ETV Bharat / bharat

ಕೇಂದ್ರ ಬಜೆಟ್​: ಜಿಎಸ್​ಟಿ ತೆರಿಗೆ ಸರಳೀಕರಣ, ಉಳಿದ ಕ್ಷೇತ್ರಗಳಿಗೆ ವಿಸ್ತರಣೆ - GST tax reduced - GST TAX REDUCED

ಜಿಎಸ್​​ಟಿ ತೆರಿಗೆಯನ್ನು ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಸಣ್ಣ ತೆರಿಗೆದಾರರಿಗೆ ಇದು ಸಿಹಿ ಸುದ್ದಿಯಾಗಿದೆ.

ಜಿಎಸ್​ಟಿ ತೆರಿಗೆ ಸರಳೀಕರಣ
ಜಿಎಸ್​ಟಿ ತೆರಿಗೆ ಸರಳೀಕರಣ (ETV Bharat)
author img

By ETV Bharat Karnataka Team

Published : Jul 23, 2024, 4:06 PM IST

ನವದೆಹಲಿ: ಕೇಂದ್ರ ಬಜೆಟ್​ನಲ್ಲಿ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್​​ಟಿ) ಸರಳೀಕರಿಸಲಾಗಿದೆ. ಇದು ಸಾಮಾನ್ಯ ಜನರ ಮೇಲಿನ ಹೊರೆಯನ್ನು ಮಾಡಲಿದೆ. ವ್ಯಾಪಾರ, ಉದ್ಯಮಿದಲ್ಲಿ ಲಾಜಿಸ್ಟಿಕ್ಸ್​​ ಮತ್ತು ಅನುಸರಣೆ ವೆಚ್ಚವನ್ನು ಕಡಿತ ಮಾಡಲಾಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದಾಯವನ್ನು ಇನ್ನಷ್ಟು ಹೆಚ್ಚಿಸಲಿದೆ. ಇದರ ಜೊತೆಗೆ, ಉಳಿದ ವಲಯಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತರಲಾಗುವುದು ಎಂದೂ ಕೇಂದ್ರ ಸರ್ಕಾರ ಹೇಳಿದೆ.

ಜಿಎಸ್​​ಟಿ ಅಡಿಯಲ್ಲಿ ಬರುವ ಎಲ್ಲ ಪ್ರಮುಖ ತೆರಿಗೆದಾರರ ಸೇವೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಕಸ್ಟಮ್ಸ್ ಮತ್ತು ಆದಾಯ ತೆರಿಗೆಯನ್ನೂ ಆಧುನೀಕರಣಗೊಳಿಸಲಾಗಿದೆ. ಜಿಎಸ್​​ಟಿ ಸರಳೀಕರಣಗೊಳಿಸುವ ಪ್ರಯತ್ನ ಸಾಗುತ್ತಿದೆ. ಇದು ಅದರ ಮೊದಲ ಹೆಜ್ಜೆಯಾಗಿದೆ. ಜಿಎಸ್‌ಟಿಯ ಪ್ರಯೋಜನಗಳನ್ನು ಹೆಚ್ಚಿಸಲು, ನಾವು ತೆರಿಗೆ ರೂಪವನ್ನು ಇನ್ನಷ್ಟು ಸರಳೀಕರಿಸಲು ಮತ್ತು ತರ್ಕಬದ್ಧಗೊಳಿಸಲು ಪ್ರಯತ್ನಿಸುತ್ತೇವೆ. ಜಿಎಸ್​​ಟಿ ವ್ಯಾಪ್ತಿಯಲ್ಲಿ ಬರದ ಉಳಿದ ಕ್ಷೇತ್ರಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ದಾಖಲೆ ಮಟ್ಟದಲ್ಲಿ ಜಿಎಸ್​ಟಿ ಸಂಗ್ರಹ: ಈ ವರ್ಷದ ಜೂನ್‌ನಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು 1.74 ಲಕ್ಷ ಕೋಟಿ ರೂಪಾಯಿಗೆ ಏರಿದೆ. ಇದು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇಕಡಾ 7.7ರಷ್ಟು ಹೆಚ್ಚಳವಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳ ಒಟ್ಟು ಜಿಎಸ್​​ಜಿ ಸಂಗ್ರಹವು 5.57 ಲಕ್ಷ ಕೋಟಿ ರೂಪಾಯಿ, 2023 ರ ಏಪ್ರಿಲ್​​ ತಿಂಗಳೊಂದರಲ್ಲಿ ಜಿಎಸ್​​ಟಿ ಸಂಗ್ರಹವು ದಾಖಲೆಯ ಗರಿಷ್ಠ 1.87 ಲಕ್ಷ ಕೋಟಿ ರೂಪಾಯಿ ಆಗಿತ್ತು ಎಂದು ಮೂಲಗಳು ತಿಳಿಸಿವೆ.

ಜಿಎಸ್​​ಟಿ ಸರಳೀಕರಣದ ಬಗ್ಗೆ ತಜ್ಞರ ಅಭಿಮತ: ಜಿಎಸ್‌ಟಿಯಲ್ಲಿ ಮಾಡಲಾಗುತ್ತಿರುವ ಸುಧಾರಣೆಗಳು ಜನರ ಮೇಲಿನ ತೆರಿಗೆ ಹೊರೆಗಳನ್ನು ಕಡಿಮೆ ಮಾಡಲಿದೆ. ಜೊತೆಗೆ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂಬಳ ಪಡೆಯುವ ವರ್ಗದ ಜನರಿಗೆ ಇದು ಉಪಯೋಗ. ಜಿಎಸ್​​ಟಿ ಹೊಸ ತೆರಿಗೆ ರಚನೆಯು ಸೋರಿಕೆಯಾಗುವ ಆದಾಯವನ್ನು ಇದು ತಡೆಯುತ್ತದೆ ಎಂದು ಮಹಾರಾಷ್ಟ್ರದ ನರೆಡ್ಕೊ ಅಧ್ಯಕ್ಷ ಪ್ರಶಾಂತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಜಿಎಸ್​​ಟಿ ಜಾರಿಯಾಗಿ 7 ವರ್ಷದ ಬಳಿಕ ಗೃಹೋಪಯೋಗಿ ವಸ್ತುಗಳು ಮತ್ತು ಮೊಬೈಲ್ ಫೋನ್‌ಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಸಾಮಾನ್ಯ ಜನರಲ್ಲಿ ಸಂತಸ ತಂದಿದೆ. 2018 ರಲ್ಲಿ 1.05 ಕೋಟಿಯಷ್ಟಿದ್ದ ಜಿಎಸ್‌ಟಿ ತೆರಿಗೆದಾರರು 2024 ರ ಏಪ್ರಿಲ್‌ ವೇಳೆಗೆ 1.46 ಕೋಟಿಗೆ ಏರಿಕೆಯಾಗಿದೆ.

2023-24ರ ಆರ್ಥಿಕ ವರ್ಷದಲ್ಲಿ 2 ಕೋಟಿ ರೂಪಾಯಿವರೆಗಿನ ವಾರ್ಷಿಕ ವಹಿವಾಟು ಹೊಂದಿರುವ ತೆರಿಗೆದಾರರಿಗೆ ವಾರ್ಷಿಕ ರಿಟರ್ನ್ ಫೈಲಿಂಗ್ ಮಾಡುವುದನ್ನು ತಪ್ಪಿಸಲು ಜಿಎಸ್​​ಟಿ ಕೌನ್ಸಿಲ್ ಶಿಫಾರಸು ಮಾಡಿದೆ.

ಇದನ್ನು ಓದಿ: ಕೇಂದ್ರ ಬಜೆಟ್​ 2024: ಯಾವ ವಸ್ತು ಏರಿಕೆ, ಯಾವುದು ಇಳಿಕೆ- ತಿಳಿಯಿರಿ - Union Budget 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.