ETV Bharat / bharat

ತೆಲಂಗಾಣ ನಾಶ ಮಾಡಲು ಕಾಂಗ್ರೆಸ್​ ಪಕ್ಷಕ್ಕೆ ಐದು ವರ್ಷ ಸಾಕು: ಪ್ರಧಾನಿ ಮೋದಿ - PM Modi attacks Congress and BRS

ಸಂಸತ್ ಚುನಾವಣೆ ಹಿನ್ನೆಲೆ ಭಾರತೀಯ ಜನತಾ ಪಕ್ಷ ತೆಲಂಗಾಣದ ಮೇಲೆ ವಿಶೇಷ ಗಮನ ಹರಿಸಿದೆ. ಸಂಸದರ ಚುನಾವಣೆ ಗಂಭೀರವಾಗಿ ಪರಿಗಣಿಸಿರುವ ಕೇಸರಿ ಪಕ್ಷ, ಸರಣಿ ಸಭೆಗಳನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಮಲ್ಕಾಜಿಗಿರಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ, ಇಂದು ನಾಗರ್‌ಕರ್ನೂಲ್‌ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.

ಪ್ರಧಾನಿ ಮೋದಿ
ಪ್ರಧಾನಿ ಮೋದಿ
author img

By ETV Bharat Karnataka Team

Published : Mar 16, 2024, 7:07 PM IST

ತೆಲಂಗಾಣ (ಹೈದರಾಬಾಬ್​): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತೆಲಂಗಾಣಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ಮತ್ತು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮೆಹಬೂಬನಗರ ಹಾಗೂ ನಾಗರಕರ್ನೂಲ್ ಲೋಕಸಭಾ ಕ್ಷೇತ್ರದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಾರ್ವಜನಿಕ ಬೃಹತ್​ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಉಭಯ ಪಕ್ಷಗಳ ನಡುವಿನ ಕಾದಾಟದಿಂದ ರಾಜ್ಯದ ಜನರ ಆಸೆಗಳು ಮುದುಡಿವೆ. ಬಿಆರ್‌ಎಸ್ ಮತ್ತು ಕಾಂಗ್ರೆಸ್ ಇವರೆಡೂ ಕಲ್ಲು ಬಂಡೆಗಳಿದ್ದಂತೆ. ಎರಡು ಕಲ್ಲುಗಳ ನಡುವೆ ತೆಲಂಗಾಣ ನಲುಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಅಧಿಕಾರದ ತಿಕ್ಕಾಟದಿಂದ ರಾಜ್ಯದ ಯುವಕರ ಹತ್ತು ವರ್ಷಗಳ ಕನಸುಗಳು ಭಗ್ನಗೊಂಡಿವೆ. ಈ ಹತ್ತು ವರ್ಷಗಳಿಂದ ಬಿಆರ್‌ಎಸ್ ಭ್ರಷ್ಟಾಚಾರದಲ್ಲಿ ತೊಡಗಿದ್ದರೆ, ಈಗ ಕಾಂಗ್ರೆಸ್ ತಮ್ಮ ಸರದಿ ಮುಂದುವರೆಸಿದೆ. ಭ್ರಷ್ಟಾಚಾರ ಬಿಆರ್‌ಎಸ್‌ನ ಮಹಾ ಲೂಟಿ ಆಗಿದ್ದರೆ, ಈಗ ಕಾಂಗ್ರೆಸ್‌ನ ಬುರಿ ನಜರ್‌ ಆಗಿದೆ. ತೆಲಂಗಾಣ ನಾಶ ಮಾಡಲು ಕೈ ಪಕ್ಷಕ್ಕೆ ಈ ಐದು ವರ್ಷಗಳು ಸಾಕು ಎಂದು ಎರಡು ಪಕ್ಷಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ದೇಶದಲ್ಲಿ ಕಾಂಗ್ರೆಸ್​ 70 ವರ್ಷಗಳ ಕಾಲ ಆಡಳಿತ ನಡೆಸಿದರೂ ಅಭಿವೃದ್ಧಿ ಕಂಡಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಇದಕ್ಕೆ ನೀವೇ ಸಾಕ್ಷಿ ಆಗಿದ್ದೀರಿ. ಭವಿಷ್ಯದ ಮತ್ತಷ್ಟು ಅಭಿವೃದ್ಧಿಗಾಗಿ ಬಿಜೆಪಿ ಅಧಿಕಾರಕ್ಕೆ ತರುವ ಮೂಲಕ ಜನತೆಗೆ ಆಶೀರ್ವಾದ ಮಾಡುವಂತೆ ಪ್ರಧಾನಿ ಇದೇ ವೇಳೆ ಮನವಿ ಮಾಡಿದರು.

ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರನ್ನು ಸೋಲಿಸಲು ಪ್ರಯತ್ನ ಮಾಡಿದರೆ, ಕೆಸಿಆರ್ ದಲಿತರಿಗೆ ಅವಕಾಶ ಮಾಡಿಕೊಡದೇ ವಂಚಿಸಿದರು. ಕಾಂಗ್ರೆಸ್ ದಶಕಗಳ ಹಿಂದೆಯೇ ‘ಗರೀಬಿ ಹಠಾವೋ’ ಘೋಷಣೆ ಮಾಡಿತ್ತು. ಆದರೆ, ಬಡತನ ಹೋಗಿದೆಯೇ? ಎಂದು ಪ್ರಶ್ನಿಸಿದ ಪ್ರಧಾನಿ, ವಂಚನೆ, ದರೋಡೆ, ಕುಟುಂಬ ರಾಜಕಾರಣದಲ್ಲಿ ಮುಳುಗಿದ ಪಕ್ಷದಿಂದ ಬಡತನ ಯಾವತ್ತೂ ಮರೆಯಾಗದು. ಇದರಿಂದ ಹೊರ ಬರಲು ಇದು ಉತ್ತಮ ಸಮಯ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳನ್ನು ವೋಟ್ ಬ್ಯಾಂಕ್‌ಗಳಂತೆ ಕಾಣುವ ಪಕ್ಷಗಳಿಗೆ ಜನರು ಬುದ್ಧಿ ಕಲಿಸಬೇಕು. ಇದಕ್ಕಾಗಿ ಮೋದಿ ಹಗಲಿರುಳು ಹೋರಾಟ ನಡೆಸುತ್ತಿದ್ದು, ನಮ್ಮ ಈ ಹೋರಾಟದೊಂದಿಗೆ ತಾವು ಕೂಡ ಕೈಜೋಡಿಸುವಂತೆ ಅವರು ರಾಜ್ಯದ ಜನರನ್ನು ಕೋರಿದರು. 370ನೇ ವಿಧಿ ಮತ್ತು ಅಯೋಧ್ಯೆ ರಾಮಮಂದಿರ ನಿರ್ಮಾಣದಂತಹ ಹಲವು ವಿಚಾರಗಳನ್ನು ಮೋದಿ ಪ್ರಸ್ತಾಪಿಸಿದರು.

ಇದನ್ನೂ ಓದಿ: ಕಲಬುರಗಿ: ಖರ್ಗೆ ತವರಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.