ETV Bharat / bharat

ಗುಜರಾತ್ ಕರಾವಳಿಯಲ್ಲಿ ₹ 600 ಕೋಟಿ ಮೌಲ್ಯದ 86 ಕೆಜಿ ಡ್ರಗ್ಸ್​ ಜಪ್ತಿ: ಪಾಕ್ ದೋಣಿ​, 14 ಜನ ವಶಕ್ಕೆ - Drugs Seized in Gujarat - DRUGS SEIZED IN GUJARAT

ಗುಜರಾತ್ ಕರಾವಳಿಯಲ್ಲಿ ಎಟಿಎಸ್ ಮತ್ತು ಎನ್‌ಸಿಬಿ ಜಂಟಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ದೋಣಿಯಿಂದ 600 ಕೋಟಿ ರೂಪಾಯಿ ಮೌಲ್ಯದ 86 ಕೆಜಿ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

drugs-worth-rs-600-crore-seized-from-pakistani-boat-off-gujarat-coast-14-crew-members-held
ಗುಜರಾತ್ ಕರಾವಳಿಯಲ್ಲಿ ₹ 600 ಕೋಟಿ ಮೌಲ್ಯದ 86 ಕೆಜಿ ಡ್ರಗ್ಸ್​ ಜಪ್ತಿ: ಪಾಕ್ ದೋಣಿ​, 14 ಜನ ವಶಕ್ಕೆ
author img

By ETV Bharat Karnataka Team

Published : Apr 28, 2024, 8:25 PM IST

ಅಹಮದಾಬಾದ್ (ಗುಜರಾತ್): ಗುಜರಾತ್ ಕರಾವಳಿಯಲ್ಲಿ ಪಾಕಿಸ್ತಾನದ ದೋಣಿಯಿಂದ 600 ಕೋಟಿ ರೂಪಾಯಿ ಮೌಲ್ಯದ 86 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಡಗಿನಲ್ಲಿದ್ದ 14 ಜನರನ್ನು ಬಂಧಿಸಲಾಗಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ ತಿಳಿಸಿದೆ.

ಗುಜರಾತ್​ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಜಂಟಿಯಾಗಿ ಅರಬ್ಬಿ ಸಮುದ್ರದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಶನಿವಾರ ತಡರಾತ್ರಿ ಗುಪ್ತಚರ ಮಾಹಿತಿ ಮೇರೆಗೆ ಮಾದಕ ದ್ರವ್ಯ ನಿಗ್ರಹ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ವೇಳೆ, ಪಾಕಿಸ್ತಾನದ ದೋಣಿಯಲ್ಲಿದ್ದ 14 ಸಿಬ್ಬಂದಿಯನ್ನು ವಶಕ್ಕೆ ಪಡೆದು, 600 ಕೋಟಿ ರೂಪಾಯಿ ಮೌಲ್ಯದ ಸುಮಾರು 86 ಕೆಜಿ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಕೋಸ್ಟ್ ಗಾರ್ಡ್ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಪಾಕಿಸ್ತಾನದ ದೋಣಿಯಿಂದ ಯಾವ ರೀತಿಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ಕೋಸ್ಟ್ ಗಾರ್ಡ್ ಇನ್ನೂ ಬಹಿರಂಗಪಡಿಸಿಲ್ಲ. ಈ ಕಾರ್ಯಾಚರಣೆಗಾಗಿ ಕೋಸ್ಟ್ ಗಾರ್ಡ್ ಹಡಗುಗಳು ಮತ್ತು ವಿಮಾನಗಳನ್ನು ನಿಯೋಜಿಸಲಾಗಿತ್ತು. ಎನ್‌ಸಿಬಿ ಮತ್ತು ಎಟಿಎಸ್​ ಅಧಿಕಾರಿಗಳ ತಂಡವು ದೋಣಿಯನ್ನು ಪತ್ತೆಹಚ್ಚಲು ಐಸಿಜಿ 'ರಾಜರತನ್' ಹಡಗನ್ನು ಬಳಸಲಾಗಿತ್ತು. 14 ಬಂಧಿತರನ್ನು ಹೆಚ್ಚಿನ ತನಿಖೆಗಾಗಿ ಪೋರಬಂದರ್‌ಗೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಹೆಚ್ಚುತ್ತಿದೆ ಮಾದಕವಸ್ತುಗಳ ಪ್ರಕರಣಗಳು: ಗುಜರಾತ್ ಕರಾವಳಿಯಲ್ಲಿ ಮಾದಕವಸ್ತುಗಳ ಸಾಗಾಟ ಪ್ರಕರಣಗಳು ಹೆಚ್ಚುತ್ತಿವೆ. ಗುಜರಾತ್ ಎಟಿಎಸ್, ನೌಕಾಪಡೆ ಮತ್ತು ಎನ್‌ಸಿಬಿ ಜಂಟಿ ಕಾರ್ಯಾಚರಣೆ ಮೂಲಕ ನಿರಂತರವಾಗಿ ಡ್ರಗ್ಸ್ ಜಪ್ತಿ ಮಾಡಲಾಗುತ್ತಿದೆ. ಕಳೆದ ಮಾರ್ಚ್​ನಲ್ಲೂ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು.

ಪೋರಬಂದರ್ ಬಳಿಯ ಸಮುದ್ರದಲ್ಲಿ ಸುಮಾರು 480 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ, ಆರು ಜನ ಪಾಕಿಸ್ತಾನದ ಪ್ರಜೆಗಳನ್ನೂ ಬಂಧಿಸಲಾಗಿತ್ತು. ಇದಕ್ಕೂ ಮುನ್ನ ಸೋಮನಾಥ ಸಮುದ್ರ ತೀರದಲ್ಲಿ 300 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಇದಲ್ಲದೇ, ಪೋರಬಂದರ್ ಸಮುದ್ರದಲ್ಲಿ ನಡೆಸಿದ್ದ ಜಂಟಿ ಕಾರ್ಯಾಚರಣೆಯಲ್ಲಿ 3100 ಕೆಜಿ ಡ್ರಗ್ಸ್ ಜಪ್ತಿ ಮಾಡಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯವು ಸುಮಾರು 2000 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಜೊತೆಗೆ ಈ ಮಾದಕ ವಸ್ತು ಸಮೇತವಾಗಿ ನಾಲ್ಕೈದು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಹಿಂದೆ ವೆರಾವಲ್ ಬಂದರಿನಲ್ಲೂ 350 ಕೋಟಿ ಮೌಲ್ಯದ 50 ಕೆಜಿ ಹೆರಾಯಿನ್ ವಶಪಡಿಸಿಕೊಂಡು, ಮೂವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಗುಜರಾತ್ ಕರಾವಳಿಯಲ್ಲಿ 480 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: ಪಾಕಿಸ್ತಾನದ ದೋಣಿ ವಶ, ಆರು ಜನರ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.