ETV Bharat / bharat

ಗಾಜಿನ ಕಾರ್ಖಾನೆಯಲ್ಲಿ ಗ್ಯಾಸ್ ಕಂಪ್ರೆಸರ್ ಸ್ಫೋಟ: 6 ಸಾವು, 15 ಜನರಿಗೆ ಗಾಯ - Explosion In Glass Factory - EXPLOSION IN GLASS FACTORY

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರದಲ್ಲಿರುವ ಸೌತ್ ಗ್ಲಾಸ್ ಇಂಡಸ್ಟ್ರಿಯಲ್ಲಿ ಭೀಕರ ಸ್ಫೋಟ ಸಂಭವಿಸಿದೆ.

GAS COMPRESSOR EXPLOSION  GLASS INDUSTRY  BLAST IN HYDERABAD
ಗ್ಯಾಸ್ ಕಂಪ್ರೆಸರ್ ಸ್ಫೋಟಗೊಂಡ ಸ್ಥಳ (ETV Bharat)
author img

By ETV Bharat Karnataka Team

Published : Jun 28, 2024, 7:53 PM IST

ಹೈದರಾಬಾದ್(ತೆಲಂಗಾಣ): ಗ್ಯಾಸ್ ಕಂಪ್ರೆಸರ್ ಸ್ಫೋಟಗೊಂಡು ಆರು ಮಂದಿ ಸಾವನ್ನಪ್ಪಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರದಲ್ಲಿ ಇಂದು ನಡೆಯಿತು. ಇಲ್ಲಿನ ಸೌತ್ ಗ್ಲಾಸ್ ಇಂಡಸ್ಟ್ರಿಯಲ್ಲಿ ಘಟನೆ ನಡೆದಿದೆ. 15ಕ್ಕೂ ಹೆಚ್ಚು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಶಂಶಾಬಾದ್ ಡಿಸಿಪಿ ರಾಜೇಶ್ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಅಪಘಾತ ಹೇಗೆ ಸಂಭವಿಸಿತು ಎಂಬ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

ಮೃತರನ್ನು ಬಿಹಾರ, ಯುಪಿ ಮತ್ತು ಒಡಿಶಾ ನಿವಾಸಿಗಳು ಎಂದು ಗುರುತಿಸಲಾಗಿದೆ. ಕಾರ್ಮಿಕರ ದೇಹಗಳು ಛಿದ್ರಗೊಂಡಿದ್ದವು. ಗಂಭೀರವಾಗಿ ಗಾಯಗೊಂಡವರನ್ನು ಉಸ್ಮಾನಿಯಾ ಮತ್ತು ಗಾಂಧಿ ಆಸ್ಪತ್ರೆಗೆ ರವಾನಿಸುವ ಸಾಧ್ಯತೆ ಇದೆ.

GAS COMPRESSOR EXPLOSION  GLASS INDUSTRY  BLAST IN HYDERABAD
ಗ್ಯಾಸ್ ಕಂಪ್ರೆಸರ್ ಸ್ಫೋಟ (ETV Bharat)

ಸ್ಫೋಟದಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿಂದೆಯೂ ಇಲ್ಲಿ ಇಂತಹದ್ದೇ ಘಟನೆ ನಡೆದಿದ್ದು, ಕಾರ್ಮಿಕರ ಸುರಕ್ಷತೆಗೆ ಮುಂಜಾಗ್ರತೆ ವಹಿಸುವಂತೆ ನೀಡಿದ್ದ ಸೂಚನೆಗಳು ಎಷ್ಟರಮಟ್ಟಿಗೆ ಪಾಲನೆಯಾಗಿವೆ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಜಿಲ್ಲಾ ಕಾರ್ಮಿಕ ಸಂಘಟನೆಗಳ ಮುಖಂಡರು ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಕಂಪನಿಯ ಮಾಲೀಕರು ಸಂತ್ರಸ್ತ ಕುಟುಂಬಗಳಿಗೆ 25 ಲಕ್ಷ ರೂ ಪರಿಹಾರ ಘೋಷಿಸಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹಾವೇರಿ ಅಪಘಾತ: ರಾಷ್ಟ್ರೀಯ ಫುಟ್‌ಬಾಲ್ ತಂಡದ ಅಂಧ ಆಟಗಾರ್ತಿಯ IAS ಕನಸು ಸಾವಿನಲ್ಲಿ ಅಂತ್ಯ! - Haveri Horrible Accident

ETV Bharat Logo

Copyright © 2025 Ushodaya Enterprises Pvt. Ltd., All Rights Reserved.