ETV Bharat / bharat

ಶಿರಡಿಗೆ ಹೋಗುವ ಪ್ಲ್ಯಾನ್‌ ಇದೆಯೇ? ಕೈಗೆಟುಕುವ ದರದಲ್ಲಿ IRCTC ಟೂರ್ ಪ್ಯಾಕೇಜ್! - IRCTC Tour Package

ಶಿರಡಿಗೆ ಹೋಗಲು ಯೋಜಿಸುತ್ತಿದ್ದೀರಾ? ಹಾಗಾದರೆ, ನಿಮಗಾಗಿ ಇಲ್ಲಿದೆ ಗುಡ್​ ನ್ಯೂಸ್​. ಹೈದರಾಬಾದ್‌ನಿಂದ ಶಿರಡಿ ಪ್ರವಾಸಕ್ಕೆ ಕೈಗೆಟಕುವ ದರದಲ್ಲಿ IRCTC ಟೂರ್ ಪ್ಯಾಕೇಜ್‌ ಘೋಷಿಸಿದೆ.

author img

By ETV Bharat Karnataka Team

Published : Jul 8, 2024, 10:34 AM IST

IRCTC  Shirdi  Four days tour package  IRCTC Tour Package
ಐಆರ್​ಸಿಟಿಸಿ ಪ್ಯಾಕೇಜ್‌ (ETV Bharat)

ಕುಟುಂಬಸಮೇತ ಶಿರಡಿಗೆ ತೆರಳಲು ಬಯಸುವವರಿಗೆ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಹೊಸ ಪ್ಯಾಕೇಜ್ ತಂದಿದೆ. ಇದು ಕೇವಲ ಮೂರು ದಿನಗಳಲ್ಲಿ ಶಿರಡಿ ಮತ್ತು ನಾಸಿಕ್‌ಗೆ ಭೇಟಿ ನೀಡುವ ಅವಕಾಶ ಒದಗಿಸುತ್ತದೆ. ಈ ಪ್ಯಾಕೇಜ್ ಅನ್ನು ಕಡಿಮೆ ಬೆಲೆಗೆ ನೀಡಲಾಗುತ್ತಿದೆ.

ಶಿರಡಿ ಮತ್ತು ನಾಸಿಕ್‌ಗೆ ಭೇಟಿ ನೀಡುವ 'ಸಾಯಿ ಶಿವಂ' ಎಂಬ ಹೆಸರಿನ ಪ್ಯಾಕೇಜ್ ಇದಾಗಿದ್ದು, ಈ ಪ್ರವಾಸ ಮೂರು ರಾತ್ರಿ ಮತ್ತು ನಾಲ್ಕು ಹಗಲು ಇರುತ್ತದೆ. ಪ್ರತಿ ಶುಕ್ರವಾರ ಟೂರ್ ಪ್ರಾರಂಭ. ಅಲ್ಪಾವಧಿಯಲ್ಲಿ ಆಧ್ಯಾತ್ಮಿಕ ಯಾತ್ರೆ ಪೂರ್ಣಗೊಳಿಸಲು ಬಯಸುವವರಿಗಿದು ಸೂಕ್ತ. ಕಂಫರ್ಟ್ ಆಯ್ಕೆ ಮಾಡಿಕೊಂಡವರು ಥರ್ಡ್ ಎಸಿಯಲ್ಲಿ ಪ್ರಯಾಣಿಸುತ್ತಾರೆ. ಸ್ಟ್ಯಾಂಡರ್ಡ್ ಆಯ್ಕೆ ಮಾಡುವವರಿಗೆ ಸ್ಲೀಪರ್ ಕ್ಲಾಸ್‌ನಲ್ಲಿ ಬರ್ತ್ ನೀಡಲಾಗುತ್ತದೆ.

ಪ್ರಯಾಣದ ವಿವರಗಳು:

  • ಮೊದಲ ದಿನದ ರೈಲು 17064 (ಅಜಂತಾ ಎಕ್ಸ್‌ಪ್ರೆಸ್) ಶುಕ್ರವಾರ ಸಂಜೆ 6.40ಕ್ಕೆ ಕಾಚಿಗುಡ ರೈಲು ನಿಲ್ದಾಣದಿಂದ ಹೊರಡುತ್ತದೆ. ಇದು ರಾತ್ರಿಯ ಪ್ರಯಾಣವಾಗಿರುತ್ತದೆ.
  • ಎರಡನೇ ದಿನ ಬೆಳಗ್ಗೆ 7.10ಕ್ಕೆ ನಾಗರಸೋಲ್ ರೈಲು ನಿಲ್ದಾಣ ತಲುಪುತ್ತದೆ. ಅಲ್ಲಿಂದ ಶಿರಸಿಯಲ್ಲಿ ಮೊದಲೇ ಕಾಯ್ದಿರಿಸಿದ ಹೋಟೆಲ್‌ಗೆ ಕರೆದುಕೊಂಡು ಹೋಗುತ್ತಾರೆ. ಫ್ರೆಶ್ ಅಪ್ ಆದ ನಂತರ ಹೋಟೆಲ್​ನಿಂದ ನಡೆದುಕೊಂಡು ದೇವಸ್ಥಾನ ತಲುಪಬೇಕು. ಟಿಕೆಟ್ ವೆಚ್ಚವನ್ನು ಯಾತ್ರಾರ್ಥಿಗಳೇ ಭರಿಸಬೇಕು. ಪ್ರಯಾಣಿಕರು ಬೇಕಾದರೆ ಶನಿಸಿಂಗನಾಪುರಕ್ಕೆ ಬಂದು ಹೋಗಬಹುದು. ಶಿರಡಿಯಲ್ಲಿ ರಾತ್ರಿ ತಂಗುವುದು.
  • ಮೂರನೇ ದಿನ ಶಿರಡಿಯಿಂದ 90 ಕಿ.ಮೀ ದೂರದಲ್ಲಿರುವ ನಾಸಿಕ್‌ಗೆ ಪ್ರಯಾಣಿಸಲಿದ್ದೇವೆ. ತ್ರಯಂಬಕೇಶ್ವರಂನಲ್ಲಿರುವ ಜ್ಯೋತಿರ್ಲಿಂಗ ದೇವಸ್ಥಾನದ ದರ್ಶನ ಮತ್ತು ನಾಸಿಕ್‌ನಲ್ಲಿ ಪಂಚವಟಿಯ ದರ್ಶನ ನಡೆಯಲಿದೆ. ಸ್ಥಳೀಯ ಆಕರ್ಷಣೆಗಳಿಗೆ ಭೇಟಿ ನೀಡಬಹುದು. ಸಂಜೆ ಮತ್ತೆ ನಾಗರ್ಸೋಲ್ ನಿಲ್ದಾಣಕ್ಕೆ ಪ್ರಯಾಣ. ರೈಲು 17063 ರಾತ್ರಿ 8.30ಕ್ಕೆ ಹೈದರಾಬಾದ್‌ಗೆ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಇಡೀ ರಾತ್ರಿ ಪ್ರಯಾಣ ಇರುತ್ತದೆ.
  • ನಾಲ್ಕನೇ ದಿನವಾದ ಸೋಮವಾರ ಬೆಳಗ್ಗೆ 9:45ಕ್ಕೆ ರೈಲು ಕಾಚಿಗುಡ ತಲುಪುವುದರೊಂದಿಗೆ ಪ್ರವಾಸ ಪೂರ್ಣಗೊಳ್ಳಲಿದೆ.

ಟೂರ್ ಪ್ಯಾಕೇಜ್​ನ ದರಗಳು:

ಕಂಫರ್ಟ್:

  • ಸಿಂಗಲ್​ ಹಂಚಿಕೆ - ₹9,320
  • ಡಬಲ್ ಹಂಚಿಕೆ - ₹7,960
  • ಟ್ರಿಪಲ್ ಹಂಚಿಕೆ - ₹7,940
  • ಹಾಸಿಗೆ ಇರುವ ಮಗು (5-11 ವರ್ಷ) - ₹7,835
  • ಹಾಸಿಗೆ ಇಲ್ಲದ ಮಗು (5-11 ವರ್ಷ) - ₹6,845

ಸ್ಟ್ಯಾಂಡರ್ಡ್:

  • ಸಿಂಗಲ್​ ಹಂಚಿಕೆ - ₹7,635
  • ಡಬಲ್​ ಹಂಚಿಕೆ - ₹6,270
  • ಟ್ರಿಪಲ್ ಹಂಚಿಕೆ - ₹6,250
  • ಹಾಸಿಗೆ ಹೊಂದಿರುವ ಮಗು (5-11 ವರ್ಷಗಳು) - ₹6,150
  • ಹಾಸಿಗೆ ಇಲ್ಲದ ಮಗು (5-11 ವರ್ಷಗಳು) - ₹5,160

ಪ್ಯಾಕೇಜ್‌ನಲ್ಲಿ ಏನಿದೆ?:

  • ಪ್ರಯಾಣ (ಸ್ಲೀಪರ್, ಥರ್ಡ್ ಎಸಿ) ಪ್ರಯಾಣಿಕರು ಆಯ್ಕೆ ಮಾಡಿದ ವರ್ಗವನ್ನು ಅವಲಂಬಿಸಿರುತ್ತದೆ.
  • ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾರಿಗೆ ಸೌಲಭ್ಯವಿದೆ.
  • ಬೆಳಗಿನ ಉಪಹಾರವನ್ನು ಎರಡು ದಿನಗಳವರೆಗೆ ಪ್ಯಾಕೇಜ್‌ನಲ್ಲಿ ಸೇರಿಸಲಾಗಿದೆ.
  • ಪ್ರಯಾಣ ವಿಮೆ ನೀಡಲಾಗುವುದು.
  • ಪ್ರಸ್ತುತ ಈ ಪ್ರವಾಸ ಜುಲೈ 12ರಂದು ಆರಂಭ.
  • ಪ್ಯಾಕೇಜ್‌ನ ಸಂಪೂರ್ಣ ವಿವರಗಳು ಮತ್ತು ಬುಕಿಂಗ್‌ಗಾಗಿ https://www.irctctourism.com/tourpackageBooking?packageCode=SHR008 ಲಿಂಕ್ ಕ್ಲಿಕ್ ಮಾಡಿ.

ಇದನ್ನೂ ಓದಿ: ವೈಭವದಿಂದ ಜರುಗಿದ ಪುರಿ ಜಗನ್ನಾಥ ರಥಯಾತ್ರೆ; ತೇರು ಎಳೆದ ರಾಷ್ಟ್ರಪತಿ ಮುರ್ಮು - Puri Jagannath Rath Yatra

ETV Bharat Logo

Copyright © 2024 Ushodaya Enterprises Pvt. Ltd., All Rights Reserved.