ರಾಂಚಿ (ಜಾರ್ಖಂಡ್) : ಭೂ ಹಗರಣದಲ್ಲಿ ಸಿಎಂ ಹೇಮಂತ್ ಸೊರೆನ್ ಅವರನ್ನು ಇಡಿ ಅಧಿಕಾರಿಗಳು ಮತ್ತೊಮ್ಮೆ ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಜನವರಿ 27 ರಿಂದ 31ರ ಒಳಗೆ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸಿಎಂ ಸೊರೇನ್ಗೆ ಇಡಿ ಸಮನ್ಸ್ ಜಾರಿ ಮಾಡಿದೆ.
ಸೋಮವಾರ ಸಿಎಂಗೆ ಸಮನ್ಸ್ ರವಾನೆ: ರಾಂಚಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಅವರಿಂದ ಪ್ರತಿಕ್ರಿಯೆಗಾಗಿ ಇಡಿ ಕಾಯುತ್ತಿದೆ. ಮುಖ್ಯಮಂತ್ರಿ ಹೇಮಂತ್ ಸೊರೆನ್ ಜನವರಿ 26 ರವರೆಗೆ ಗಣರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ನಿರತರಾಗಿರುತ್ತಾರೆ. ಆದ್ದರಿಂದ ಇಡಿ ತನ್ನ ಅಪೂರ್ಣ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವುದಕ್ಕಾಗಿ ಜನವರಿ 27 ಮತ್ತು ಜನವರಿ 31 ರ ನಡುವೆ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿಗೆ ಸಮನ್ಸ್ ನೀಡಿದೆ. ಮಾಹಿತಿ ಪ್ರಕಾರ ಸಿಎಂ ಈಗ ಯಾವ ಹೆಜ್ಜೆ ಇಡಬೇಕು ಎಂಬ ಬಗ್ಗೆ ಸರ್ಕಾರದಲ್ಲಿ ಚಿಂತನ ಮಂಥನ ನಡೆಯುತ್ತಿದೆ. ಸಿಎಂ ಖುಂತಿ ಪ್ರವಾಸ ಮುಗಿಸಿ ವಾಪಸಾದ ಬಳಿಕ ಇಡಿ ಪ್ರಶ್ನೆಗಳನ್ನು ಎದುರಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಇಡಿ ದಾಳಿ: ಮಾಜಿ ಶಾಸಕರ ನಿವಾಸದಲ್ಲಿ 5 ಕೋಟಿ ನಗದು, ವಿದೇಶಿ ಶಸ್ತ್ರಾಸ್ತ್ರ ಪತ್ತೆ
ಹರಿಯಾಣ, ಚಂಡೀಗಢ ಸೇರಿದಂತೆ 18 ಕಡೆ ಇಡಿ ದಾಳಿ: ಇನ್ನೊಂದು ಕಡೆ ಹರಿಯಾಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಹೆಚ್‌ಎಸ್‌ವಿಪಿ) ನಕಲಿ ಮರುಪಾವತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತಂಡ ಹರಿಯಾಣ ಸೇರಿದಂತೆ ಹಲವೆಡೆ ದಾಳಿ ನಡೆಸಿದೆ. ಇಡಿ ಮೂಲಗಳ ಪ್ರಕಾರ, ಈ ಪ್ರಕರಣದಲ್ಲಿ ಕೆಲವು ಪ್ರಮುಖ ಸುಳಿವುಗಳು ಪತ್ತೆಯಾಗಿವೆ. ನಂತರ ಇಡಿ ತಂಡವು ಹರಿಯಾಣ ಮತ್ತು ಚಂಡೀಗಢ ಸೇರಿದಂತೆ ದೇಶದ ಸುಮಾರು 18 ಸ್ಥಳಗಳಲ್ಲಿ ದಾಳಿ ಮಾಡಿ ದಾಖಲೆಗಳನ್ನು ತಪಾಸಣೆ ಮಾಡಲಾಗಿದೆ.
ಇಡಿ ಮೂಲಗಳ ಪ್ರಕಾರ, ಆಪಾದಿತ ಹೆಚ್‌ಎಸ್‌ವಿಪಿ ಮರುಪಾವತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯದ ತಂಡ ಇಂದು (ಮಂಗಳವಾರ, ಜನವರಿ 23) ಹರಿಯಾಣ, ಚಂಡೀಗಢ, ಪಂಚಕುಲ, ಮೊಹಾಲಿ ಮತ್ತು ಹಿಮಾಚಲದ ಸುಮಾರು 18 ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ಸಮಯದಲ್ಲಿ ಇಡಿ ತಂಡವು ಪ್ರಮುಖ ದಾಖಲೆಗಳನ್ನು ಪರಿಶೀಲನೆ ನಡೆಸಿತು. ದಾಳಿಯ ವೇಳೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಹೆಚ್‌ಎಸ್‌ವಿಪಿ ಎಂದರೇನು ? : ಹರಿಯಾಣ ನಗರಾಭಿವೃದ್ಧಿ ಪ್ರಾಧಿಕಾರ (ಹರಿಯಾಣ ಶೆಹ್ರಿ ವಿಕಾಸ್ ಪ್ರಾಧಿಕಾರ HSVP)ವನ್ನು ಮೊದಲು HUDA (ಹರಿಯಾಣ ನಗರಾಭಿವೃದ್ಧಿ ಪ್ರಾಧಿಕಾರ) ಎಂದು ಕರೆಯಲಾಗುತ್ತಿತ್ತು. ಹರಿಯಾಣ ನಗರಾಭಿವೃದ್ಧಿ ಪ್ರಾಧಿಕಾರ (ಹೆಚ್‌ಎಸ್‌ವಿಪಿ) ಗುರುಗ್ರಾಮ್ ಮತ್ತು ಫರಿದಾಬಾದ್‌ನಲ್ಲಿ ನಿರ್ಮಾಣ ಸಾಮಗ್ರಿ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಡಿ ಪ್ರಕರಣ ದಾಖಲಿಸಿಕೊಂಡು ಈ ದಾಳಿ ನಡೆಸಿದೆ.