ETV Bharat / bharat

'ವಿಕಸಿತ ಭಾರತ 2047' ದೇಶದ 140 ಕೋಟಿ ಜನರ ಸಂಕಲ್ಪ: ಪ್ರಧಾನಿ ಮೋದಿ - PM Modi flag hoist at Redfort - PM MODI FLAG HOIST AT REDFORT

78ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

Prime Minister Modi hoisting the flag at Red Fort
ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ (ANI)
author img

By PTI

Published : Aug 15, 2024, 10:47 AM IST

ನವದೆಹಲಿ: 78ನೇ ಸ್ವಾತಂತ್ರ್ಯೋತ್ಸವ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಸತತ 11ನೇ ಬಾರಿಗೆ ರಾಷ್ಟ್ರಧ್ವಜಾರೋಹಣ ಮಾಡಿದರು.

ಧ್ವಜಾರೋಹಣ ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, "2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವುದು ನನ್ನ ಕನಸು ಮಾತ್ರವಲ್ಲ, ದೇಶದ 140 ಕೋಟಿ ಜನರ ಸಂಕಲ್ಪವಾಗಿದೆ" ಎಂದು ಹೇಳಿದರು.

"'ವಿಕಸಿತ್​ ಭಾರತ 2047' ಕೇವಲ ಪದಗಳಲ್ಲ. ಅದು 140 ಕೋಟಿ ಜನರ ಸಂಕಲ್ಪ ಹಾಗೂ ಕನಸುಗಳ ಪ್ರತಿಬಿಂಬವಾಗಿದೆ. ಸಂಪನ್ಮೂಲಗಳ ಸವಾಲುಗಳು ಮತ್ತು ಕೊರತೆಗಳು ಇರಬಹುದು. 140 ಕೋಟಿ ಜನರು ಒಗ್ಗೂಡಿದರೆ, ಮನಸ್ಸು ಮಾಡಿದರೆ 2047ರ ವೇಳೆಗೆ ಭಾರತ ಸುಲಭವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ" ಎಂದು ಹುರಿದುಂಬಿಸಿದರು.

"ಶತಮಾನಗಳಿಂದ ದೇಶವು ಗುಲಾಮಗಿರಿಯಲ್ಲಿ ಮುಳುಗಿತ್ತು. ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟ ಮಹನೀಯರಿದ್ದಾರೆ. ಪ್ರಾಣತ್ಯಾಗ ಮಾಡಿದ ಮಹನೀಯರಿಗೆ ದೇಶ ಋಣಿಯಾಗಿದೆ. ಅಂದು 40 ಕೋಟಿ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಇಂದು ನಾವು ದೇಶಕ್ಕಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರಿಗೆ ವಂದಿಸುವ ಮಂಗಳಕರ ದಿನವಾಗಿದೆ." ಎಂದು ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಪ್ರಧಾನಿ ಮೋದಿ ಸ್ಮರಿಸಿದರು.

ನೈಸರ್ಗಿಕ ವಿಕೋಪಗಳ ಬಗ್ಗೆ ಪ್ರಧಾನಿ ಕಳವಳ: "ಈ ವರ್ಷ ಮತ್ತು ಕಳೆದ ಕೆಲವು ವರ್ಷಗಳಿಂದ, ನೈಸರ್ಗಿಕ ವಿಕೋಪದಿಂದಾಗಿ, ಹಲವಾರು ಜನರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ, ಪ್ರಾಕೃತಿಕ ವಿಕೋಪದಲ್ಲಿ ಆಸ್ತಿಯನ್ನು ಕಳೆದುಕೊಂಡಿದ್ದಾರೆ. ದೇಶ ಕೂಡ ನಷ್ಟ ಅನುಭವಿಸಿವೆ. ನಾನು ಅವರೆಲ್ಲರಿಗೂ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ದೇಶ ಅವರೊಂದಿಗೆ ನಿಲ್ಲುತ್ತದೆ ಎಂದು ನಾನು ಭರವಸೆ ನೀಡುತ್ತೇನೆ" ಎಂದ ಮೋದಿ ಇತ್ತೀಚಿನ ರಾಷ್ಟ್ರೀಯ ವಿಪತ್ತುಗಳಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸಿದರು.

ಸುಧಾರಣೆಗಳ ಬಗ್ಗೆ ಮಾತನಾಡಿದ ಮೋದಿ: "ನಮ್ಮ ಸರ್ಕಾರ ಹಲವಾರು ದೊಡ್ಡ ಸುಧಾರಣೆಗಳನ್ನು ತಂದಿದೆ. ಮಧ್ಯಮ ವರ್ಗ ಮತ್ತು ಬಡವರ ಜೀವನವನ್ನು ಬದಲಾಯಿಸುವ ಉದ್ದೇಶದಿಂದ ದೊಡ್ಡ ಸುಧಾರಣೆಗಳನ್ನು ಹೊರತರುವ ಮೂಲಕ ಯಥಾಸ್ಥಿತಿಯೊಂದಿಗೆ ಬದುಕುವ ಮನಸ್ಥಿತಿಯನ್ನು ಮುರಿಯಲು ತಮ್ಮ ಸರ್ಕಾರ ಕೆಲಸ ಮಾಡಿದೆ. ಅಭಿವೃದ್ಧಿಯ ನೀಲನಕ್ಷೆಯಾಗಿ ಸುಧಾರಣೆಗಳನ್ನು ತರುತ್ತಿದ್ದೇವೆ. ಇದು ಯಾವುದೇ ರಾಜಕೀಯ ಉದ್ದೇಶದಿಂದ ಮಾಡುವಂತಹದ್ದಲ್ಲ. ರಾಷ್ಟ್ರ ಮೊದಲು ಎಂಬ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದ್ದೇವೆ." ಎಂದರು.

ಬ್ಯಾಂಕಿಂಗ್​ ಕ್ಷೇತ್ರದ ಬೆಳವಣಿಗೆ: ಭಾರತದ ಉದಯ ಇಡೀ ವಿಶ್ವಕ್ಕೆ ಸ್ಫೂರ್ತಿಯಾಗಿದೆ. ಭಾರತವನ್ನು ವಿಶ್ವದ ಕೌಶಲ್ಯಗಳ ರಾಜಧಾನಿಯನ್ನಾಗಿ ಮಾಡಬೇಕು. ಉತ್ಪಾದನಾ ವಲಯದಲ್ಲಿ ಜಾಗತಿಕ ಕೇಂದ್ರವನ್ನಾಗಿ ಮಾಡಬೇಕು. "ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ನಮ್ಮ ಬ್ಯಾಂಕಿಂಗ್​ ವ್ಯವಸ್ಥೆ ವಿಶ್ವದಲ್ಲೇ ಅತ್ಯಂತ ಬಲಿಷ್ಠವಾಗಿದೆ." ಎಂದು ಹೇಳಿದರು.

"ಭಾರತ ಜಗತ್ತಿಗೆ ಅನ್ನ ನೀಡುವ ಮಟ್ಟಕ್ಕೆ ಏರಬೇಕು. ದೇಶದ ಅಭಿವೃದ್ಧಿಗೆ ಆಡಳಿತ ಸುಧಾರಣೆಗಳು ಅತ್ಯಗತ್ಯ. ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು. ಬಾಹ್ಯಾಕಾಶದಲ್ಲಿ ಭಾರತದ ಬಾಹ್ಯಾಕಾಶ ನಿಲ್ದಾಣ ಶೀಘ್ರದಲ್ಲೇ ಸಾಕಾರಗೊಳ್ಳಬೇಕು. ದಲಿತರು, ದಮನಿತರು ಮತ್ತು ಆದಿವಾಸಿಗಳು ಗೌರವದಿಂದ ಬದುಕಬೇಕು" ಎಂದರು.

ದೇಶದ ಮೂಲೆ ಮೂಲೆಗಳಿಂದ ಜನರು ಮತ್ತು ಸಮುದಾಯಗಳು ವಿಕಸಿತ್​ ಭಾರತದ ಕಾರ್ಯಸೂಚಿಗೆ ಸಲಹೆಗಳನ್ನು ನೀಡಿದ್ದಾರೆ. ನ್ಯಾಯ ವ್ಯವಸ್ಥೆಯಲ್ಲಿ ಸುಧಾರಣೆ, ಸಾಮರ್ಥ್ಯ ವೃದ್ಧಿಗಾಗಿ ಅಭಿಯಾನ, ಭಾರತದ ಸಾಂಪ್ರದಾಯಿಕ ಔಷಧ ಪದ್ಧತಿಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಈ ಹಲವು ವಿಚಾರಗಳ ಬಗ್ಗೆ ಪ್ರಧಾನಿ ವಿವರಿಸಿದರು.

ವಿದ್ಯುತ್ ಇಲ್ಲದ ಪ್ರದೇಶಗಳಿಗೆ ವಿದ್ಯುಚ್ಛಕ್ತಿಯನ್ನು ಕೊಂಡೊಯ್ಯುವಲ್ಲಿ, ಕೋಟಿಗಟ್ಟಲೆ ಮನೆಗಳಿಗೆ ಪೈಪ್‌ಲೈನ್‌ ನಲ್ಲಿ ನೀರು ಕೊಂಡೊಯ್ಯುವಲ್ಲಿ, 'ವೋಕಲ್​ ಫಾರ್​ ಲೋಕಲ್​' ಕಾರ್ಯಕ್ರಮವನ್ನು ವಿಸ್ತರಿಸುವಲ್ಲಿ ಮತ್ತು ನವೀಕರಿಸಬಹುದಾದ ಇಂಧನವನ್ನು ಹೆಚ್ಚಿಸುವಲ್ಲಿ ತಮ್ಮ ಸರ್ಕಾರದ ಯಶಸ್ಸನ್ನು ಉಲ್ಲೇಖಿಸಿದರು. ಇದು ಜನರಲ್ಲಿ ಹೊಸ ಆತ್ಮವಿಶ್ವಾಸ ಮತ್ತು ಪ್ರಜ್ಞೆಯನ್ನು ತುಂಬಿದೆ ಎಂದು ಪ್ರತಿಪಾದಿಸಿದರು.

11ನೇ ಬಾರಿ ಮೋದಿ ಧ್ವಜಾರೋಹಣ: ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ ಮಾಡುತ್ತಿರುವ ಮೊದಲ ಸ್ವಾತಂತ್ರ್ಯ ದಿನ ಭಾಷಣ ಇದು. ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಸಿಂಗ್​ ಅವರು 10 ಬಾರಿ ಕೆಂಪುಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ್ದರು. ಜವಾಹರ್​ಲಾಲ್​ ನೆಹರು ಹಾಗೂ ಇಂದಿರಾ ಗಂಧಿ ಅವರು ಕ್ರಮಮಾಗಿ 17 ಹಾಗೂ 16 ಬಾರಿ ಧ್ವಜಾರೋಹಣ ಮಾಡಿದ್ದರು.

ಕೆಂಪುಕೋಟೆಗೆ ತಲುಪುದಕ್ಕೂ ಮುನ್ನ ಪ್ರಧಾನಿ ಮೋದಿ ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ನಮನ ಸಲ್ಲಿಸಿದರು.

ಇದನ್ನೂ ಓದಿ: ಸಾಮಾಜಿಕ ವ್ಯವಸ್ಥೆಯಲ್ಲಿ ಬೇರೂರಿರುವ ವಿಭಜಕ ಪ್ರವೃತ್ತಿ ತಿರಸ್ಕರಿಸಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ - President Draupadi Murmu

ETV Bharat Logo

Copyright © 2024 Ushodaya Enterprises Pvt. Ltd., All Rights Reserved.