ETV Bharat / bharat

ಹೈದರಾಬಾದ್​ನಲ್ಲಿನ ಮಾಜಿ ಸಿಎಂ ಜಗನ್​​ ನಿವಾಸದ ಶೆಡ್​ ನೆಲಸಮ: ಆಂಧ್ರದಲ್ಲೂ ಕ್ರಮಕ್ಕೆ ಜನರ ಆಗ್ರಹ - Lotuspond - LOTUSPOND

ಮಾಜಿ ಸಿಎಂ ಜಗನ್​ಮೋಹನ್​ ರೆಡ್ಡಿ ಅವರ ಹೈದರಾಬಾದ್​​ನಲ್ಲಿರುವ ನಿವಾಸದ ಮುಂದಿನ ಶೆಡ್​ಗಳನ್ನು ಅಕ್ರಮ ನಿರ್ಮಾಣ ಎಂದು ಆರೋಪಿಸಿ ನೆಲಸಮ ಮಾಡಲಾಗಿದೆ.

ಹೈದರಾಬಾದ್​ನಲ್ಲಿನ ಮಾಜಿ ಸಿಎಂ ಜಗನ್​​ ನಿವಾಸದ ಶೆಡ್​ ನೆಲಸಮ
ಹೈದರಾಬಾದ್​ನಲ್ಲಿನ ಮಾಜಿ ಸಿಎಂ ಜಗನ್​​ ನಿವಾಸದ ಶೆಡ್​ ನೆಲಸಮ (ETV Bharat)
author img

By ETV Bharat Karnataka Team

Published : Jun 15, 2024, 10:39 PM IST

ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡಿರುವ ಮಾಜಿ ಸಿಎಂ ಜಗನ್​​ಮೋಹನ್​​ ರೆಡ್ಡಿಗೆ ಸಂಕಷ್ಟಗಳು ಶುರುವಾಗಿವೆ. ಹೈದರಾಬಾದ್​ನಲ್ಲಿರುವ ಮನೆಯ ಮುಂದಿನ ಕಟ್ಟಡಗಳನ್ನು ತೆಲಂಗಾಣ ಸರ್ಕಾರ ನೆಲಸಮ ಮಾಡಿದೆ. ಇವುಗಳನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ತೆಲಂಗಾಣ ರಾಜ್ಯಧಾನಿಯಲ್ಲಿರುವ ಲೋಟಸ್​ ಪಾಂಡ್​ ಹೆಸರಿನ ಜಗನ್​ ನಿವಾಸದ ಮುಂದೆ ಭದ್ರತಾ ಶೆಡ್​ಗಳನ್ನು ನಿರ್ಮಾಣ ಮಾಡಲಾಗಿತ್ತು. ಅವುಗಳನ್ನು ಅಲ್ಲಿನ ಸರ್ಕಾರ ಶನಿವಾರ ತೆರವು ಕಾರ್ಯಾಚರಣೆ ನಡೆಸಿ, ನೆಲಕ್ಕುರುಳಿಸಿದೆ. ಲೋಟಸ್ ಪಾಂಡ್ ಎದುರು ಅಕ್ರಮವಾಗಿ ನಿರ್ಮಿಸಿದ್ದ ಪೊಲೀಸ್ ಭದ್ರತಾ ಶೆಡ್​ಗಳನ್ನು ಜಿಹೆಚ್​ಎಂಸಿ ಅಧಿಕಾರಿಗಳು ಒಡೆಸಿ ಹಾಕಿಸಿದ್ದಾರೆ. ನಿವಾಸದ ಮುಂದೆ ಇರುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮೂರು ಶೆಡ್‌ಗಳನ್ನು ತೆರವುಗೊಳಿಸಿದ್ದಾರೆ.

ಆಂಧ್ರದಲ್ಲೂ ಕ್ರಮಕ್ಕೆ ನಿರ್ಧಾರ: ಮಾಜಿ ಸಿಎಂ ಜಗನ್ ಸಾರ್ವಜನಿಕ ಆಸ್ತಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಾಜಿ ಸಿಎಂ ಅವರ ಆಡಳಿತ ಕಚೇರಿ ಮತ್ತು ವೈಎಸ್‌ಆರ್‌ಸಿಪಿಯ ಕಚೇರಿ ಮುಂದಿನ ರಸ್ತೆಯನ್ನು ಅಕ್ರಮವಾಗಿ ಕಬ್ಜಾ ಮಾಡಲಾಗಿದೆ ಎಂದು ಜನರು ದೂರಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂಬ ಕೂಗು ಎದ್ದಿದೆ.

ಸಾರ್ವಜನಿಕರ ಹಣದಲ್ಲಿ ನಿರ್ಮಿಸಿರುವ ಎರಡು ಪಥದ ರಸ್ತೆಯನ್ನು ಖಾಸಗಿ ಬಳಕೆಗೆ ಮಾತ್ರ ನೀಡಲಾಗಿದೆ ಎಂಬ ಆರೋಪ ಬಂದಿದೆ. ಹಿಂದಿನ ಜಗನ್​​ರ ಪಕ್ಷ ಸರ್ಕಾರದ ಹಣದಲ್ಲಿ ಖರೀದಿಸಿದ ಪೀಠೋಪಕರಣಗಳನ್ನು ಪಕ್ಷದ ಕಚೇರಿಯಲ್ಲಿ ಬಳಸಿಕೊಳ್ಳಲಾಗಿದೆ. ಈ ಬಗ್ಗೆಯೂ ಹೊಸ ಸರ್ಕಾರ ಶೀಘ್ರದಲ್ಲೇ ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ.

ಮಾಜಿ ಮುಖ್ಯಮಂತ್ರಿ ಜಗನ್ ಕ್ಯಾಂಪ್ ಕಚೇರಿಗೆ ಹೋಗುವ ಎರಡು ಪಥದ ರಸ್ತೆಯಲ್ಲಿ ಸಾಮಾನ್ಯ ನಾಗರಿಕರಿಗೆ ಪ್ರವೇಶವಿಲ್ಲವಾಗಿದೆ. ಈ ರಸ್ತೆಯಲ್ಲಿ ಸ್ಥಳೀಯರ ಸಂಚಾರ ನಿಷೇಧಿಸಿರುವುದು ವಿವಾದಕ್ಕೆ ಕಾರಣವಾಗುತ್ತಿದೆ. ಕಳೆದ ಐದು ವರ್ಷಗಳಿಂದ ಈ ರಸ್ತೆಯನ್ನು ಮುಖ್ಯಮಂತ್ರಿ ಕ್ಯಾಂಪ್ ಕಚೇರಿಗೆ ಮಾತ್ರ ಬಳಸಲಾಗುತ್ತಿದೆ. ಜಗನ್ ಮುಖ್ಯಮಂತ್ರಿ ಸ್ಥಾನವನ್ನು ತೊರೆದ ಬಳಿಕ, ಅದನ್ನು ಪಕ್ಷದ ಕಚೇರಿಯನ್ನಾಗಿ ಪರಿವರ್ತಿಸಲಾಗಿದೆ.

ದ್ವಿಪಥ ರಸ್ತೆಯನ್ನು 5 ಕೋಟಿ ರೂಪಾಯಿ ಹಣದಲ್ಲಿ ನಿರ್ಮಿಸಲಾಗಿದೆ. ಒಂದೂವರೆ ಕಿಲೋ ಮೀಟರ್​ ಉದ್ದದ ರಸ್ತೆಯಲ್ಲಿ ಭದ್ರತಾ ಕಾರಣಗಳಿಗಾಗಿ ಜನರ ಪ್ರವೇಶ ನಿರ್ಬಂಧಿಸಲಾಗಿದೆ. ಜಗನ್ ಸರ್ಕಾರ ಪತನವಾಗಿದ್ದರೂ, ರಸ್ತೆಯಲ್ಲಿ ಭದ್ರತಾ ಸಿಬ್ಬಂದಿ ಜನ ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ನೂತನ ಸಿಎಂ ಚಂದ್ರಬಾಬು ನಾಯ್ಡು ಸರ್ಕಾರಕ್ಕೆ ದೂರು ನೀಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ತನಿಖೆಗೆ ಮುಂದಾಗಿದೆ.

ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧ ಬಂಧನ ವಾರೆಂಟ್: ರಾಜ್ಯ ಸರ್ಕಾರವೇ ಷಡ್ಯಂತ್ರದ ಸೂತ್ರಧಾರಿ - ಪ್ರಲ್ಹಾದ್ ಜೋಶಿ - Pralhad Joshi

ETV Bharat Logo

Copyright © 2025 Ushodaya Enterprises Pvt. Ltd., All Rights Reserved.