ETV Bharat / bharat

LACಯಲ್ಲಿ ಸೇನೆ ಹಿಂತೆಗೆತ ಬಹುತೇಕ ಪೂರ್ಣ: ಸಿಹಿ ಹಂಚಿಕೊಂಡ ಭಾರತ, ಚೀನಾ ಯೋಧರು - LAC IN LADAKH

ಎಲ್​ಎಸಿಯಲ್ಲಿ ನಿಯೋಜಿತರಾಗಿರುವ ಭಾರತ ಮತ್ತು ಚೀನಾ ಸೈನಿಕರು ಸಿಹಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಭಾರತ ಚೀನಾ ಯೋಧರು (ಸಂಗ್ರಹ ಚಿತ್ರ)
ಭಾರತ ಚೀನಾ ಯೋಧರು (ಸಂಗ್ರಹ ಚಿತ್ರ) (IANS)
author img

By ETV Bharat Karnataka Team

Published : Oct 31, 2024, 1:54 PM IST

ನವದೆಹಲಿ: ದೀಪಾವಳಿ ಹಬ್ಬದ ನಿಮಿತ್ತ ಲಡಾಖ್​ನ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ಉದ್ದಕ್ಕೂ ಹಲವಾರು ಗಡಿ ಪೋಸ್ಟ್​ಗಳಲ್ಲಿ ನಿಯೋಜಿತರಾಗಿರುವ ಭಾರತ ಮತ್ತು ಚೀನಾ ಸೈನಿಕರು ಗುರುವಾರ ಸಿಹಿ ವಿನಿಮಯ ಮಾಡಿಕೊಂಡರು. ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್​ನ ಎಲ್ಎಸಿಯಲ್ಲಿ ಭಾರತ ಮತ್ತು ಚೀನಾಗಳೆರಡೂ ತಮ್ಮ ಸೇನೆಯನ್ನು ಹಿಂತೆಗೆಯುವ ಪ್ರಕ್ರಿಯೆ ಮುಗಿಯುತ್ತಿರುವ ಮಧ್ಯೆ ಯೋಧರು ಪರಸ್ಪರ ಸಿಹಿ ಹಂಚಿಕೊಂಡಿದ್ದಾರೆ.

ದೀಪಾವಳಿಯಂದು ಎಲ್ಎಸಿ ಉದ್ದಕ್ಕೂ ಹಲವಾರು ಗಡಿ ಸ್ಥಳಗಳಲ್ಲಿ ಭಾರತ ಮತ್ತು ಚೀನಾದ ಯೋಧರು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡರು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಅರುಣಾಚಲ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಹೇಳಿದರು.

ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ ಸೇನೆ ಹಿಂಪಡೆಯುವಿಕೆ: ಪೂರ್ವ ಲಡಾಖ್​ನ ಎಲ್ಎಸಿಯಲ್ಲಿ ಭಾರತ ಮತ್ತು ಚೀನಾ ನಡುವಿನ ಸೇನೆ ಹಿಂಪಡೆಯುವ ಪ್ರಕ್ರಿಯೆಯು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು, ಉಭಯ ಸೇನೆಗಳು ಸ್ಥಾನಗಳ ಪರಿಶೀಲನೆ ನಡೆಸಿವೆ ಮತ್ತು ಶಿಬಿರಗಳನ್ನು ಕಿತ್ತುಹಾಕಲು ಪ್ರಾರಂಭಿಸಿವೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಡೆಪ್ಸಾಂಗ್ ಮೈದಾನ ಮತ್ತು ಡೆಮ್ಚೋಕ್​ನಲ್ಲಿನ ತಾತ್ಕಾಲಿಕ ಶಿಬಿರಗಳನ್ನು ಕೆಡವುವ ಪ್ರಕ್ರಿಯೆ ಪೂರ್ಣಗೊಂಡಿದೆ ಮತ್ತು ಎರಡೂ ಕಡೆಯ ಅಂಥ ಎಲ್ಲಾ ಸ್ಥಳಗಳಲ್ಲಿ ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಭೌತಿಕವಾಗಿ ಮತ್ತು ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಬಳಸಿ ಪರಿಶೀಲನೆ ಮಾಡಲಾಗುತ್ತಿದೆ.

ಸೇನೆ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯ ಭಾಗವಾಗಿ ಎರಡೂ ಕಡೆಯ ಪಡೆಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಏಪ್ರಿಲ್ 2020 ರಿಂದ ಇಲ್ಲಿಯವರೆಗೆ ಪ್ರವೇಶಿಸಲಾಗದ ಸ್ಥಳಗಳಲ್ಲಿ ಗಸ್ತು ನಡೆಸಲಾಗುತ್ತಿದ್ದು, ಸುಮಾರು 10 ರಿಂದ 15 ಸೈನಿಕರ ಸಣ್ಣ ತಂಡಗಳು ಗಸ್ತು ನಡೆಸಲಿವೆ.

ಮುಂದಿನ ಎರಡು ದಿನಗಳಲ್ಲಿ ಸಂಘಟಿತ ಗಸ್ತು: ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡ ನಂತರ, ಮುಂದಿನ ಎರಡು ದಿನಗಳಲ್ಲಿ ಸಂಘಟಿತ ಗಸ್ತು ಪ್ರಾರಂಭವಾಗಲಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಮುಖಾಮುಖಿ ಸಂಘರ್ಷದ ಅಪಾಯವಿಲ್ಲ ಎಂದು ಎರಡೂ ಕಡೆಯವರು ಮುಂಚಿತವಾಗಿ ಮಾಹಿತಿ ನೀಡಲಿದ್ದಾರೆ. ಡೆಪ್ಸಾಂಗ್ ಬಯಲು ಪ್ರದೇಶಗಳಲ್ಲಿ, ಭಾರತೀಯ ಪಡೆಗಳು ಈಗ 'ಅಡಚಣೆ' ಪ್ರದೇಶವನ್ನು ಮೀರಿ ಗಸ್ತು ತಿರುಗಲು ಸಾಧ್ಯವಾಗಲಿದೆ.

ಡೆಮ್ಚೋಕ್​ನಲ್ಲಿ, ಭಾರತೀಯ ಪಡೆಗಳು ಈಗ ಟ್ರ್ಯಾಕ್ ಜಂಕ್ಷನ್ ಮತ್ತು ಚಾರ್ಡಿಂಗ್ ನುಲ್ಲಾದಲ್ಲಿನ ಗಸ್ತು ಕೇಂದ್ರಗಳಿಗೆ ಹೋಗಲು ಸಾಧ್ಯವಾಗಲಿದೆ. 2020 ರಲ್ಲಿ ನಡೆದ ಸಂಘರ್ಷದ ನಂತರ ಲಡಾಖ್​ನಲ್ಲಿ ಬೀಡು ಬಿಟ್ಟಿರುವ ಹೆಚ್ಚಿನ ಸಂಖ್ಯೆಯ ಭಾರತೀಯ ಸೈನಿಕರು ಚೀನಾದೊಂದಿಗೆ ಗಡಿ ಗಸ್ತು ಕಾರ್ಯವಿಧಾನದ ಬಗ್ಗೆ ವ್ಯಾಪಕ ಒಮ್ಮತಕ್ಕೆ ಬರುವವರೆಗೂ ಅಲ್ಲಿಯೇ ಮುಂದುವರಿಯಲಿದ್ದಾರೆ.

ಇದನ್ನೂ ಓದಿ: ತೆಲಂಗಾಣದಲ್ಲಿ ನ.6ರಿಂದ ಜಾತಿ ಗಣತಿ: ಉದ್ಘಾಟನೆಗೆ ರಾಹುಲ್ ಗಾಂಧಿ ಆಗಮನ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.