ETV Bharat / bharat

ಇನ್ಮುಂದೆ ಇಂಧನ ವಾಹನಗಳು ಇರೋದಿಲ್ಲ; ಭವಿಷ್ಯದಲ್ಲಿ ಪ್ರತಿ ಮನೆಯಲ್ಲೂ ಎಲೆಕ್ಟ್ರಿಕ್ ಕಾರುಗಳದ್ದೇ ದರ್ಬಾರ್​ ​ - Nitin Gadkari On Fuel Vehicles - NITIN GADKARI ON FUEL VEHICLES

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ನಮ್ಮ ಗುರಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

PETROL AND DIESEL VEHICLES  LOWER TAX FOR HYBRID CARS  ROAD TRANSPORT AND HIGHWAYS  UNION MINISTER NITIN GADKARI
‘ದೇಶದಲ್ಲಿ ಇನ್ನು ಮುಂದೆ ಇಂಧನ ವಾಹನಗಳು ಇರೋದಿಲ್ಲ
author img

By PTI

Published : Apr 1, 2024, 3:55 PM IST

Updated : Apr 1, 2024, 4:09 PM IST

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿರ್ಮೂಲನೆ ಮಾಡಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಭಾರತವನ್ನು ಹಸಿರು ಆರ್ಥಿಕತೆಯನ್ನಾಗಿ ಮಾಡುವ ಮಹತ್ವಾಕಾಂಕ್ಷೆಯ ಭಾಗವಾಗಿ ಅವರು ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ಹೇಳಿದರು.

"ಭಾರತವು ವಾರ್ಷಿಕವಾಗಿ ಇಂಧನ ಆಮದಿಗೆ 16 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸಿದರೆ, ಈ ಹಣವನ್ನು ರೈತರು, ಹಳ್ಳಿಗಳು ಮತ್ತು ಯುವಕರ ಉದ್ಯೋಗಕ್ಕಾಗಿ ಬಳಸಬಹುದು" ಎಂದು ನಿತಿನ್ ಗಡ್ಕರಿ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ.

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ದೂರ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದ ಸಚಿವರು, 100 ರಷ್ಟು ಸಾಧ್ಯ. ಇದು ಕಷ್ಟ, ಆದರೆ ಅಸಾಧ್ಯವಲ್ಲ. ಭಾರತವನ್ನು ಹಸಿರು ಆರ್ಥಿಕತೆಯನ್ನಾಗಿ ಮಾಡುವುದು ಗುರಿಯಾಗಿದೆ. ಈ ಮಹತ್ವಾಕಾಂಕ್ಷೆಯನ್ನು ಈಡೇರಿಸಲು ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್ ಟಿಯನ್ನು ತಗ್ಗಿಸಬೇಕು’ ಎಂದರು.

ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 5 ರಷ್ಟು ಮತ್ತು ಫ್ಲೆಕ್ಸ್ ಎಂಜಿನ್‌ಗಳ ಮೇಲೆ ಶೇಕಡಾ 12 ರಷ್ಟು ಕಡಿಮೆ ಮಾಡುವ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ ಎಂದು ಗಡ್ಕರಿ ಹೇಳಿದರು. ಅವುಗಳನ್ನು ಪ್ರಸ್ತುತ ಪರಿಗಣನೆಯಲ್ಲಿದೆ ಎಂದು ಅವರು ಬಹಿರಂಗಪಡಿಸಿದರು.

ಆಮದು ಕಡಿಮೆ ಮಾಡಬಹುದು: ನಮ್ಮ ದೇಶವು ಇಂಧನ ಆಮದಿನ ಮೇಲೆ ವಾರ್ಷಿಕ 16 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಉಳಿಸಿದ ಈ ಹಣವನ್ನು ರೈತರ ಜೀವನ ಸುಧಾರಣೆಗೆ ಬಳಸಬಹುದು. ಇದರಿಂದ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ಯೋಜನೆಗಳನ್ನು ರೂಪಿಸಬಹುದು. ಯುವಕರು ಉದ್ಯೋಗಾವಕಾಶಗಳನ್ನೂ ಪಡೆಯಬಹುದು. ಜೈವಿಕ ಇಂಧನಗಳ ಬಳಕೆಯನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ದೇಶವು ವಿದೇಶದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬಹುದು. ಹವಾಮಾನ ಬಿಕ್ಕಟ್ಟನ್ನು ತಪ್ಪಿಸಲು ವಿದ್ಯುತ್ ಉತ್ಪಾದನೆಯಲ್ಲಿ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಮಾಡುವ ಅವಶ್ಯಕತೆಯಿದೆ. ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಪರ್ಯಾಯ ಇಂಧನ ಮೂಲಗಳು ಲಭ್ಯವಾಗಲಿವೆ ಎಂದು ಕೇಂದ್ರ ಸಚಿವ ಗಡ್ಕರಿ ಹೇಳಿದ್ದಾರೆ.

'ಆ ದಿನಗಳು ಬರುತ್ತವೆ': ಬಜಾಜ್, ಟಿವಿಎಸ್ ಮತ್ತು ಹೀರೋದಂತಹ ಆಟೋ ಕಂಪನಿಗಳು ಫ್ಲೆಕ್ಸ್ ಎಂಜಿನ್ ಬಳಸಿ ಮೋಟಾರ್ ಸೈಕಲ್‌ಗಳನ್ನು ತಯಾರಿಸಲು ಯೋಜಿಸುತ್ತಿವೆ. ಆ ತಂತ್ರಜ್ಞಾನವನ್ನೂ ಬಳಸಿಕೊಂಡು ಆಟೋ ರಿಕ್ಷಾ ತಯಾರಿಸಲು ಸಿದ್ಧತೆ ನಡೆಸಲಾಗಿದೆ. ಸದ್ಯ ಹೈಡ್ರೋಜನ್ ಚಾಲಿತ ಕಾರನ್ನು ಓಡಿಸುತ್ತಿದ್ದು, ಭವಿಷ್ಯದಲ್ಲಿ ಪ್ರತಿ ಮನೆಯಲ್ಲೂ ಎಲೆಕ್ಟ್ರಿಕ್ ಕಾರುಗಳು ಕಾಣಿಸಿಕೊಳ್ಳಲಿವೆ. ಇದು ಅಸಾಧ್ಯ ಎಂದು ಹೇಳುವವರು ತಮ್ಮ ಅಭಿಪ್ರಾಯಗಳನ್ನು ಬದಲಾಯಿಸಿಕೊಳ್ಳುತ್ತಾರೆ ಎಂದು ನಿತಿನ್ ಗಡ್ಕರಿ ಹೇಳಿದರು.

ಓದಿ: ಕೇಜ್ರಿವಾಲ್​ಗೆ ಮತ್ತೆ ಸಂಕಷ್ಟ; ಏಪ್ರಿಲ್​ 15ರ ವರೆಗೆ ನ್ಯಾಯಾಂಗ ಬಂಧನದಲ್ಲಿ ದೆಹಲಿ ಸಿಎಂ - Liquor Policy Case

Last Updated : Apr 1, 2024, 4:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.