ETV Bharat / bharat

ಹೈದರಾಬಾದ್​ನಲ್ಲಿ ಡ್ರೋನ್​ ಪೋರ್ಟ್​: ತರಬೇತಿಗಾಗಿ ಇಸ್ರೋ ಜೊತೆ ಒಪ್ಪಂದ

author img

By ETV Bharat Karnataka Team

Published : Feb 8, 2024, 9:39 AM IST

ಹೈದರಾಬಾದ್​ನಲ್ಲಿ ಡ್ರೋನ್​ ಪೋರ್ಟ್​ ಸ್ಥಾಪಿಸಲು ಬೇಕಾಗುವ ಭೂಮಿಯನ್ನು ಗುರುತಿಸಲು ಸಿಎಂ ರೇವಂತ್​ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.

ಹೈದರಾಬಾದ್​ನಲ್ಲಿ ಡ್ರೋನ್​ ಪೋರ್ಟ್
ಹೈದರಾಬಾದ್​ನಲ್ಲಿ ಡ್ರೋನ್​ ಪೋರ್ಟ್

ಹೈದರಾಬಾದ್: ಡ್ರೋನ್ ಪೈಲಟ್‌ಗಳಿಗೆ ತರಬೇತಿ ನೀಡಲು ತೆಲಂಗಾಣ ರಾಜ್ಯ ಸರ್ಕಾರ ಇಸ್ರೋ ಜೊತೆ ಒಪ್ಪಂದ ಮಾಡಿಕೊಂಡಿದೆ. ತೆಲಂಗಾಣ ಏವಿಯೇಷನ್ ​​ಅಕಾಡೆಮಿಯು ಇಸ್ರೋದ ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಕೇಂದ್ರದೊಂದಿಗೆ ಈ ಒಡಂಬಡಿಕೆ ಮಾಡಿಕೊಂಡಿದೆ. ಈ ವೇಳೆ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಇಸ್ರೋ ಅಧ್ಯಕ್ಷ ಸೋಮನಾಥ್, ಎನ್‌ಆರ್‌ಎಸ್‌ಸಿ ನಿರ್ದೇಶಕ ಪ್ರಕಾಶ್ ಚೌಹಾಣ್ ಮತ್ತು ರಾಜ್ಯ ವಿಮಾನಯಾನ ಅಕಾಡೆಮಿ ಸಿಇಸಿ ಎಸ್‌ಎನ್ ರೆಡ್ಡಿ ಇದ್ದರು.

ಹೈದರಾಬಾದ್‌ನಲ್ಲಿ ಡ್ರೋನ್‌ಪೋರ್ಟ್‌: ಇಸ್ರೋ ಜೊತೆಗಿನ ಒಪ್ಪಂದದ ಬಳಿಕ ಡ್ರೋನ್ ಪೈಲಟಿಂಗ್, ಡೇಟಾ ನಿರ್ವಹಣೆ, ಡೇಟಾ ವಿಶ್ಲೇಷಣೆ, ಮ್ಯಾಪಿಂಗ್ ಇತ್ಯಾದಿಗಳ ಕುರಿತು ತರಬೇತಿ ಸಿಗಲಿದೆ. ಎಲ್ಲ ಕ್ಷೇತ್ರಗಳಲ್ಲಿ ಡ್ರೋನ್ ಬಳಕೆ ಹೆಚ್ಚಾಗಿದ್ದು, ರೈತರು ಗೊಬ್ಬರ, ಕೀಟನಾಶಕ ಸಿಂಪಡಿಸಲು ಸಹ ಡ್ರೋನ್ ಬಳಸುತ್ತಿದ್ದಾರೆ. ಕೆಲವೆಡೆ ಸ್ವಸಹಾಯ ಸಂಘಗಳು ಡ್ರೋನ್​ಗಳನ್ನು ಉದ್ಯೋಗದ ಮಾರ್ಗವಾಗಿ ಆಯ್ಕೆ ಮಾಡಿಕೊಂಡಿವೆ. ಡ್ರೋನ್‌ಗಳ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಹಂತದ ಸರ್ಕಾರಿ ಅಧಿಕಾರಿಗಳಿಗೆ ತರಬೇತಿ ನೀಡಬೇಕು ಎಂದು ಮುಖ್ಯಮಂತ್ರಿ ಸಲಹೆ ನೀಡಿದರು

ಇಸ್ರೋ ಚೇರ್ಮನ್ ಸೋಮನಾಥ್ ಮಾತನಾಡಿ, ರಾಜ್ಯ ಸರ್ಕಾರ ಈ ತರಬೇತಿ ಕೋರ್ಸ್ ಅನ್ನು ದೇಶದಲ್ಲಿಯೇ ವಿನೂತನವಾಗಿ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ತಮ್ಮ ಸಂಪೂರ್ಣ ಬೆಂಬಲ ಇದಕ್ಕೆ ಇರಲಿದೆ ಎಂದು ತಿಳಿಸಿದರು.

ಡ್ರೋನ್ ಪೈಲಟ್ ತರಬೇತಿಗೆ ಜಾಗದ ವ್ಯವಸ್ಥೆ ಮಾಡುವಂತೆ ತೆಲಂಗಾಣ ಏವಿಯೇಷನ್ ​​ಅಕಾಡೆಮಿಯ ಅಧಿಕಾರಿಗಳು ಸಿಎಂ ರೇವಂತ್ ರೆಡ್ಡಿ ಅವರಲ್ಲಿ ಮನವಿ ಮಾಡಿದರು. ಪ್ರಸ್ತುತ ವಿಮಾನ ನಿಲ್ದಾಣದಲ್ಲಿಯೇ ಡ್ರೋನ್ ಪೈಲಟ್‌ಗಳಿಗೆ ತರಬೇತಿ ನೀಡಲಾಗುತ್ತಿದ್ದು, ದಟ್ಟಣೆಯಿಂದ ಸಮಸ್ಯೆ ಉಂಟಾಗುತ್ತಿದೆ. ಪೈಲಟ್ ತರಬೇತಿ ಹಾಗೂ ಡ್ರೋನ್ ತಯಾರಿಕಾ ಕಂಪನಿಗಳು ತಮ್ಮ ಪ್ರಯೋಗಗಳನ್ನು ನಡೆಸಲು ಡ್ರೋನ್ ಪೋರ್ಟ್ ನಿರ್ಮಾಣವಾಗಬೇಕಿದೆ ಎಂದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ರೆಡ್ಡಿ, ಡ್ರೋನ್ ಬಂದರಿಗಾಗಿ ಫಾರ್ಮಾ ಸಿಟಿ ಬಳಿ 20 ಎಕರೆ ಭೂಮಿ ಗುರುತಿಸಲು ಅಧಿಕಾರಿಗಳಿಗೆ ಆದೇಶಿಸಿದರು. ವಿಮಾನಯಾನ ನಿಯಮಾವಳಿ ಪ್ರಕಾರ, ನಿರಪೇಕ್ಷಣಾ ವಲಯದಲ್ಲಿ ಜಾಗ ಮಂಜೂರು ಮಾಡಲು ಸೂಚಿಸಲಾಗಿದೆ.

ವಾರಂಗಲ್ ವಿಮಾನ ನಿಲ್ದಾಣದ ನವೀಕರಣಕ್ಕೆ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಆದೇಶಿಸಿದರು. ಹಾನಿಗೊಳಗಾದ ಹಳೆಯ ರನ್‌ವೇಗಳನ್ನು ನಿರ್ಮಿಸುವ ಮತ್ತು ಅಲ್ಲಿಂದ ವಾಣಿಜ್ಯ ಕಾರ್ಯಾಚರಣೆಗಳನ್ನು ನಡೆಸುವ ಸಾಧ್ಯತೆ ಬಗ್ಗೆ ಅನ್ವೇಷಿಸಲು ಸೂಚಿಸಲಾಯಿತು. ಕೊತ್ತ ಗುಡೆಂ ಮತ್ತು ಭದ್ರಾಚಲಂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ಸಮಾಲೋಚನೆ ನಡೆಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ 'ಹುಕ್ಕಾ' ಉತ್ಪನ್ನಗಳ ಮಾರಾಟ -ಸೇವನೆ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.