಿ ಈವರೆಗೆ ಸಾವನ್ನಪ್ಪಿದ 116 ಮಂದಿಯ ಪಟ್ಟಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಜಿಲ್ಲಾಡಳಿತದ ಪ್ರಕಾರ, ಈ ಅಪಘಾತದಲ್ಲಿ ಇದುವರೆಗೆ ಒಟ್ಟು 121 ಜನರು ಸಾವನ್ನಪ್ಪಿದ್ದಾರೆ. ಗಾಯಾಳುಗಳಿಗೆ ಸಹಾಯ ಮಾಡಲು ಸಹಾಯವಾಣಿ ಸಂಖ್ಯೆಗಳನ್ನು ಸಹ ನೀಡಲಾಗಿದೆ.

ಜಿಲ್ಲೆಯ ಕೊತ್ವಾಲಿ ಸಿಕಂದರಾವ್ ಪೊಲೀಸ್ ಠಾಣೆ ವ್ಯಾಪ್ತಿಯ ರಾತಿಭಾನ್‌ಪುರದ ಫುಲ್ರೈ ಗ್ರಾಮದಲ್ಲಿ ಮಂಗಳವಾರ ನಾರಾಯಣ ಸಕರ್ ವಿಶ್ವ ಹರಿ ಸಂಸ್ಥೆಯಿಂದ ಸತ್ಸಂಗವನ್ನು ಆಯೋಜಿಸಲಾಗಿತ್ತು. ಇಲ್ಲಿ ಭೋಲೆ ಬಾಬಾರವರ ಸತ್ಸಂಗ ನಡೆಯುತ್ತಿತ್ತು. ಸತ್ಸಂಗ ಮುಗಿದ ಕೂಡಲೇ ಕಾಲ್ತುಳಿತ ಉಂಟಾಯಿತು. ಈ ಕಾಲ್ತುಳಿತದಲ್ಲಿ ಮಹಿಳೆಯರು ಮತ್ತು ಮಕ್ಕಳು ತೀವ್ರವಾಗಿ ನಜ್ಜುಗುಜ್ಜಾಗಿದ್ದರು.

ತಡರಾತ್ರಿಯವರೆಗೂ ಈ ಕಾಲ್ತುಳಿತದಲ್ಲಿ 116 ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ದೃಢಪಡಿಸಿದೆ. ಕಾಲ್ತುಳಿತದ ಸ್ಥಳದಲ್ಲಿ ಎಲ್ಲೆಂದರಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕಂಡು ಬಂದಿವೆ. ಮೃತದೇಹಗಳನ್ನು ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಅದೇ ಸಮಯದಲ್ಲಿ 116 ಸತ್ತವರ ಪಟ್ಟಿ ಮತ್ತು ಸಹಾಯವಾಣಿ ಸಂಖ್ಯೆಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.

ಹತ್ರಾಸ್ ಘಟನೆಗೆ ಸಂಬಂಧಿಸಿದಂತೆ ಅಲಿಗಢ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಖ್ ಜಿ ಅವರು ಮಾತನಾಡಿ, 23 ಮೃತದೇಹಗಳು ಅಲಿಗಢಕ್ಕೆ ಬಂದಿವೆ. ಗಾಯಗೊಂಡ ಮೂವರು ಜೆಎನ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಐಸಿಯುಗೆ ಸೇರಿಸಿದ್ದಾರೆ. ಎಎಂಯು ಆಡಳಿತದ ಪರವಾಗಿ ರಿಜಿಸ್ಟ್ರಾರ್ ಮತ್ತು ಉಪಕುಲಪತಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. 15 ಮೃತದೇಹಗಳು ಜೆಎನ್ ವೈದ್ಯಕೀಯ ಕಾಲೇಜಿಗೆ, 6 ಮಲ್ಖಾನ್ ಸಿಂಗ್ ಜಿಲ್ಲಾ ಆಸ್ಪತ್ರೆಗೆ ಮತ್ತು ಎರಡು ಮರಣೋತ್ತರ ಕೇಂದ್ರಕ್ಕೆ ಬಂದಿವೆ. ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಹಾಯವಾಣಿ ಸಂಖ್ಯೆಗಳು :

ಆಗ್ರಾ ವಲಯ ನಿಯಂತ್ರಣ-7839866849

ಅಲಿಗಢ್ ರೇಂಜ್ ಕಂಟ್ರೋಲ್-7839855724

ಆಗ್ರಾ ರೇಂಜ್ ಕಂಟ್ರೋಲ್-7839855724

ಹತ್ರಾಸ್ ಕಂಟ್ರೋಲ್-9454417377

ಎಟಾ ಕಂಟ್ರೋಲ್-9454417438

ಅಲಿಗಢ್ ಕಂಟ್ರೋಲ್-7007459568

ರಾತ್ರಿಯಿಡೀ ಅಲೆದಾಡಿದ ಕುಟುಂಬಸ್ಥರು : ಹತ್ರಾಸ್‌ನ ಸಿಕಂದರಾರಾವ್‌ನಲ್ಲಿ ಭೋಲೆ ಬಾಬಾ ಅವರ ಸತ್ಸಂಗದಲ್ಲಿ ಕಾಲ್ತುಳಿತದಿಂದ ಜನರು ಕಾಣೆಯಾದ ತಮ್ಮ ಕುಟುಂಬ ಸದಸ್ಯರನ್ನು ಹುಡುಕುತ್ತಿದ್ದಾರೆ. ಕಾಸ್ಗಂಜ್​ನ ರಾಕೇಶ್ ಕೂಡ ಇದರಲ್ಲಿ ಭಾಗಿಯಾಗಿದ್ದರು.

ಕಾಲ್ತುಳಿತದ ನಂತರ ತಂಗಿ ಮನೆಗೆ ಬಂದಿಲ್ಲ. ರಾಕೇಶ್ ಇಲ್ಲಿಯವರೆಗೆ ಹತ್ರಾಸ್, ಅಲಿಗಢ, ಇಟಾಹ್, ಸಿಕಂದರಾವುನಲ್ಲಿ 100 ಕ್ಕೂ ಹೆಚ್ಚು ಶವಗಳ ನಡುವೆ ಕಾಣೆಯಾದ ತನ್ನ ಸಹೋದರಿಗಾಗಿ ಹುಡುಕಾಡಿದ್ದಾರೆ. ಆದರೆ ತಂಗಿ ಎಲ್ಲಿಯೂ ಪತ್ತೆಯಾಗಿಲ್ಲ. ರಾಕೇಶ್ ಎಸ್‌ಎನ್ ಮೆಡಿಕಲ್ ಕಾಲೇಜಿನ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ತಲುಪಿ ಮೃತ ದೇಹಗಳ ನಡುವೆ ತನ್ನ ಸಹೋದರಿಗಾಗಿ ಹುಡುಕಾಡಿದ್ದಾರೆ.

ಅದೇ ಸಮಯದಲ್ಲಿ, ಆಗ್ರಾದಲ್ಲಿ ವೈದ್ಯರ ತಂಡವು 25 ಮೃತ ದೇಹಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಿತು. ಇದಾದ ಬಳಿಕ ಪೊಲೀಸರು ಮತ್ತು ಆಡಳಿತ ಮಂಡಳಿ ಎಲ್ಲಾ ಮೃತದೇಹಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಿದೆ.

ಮೊಬೈಲ್​ನಲ್ಲಿ ತಾಯಿ ಮೃತಪಟ್ಟಿದ್ದು ದೃಢ : ಮಥುರಾ ನಿವಾಸಿ ಅನಿಲ್ ಕೂಡ ತನ್ನ ತಾಯಿ ಜೈಮಂತಿ ದೇವಿ (60 ವರ್ಷ) ಪತ್ತೆಗೆ ಅಲೆದಾಡುತ್ತಿದ್ದ. ಆಗ್ರಾದ ಎಸ್‌ ಎನ್ ಮೆಡಿಕಲ್ ಕಾಲೇಜಿನ ತುರ್ತು ಮತ್ತು ಮರಣೋತ್ತರ ಪರೀಕ್ಷೆಯ ಕೇಂದ್ರಕ್ಕೆ ತಲುಪಿದ್ದಾನೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ತಕ್ಷಣ ಸಿಕಂದರಾವ್ ಬಳಿಗೆ ತೆರಳಿದ್ದಾರೆ. ಅಲ್ಲಿ ತಾಯಿ ಕಾಣದ ಕಾರಣ ಅಲ್ಲಿಂದ ಹತ್ರಾಸ್ ತಲುಪಿದ್ದಾರೆ. ಆಗ ಆತನ ಮೊಬೈಲ್‌ನಲ್ಲಿ ವಿಡಿಯೋ ಬಂದಿದ್ದು, ಅದರಲ್ಲಿ ಆತನ ತಾಯಿ ಮೃತಪಟ್ಟಿರುವುದು ತಿಳಿದು ಬಂದಿದೆ.

ಇದನ್ನೂ ಓದಿ : ಹತ್ರಾಸ್ ಕಾಲ್ತುಳಿತ ದುರಂತ: ಸಾವಿನ ಸಂಖ್ಯೆ 121ಕ್ಕೇರಿಕೆ; ಕಾರ್ಯಕ್ರಮ ಆಯೋಜಕರ ವಿರುದ್ಧ FIR - Hathras Stampede

Last Updated : Jul 3, 2024, 5:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.