ETV Bharat / bharat

ಮಾಧ್ಯಮ ಕ್ಷೇತ್ರದ ಬೆಳವಣಿಗೆಗೆ ಸರ್ವಸ್ವ ಅರ್ಪಿಸಿದ್ದ ರಾಮೋಜಿ ರಾವ್: ಯುವ ಪೀಳಿಗೆಗೆ ಸ್ಫೂರ್ತಿಯ ಸಾಧಕ - Ramoji Rao - RAMOJI RAO

ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಮಾಧ್ಯಮ ಕ್ಷೇತ್ರದ ಬೆಳವಣಿಗೆಗೆ ತಮ್ಮ ಸರ್ವಸ್ವ ಅರ್ಪಿಸಿದ್ದರು. ಈ ಮೂಲಕ ಅವರು ದೇಶಾದ್ಯಂತ ಹೆಸರು ಮಾಡಿದ್ದರು.

Ramoji Rao
ರಾಮೋಜಿ ರಾವ್ (ETV Bharat)
author img

By ETV Bharat Karnataka Team

Published : Jun 8, 2024, 9:31 AM IST

ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ತಮ್ಮ 87 ವರ್ಷಗಳ ಜೀವಿತಾವಧಿಯಲ್ಲಿ ವಿವಿಧ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿ, ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.

'ಮಾಧ್ಯಮ ವ್ಯಾಪಾರವಲ್ಲ, ಸಮಾಜವನ್ನು ಜಾಗೃತಗೊಳಿಸುವ ವೇದಿಕೆ' ಎಂದೇ ರಾಮೋಜಿ ರಾವ್ ನಂಬಿದ್ದರು. 1969 ರಲ್ಲಿ ಅನ್ನದಾತ ಎಂಬ ಮಾಸ ಪತ್ರಿಕೆ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಮೊದಲ ಹೆಜ್ಜೆಯಿಟ್ಟರು. ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರು ಕೃಷಿ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಕರದೀಪಿಕೆ ಎಂಬ ಪುಸ್ತಕವನ್ನೂ ಬಿಡುಗಡೆ ಮಾಡಿದ್ದರು. ಈ ಮೂಲಕ ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ರೈತರ ನಡುವೆ ಸೇತುವೆ ನಿರ್ಮಿಸಿದರು. ಕೃಷಿಯ ಸುಧಾರಿತ ವಿಧಾನಗಳು, ತಾಂತ್ರಿಕ ವಿಧಾನಗಳು ಮತ್ತು ಹೊಸ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ಕೊಡಲಾರಂಭಿಸಿದರು. ಪರಿಣಾಮವಾಗಿ, ತೆಲುಗು ರೈತರು ಹೊಸ ಪ್ರಯೋಗಗಳನ್ನು ಪ್ರಾರಂಭಿಸಿದರು.

ಫಿಲ್ಮ್ ಸಿಟಿಯಲ್ಲಿ ರಾಮೋಜಿ ರಾವ್
ಫಿಲ್ಮ್ ಸಿಟಿಯಲ್ಲಿ ರಾಮೋಜಿ ರಾವ್ (ETV Bharat)

1974ರಲ್ಲಿ ಮಾಧ್ಯಮ ರಂಗದಲ್ಲಿ ರಾಮೋಜಿ ರಾವ್ ಇಟ್ಟ ಮತ್ತೊಂದು ಹೆಜ್ಜೆ ಸಂಚಲನ ಮೂಡಿಸಿತ್ತು. ಹಲವು ಪತ್ರಿಕೆ, ಮ್ಯಾಗಜಿನ್​​ ಜೊತೆ ಈನಾಡು ಹೆಚ್ಚು ಸರ್ಕುಲೇಶನ್​ ಆದ ದಿನಪತ್ರಿಕೆ ಆಗಿ ಹೆಸರು ಮಾಡಿತು. ಬದಲಾವಣೆ ಮಾತ್ರ ಶಾಶ್ವತ ಎಂದು ರಾಮೋಜಿ ರಾವ್ ನಂಬಿದ್ದರು. ಇದು ತೆಲುಗು ಓದುಗರ ದೈನಂದಿನ ದಿನಚರಿಯಾಗಿತ್ತು. ಪ್ರಾಮಾಣಿಕತೆ ಮತ್ತು ಸಮಗ್ರತೆ ಈ ಪತ್ರಿಕೆಯಲ್ಲಿ ಸಾಬೀತಾಗಿತ್ತು. 1976ರ ಮೊದಲಾರ್ಧದಲ್ಲಿ 48,339 ಪ್ರತಿಗಳಿತ್ತು. 2011ರ ಮೊದಲಾರ್ಧ ಈ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿತ್ತು. ಕೋವಿಡ್​​ ಸಮಯದಲ್ಲಿ ಹಲವು ಪತ್ರಿಕೆಗಳು ಅಂತ್ಯ ಕಾಣಲಿವೆ ಎಂದೇ ಹಲವರು ಅನುಮಾನಿಸಿದ್ದರು. ಆದರಿಂದು ಅವೆಲ್ಲವನ್ನೂ ರಾಮೋಜಿ ಅವರ ಪ್ರಯತ್ನಗಳು ಬುಡಮೇಲು ಮಾಡಿವೆ. ಇಂದಿಗೂ ಇದು 23 ಕೇಂದ್ರಗಳಲ್ಲಿ ಮುದ್ರಿಸಲ್ಪಡುತ್ತಿದೆ. ಜೊತೆಗೆ, ಅತಿ ಹೆಚ್ಚು ಸರ್ಕ್ಯುಲೇಶನ್​​ ಹೊಂದಿರುವ ತೆಲುಗು ದಿನಪತ್ರಿಕೆಯಾಗಿದೆ.

ನಿತ್ಯ ಬೆಳಗಾಗುವ ಮುನ್ನ ಸತ್ಯ ಬಯಲಾಗಲಿ: ಇದು ರಾಮೋಜಿ ರಾವ್‌ ಅವರ ಸಿದ್ಧಾಂತ. ಆ ಸಿದ್ಧಾಂತ ತೆಲುಗು ಪತ್ರಿಕೆಗಳ ದಿಕ್ಕನ್ನೇ ಬದಲಿಸಿತು. ಈ ಹಿಂದೆ ಪತ್ರಿಕೆಗಳು ಸೂಕ್ತ ಸಮಯಕ್ಕೆ ಓದುಗರನ್ನು ತಲುಪುತ್ತಿರಲಿಲ್ಲ. ಆ ಪರಿಸ್ಥಿತಿಯನ್ನೇ ರಾಮೋಜಿ ರಾವ್​ ಅವರು ಬದಲಾಯಿಸಿದರು. ಮ್ಯಾಗಜೀನ್ ಡೆಲಿವರಿ ವ್ಯವಸ್ಥೆಯಿಂದ ಹಿಡಿದು ಏಜೆಂಟರ ನೇಮಕದವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಹೊಸ ಟ್ರೆಂಡ್ ಸೃಷ್ಟಿ ಮಾಡಿದರು. ಬೆಳಗಾಗುವ ಮುನ್ನವೇ ದಿನಪತ್ರಿಕೆಯನ್ನು ಓದುಗರ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ರಾಮೋಜಿ ರಾವ್​ ಅವರೇ ಆರಂಭಿಸಿದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು, ನಾಯಕರ ಹೇಳಿಕೆಗಳು ಮತ್ತು ಸಾರ್ವಜನಿಕ ಸಭೆಗಳ ಭಾಷಣಗಳನ್ನು ತುಂಬುವ ಮಾಧ್ಯಮಕ್ಕೆ ಮಾತ್ರ ಸೀಮಿತವಾಗಲಿಲ್ಲ. ತೆಲುಗು ಪತ್ರಿಕೋದ್ಯಮ ಗ್ರಾಮೀಣ ಹಾದಿ ಹಿಡಿಯಿತು. ದೂರದ ಹಳ್ಳಿ ಪ್ರದೇಶಗಳ ಅಸಹಾಯಕ ಜನರು ಅನುಭವಿಸುವ ಕಷ್ಟಗಳಿಗೆ ಪತ್ರಿಕೆಗಳು ಆದ್ಯತೆ ನೀಡಬೇಕು ಎಂದು ರಾಮೋಜಿ ರಾವ್ ನಂಬಿದ್ದರು. ಆ ನಂಬಿಕೆ ಇಂದಿಗೂ ಮುಂದುವರೆದಿದೆ. ಅದಕ್ಕೆ ಅನುಗುಣವಾಗಿ ಸ್ಥಳೀಯ ಸಾರ್ವಜನಿಕ ಸಮಸ್ಯೆಗಳನ್ನು ಪತ್ರಿಕೆಗಳ ಮೂಲಕ ದೇಶದ ಗಮನ ಸೆಳೆಯಲಾಗುತ್ತಿದೆ.

2016ರಲ್ಲಿ ಪದ್ಮವಿಭೂಷಣ ಪುರಸ್ಕಾರ ಸ್ವೀಕರಿಸಿದ ರಾಮೋಜಿ ರಾವ್
2016ರಲ್ಲಿ ಪದ್ಮವಿಭೂಷಣ ಪುರಸ್ಕಾರ ಸ್ವೀಕರಿಸಿದ ರಾಮೋಜಿ ರಾವ್ (ETV Bharat)

ಈನಾಡು ಕೇವಲ ಸುದ್ದಿಯಲ್ಲ, ತೆಲುಗು ಜನರ ಸ್ವಾಭಿಮಾನದ ಧ್ವಜ: 1978-83ರ ನಡುವೆ ಆಗಿನ ಕಾಂಗ್ರೆಸ್ ನಾಯಕತ್ವ, ಆಂಧ್ರಪ್ರದೇಶದಲ್ಲಿ ಕೇವಲ ಐದು ವರ್ಷಗಳಲ್ಲಿ ನಾಲ್ಕು ಮುಖ್ಯಮಂತ್ರಿಗಳನ್ನು ಬದಲಾಯಿಸಿತು. ಆ ಸಮಯದಲ್ಲಿ ತೆಲುಗು ರಾಜ್ಯದ ಸ್ವಾಭಿಮಾನವನ್ನು ರಕ್ಷಿಸಲು ಹೊಸ ರಾಜಕೀಯ ಶಕ್ತಿಯಾಗಿ ತೆಲುಗು ದೇಶಂ ಹೊರಹೊಮ್ಮುವುದನ್ನು ಜನರು ಸ್ವಾಗತಿಸಿದರು. 1983ರಲ್ಲಿ ಸರ್ವಾಧಿಕಾರವನ್ನು ಎದುರಿಸುವ ಉದ್ದೇಶದಿಂದ ತೆಲುಗುದೇಶಂ ಪರ ನಿಂತು, ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಒಳ್ಳೆಯದನ್ನು ಮಾಡಿದರೆ ಮೆಚ್ಚುತ್ತೇವೆ, ಇಲ್ಲವಾದರೆ ಎಚ್ಚರಿಕೆ ನೀಡುತ್ತೇವೆ ಎಂದು ಸಂಪಾದಕೀಯದಲ್ಲಿ ಸ್ಪಷ್ಟಪಡಿಸಿದ್ದರು.

1984ರಲ್ಲಿ ಆಗಿನ ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರ್ಕಾರ, ಎನ್‌ಟಿಆರ್‌ ಸರ್ಕಾರವನ್ನು ಕಿತ್ತೊಗೆದಾಗ ಈನಾಡು ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಹೋರಾಟ ಮಾಡಿತ್ತು. 2003 ರಲ್ಲಿ ಅಂದಿನ ವಿರೋಧ ಪಕ್ಷದ ನಾಯಕ ವೈ.ಎಸ್.ರಾಜಶೇಖರ ರೆಡ್ಡಿ ಅವರ ಪಾದಯಾತ್ರೆ ವಿಷಯವನ್ನು ಈ ಪತ್ರಿಕೆ ವ್ಯಾಪಕವಾಗಿ ಪ್ರಕಟಿಸಿತ್ತು. ಆ ನಂತರ ಹಲವು ಹಗರಣಗಳನ್ನು ಬಯಲು ಮಾಡಿತು. 2019ರಲ್ಲಿ ಜಗನ್ ಅವರ ಪಾದಯಾತ್ರೆಯನ್ನು ಈನಾಡು ಪ್ರಸಾರ ಮಾಡಿತ್ತು.

ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದ ರಾಮೋಜಿ ರಾವ್
ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದ ರಾಮೋಜಿ ರಾವ್ (ETV Bharat)

ಓದುಗರ ಅಭಿರುಚಿಗೆ ತಕ್ಕಂತೆ ಇಂದಿನ ಪಯಣ ಸಾಗಿದೆ. ಹಾಗಾಗಿ ಈನಾಡು ಸೇರಿ ರಾಮೋಜಿ ರಾವ್​ ಅವರಿಗೆ ಸಂಬಂಧಿಸಿದ ಮಾಧ್ಯಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಪರಿಣಾಮ ಹೆಚ್ಚು ಜನರನ್ನು ಪ್ರವೇಶಿಸಲು ಸಾಧ್ಯವಾಗುತ್ತಿದೆ. ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ ಕೆಳವರ್ಗದವರ ಸಮಸ್ಯೆಗಳನ್ನು ಬಿಂಬಿಸಲು ರಾಮೋಜಿ ರಾವ್ ಹೊಸ ಪ್ರಯತ್ನಗಳನ್ನು ಅಳವಡಿಸಿಕೊಂಡು ಗಮನ ಸೆಳೆದಿದ್ದಾರೆ.

ಎಲ್ಲವನ್ನೂ ಒಳಗೊಂಡ ಈ ನಾಡು- ಜನರ ನಾಡಿಮಿಡಿತದ ಪ್ರತೀಕ: ಯುಗಯುಗಾಂತರಗಳಿಂದ ತಾರತಮ್ಯಕ್ಕೆ ಒಳಗಾದ ಮಹಿಳೆಯರ ಸಮಸ್ಯೆಗಳು ಮತ್ತು ಅವರ ಯಶೋಗಾಥೆಗಳು ಸಮಾಜಕ್ಕೆ ತಿಳಿಯಬೇಕು ಎಂಬುದು ರಾಮೋಜಿ ರಾವ್​​ ಅವರ ಉದ್ದೇಶವಾಗಿತ್ತು. 1992ರ ಸೆಪ್ಟೆಂಬರ್‌ನಲ್ಲಿ ಇಂದಿನ ವಸುಂಧರಾ ಎಂಬ ಪ್ರತೇಕ ಪುಟವನ್ನ​​ ಆರಂಭಿಸಲಾಯಿತು. ಇದು ಮಹಿಳೆಯರಿಗಾಗಿ ಮೀಸಲಾದ ಪುಟ ಇದಾಗಿದೆ​. ಇದಲ್ಲದೇ, ತೆಲುಗು ಪತ್ರಿಕಾ ವಲಯದಲ್ಲಿ ಪ್ರಥಮ ಬಾರಿಗೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುಟ, ವಾಣಿಜ್ಯ ಸುದ್ದಿ ಬಯಸುವವರಿಗೆ ಬ್ಯುಸಿನೆಸ್​ ಪುಟ, ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನದ ಮಾಹಿತಿ ಒದಗಿಸುವ ಪೇಜ್​​​ಗಳನ್ನು ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ನಾಂದಿ ಹಾಡುವ ಎಜುಕೇಶನ್​ ಪೇಜ್​​, ಆರೋಗ್ಯದ ಅರಿವು ಮೂಡಿಸುವ ಸುಖೀಭವ, ಕ್ರೀಡಾ ಮಾಹಿತಿ ನೀಡುವ ಚಾಂಪಿಯನ್, ವಿಜ್ಞಾನ ತಂತ್ರಜ್ಞಾನದ ಪ್ರಗತಿಗೆ ಕನ್ನಡಿ ಹಿಡಿಯುವ ಇ - ನಾಡು ಪೇಜ್​​, ಹೂಡಿಕೆದಾರರಿಗೆ ಮಾರ್ಗದರ್ಶನ ನೀಡುವ ಸಿರಿ, ಯುವಕರಲ್ಲಿ ಉತ್ಸಾಹ ತುಂಬುವ ಯುವ ಸೇರಿದಂತೆ ಎಲ್ಲ ವಿಷಯಗಳನ್ನು ಪತ್ರಿಕೆಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ.

ನಿರ್ಮಾಪಕ ರಾಘವೇಂದ್ರ ರಾವ್, ಖ್ಯಾತ ನಟ ಚಿರಂಜೀವಿ ಜೊತೆ ರಾಮೋಜಿ ರಾವ್
ನಿರ್ಮಾಪಕ ರಾಘವೇಂದ್ರ ರಾವ್, ಖ್ಯಾತ ನಟ ಚಿರಂಜೀವಿ ಜೊತೆ ರಾಮೋಜಿ ರಾವ್ (ETV Bharat)

ಈನಾಡು ಪತ್ರಿಕೆ ಸಿತಾರ ಸಿನಿಮಾ ವೀಕ್ಲಿಯನ್ನು ಆರಂಭಿಸಿತ್ತು. 1976ರ ಅಕ್ಟೋಬರ್ 3ರಂದು ಸಿನಿಮಾ ವಿಶೇಷತೆಗಳ ಸಂಗ್ರಹವಾಗಿ ಸಿತಾರವನ್ನು ಸಿನಿ ಅಭಿಮಾನಿಗಳಿಗಾಗಿಯೇ ಪ್ರಸ್ತುತಪಡಿಸಲಾಯಿತು. 1980ರಿಂದ, ಪ್ರತಿಭಾವಂತ ನಟರು ಮತ್ತು ತಂತ್ರಜ್ಞರನ್ನು ಗೌರವಿಸಲು ಸಿತಾರಾ ಪ್ರಶಸ್ತಿ ಕಾರ್ಯಕ್ರಮವನ್ನೂ ಸಹ ಮೂರು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರಲಾಗುತ್ತಿದೆ. ಸಾಹಿತ್ಯ ಪ್ರೇಮಿಗಳಿಗಾಗಿ 1978ರಲ್ಲಿ ಚತುರ ಮತ್ತು ವಿಪುಲ ಎಂಬ ಮಂತ್ಲಿ ಮ್ಯಾಗಜಿನ್​​ ಆರಂಭವಾದವು.

ಸ್ಥಳೀಯ ಪತ್ರಿಕೆಗಳಿಗೆ ಹೊಸ ಯುಗ: ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳ ಹೊರತಾಗಿ, ರಾಮೋಜಿ ರಾವ್ ಅವರು ಕೈಗಾರಿಕೋದ್ಯಮಿ, ಪತ್ರಿಕೆ ಸಂಪಾದಕ ಮತ್ತು ಸ್ಟುಡಿಯೋ ಸಂಸ್ಥಾಪಕರಾಗಿ ಮಾದರಿಯಾದವರು. ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಅಧ್ಯಕ್ಷರಾಗಿ, ಅವರು ಪತ್ರಿಕೋದ್ಯಮದ ಸಮಗ್ರತೆ ಮತ್ತು ನೈತಿಕ ನಡವಳಿಕೆಯ ಅತ್ಯುನ್ನತ ಮಾನದಂಡಗಳನ್ನು ಸಾರಿದರು. ಜೊತೆಗೆ ಇವರ ನೇತೃತ್ವದಲ್ಲಿ ಜಿಲ್ಲಾ ಪತ್ರಿಕೆಗಳ ಆಗಮನವು ತಳಮಟ್ಟದ ಪತ್ರಿಕೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡಿತು. ಇದರಿಂದ ಕಟ್ಟ ಕಡೆಯ ವ್ಯಕ್ತಿಗೂ ಮಾಧ್ಯಮ ಧ್ವನಿ ಆಯಿತು. 'ಅನ್ನದಾತ' ದಂತಹ ಪ್ರಕಟಣೆಗಳ ಮೂಲಕ ಅವರು ರೈತರ ಪರವಾಗಿ ಹೋರಾಡಿದರು. ಅವರ ಸಂಪಾದಕೀಯ ಕುಶಾಗ್ರಮತಿ ಮತ್ತು ನವೀನ ಮನೋಭಾವವು ಮಾಧ್ಯಮದಲ್ಲಿ ಕ್ರಾಂತಿಗೊಳಿಸಿತು.

ಮುದ್ರಣ ಮಾಧ್ಯಮ ಜೊತೆ ಎಲೆಕ್ಟ್ರಾನಿಕ್​ಗೂ ಎಂಟ್ರಿ: ದಿನಪತ್ರಿಕೆಯಲ್ಲಿ ಇಂಗ್ಲಿಷ್ ಪದಗಳಿಗೆ ಪರ್ಯಾಯವಾಗಿ ತೆಲುಗು ಪದಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ತೆಲುಗು ವೆಲುಗು ಮಾಸ ನಿಯಕಾಲಿಕೆ ಕೂಡ ಜನಪ್ರಿಯವಾಗಿದೆ. ಸಾಹಿತ್ಯದ ಮಾಧುರ್ಯವನ್ನು ತೆಲುಗು ಲೈಟ್ ಮ್ಯಾಗಜಿನ್ ರಚಿಸಲಾಗಿದೆ. ಮಕ್ಕಳಿಗಾಗಿ 'ಬಾಲಭಾರತಂ' ಕೂಡ ಆರಂಭವಾಗಿದೆ. ಇವು ಮುದ್ರಣ ಮಾಧ್ಯಮದಲ್ಲಿನ ಸಂಚಲನವಾದರೆ, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ರಾಮೋಜಿ ರಾವ್ ಆರಂಭಿಸಿದ 'ಈಟಿವಿ ತೆಲುಗು' ತೆಲುಗು ರಾಜ್ಯದಲ್ಲೇ ಸಂಚಲನ ಮೂಡಿಸಿದೆ.

ರಾಮೋಜಿ ರಾವ್
ರಾಮೋಜಿ ರಾವ್ (ETV Bharat)

'ಈಟಿವಿ ತೆಲುಗು': ಅಪರಿಮಿತ ಮನರಂಜನೆ ನೀಡುವ ಮೂಲಕ ತೆಲುಗಿನಲ್ಲಿ ಮನೆ ಮಾತಾಗಿದೆ. ತೆಲುಗಿನಲ್ಲಿ ಮೊದಲ 24 ಗಂಟೆಗಳ ಚಾನೆಲ್ ಆಗಿ 1995ರ ಆಗಸ್ಟ್ 27ರಂದು ಪ್ರಾರಂಭವಾಯಿತು. ಇದು ಜನರಿಗೆ ಮನರಂಜನೆ ನೀಡಲು ವಿನೂತನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬರುತ್ತಿದೆ.

ಈಟಿವಿ ಜಾಲ ವಿಸ್ತರಣೆ: ರಾಮೋಜಿ ರಾವ್ ಕಾಲಕಾಲಕ್ಕೆ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಈಟಿವಿ ಜಾಲವನ್ನು ವಿಸ್ತರಿಸುತ್ತಲೇ ಬಂದರು. ಈಟಿವಿ ಪ್ಲಸ್, ಈಟಿವಿ ಸಿನಿಮಾ, ಈಟಿವಿ ಆಧ್ಯಾತ್ಮಿಕ ವಾಹಿನಿಗಳು ವಿವಿಧ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿವೆ.

ಈಟಿವಿ ಭಾರತ: ಇನ್ನೂಈಟಿವಿ ಭಾರತ ಕೂಡ ದೊಡ್ಡ ಸಂಚಲನ ಎಂದೇ ಹೇಳಬಹುದು. 13 ಭಾಷೆಗಳಲ್ಲಿ ಸುದ್ದಿ ನೀಡುವ ಅತಿದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿರುವ ಈಟಿವಿ ಭಾರತ ಮೂಲಕ ನಿಮ್ಮ ಅಂಗೈಯಲ್ಲೇ ವಿಶ್ವದ ಮಾಹಿತಿ ತಿಳಿಯಬಹುದಾಗಿದೆ.

ಬಾಲ ಭಾರತ: ದೊಡ್ಡವರಿಗೆ ಮಾತ್ರವಲ್ಲದೇ ಮಕ್ಕಳಿಗೂ ಮನರಂಜನೆ ನೀಡುವುದು ರಾಮೋಜಿ ರಾವ್ ಅವರ ಆಲೋಚನೆ. ಈ ಹಿನ್ನೆಲೆ ಈಟಿವಿ ಬಾಲ ಭಾರತ ಹುಟ್ಟಿಕೊಂಡಿದೆ. 4 ರಿಂದ 14 ವರ್ಷ ವಯಸ್ಸಿನ ಮಕ್ಕಳನ್ನು ತೊಡಗಿಸಿಕೊಳ್ಳಲು ಕಾರ್ಟೂನ್ ಕಾರ್ಯಕ್ರಮಗಳನ್ನು 12 ಭಾಷೆಗಳಲ್ಲಿ ನೀಡಲಾಗುತ್ತದೆ.

ಈಟಿವಿ ವಿನ್​​ ಓಟಿಟಿ ಅಪ್ಲಿಕೇಶನ್: ಈಟಿವಿ ಓಟಿಟಿ ಪ್ಲಾಟ್‌ಫಾರ್ಮ್‌ಗೂ ಪ್ರವೇಶಿಸಿದೆ. ಈಟಿವಿ ನೆಟ್‌ವರ್ಕ್‌ನ ಎಲ್ಲಾ ಕಾರ್ಯಕ್ರಮಗಳ ಜೊತೆಗೆ, ಅತ್ಯಾಕರ್ಷಕ ವೆಬ್ ಸರಣಿಗಳು ಮತ್ತು ಹಿಂದಿನ ಚಲನಚಿತ್ರಗಳನ್ನು ಈಟಿವಿ ವಿನ್​​ ಓಟಿಟಿ ಅಪ್ಲಿಕೇಶನ್ ಮೂಲಕ ಲಭ್ಯವಾಗುವಂತೆ ಮಾಡಲಾಗಿದೆ.

ಇದನ್ನೂ ಓದಿ: ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರಾಮೋಜಿ ರಾವ್ ನಿಧನ - ramoji rao passed away

ETV Bharat Logo

Copyright © 2024 Ushodaya Enterprises Pvt. Ltd., All Rights Reserved.