ಅಹಮದಾಬಾದ್ (ಗುಜರಾತ್): ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುವ ಮುನ್ನ ಅಪರಿಚಿತ ವ್ಯಕ್ತಿಯೊಬ್ಬ ನಕಲಿ ಇ - ಮೇಲ್ ಐಡಿಗಳನ್ನು ಸೃಷ್ಟಿಸಿ ಗಾಂಧಿನಗರ ಸೇರಿದಂತೆ ವಿವಿಧ ಏಜೆನ್ಸಿಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಭಯೋತ್ಪಾದಕ ದಾಳಿ ಮಾಡುವ ಬೆದರಿಕೆ ಮೇಲ್ ಮಾಡಿದ್ದಾನೆ. ಭಾರತದಲ್ಲಿ 26/11 ರೀತಿಯ ಭಯೋತ್ಪಾದಕ ದಾಳಿ ಮತ್ತು ಸರ್ಕಾರಿ ಕಟ್ಟಡಗಳನ್ನು ಸ್ಫೋಟಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಈ ಕುರಿತು ಎಟಿಎಸ್, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿ ವಿರುದ್ಧ ದೂರು ದಾಖಲಿಸಿದೆ.
26/11 ರೀತಿಯ ಸ್ಫೋಟದ ಬೆದರಿಕೆ: ಆರೋಪಿ ಮಾರ್ಚ್ 6 ರಂದು ಎಟಿಎಸ್ ಮತ್ತು ಇತರ ಏಜೆನ್ಸಿಗಳಿಗೆ ಭಯೋತ್ಪಾದಕ ದಾಳಿ ಮಾಡುವ ಬೆದರಿಕೆಯ ಇ - ಮೇಲ್ ಕಳಹಿಸಿದ್ದ. 26/11 ನಂತಹ ಭಯೋತ್ಪಾದಕ ದಾಳಿ ದೇಶದಲ್ಲಿ ಮತ್ತೆ ಸಂಭವಿಸಲಿವೆ ಎಂದು ಮೇಲ್ನಲ್ಲಿ ತಿಳಿಸಲಾಗಿತ್ತು. ನಿಮಗೆ ಧೈರ್ಯ ಇದ್ದರೆ ನಿಲ್ಲಿಸಿ, ಸರಕಾರಿ ಕಟ್ಟಡಗಳನ್ನು ಸ್ಫೋಟಿಸುವುದಾಗಿಯೂ ಬೆದರಿಕೆ ಹಾಕಿದ್ದನು. ನಂತರ ಎಟಿಎಸ್, ಎನ್ಐಎ ಸೇರಿದಂತೆ ಸಂಸ್ಥೆಗಳಿಗೆ ಎಚ್ಚರಿಕೆ ನೀಡಲಾಗಿತ್ತು.
ಅಂತಾರಾಷ್ಟ್ರೀಯ ಭಯೋತ್ಪಾದಕರ ಹೆಸರಿನಲ್ಲಿ ನಕಲಿ ಐಡಿ ಸೃಷ್ಟಿ: ಎಟಿಎಸ್ ಮತ್ತು ಸೈಬರ್ ಕ್ರೈಮ್ ಘಟಕದಿಂದ ತಾಂತ್ರಿಕ ವಿಶ್ಲೇಷಣೆಯ ಆಧಾರದ ಮೇಲೆ ಒಡಿಶಾದಲ್ಲಿ ಇ - ಮೇಲ್ ಕಳುಸಿದ ಆರೋಪಿಯನ್ನು ಪತ್ತೆ ಮಾಡಲಾಗಿದೆ. ಆರೋಪಿಯನ್ನು 28 ವರ್ಷದ ಜಾವೇದ್ ಅನ್ಸಾರಿ ಎಂದು ಗುರುತಿಸಲಾಗಿದೆ. ಆರೋಪಿ ಗ್ಯಾರೇಜ್‌ನಲ್ಲಿ ಕಾರುಗಳಿಗೆ ಪೇಂಟಿಂಗ್ ಮತ್ತು ಪಾಲಿಶ್ ಮಾಡುವ ಕೆಲಸ ಮಾಡುತ್ತಿದ್ದನು.
ಆರೋಪಿ ತನ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಡಾನ್ ದಾವೂದ್ ಮತ್ತು ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನ ಚಿತ್ರಗಳೊಂದಿಗೆ ಎಡಿಟ್ ಮಾಡಿಕೊಂಡಿದ್ದ. ಜನರಿಗೆ ತಾನು ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಬೆದರಿಕೆ ಕೂಡಾ ಒಡ್ಡುತ್ತಿದ್ದ. ಜೊತೆಗೆ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂಬ ಹೆಸರಿನಲ್ಲಿ ನಕಲಿ ಐಡಿ ಸಹ ಸೃಷ್ಟಿಸಿದ್ದನು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆರೋಪಿ ವಿವಿಧ ಏಜೆನ್ಸಿಗಳಿಗೆ ಮೇಲ್ ಮಾಡಿದ್ದಾರೆ. ಇದರಲ್ಲಿ ಫೇಸ್ಬುಕ್ ಪ್ರೊಫೈಲ್ ಕೂಡ ನೀಡಲಾಗಿತ್ತು. ತಾಂತ್ರಿಕ ಸಮೀಕ್ಷೆಯ ಆಧಾರದ ಮೇಲೆ ತಂಡವನ್ನು ರಚಿಸಿ ಒಡಿಶಾಗೆ ಕಳುಹಿಸಲಾಗಿದೆ. ಅಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ತನಗೆ ಸುತ್ತಮುತ್ತಲಿನ ಜನರು ಕಿರುಕುಳ ನೀಡುತ್ತಿದ್ದು, ಇದರಿಂದ ಬೇಸತ್ತಿರುವುದಾಗಿ ಆರೋಪಿ ಹೇಳಿದ್ದಾನೆ. ಆದ್ದರಿಂದ, ಜನರನ್ನು ಭಯಭೀತರಾಗಲು ತಾನು ಈ ರೀತಿಯ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಮೊಬೈಲ್ ಇಂಟರ್‌ನೆಟ್‌ನಿಂದ ಆರೋಪಿ ಈ ಚಟುವಟಿಕೆಗಳನ್ನು ಎಸಗಿದ್ದಾನೆ ಎಂದು ಸೈಬರ್ ಕ್ರೈಂ ಪಿಐ ಕೆ.ಎಸ್.ಭುವ ಮಾಹಿತಿ ನೀಡಿದರು.
ಇದನ್ನೂ ಓದಿ: ದೇಶ ವಿರೋಧಿ ಚಟುವಟಿಕೆ; ಸರ್ಕಾರಿ ಶಾಲಾ ಶಿಕ್ಷಕ ವಜಾ