ETV Bharat / bharat

ಕಾಂಗ್ರೆಸ್​​​​ ವಿರುದ್ಧ 'ಬಿಜೆಪಿ ಕರ್ನಾಟಕ' ಮಾಡಿದ್ದ ಆಕ್ಷೇಪಾರ್ಹ ಪೋಸ್ಟ್ ತೆಗೆದು ಹಾಕಲು ಎಕ್ಸ್​ಗೆ ಇಸಿ ಸೂಚನೆ - Muslim quota row - MUSLIM QUOTA ROW

ಕರ್ನಾಟಕ ಬಿಜೆಪಿಯ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದ ಆಕ್ಷೇಪಾರ್ಹ ವಿಡಿಯೋವನ್ನು ತಕ್ಷಣಕ್ಕೆ ಅಳಿಸಿ ಹಾಕಲು ಸಾಮಾಜಿಕ ಮಾಧ್ಯಮವಾದ ಎಕ್ಸ್​ಗೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

ಚುನಾವಣಾ ಆಯೋಗ
ಚುನಾವಣಾ ಆಯೋಗ (Source: File Photo (ETV Bharat))
author img

By PTI

Published : May 7, 2024, 9:51 PM IST

Updated : May 7, 2024, 11:00 PM IST

ನವದೆಹಲಿ: ಮುಸ್ಲಿಂ ಮೀಸಲಾತಿ ಸಂಬಂಧ ಬಿಜೆಪಿ ಹಂಚಿಕೊಂಡಿರುವ ವಿಡಿಯೋ ಆಕ್ಷೇಪಕ್ಕೆ ಕಾರಣವಾಗಿದ್ದು, ಅದನ್ನು ಸಾಮಾಜಿಕ ಜಾಲತಾಣದಿಂದ ತಕ್ಷಣಕ್ಕೆ ಅಳಿಸಿ ಹಾಕಲು ಚುನಾವಣಾ ಆಯೋಗ ಮಂಗಳವಾರ ಎಕ್ಸ್​ಗೆ ಸೂಚಿಸಿದೆ. ಇದರ ಬೆನ್ನಲ್ಲೇ, ಅನಿಮೇಟೆಡ್​ ವಿಡಿಯೋವನ್ನು ಡಿಲಿಟ್​ ಮಾಡಲಾಗಿದೆ.

ರಾಜ್ಯದ 14 ಕ್ಷೇತ್ರಗಳಿಗೆ ಮೇ 7 ರಂದು ನಡೆದ ಎರಡನೇ ಹಂತದ ಮತದಾನದಂದೇ ಚುನಾವಣಾ ಆಯೋಗ ಈ ನಿರ್ದೇಶನ ನೀಡಿದೆ. ಸಾಮಾಜಿಕ ಜಾಲತಾಣ ಎಕ್ಸ್​ನ ನೋಡಲ್​ ಅಧಿಕಾರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ತ್ವರಿತ ಕ್ರಮಕ್ಕೆ ಸೂಚಿಸಿತ್ತು.

ಮುಸ್ಲಿಮರ ಮೀಸಲಾತಿಯನ್ನು ವೈಭವೀಕರಿಸುವ ವಿಡಿಯೋ ಇದಾಗಿದ್ದು, ಬಿಜೆಪಿ ಕರ್ನಾಟಕ ಘಟಕವು ತನ್ನ ಎಕ್ಸ್​ ಖಾತೆಯಲ್ಲಿ ಇದನ್ನು ಹಂಚಿಕೊಂಡಿತ್ತು. ಇದು ಕಾನೂನು ಚೌಕಟ್ಟು, ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಆಯೋಗ ಹೇಳಿದೆ.

ಈ ಸಂಬಂಧ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐಟಿ ಕಾಯ್ದೆಯ ಪ್ರಕಾರ, ಆಕ್ಷೇಪಾರ್ಹ ಪೋಸ್ಟ್ ಅನ್ನು ತೆಗೆದುಹಾಕಲು ಮೇ 5 ರಂದು 'ಎಕ್ಸ್' ಗೆ ಪತ್ರ ಬರೆದಿದ್ದರು.

ಎರಡು ದಿನ ಕಳೆದರೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಳಿಸದ ಕಾರಣ, ಕೇಂದ್ರ ಚುನಾವಣಾ ಆಯೋಗವು ಮಧ್ಯಪ್ರವೇಶಿಸಿ ಅನಿಮೇಟೆಡ್​​ ವಿಡಿಯೋವನ್ನು ತಕ್ಷಣವೇ ತೆಗೆದುಹಾಕಲು ನಿರ್ದೇಶಿಸಿತ್ತು.

ಇದನ್ನೂ ಓದಿ: INDIA VOTING TURNOUT: 11 ರಾಜ್ಯಗಳಲ್ಲಿ ಸಂಜೆ 6 ಗಂಟೆವರೆಗೆ ಶೇ 61.54 ಮತದಾನ: ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ - Voter Turnout

Last Updated : May 7, 2024, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.