ETV Bharat / bharat

ಕಸ್ಟಮ್ಸ್​, ಜಿಎಸ್​ಟಿ ಕಡಿತ: ಮೂರು ಪ್ರಮುಖ ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ - CANCER DRUG PRICE

ಜಿಎಸ್​ಟಿ ಮತ್ತು ಕಸ್ಟಮ್ಸ್​ ಸುಂಕ ಕಡಿತದ ಹಿನ್ನೆಲೆಯಲ್ಲಿ ಪ್ರಮುಖ ಕ್ಯಾನ್ಸರ್ ನಿವಾರಣಾ ಔಷಧಿಗಳ ಬೆಲೆ ಇಳಿಕೆಯಾಗಲಿದೆ.

ಮೂರು ಪ್ರಮುಖ ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಸಿದ ಸರ್ಕಾರ
ಮೂರು ಪ್ರಮುಖ ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಸಿದ ಸರ್ಕಾರ (IANS)
author img

By ETV Bharat Karnataka Team

Published : Oct 29, 2024, 4:44 PM IST

ನವದೆಹಲಿ: ಮೂರು ಕ್ಯಾನ್ಸರ್ ವಿರೋಧಿ ಔಷಧಿಗಳ ಎಂಆರ್​ಪಿಯನ್ನು (ಗರಿಷ್ಠ ಮಾರಾಟ ಬೆಲೆ) ಕಡಿಮೆ ಮಾಡುವಂತೆ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (ಎನ್​ಪಿಪಿಎ)ವು ಔಷಧ ತಯಾರಕರಿಗೆ ನಿರ್ದೇಶನ ನೀಡಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಮಂಗಳವಾರ ತಿಳಿಸಿದೆ. ಸರ್ಕಾರವು ಈ ಔಷಧಿಗಳ ಮೇಲಿನ ಕಸ್ಟಮ್ ಸುಂಕ ತೆರವುಗೊಳಿಸಿದ್ದರಿಂದ ಮತ್ತು ಜಿಎಸ್​ಟಿ ದರಗಳನ್ನು ಕಡಿತಗೊಳಿಸಿದ್ದರಿಂದ ಈ ಔಷಧಗಳ ಬೆಲೆ ಇಳಿಕೆಯಾಗಲಿದೆ.

ಎನ್​ಪಿಪಿಎ ಅಕ್ಟೋಬರ್ 28ರ ಕಚೇರಿ ಜ್ಞಾಪಕ ಪತ್ರದಲ್ಲಿ ಟ್ರಾಸ್ಟುಜುಮಾಬ್, ಒಸಿಮೆರ್ಟಿನಿಬ್ ಮತ್ತು ಡರ್ವಾಲ್ಯುಮಾಬ್ ಎಂಬ ಮೂರು ಕ್ಯಾನ್ಸರ್ ವಿರೋಧಿ ಔಷಧಿಗಳ ಎಂಆರ್​ಪಿಯನ್ನು ಕಡಿಮೆ ಮಾಡುವಂತೆ ಸಂಬಂಧಪಟ್ಟ ಔಷಧ ತಯಾರಕರಿಗೆ ನಿರ್ದೇಶನ ನೀಡಿದೆ.

ಇದು ಕೈಗೆಟುಕುವ ಬೆಲೆಯಲ್ಲಿ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ಬದ್ಧತೆಗೆ ಅನುಗುಣವಾಗಿದೆ ಎಂದು ಸಚಿವಾಲಯ ತಿಳಿಸಿದೆ. ಕೇಂದ್ರ ಬಜೆಟ್ 2024-25ರಲ್ಲಿ, ಕ್ಯಾನ್ಸರ್​ನಿಂದ ಬಳಲುತ್ತಿರುವ ಜನರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮತ್ತು ಔಷಧಿಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸರ್ಕಾರವು ಮೂರು ಕ್ಯಾನ್ಸರ್ ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗಿತ್ತು. ಇನ್ನು ಈ ಮೂರು ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್​ಟಿ ದರವನ್ನು ಸರ್ಕಾರ ಶೇಕಡಾ 12ರಿಂದ 5ಕ್ಕೆ ಇಳಿಸಿದೆ.

"ಅದರಂತೆ, ಮಾರುಕಟ್ಟೆಯಲ್ಲಿ ಈ ಔಷಧಿಗಳ ಎಂಆರ್​ಪಿಯನ್ನು ಕಡಿಮೆ ಮಾಡಬೇಕು ಮತ್ತು ತೆರಿಗೆ ವಿನಾಯಿತಿ ಮತ್ತು ಸುಂಕ ವಿನಾಯಿತಿ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸಬೇಕು" ಎಂದು ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ.

ಔಷಧ ವಿತರಕರು, ರಾಜ್ಯ ಔಷಧ ನಿಯಂತ್ರಕ ಸಂಸ್ಥೆ ಮತ್ತು ಸರ್ಕಾರಕ್ಕೆ ಹೊಸ ಬೆಲೆ ಪಟ್ಟಿ ಅಥವಾ ಪೂರಕ ಬೆಲೆ ಪಟ್ಟಿಯನ್ನು ನೀಡುವಂತೆ ಮತ್ತು ಫಾರ್ಮ್ -2/ಫಾರ್ಮ್ 5 ಮೂಲಕ ಎನ್​ಪಿಪಿಎಗೆ ಬೆಲೆ ಇಳಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಸಲ್ಲಿಸುವಂತೆ ಔಷಧ ತಯಾರಕ ಕಂಪನಿಗಳಿಗೆ ಔಷಧ ಬೆಲೆ ಪ್ರಾಧಿಕಾರ ನಿರ್ದೇಶನ ನೀಡಿದೆ.

ಟ್ರಾಸ್ಟುಜುಮಾಬ್ ಡೆರುಕ್ಸ್ ಟೆಕಾನ್ ಅನ್ನು ಸ್ತನ ಕ್ಯಾನ್ಸರ್​ಗೆ ಬಳಸಿದರೆ, ಓಸಿಮೆರ್ಟಿನಿಬ್ ಅನ್ನು ಶ್ವಾಸಕೋಶದ ಕ್ಯಾನ್ಸರ್​ಗೆ ಬಳಸಲಾಗುತ್ತದೆ. ಡರ್ವಾಲ್ಯುಮಾಬ್ ಶ್ವಾಸಕೋಶದ ಕ್ಯಾನ್ಸರ್ ಮತ್ತು ಪಿತ್ತನಾಳದ ಕ್ಯಾನ್ಸರ್ ಎರಡಕ್ಕೂ ಔಷಧಿಯಾಗಿದೆ.

ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಲ್ಯಾನ್ಸೆಟ್ ಅಧ್ಯಯನದ ಪ್ರಕಾರ, ಭಾರತದಲ್ಲಿ 2019 ರಲ್ಲಿ ಸುಮಾರು 12 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು 9.3 ಲಕ್ಷ ಸಾವು ಸಂಭವಿಸಿದ್ದವು. ಈ ಸಂಖ್ಯೆ 2020 ರಲ್ಲಿ 13.9 ಲಕ್ಷಕ್ಕೆ ಏರಿದೆ. ಇದು 2021 ಮತ್ತು 2022 ರಲ್ಲಿ ಕ್ರಮವಾಗಿ 14.2 ಲಕ್ಷ ಮತ್ತು 14.6 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ನಾಳೆ ದೀಪೋತ್ಸವ: ಬೆಳಗಲಿವೆ 28 ಲಕ್ಷ ಮಣ್ಣಿನ ಹಣತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.