ಹೈದರಾಬಾದ್ : ಈ ಹಿಂದೆ ಕರೆಂಟ್ ಬಿಲ್ ಪಾವತಿಸಲು ಜನರು ವಿದ್ಯುತ್ ಕಚೇರಿಗಳಿಗೆ ಹೋಗುತ್ತಿದ್ದರು. ಅದರ ನಂತರ ಆನ್‌ಲೈನ್ ಮತ್ತು ನಂತರ ಡಿಜಿಟಲ್ ಪಾವತಿಗಳು ಬಂದವು. ಇತ್ತೀಚೆಗೆ Google Pay ನಂತಹ UPI ಅಪ್ಲಿಕೇಶನ್‌ಗಳ ಮೂಲಕ ವಿದ್ಯುತ್ ಬಿಲ್ ಪಾವತಿಗಳನ್ನು ನಿಲ್ಲಿಸಲಾಗಿದೆ. ಈ ಹಿನ್ನೆಲೆ ಇತ್ತೀಚೆಗೆ ಉತ್ತರ ತೆಲಂಗಾಣ ಡಿಸ್ಕಾಂ ಮತ್ತೊಂದು ಹೊಸ ನೀತಿಯನ್ನು ಮುನ್ನೆಲೆಗೆ ತಂದಿದೆ. ಅದೇ QR ಕೋಡ್ ವಿಧಾನ. ಹಾಗಾದ್ರೆ QR ಕೋಡ್‌ನೊಂದಿಗೆ ಕರೆಂಟ್ ಬಿಲ್ ಪಾವತಿಸುವುದು ಹೇಗೆ? ಎಂಬುದನ್ನು ನಾವಿಂದು ತಿಳಿಸಿಕೊಡುತ್ತೇವೆ.
ಕ್ಯೂಆರ್ ಕೋಡ್ ವ್ಯವಸ್ಥೆಯೊಂದಿಗೆ ಕರೆಂಟ್ ಬಿಲ್ ಪಾವತಿ : ಮೂರನೇ ವ್ಯಕ್ತಿಯ (ಥರ್ಡ್ ಪಾರ್ಟಿ) ಪಾವತಿ ಅಪ್ಲಿಕೇಶನ್‌ಗಳಿಂದ ಬಿಲ್‌ಗಳ ಪಾವತಿಯನ್ನು ಜುಲೈ 1 ರಂದೇ ನಿಲ್ಲಿಸಲಾಗಿದೆ. ಈ ಮೂಲಕ ವಿದ್ಯುತ್ ಬಿಲ್ ಪಾವತಿಸುವ ಗ್ರಾಹಕರಿಗೆ (ಉತ್ತರ ತೆಲಂಗಾಣ) ವಿದ್ಯುತ್ ವಿತರಣಾ ಸಂಸ್ಥೆ ಶುಭ ಸುದ್ದಿ ನೀಡಿದೆ.
ಪಾವತಿ ಆ್ಯಪ್‌ಗಳ ಬದಲಿಗೆ ಮನೆಯಿಂದಲೇ ಬಿಲ್ ಪಾವತಿ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಅದೇ QR ಕೋಡ್‌ನ ಕಾರ್ಯವಿಧಾನ. ಮನೆಯಲ್ಲಿ ಮೀಟರ್ ರೀಡಿಂಗ್ ತೆಗೆದುಕೊಂಡಾಗ ಬಿಲ್ ಅಡಿಯಲ್ಲಿ ಈ ಕ್ಯೂಆರ್ ಕೋಡ್ ನೀಡಲಾಗುತ್ತದೆ. ಅದರ ಮೂಲಕ ನಿಮ್ಮ ಆಯ್ಕೆಯ ಪೇಮೆಂಟ್ ಆ್ಯಪ್ ಮೂಲಕ ವಿದ್ಯುತ್ ಬಿಲ್ ಪಾವತಿಸುವ ಅನುಕೂಲವನ್ನು ವಿದ್ಯುತ್ ವಿತರಣಾ ಸಂಸ್ಥೆ ತಂದಿದೆ.
ಮೊದಲು ಮನೆಗಳಲ್ಲಿನ ಮೀಟರ್‌ಗಳಿಂದ ರೀಡಿಂಗ್ ತೆಗೆದುಕೊಂಡ ನಂತರ ಬಿಲ್‌ನ ಕೆಳಭಾಗದಲ್ಲಿ ಕ್ಯೂಆರ್ ಕೋಡ್ ಅನ್ನು ಮುದ್ರಿಸಲಾಗುತ್ತದೆ. NPDCL ಬಳಕೆದಾರರು ತಮ್ಮ ಮೊಬೈಲ್‌ಗಳ ಮೂಲಕ QR ಕೋಡ್ ಅನ್ನು ಸ್ಕ್ಯಾನ್ ಮಾಡಲು ಮತ್ತು ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳು, UPI, ನೆಟ್ ಬ್ಯಾಂಕಿಂಗ್ ಇತ್ಯಾದಿಗಳ ಮೂಲಕ ಬಿಲ್‌ಗಳನ್ನು ಪಾವತಿಸಲು ಅನುಕೂಲವನ್ನು ತಂದಿದೆ. ಗ್ರಾಹಕರು ಸುಲಭವಾಗಿ ಬಿಲ್ ಪಾವತಿಸಲು ಈ ವ್ಯವಸ್ಥೆ ಜಾರಿ ಮಾಡಿದೆ.
ಹೀಗಾಗಿ NPDCL ಕೆಲವು ವಿದ್ಯುತ್ ಕಂದಾಯ ಕಚೇರಿಗಳಲ್ಲಿ (ERO) ಪ್ರಾಯೋಗಿಕ ಯೋಜನೆಯಾಗಿ QR ಕೋಡ್ ಮೂಲಕ ವಿದ್ಯುತ್ ಬಿಲ್ ಪಾವತಿಸುವ ಸೌಲಭ್ಯವನ್ನು ಪರಿಚಯಿಸಿದೆ. ಫಲಿತಾಂಶದ ಆಧಾರದ ಮೇಲೆ ಹಂತ ಹಂತವಾಗಿ ಎಲ್ಲ ಜಿಲ್ಲೆಗಳಲ್ಲಿ ಕ್ಯೂಆರ್ ಕೋಡ್ ಬಿಲ್‌ಗಳು ಬರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನೀತಿ ಸಂಪೂರ್ಣ ಜಾರಿಯಾದರೆ ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿಗೆ ಅಡ್ಡಿಯಾಗದು. ವಿದ್ಯುತ್ ಗ್ರಾಹಕರು ಈಗಾಗಲೇ ತಮ್ಮ ಬಿಲ್‌ಗಳನ್ನು ವಿದ್ಯುತ್ ಕಂಪನಿಯ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಪಾವತಿಸುತ್ತಿದ್ದಾರೆ. ಈಗ ಅವುಗಳಿಗೆ ಇದೀಗ ಕ್ಯೂಆರ್ ಸಿಸ್ಟಂ ಸೇರ್ಪಡೆಯಾಗಿದೆ.
ಥರ್ಡ್ ಪಾರ್ಟಿ ಆ್ಯಪ್ ಮೂಲಕ ವಿದ್ಯುತ್ ಬಿಲ್ ಪಾವತಿ ಸ್ಥಗಿತ : ಜುಲೈ 1ರಂದು ಫೋನ್ ಪೇ, ಪೇಟಿಎಂ, ಅಮೆಜಾನ್ ಪೇ ಮುಂತಾದ ಥರ್ಡ್ ಪಾರ್ಟಿ ಆ್ಯಪ್‌ಗಳ ಮೂಲಕ ವಿದ್ಯುತ್ ಬಿಲ್ ಪಾವತಿ ಪ್ರಕ್ರಿಯೆಯನ್ನು ವಿದ್ಯುತ್ ವಿತರಣಾ ಕಂಪನಿಗಳು ಸ್ಥಗಿತಗೊಳಿಸಿರುವುದು ಗೊತ್ತಾಗಿದೆ.
ಆರ್‌ಬಿಐ ಮಾರ್ಗಸೂಚಿ ಪ್ರಕಾರ, ಜುಲೈ 1ರಿಂದ ಆಯಾ ಕಂಪನಿಗಳು ವಿದ್ಯುತ್ ಬಿಲ್ ಪಾವತಿಯನ್ನು ನಿಲ್ಲಿಸಿವೆ. ಇನ್ನು ಮುಂದೆ ವೆಬ್‌ಸೈಟ್ ಅಥವಾ ಟಿಜಿಎಸ್‌ಪಿಡಿಸಿಎಲ್ ಮೊಬೈಲ್ ಆ್ಯಪ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸುವಂತೆ ಡಿಸ್ಕಾಂ ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದೆ. ಈ ಪಾವತಿಗಳು ಕಳೆದ ಸೋಮವಾರದಿಂದ ಜಾರಿಗೆ ಬಂದಿವೆ.
ಇದನ್ನೂ ಓದಿ : ಸಿಡಾಕ್ನಿಂದ ಸ್ಮಾರ್ಟ್ ಎನರ್ಜಿ ಮೀಟರ್: ಬಿಲ್ ಕಟ್ಟದಿದ್ರೆ ಫ್ಯೂಸ್ ತೆಗೆಯದೇ ಕಟ್ ಆಗುತ್ತೆ ವಿದ್ಯುತ್