ETV Bharat / bharat

ಸೋದರ ಮಾವ, ಅತ್ತೆಗೆ ಗುಂಡು ಹಾರಿಸಿ ಕೊಂದು ಹಾಕಿದ ಬಾಲಕ! - Two Shot Dead By Minor

author img

By ETV Bharat Karnataka Team

Published : Jul 17, 2024, 11:59 AM IST

ಉತ್ತರ ಪ್ರದೇಶದ ಲಖನೌದಲ್ಲಿ ಅಪ್ರಾಪ್ತ ಸೋದರಳಿಯ ಇಬ್ಬರನ್ನು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾನೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ಲಖನೌ(ಉತ್ತರ ಪ್ರದೇಶ): ಅಪ್ರಾಪ್ತ ಬಾಲಕನೋರ್ವ ತನ್ನ ಸೋದರ ಮಾವ ಮತ್ತು ಆತನ ಪತ್ನಿಯನ್ನು ಗುಂಡಿಕ್ಕಿ ಹತ್ಯೆಗೈದ ಆಘಾತಕಾರಿ ಘಟನೆ ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ರಾಜೇಂದ್ರ ಸಿಂಗ್ (62) ಹಾಗು ಪತ್ನಿ ಸರೋಜಾ (56) ಮೃತರು. ಇವರ ಪುತ್ರ ಕೂಡ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಪೂರ್ಣ ವಿವರ: ಇಂದಿರಾ ನಗರ ಪೊಲೀಸ್​ ಠಾಣಾ ವ್ಯಾಪ್ತಿಯ ತಖ್ರೋಖಿ ಪ್ರದೇಶದಲ್ಲಿ ರಾಜೇಂದ್ರ ಸಿಂಗ್ ಕುಟುಂಬ ವಾಸವಾಗಿತ್ತು. ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ರಾಜೇಂದ್ರ ಮತ್ತು ತನ್ನ ಸಹೋದರಿಯಾದ ಆರೋಪಿಯ ತಾಯಿ ಮಧ್ಯೆ ವಾಗ್ವಾದ ನಡೆಯುತ್ತಿತ್ತು. ಈ ವೇಳೆ, ಸಹೋದರಿಯ ಮಗನಾದ ಬಾಲಕ, ರಾಜೇಂದ್ರ, ಆತನ ಪತ್ನಿ ಹಾಗೂ ಮಗ ಸೇರಿ ಮೂವರ ಮೇಲೂ ಗುಂಡು ಹಾರಿಸಿದ್ದಾನೆ.

ಲಖನೌ ಉತ್ತರ ವಿಭಾಗದ ಉಪ ಪೊಲೀಸ್​ ಆಯುಕ್ತ ಅಭಿಜತ್ ಆರ್​.ಶಂಕರ್​ ಮಾತನಾಡಿ, ''ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅಷ್ಟರಲ್ಲೇ ರಾಜೇಂದ್ರ ಹಾಗೂ ಸರೋಜಾ ಮೃತಪಟ್ಟರು. ಮಗನಿಗೆ ಇನ್ನೂ ಚಿಕಿತ್ಸೆ ಮುಂದುವರೆದಿದೆ. ಆರೋಪಿ ಪರಾರಿಯಾಗಿದ್ದು, ಪತ್ತೆಗೆ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ'' ಎಂದು ತಿಳಿಸಿದರು.

ಸ್ಥಳೀಯರ ಮಾಹಿತಿ ಪ್ರಕಾರ, ರಾಜೇಂದ್ರ ನಿವೃತ್ತ ಸರ್ಕಾರಿ ನೌಕರ. ಇವರ ಕುಟುಂಬದೊಂದಿಗೆ ಸಹೋದರಿ ಹಾಗೂ ಆಕೆಯ ಮಗ ಕೂಡ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸೋದರಳಿಯ ಈ ಕೃತ್ಯ ಎಸಗಿದ್ದಾನೆ. ಆದರೆ, ಪೊಲೀಸ್​ ತನಿಖೆಯ ಬಳಿಕವೇ ನಿಖರ ವಿಷಯ ಬೆಳಕಿಗೆ ಬರಲಿದೆ.

ಇದನ್ನೂ ಓದಿ: 35 ವರ್ಷದ ರಾಜಸ್ಥಾನದ ಯುವಕನ ವರಿಸಿದ್ದ 78ರ ಅಮೆರಿಕದ ವೃದ್ಧೆ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.