ETV Bharat / bharat

ರಾಹುಲ್​ ಗಾಂಧಿಗೆ ಸ್ವಿಗ್ಗಿ ಮೂಲಕ 1 ಕೆ.ಜಿ ಜಿಲೇಬಿ ಕಳುಹಿಸಿದ ಬಿಜೆಪಿ: ಅದೂ ಕ್ಯಾಶ್ ಆನ್‌ ಡೆಲಿವರಿ! - BJP ORDER JALEBI

ಚುನಾವಣೆಯಲ್ಲಿ ಗೆಲುವಿನ ಸಂಭ್ರಮದಲ್ಲಿರುವ ಹರಿಯಾಣ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಮನೆಗೆ ಸ್ವಿಗ್ಗಿಯ ಮೂಲಕ ಜಿಲೇಬಿ ಕಳುಹಿಸಿದ್ದಾರೆ.

BJP SENT JALEBI RAHUL GANDHIS HOME
ರಾಹುಲ್​ ಗಾಂಧಿ ಮನೆಗೆ ಜಿಲೇಬಿ ಆರ್ಡರ್​ ಕಳುಹಿಸಿದ ಬಿಜೆಪಿ (ETV Bharat)
author img

By ETV Bharat Karnataka Team

Published : Oct 9, 2024, 6:14 PM IST

ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿದರೆ, ಕಾಂಗ್ರೆಸ್​ಗೆ ಆಘಾತವಾಗಿದೆ. ಬಿಜೆಪಿ ಕಾರ್ಯಕರ್ತರು ಸಿಹಿ ಖಾದ್ಯವಾದ ಜಿಲೇಬಿ, ಲಾಡು ಹಂಚಿ ಗೆಲುವಿನ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇದರ ಜೊತೆಗೆ, ತಾವೇ ಈ ಸಿಹಿಯನ್ನು ತಯಾರಿಸುತ್ತಿದ್ದಾರೆ.

ಹರಿಯಾಣದಲ್ಲಿ ಸದ್ಯಕ್ಕೆ ಈಗ ಜಿಲೇಬಿಯದ್ದೇ ಭಾರಿ ಹವಾ. ಸಾಮಾಜಿಕ ಜಾಲತಾಣಗಳಲ್ಲೂ ಈ ಸಿಹಿ ಖಾದ್ಯ ವೈರಲ್​ ಆಗುತ್ತಿದೆ. ಬಿಜೆಪಿ ಕಾರ್ಯಕರ್ತರು ತಮ್ಮಲ್ಲಿ ಮಾತ್ರವಲ್ಲದೇ, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಮನೆಗೂ ಜಿಲೇಬಿಯನ್ನು ಪಾರ್ಸೆಲ್​​ ಕಳುಹಿಸಿದ್ದಾರೆ.

ವಿಜಯೋತ್ಸವದ ನಡುವೆ ಹರಿಯಾಣ ಬಿಜೆಪಿ ನಾಯಕರು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ ಅವರ ಮನೆಗೆ 1 ಕೆ.ಜಿ ಜಿಲೇಬಿಯನ್ನು ಆನ್​​ಲೈನ್​​ ಆಹಾರ ಪೂರೈಕೆದಾರ ಸ್ವಿಗ್ಗಿಯ ಮೂಲಕ ಕಳುಹಿಸಿದ್ದಾರೆ. ಸಿಹಿ ತಿಂಡಿಯನ್ನು ಸ್ವಿಗ್ಗಿಯಲ್ಲಿ ಆರ್ಡರ್​ ಮಾಡಿರುವ ಸ್ಕ್ರೀನ್​ಶಾಟ್​​ ಅನ್ನು ತನ್ನ ಅಧಿಕೃತ 'ಎಕ್ಸ್'​ ಖಾತೆಯಲ್ಲಿ ಹಂಚಿಕೊಂಡಿದೆ.

'ಹರಿಯಾಣ ಬಿಜೆಪಿಯ ಎಲ್ಲ ಕಾರ್ಯಕರ್ತರ ಪರವಾಗಿ ರಾಹುಲ್​ ಗಾಂಧಿ ಅವರ ಮನೆಗೆ ಜಿಲೇಬಿಯನ್ನು ಕಳುಹಿಸಲಾಗಿದೆ. ಇದನ್ನು ಅವರು ಸ್ವೀಕರಿಸಬೇಕು' ಎಂದು ಒಕ್ಕಣೆ ಬರೆದಿದೆ. ಅಲ್ಲದೇ, ಜಿಲೇಬಿ ಪಾರ್ಸೆಲ್​​ ಅನ್ನು ಹಣ ಪಾವತಿಸಿ (ಕ್ಯಾಶ್ ಆನ್ ಡೆಲಿವರಿ) ಸ್ವೀಕರಿಸುವಂತೆಯೂ ಮಾಡಿದೆ!.

ರಾಹುಲ್​ ಗಾಂಧಿಗೇಕೆ ಜಿಲೇಬಿ ಆರ್ಡರ್​?: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸೋಲು- ಗೆಲುವಿನಷ್ಟೇ ಸಿಹಿ ಖಾದ್ಯ ಜಿಲೇಬಿ ಸದ್ದು ಮಾಡಿದೆ. ಜಿಲೇಬಿಯನ್ನು ರಾಹುಲ್​ ಗಾಂಧಿ ಅವರ ಮನೆಗೆ ಬಿಜೆಪಿ ಆರ್ಡರ್​ ಮಾಡಲು ಕಾರಣ ಕಾಂಗ್ರೆಸ್​ ನಾಯಕನೇ.

ಚುನಾವಣಾ ಪ್ರಚಾರದ ವೇಳೆ ರಾಹುಲ್​ ಗಾಂಧಿ ಅವರು, "ಸ್ಥಳೀಯವಾಗಿ ತಯಾರಿಸುವ ಜಿಲೇಬಿ ತಮಗೆ ಇಷ್ಟ. ರಾಜ್ಯದಲ್ಲಿ ಪ್ರಸಿದ್ಧವಾಗಿರುವ ಮಾತು ರಾಮ್​ ಹಲ್ವಾಯಿ ಜಿಲೇಬಿಯನ್ನು ನಾನು ಸವಿದಿದ್ದೇನೆ. ಅದು ಅತ್ಯಂತ ರುಚಿಕರವಾಗಿದೆ. ಇದನ್ನು ನನ್ನ ಸಹೋದರಿ ಪ್ರಿಯಾಂಕಾ ಅವರಿಗೂ ತೆಗೆದುಕೊಂಡು ಹೋಗುವೆ. ಜೊತೆಗೆ, ಈ ಜಿಲೇಬಿಯು ಜಗತ್ತಿನ ವಿವಿಧ ಪ್ರದೇಶಗಳಿಗೆ ತಲುಪಬೇಕು ಎಂದು ದೀಪೇಂದರ್​ ಹೂಡಾ ಮತ್ತು ಭಜರಂಗ್​ ಪುನಿಯಾ ಅವರಿಗೆ ತಿಳಿಸಿದ್ದೇನೆ" ಎಂದಿದ್ದರು.

ಗೆಲುವಿಗೂ ಮೊದಲೇ ಕಾಂಗ್ರೆಸ್​ 'ಜಿಲೇಬಿ' ಸಂಭ್ರಮ: ಇದರಿಂದ ಪ್ರೇರಿತರಾಗಿದ್ದ ಕಾಂಗ್ರೆಸ್​ ಕಾರ್ಯಕರ್ತರು ಚುನಾವಣಾ ಫಲಿತಾಂಶದ ಶುರುವಿನಲ್ಲಿ ಕಾಂಗ್ರೆಸ್​ ದೊಡ್ಡ ಸಂಖ್ಯೆಯಲ್ಲಿ ಮುನ್ನಡೆಯಲ್ಲಿದ್ದಾಗ, ಗೆಲುವಿನ ಸಂಭ್ರಮಾಚರಣೆ ಮಾಡಿದ್ದರು. ಈ ವೇಳೆ ಪರಸ್ಪರ ಜಿಲೇಬಿಯನ್ನು ಹಂಚಿಕೊಂಡಿದ್ದರು. ಆದರೆ, ಫಲಿತಾಂಶ ಉಲ್ಟಾ ಆಗಿ ಬಿಜೆಪಿ ಭರ್ಜರಿ ಗೆಲುವು ಕಂಡಿದೆ. ರಾಹುಲ್​ ಗಾಂಧಿ ಅವರ ಮಾತುಗಳು ಮತ್ತು ಕಾರ್ಯಕರ್ತರ ಸಂಭ್ರಮಾಚರಣೆಯನ್ನೇ ಅಣಕವಾಡಿರುವ ಬಿಜೆಪಿ, ಜಿಲೇಬಿಯನ್ನು ಕಾಂಗ್ರೆಸ್​ ನಾಯಕನ ಮನೆಗೆ ಆರ್ಡರ್​ ಮಾಡಿದೆ.

ಇಷ್ಟಲ್ಲದೇ, ಕಾಂಗ್ರೆಸ್​ ನಾಯಕ ರಾಹುಲ್​ ಅವರು ಇನ್ನು ಮುಂದೆ ಜಿಲೇಬಿ ಮಾರಾಟ ಮಾಡುತ್ತಾರೆ ಎಂಬ ಪೋಸ್ಟರ್​ಗಳನ್ನು ಹಂಚಿಕೊಳ್ಳುತ್ತಿರುವ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹರಿಯಾಣದಲ್ಲಿ ನಿರ್ಲಕ್ಷಿಸಿದ ಕಾಂಗ್ರೆಸ್‌ಗೆ ಕೌಂಟರ್‌; ದೆಹಲಿಯಲ್ಲಿ ಏಕಾಂಗಿ ಸ್ಪರ್ಧೆಗೆ ಆಪ್ ಪ್ಲಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.