ಮೀರತ್ (ಉತ್ತರ ಪ್ರದೇಶ): ಗಾಜಿಯಾಬಾದ್‌ನ ವಿದ್ಯಾರ್ಥಿನಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ನಾಲ್ವರು ಯುವಕರು ವಿದ್ಯಾರ್ಥಿನಿಯನ್ನು ಒತ್ತೆಯಾಳಾಗಿಟ್ಟುಕೊಂಡು ಮೀರತ್ ಮತ್ತು ಜಮ್ಮುವಿನ ವಿವಿಧ ಹೋಟೆಲ್‌ಗಳಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಆರೋಪಿಗಳು ಆಕೆಯ ಅಶ್ಲೀಲ ವಿಡಿಯೋ ಮಾಡಿದ್ದಾರೆ. ಅಲ್ಲದೇ ವಿಡಿಯೋ ವೈರಲ್ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುದು ತಿಳಿದುಬಂದಿದೆ.
ಜುಲೈ 6 ರಂದು ಆರೋಪಿಗಳು ವಿದ್ಯಾರ್ಥಿನಿಯನ್ನು ಗಾಜಿಯಾಬಾದ್‌ನ ಭೋಜ್‌ಪುರ ಪೊಲೀಸ್ ಠಾಣೆ ಬಳಿ ಬಿಟ್ಟು ಹೋಗಿದ್ದರು. ಗಾಜಿಯಾಬಾದ್ ಮತ್ತು ಮೀರತ್ ಪೊಲೀಸರು ಪ್ರಕರಣದಿಂದ ತಪ್ಪಿಸಿಕೊಳ್ಳುತ್ತಿದ್ದರು. ಇದೀಗ ಸಂತ್ರಸ್ತೆ ಕುಟುಂಬದವರು ಮೀರತ್ ಎಸ್‌ಎಸ್‌ಪಿಗೆ ದೂರು ನೀಡಿದ್ದಾರೆ.
ಮೋದಿನಗರ ಪ್ರದೇಶದ ಗ್ರಾಮದ ನಿವಾಸಿಯಾಗಿರುವ ಬಾಲಕಿ ಮೀರತ್‌ನ ಕಾಲೇಜಿನಲ್ಲಿ ಓದುತ್ತಿದ್ದರು. ಜೂನ್ 24 ರಂದು ಅವರು ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದರು. ಆದರೆ, ನಂತರ ಮನೆಗೆ ಹಿಂದಿರುಗಿ ಬಂದಿಲ್ಲ. ಇದಾದ ನಂತರ ಕುಟುಂಬಸ್ಥರು ವ್ಯಾಪಕ ಹುಡುಕಾಟ ನಡೆಸಿ ಪೊಲೀಸ್ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದರು. ಆದರೆ, ಆಕೆಯ ಕುರಿತು ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಈ ಮಧ್ಯೆ ಆರೋಪಿಗಳು ಜುಲೈ 6ರಂದು ವಿದ್ಯಾರ್ಥಿಯನ್ನು ಭೋಜ್‌ಪುರ ಪೊಲೀಸ್ ಠಾಣೆ ಬಳಿ ಡ್ರಾಪ್ ಮಾಡಿ ಹೋಗಿದ್ದರು.
ಇದಾದ ಬಳಿಕ ವಿದ್ಯಾರ್ಥಿನಿ ಚೇತರಿಸಿಕೊಂಡಿದ್ದಾಳೆ ಎಂದು ಹೇಳಿರುವ ಪೊಲೀಸರು, ಕುಟುಂಬಸ್ಥರನ್ನು ಕರೆಸಿ ಮನೆಗೆ ಕಳುಹಿಸಿದ್ದಾರೆ. 'ಜೂನ್ 24 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಮೊಯಿನುದ್ದೀನ್ ಪರ್ತಾಪುರದಿಂದ ತನ್ನನ್ನು ಅಪಹರಿಸಲಾಯಿತು ಮತ್ತು ಗ್ರಾಮದ ಇಬ್ಬರು ಯುವಕರು ಈ ಘಟನೆಯನ್ನು ನಡೆಸಿದ್ದಾರೆ' ಎಂದು ವಿದ್ಯಾರ್ಥಿನಿ ತನ್ನ ಕುಟುಂಬಕ್ಕೆ ತಿಳಿಸಿದ್ದಾರೆ.
'ಆರೋಪಿಗಳಿಬ್ಬರೂ ನನ್ನನ್ನು ಮೀರತ್‌ನಿಂದ ಅಪಹರಿಸಿ ಜಮ್ಮುವಿಗೆ ಕರೆದೊಯ್ದು, ಆರು ದಿನಗಳ ಕಾಲ ಅಲ್ಲಿನ ಹೋಟೆಲ್‌ನಲ್ಲಿ ಒತ್ತೆಯಾಳಾಗಿ ಇರಿಸಿದ್ದರು. ಅಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು' ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.
'ಇದಾದ ಬಳಿಕ ಆರೋಪಿಗಳು ನನ್ನನ್ನು ಸಹರಾನ್‌ಪುರ ಮೂಲಕ ಮೀರತ್‌ಗೆ ಕರೆತಂದು ಹೆದ್ದಾರಿಯಲ್ಲಿರುವ ಹೋಟೆಲ್‌ವೊಂದರಲ್ಲಿ ಆರು ದಿನಗಳ ಕಾಲ ಒತ್ತೆಯಾಳಾಗಿ ಇರಿಸಿದ್ದರು. ಅಲ್ಲಿ ನಾಲ್ವರು ಯುವಕರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ' ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.
'ನಾವು ಈ ಬಗ್ಗೆ ಮೋದಿನಗರ ಪೊಲೀಸರಿಗೆ ದೂರು ನೀಡಿದ್ದೆವು. ಆದರೆ, ಅವರು ಮೀರತ್‌ನಲ್ಲಿ ಘಟನೆ ನಡೆದಿದೆ ಎಂದು ಹೇಳುವ ಮೂಲಕ ನುಣುಚಿಕೊಂಡರು. ಅದೇ ರೀತಿ ಪರತಾಪುರ ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಳ್ಳಲಿಲ್ಲ. ಈಗ ಮೀರತ್‌ನ ಎಸ್‌ಎಸ್‌ಪಿಗೆ ದೂರು ನೀಡಿದ್ದೇವೆ. ಅವರು ತನಿಖೆ ಮತ್ತು ಕ್ರಮಕ್ಕೆ ಆದೇಶಿಸಿದ್ದಾರೆ' ಎಂದು ಸಂತ್ರಸ್ತೆಯ ಕುಟುಂಬಸ್ಥರು ಹೇಳಿದ್ದಾರೆ.
ಈ ಬಗ್ಗೆ ಬಾಲಕಿ ಮತ್ತು ಆಕೆಯ ಕುಟುಂಬದವರು ದೂರು ನೀಡಿದ್ದಾರೆ ಎಂದು ಮೀರತ್ ಎಸ್ಪಿ ಆಯುಷ್ ವಿಕ್ರಮ್ ಸಿಂಗ್ ಹೇಳಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಮಾಹಿತಿ ನೀಡಿದ ಹೋಟೆಲ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ : ಸಾಮೂಹಿಕ ಅತ್ಯಾಚಾರ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ - VALANCHERRY GANG RAPE CASE UPDATES