ETV Bharat / bharat

ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವು: ಓರ್ವನ ಸ್ಥಿತಿ ಚಿಂತಾಜನಕ - road accident

ರಾಂಚಿಯಲ್ಲಿ ರಸ್ತೆ ಅಪಘಾತ ನಡೆದಿದ್ದು, ಈ ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದೆ.

ರಸ್ತೆ ಅಪಘಾತ
ರಸ್ತೆ ಅಪಘಾತ
author img

By ETV Bharat Karnataka Team

Published : May 2, 2024, 10:40 AM IST

ರಾಂಚಿ(ಜಾರ್ಖಂಡ್​​): ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಬುಧವಾರ ರಾತ್ರಿ ಛತ್ರಾ ಮತ್ತು ರಾಂಚಿ ಗಡಿಯಲ್ಲಿರುವ ಪಿಪರ್ವರ್‌ನ ಬೆಲ್ವಾಟಂಡ್​ ಚೌಕ್‌ನಲ್ಲಿ ನಡೆದಿದೆ.

ಘಟನೆಯಲ್ಲಿ ಗೃಹರಕ್ಷಕ ದಳದ ಪಂಕಜ್ ಕುಮಾರ್, ಅವರ ಪತ್ನಿ ಗುಡಿಯಾ ದೇವಿ, ಇಬ್ಬರು ಮಕ್ಕಳಾದ ರಾಜ್‌ದೀಪ್ ಮತ್ತು ಸಲೋನಿ ಸಾವನ್ನಪ್ಪಿದ್ದು ಮತ್ತೋರ್ವ ಪುತ್ರ ದೀಪರಾಜ್ ತೀವ್ರವಾಗಿ ಗಾಯಗೊಂಡಿದ್ದಾರೆ. ಆತನಿಗೆ ರಾಂಚಿಯ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಒಂದೇ ಬೈಕ್‌ನಲ್ಲಿ ಐವರ ಪ್ರಯಾಣ: ಹೋಮ್ ಗಾರ್ಡ್ ಆಗಿದ್ದ ಪಂಕಜ್ ಕುಮಾರ್ ತನ್ನ ಮೂವರು ಮಕ್ಕಳು ಹಾಗೂ ಪತ್ನಿಯೊಂದಿಗೆ ಒಂದೇ ಬೈಕ್ ನಲ್ಲಿ ಭಾನುವಾರ ಮನೆಗೆ ಮರಳುತ್ತಿದ್ದರು. ಈ ವೇಳೆ ಕಾರೊಂದು ಬೈಕ್​ಗೆ ರಭಸವಾಗಿ ಡಿಕ್ಕಿ ಹೊಡೆದಿದೆ ಎಂದು ಖಲಾರಿ ಡಿಎಸ್ ಪಿ ರಾಮ್ ನಾರಾಯಣ ಚೌಧರಿ ತಿಳಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್​ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬ ಪುತ್ರ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಪೊಲೀಸರ ನೆರವಿನೊಂದಿಗೆ ಚಿಕಿತ್ಸೆಗಾಗಿ ರಾಂಚಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಹೋಮ್​ಗಾರ್ಡ್​ ದಳದ ಕ್ಷೇಮಾಭಿವೃದ್ಧಿ ಸಂಘದ ಪ್ರಕಾರ, 'ಗಾಯಗೊಂಡಿರುವ ಹೋಮ್​ಗಾರ್ಡ್​ನ ಮಗನ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ವೈದ್ಯರು ರಿಮ್ಸ್​​ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಗಡ್ಡ ಮೀಸೆ ಬಿಟ್ಟಿದ್ದ 80 ಕಾರ್ಮಿಕರನ್ನು ವಜಾಗೊಳಿಸಿದ ಕಂಪನಿ: ಕಾರ್ಮಿಕರಿಂದ ಭಾರಿ ಪ್ರತಿಭಟನೆ - HIMACHAL COMPANY LABOUR DISPUTE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.