ETV Bharat / bharat

ಕಷ್ಟಗಳನ್ನು ಮೆಟ್ಟಿನಿಂತು ಸಾಧನೆ; ಏಕಕಾಲಕ್ಕೆ ಮೂರು ಸರ್ಕಾರಿ ಉದ್ಯೋಗ ಪಡೆದ ಯುವಕ - ಸಾಧಕ

ಗುರಿಯು ಕಣ್ಮುಂದೆ ಇದ್ದಾಗ ಯಾವುದೇ ಕಷ್ಟ ಬಂದರೂ ಅದನ್ನು ಸಾಧಿಸುವ ಛಲ, ಸಮರ್ಪಣಾ ಭಾವ, ಪರಿಶ್ರಮ ಇದ್ದರೆ ಗೆಲುವು ಸಾಧ್ಯ ಎಂಬುದನ್ನು ಯುವಕನೋರ್ವ ನಿರೂಪಿಸಿದ್ದಾರೆ.

ಸರ್ಕಾರಿ ಉದ್ಯೋಗ ಪಡೆದ ಯುವಕ
ಸರ್ಕಾರಿ ಉದ್ಯೋಗ ಪಡೆದ ಯುವಕ
author img

By ETV Bharat Karnataka Team

Published : Feb 24, 2024, 3:08 PM IST

ಹೈದರಾಬಾದ್ (ತೆಲಂಗಾಣ)​​​​: ಸಮರ್ಪಣೆ, ದೃಢತೆ ಎಂಬುದು ಯಶಸ್ಸಿನ ಕೀಲಿ ಕೈ. ಇವುಗಳನ್ನು ಪಾಲಿಸಿದರೆ ಅಲ್ಲಿ ಸೋಲೆ ಇಲ್ಲ ಎಂಬುದನ್ನು ನಿರೂಪಿಸಿದ್ದಾರೆ ತೆಲಂಗಾಣ ರಾಜ್ಯದ ಯುವ ಸಾಧಕ. ಅನಂತರಾಮ್​ ಗ್ರಾಮದ ರೈತಾಪಿ ಕುಟುಂಬದಿಂದ ಬಂದ ಗದ್ದಂ ರವಿ ಏಕಕಾಲದಲ್ಲಿ ಮೂರು ಸರ್ಕಾರಿ ನೌಕರಿಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ಬಡತನ ಮತ್ತು ಟೀಕೆಗಳಿಗೆ ಅಂಜಿ ಕುಳಿತರೆ ಏನು ಆಗದು ಎಂಬುದನ್ನು ಅರಿತ ರವಿ ತಮ್ಮ ಪೋಷಕರ ಕನಸನ್ನು ನನಸು ಮಾಡಲು ಪಣ ತೊಟ್ಟು ಯಶಸ್ವಿಯಾಗಿದ್ದಾರೆ. ಸತತ ಏಳು ವರ್ಷಗಳ ಕಾಲದ ಅವಿರಹಿತ ಶ್ರಮ ಅವರಿಗೆ ಕೊನೆಗೂ ಸಾಧನೆಯ ಫಲ ನೀಡಿದೆ.

ಶಿಕ್ಷಣದಲ್ಲಿದ್ದ ಬದ್ಧತೆ ಮತ್ತು ಸಮರ್ಪಣೆಗಳಿಂದ ರವಿ ಸ್ಪರ್ಧಾತ್ಮಕ ಪರೀಕ್ಷೆಗೆ ಕಠಿಣ ತಯಾರಿ ನಡೆಸಿದ್ದಾರೆ. ಈ ವೇಳೆ ಎದುರಾಗಿದ್ದ ಆರ್ಥಿಕ ಸವಾಲನ್ನು ಮೀರಿದ ಅವರು, ಇವ್ಯಾವು ತಮ್ಮ ಸಾಧನೆಗೆ ತೊಡಕು ಆಗದಂತೆ ನೋಡಿಕೊಂಡಿದ್ದಾರೆ. ಇದರ ಜೊತೆಗೆ ಅವರಿಗೆ ಕುಟುಂಬದ ಪ್ರೋತ್ಸಾಹ, ತಮ್ಮನ್ನು ತಾವು ಅಭಿವೃದ್ಧಿ ಪಡಿಸಿಕೊಳ್ಳುವ ಮನೋಭಾವದಿಂದ ಅವರು ಕಠಿಣ ತಪಸ್ಸನ್ನು ಮಾಡಿದ್ದಾರೆ. ಈ ನಡುವೆ ಎಂಜಿನಿಯರಿಂಗ್​​ ಮತ್ತು ಒಸ್ಮಾನಿಯಾ ವಿಶ್ವವಿದ್ಯಾಲಯದಿಂದ ಲೈಬ್ರರಿ ಸೈನ್ಸ್​​ ಪದವಿ ಪಡೆದಿದ್ದಾರೆ.

ಇದೀಗ ರವಿ ತೆಲಂಗಾಣ ಗುರುಕುಲ ವಿದ್ಯಾಲಯದಲ್ಲಿ ಗ್ರಂಥಪಾಲಕ ವಿಜ್ಞಾನದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಮತ್ತು ಜೂನಿಯರ್ ಲೆಕ್ಚರರ್ ಹುದ್ದೆ ಪಡೆದಿದ್ದಾರೆ. ಇದರ ಜೊತೆಗೆ ಪಿಜಿಟಿ ವಿಭಾಗದಲ್ಲಿ ನಾಲ್ಕನೇ ರ್ಯಾಂಕ್​ ಗಳಿಸಿದ್ದಾರೆ.

ಯಾವುದೇ ಸಾಧನೆಗೆ ಕಠಿಣ ಕ್ರಮದ ಅವಶ್ಯಕತೆ ಅವಶ್ಯ ಎಂಬುದನ್ನು ನೆನದು ರವಿ ಅದೇ ಹಾದಿಯಲ್ಲಿ ಮುನ್ನಡೆದಿದ್ದಾರೆ. ಈ ನಡುವೆ ಎದುರಾದ ಹಿನ್ನಡೆಯನ್ನು ಲೆಕ್ಕಿಸದೇ ತಮ್ಮ ಗುರಿಯತ್ತ ಮುಂದೆ ಸಾಗಿದ್ದು, ಇದೀಗ ವಿಜಯಶಾಲಿಯಾಗಿ ಹೊರ ಹೊಮ್ಮಿದ್ದಾರೆ.

ಈ ಅಭೂತಪೂರ್ವ ಸಾಧನೆ ಕುರಿತು ಮಾತನಾಡಿರುವ ರವಿ, ಇದು ಕೇವಲ ನನಗೆ ಮತ್ತು ನನ್ನ ಕುಟುಂಬಕ್ಕೆ ಮಾತ್ರವೇ ಹೆಮ್ಮೆ ತಂದಿಲ್ಲ. ನನ್ನಂತಹ ನೂರಾರು ಜನರ ಕನಸಿಗೆ ಇದು ಹಾದಿಯಾಗಲಿದೆ. ಸಮರ್ಪಣಾ ಮನೋಭಾವ ಜೊತೆಗೆ ಸ್ಮಾರ್ಟ್​​ ವರ್ಕ್​ ಮಾಡಿದರೆ ಕನಸು ನನಸಾಗಿಸಬಹುದು ಎಂದಿದ್ದಾರೆ. ಇವರ ಈ ಸಾಧನೆಯ ಹಾದಿ ಯುವ ಜನತೆಗೆ ಭರವಸೆಯ ದಾರಿ ದೀಪವಾಗಿದ್ದು, ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಎಲ್ಲವೂ ಸಾಧ್ಯ ಎಂಬುದನ್ನು ಸಾಬೀತು ಪಡಿಸಿದೆ.

ಇದನ್ನೂ ಓದಿ: ಏಕಕಾಲಕ್ಕೆ ನಾಲ್ಕು ಸರ್ಕಾರಿ ಉದ್ಯೋಗ ಪಡೆದ ಗೃಹಿಣಿ, ಯುವತಿ: ಹಲವರಿಗೆ ಸ್ಪೂರ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.