ETV Bharat / bharat

ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ರಾಯಲ್ ವೆಡ್ಡಿಂಗ್‌: ದೇಶದಲ್ಲಿ ಈವರೆಗೆ ನಡೆದ ಅತ್ಯಂತ ದುಬಾರಿ ಮದುವೆಗಳ ವಿವರ ಇಲ್ಲಿದೆ ನೋಡಿ! - Anant Ambani Radhika royal wedding

ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ರಾಯಲ್ ವೆಡ್ಡಿಂಗ್‌. ದೇಶದಲ್ಲಿ ಈವರೆಗೆ ನಡೆದ ಅತ್ಯಂತ ದುಬಾರಿ, ಅದ್ಧೂರಿ ಮದುವೆಗಳ ವಿವರ ಇಲ್ಲಿದೆ ನೋಡಿ..

most expensive weddings  lavish weddings  Anant Ambani Radhika wedding  Anant Ambani Radhika Merchant
ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ರಾಯಲ್ ವೆಡ್ಡಿಂಗ್‌ (IANS)
author img

By ETV Bharat Karnataka Team

Published : Jul 2, 2024, 6:35 PM IST

Updated : Jul 2, 2024, 7:19 PM IST

ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜುಲೈ 12, 2024 ರಂದು ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ಅವರ ರಾಯಲ್ ವೆಡ್ಡಿಂಗ್‌ ನಡೆಯಲಿದೆ. ಜುಲೈ 12 ರಂದು "ಶುಭ ವಿವಾಹ", ಜುಲೈ 13 ರಂದು "ಶುಭ್ ಆಶೀರ್ವಾದ" ದಿಂದ ಪ್ರಾರಂಭವಾಗುತ್ತದೆ. ಜುಲೈ 14 ರಂದು "ಮಂಗಲ್ ಉತ್ಸವ"ದೊಂದಿಗೆ ಮುಕ್ತಾಯಗೊಳ್ಳುತ್ತದೆ.

ಮೂರು ದಿನಗಳವರೆಗೆ ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ಮದುವೆಯ ಕಾರ್ಯಕ್ರಮ ಮೂವರು ದಿನಗಳವರೆಗೆ ಅದ್ಧೂರಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ನಡೆದ ಅತ್ಯಂತ ದುಬಾರಿ, ಅದ್ಧೂರಿ ಮದುವೆಗಳ ತಿಳಿದುಕೊಳ್ಳೋಣ ಬನ್ನಿ.

ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ: (ವೆಚ್ಚ ಅಂದಾಜು ಮಾಡಿಲ್ಲ. ಆದ್ರೆ, ದುಬಾರಿ ಮದುವೆ)

2019 ರಲ್ಲಿ, ಮುಕೇಶ್ ಅಂಬಾಯ್ ಮತ್ತು ನೀತಾ ಅವರ ಮೊದಲ ಮಗ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ವಿವಾಹದಲ್ಲಿ, ಅತಿರಂಜಿತ ಆಚರಣೆಯು ಸೇಂಟ್ ಮೊರಿಟ್ಜ್‌ನಲ್ಲಿ ಐಷಾರಾಮಿ ಎರಡು ದಿನಗಳ ವಿವಾಹ ಪೂರ್ವ ಕಾರ್ಯಕ್ರಮ ನಡೆದಿತ್ತು. ನಿಕಟ ಸ್ನೇಹಿತರು ಮತ್ತು ಕುಟುಂಬದವರ ವಿಶೇಷ ಹಾಜರಾತಿಯೊಂದಿಗೆ ಜರುಗಿತ್ತು. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಔತಣಕೂಟವನ್ನು ಆಯೋಜಿಸಲಾಗಿತ್ತು.

ಅಮೀರ್ ಖಾನ್ ಮತ್ತು ಅವರ ಪತ್ನಿ, ನಟ ಜಾಕಿ ಶ್ರಾಫ್ ಮತ್ತು ಮನೀಶ್ ಮಲ್ಹೋತ್ರಾ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು, ಹಾಗೆಯೇ ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಮತ್ತು ಅವರ ಪತ್ನಿ ಯೂ ಸೂನ್-ಟೇಕ್ ಮತ್ತು ಬ್ರಿಟಿಷ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಮತ್ತು ಅವರ ಪತ್ನಿ ಚೆರಿ ಬ್ಲೇರ್ ಅವರಂತಹ ಅಂತಾರಾಷ್ಟ್ರೀಯ ಗಣ್ಯರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್: (ಅಂದಾಜು ₹700 ಕೋಟಿ)

ಮುಕೇಶ್ ಅಂಬಾನಿ ಅವರ ಏಕೈಕ ಪುತ್ರಿ ಇಶಾ ಅಂಬಾನಿ ಉದ್ಯಮಿ ಆನಂದ್ ಪಿರಾಮಲ್ ಅವರನ್ನು ಡಿಸೆಂಬರ್ 12, 2018 ರಂದು ಮುಂಬೈನಲ್ಲಿ ಅದ್ಧೂರಿಯಾಗಿ ವಿವಾಹವಾದರು. ವರದಿಗಳ ಪ್ರಕಾರ, ಇಶಾ ತನ್ನ ಮದುವೆ ದಿನದಂದು ₹90 ಕೋಟಿ ವೆಚ್ಚದ ಸುಂದರವಾದ ಲೆಹೆಂಗಾವನ್ನು ಧರಿಸಿದ್ದಳು. ಇದು ವಿಶ್ವದ ಅತ್ಯಂತ ದುಬಾರಿ ಲೆಹೆಂಗಾ ಆಗಿತ್ತು. ಜಾಗತಿಕ ಸೂಪರ್‌ಸ್ಟಾರ್‌ಗಳ ಪ್ರದರ್ಶನಗಳನ್ನು ಒಳಗೊಂಡಿರುವ ಉದಯಪುರ, ಇಟಲಿಯ ಲೇಕ್ ಕೊಮೊ ಮತ್ತು ಮುಂಬೈನಲ್ಲಿ ಅದ್ಧೂರಿ ಕಾರ್ಯಕ್ರಮಗಳು ನಡೆದವು ಮತ್ತು ವಿವಾಹ ಸಮಾರಂಭವು ಪಿಚೋಲಾ ಸರೋವರದ ಖಾಸಗಿ ದ್ವೀಪದಲ್ಲಿ ನಡೆದಿತ್ತು.

ಸುಶಾಂತೋ ರಾಯ್ ಮತ್ತು ಸೀಮಂತೋ ರಾಯ್: (ಅಂದಾಜು ₹554 ಕೋಟಿ)

ದಿವಂಗತ ಸಹಾರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ಅವರ ಪುತ್ರರಾದ ಸುಶಾಂತೋ ಮತ್ತು ಸೀಮಂತೋ ರಾಯ್ ಜೋಡಿಯ ಅದ್ಧೂರಿ ವಿವಾಹವು ಫೆಬ್ರವರಿ 10ರಿಂದ ಫೆಬ್ರವರಿ 14, 2004ರ ನಡುವೆ ನಡೆದಿತ್ತು. ಅಂದಾಜು ₹554 ಕೋಟಿ (75 ಮಿಲಿಯನ್ ಡಾಲರ್​) ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಲಕ್ನೋದ ಸಹಾರಾ ಸ್ಟೇಡಿಯಂನಲ್ಲಿ ಡಬಲ್ ವೆಡ್ಡಿಂಗ್ ನಡೆಯಿತು. ಈ ಅದ್ಧೂರಿ ಸಮಾರಂಭದಲ್ಲಿ ಬಾಲಿವುಡ್ ತಾರೆಯರು ಮತ್ತು ಕ್ರೀಡಾ ಸಾಧಕರು ಸೇರಿದಂತೆ 11,000ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ ಒಂದು ವಾರದ ಮದುವೆ ಕಾರ್ಯಕ್ರಮದ ಆಚರಣೆಯನ್ನು ಒಳಗೊಂಡಿತ್ತು. ಪ್ರಪಂಚದಾದ್ಯಂತದ ಖಾಸಗಿ ಜೆಟ್‌ಗಳ ಮೂಲಕ ಅತಿಥಿಗಳು ಆಗಮಿಸಿದ್ದರು.

ಬ್ರಾಹ್ಮಣಿ ರೆಡ್ಡಿ ಮತ್ತು ರಾಜೀವ್ ರೆಡ್ಡಿ: (ಅಂದಾಜು ₹500 ಕೋಟಿ)

ಗಾಲಿ ಜನಾರ್ದನ ರೆಡ್ಡಿ ಅವರು ಮಾಜಿ ರಾಜಕಾರಣಿ ಮತ್ತು ಕರ್ನಾಟಕ ಮೂಲದ ಗಣಿ ಉದ್ಯಮಿಯಾಗಿದ್ದು, ಅವರು ತಮ್ಮ ಮಗಳ ಮದುವೆಯನ್ನು 2016ರಲ್ಲಿ ಅದ್ಧೂರಿ ಮತ್ತು ಅತ್ಯಂತ ದುಬಾರಿ ವಿವಾಹವನ್ನು ಆಯೋಜಿಸಿದ್ದರು. ಅವರ ಏಕೈಕ ಪುತ್ರಿ ಬ್ರಹ್ಮಣಿಯಾಗಿದ್ದು, ಹೈದರಾಬಾದ್ ಮೂಲದ ಉದ್ಯಮಿ ವಿಕ್ರಮ್ ದೇವಾ ರೆಡ್ಡಿ ಅವರ ಪುತ್ರ ರಾಜೀವ್ ರೆಡ್ಡಿ ಅವರನ್ನು ವಿವಾಹವಾಗಿದ್ದರು. ನವೆಂಬರ್ 16, 2016 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿವಾಹವು ನಡೆಯಿತು. ಮದುವೆ ಸ್ಥಳವನ್ನು ವಿಜಯನಗರ ಸಾಮ್ರಾಜ್ಯದ ಮಹಾನ್ ರಾಜಧಾನಿಯಾದ ಹಂಪಿಯ ಅವಶೇಷಗಳನ್ನು ಹೋಲುವಂತೆ ರೆಡಿ ಮಾಡಲಾಗಿತ್ತು.

ಸೃಷ್ಟಿ ಮಿತ್ತಲ್ ಮತ್ತು ಗುಲ್ರಾಜ್ ಬೆಹ್ಲ್: (ಅಂದಾಜು ₹500 ಕೋಟಿ)

ಉಕ್ಕಿನ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಕಿರಿಯ ಸಹೋದರ ಪ್ರಮೋದ್ ಮಿತ್ತಲ್ ಅವರು ಬಾರ್ಸಿಲೋನಾದಲ್ಲಿ ತಮ್ಮ ಮಗಳ ಮದುವೆಗೆ 70 ಮಿಲಿಯನ್ ಡಾಲರ್​ ಯುರೋಗಳನ್ನು (ಸುಮಾರು ₹500 ಕೋಟಿ ರೂ.) ಖರ್ಚು ಮಾಡಿದ್ದಾರೆ ಎಂದು ವರದಿಯಾಗಿತ್ತು. ಪ್ರಮೋದ್ ಮಿತ್ತಲ್ ಅವರ ಪುತ್ರಿ ಸೃಷ್ಟಿ ಮಿತ್ತಲ್ ಅವರು ಲಂಡನ್ ಮೂಲದ HSBC ಹೂಡಿಕೆ ಬ್ಯಾಂಕರ್ ಗುಲ್ರಾಜ್ ಬೆಹ್ಲ್ ಅವರನ್ನು ಡಿಸೆಂಬರ್ 7, 2013 ರಂದು ವಿವಾಹವಾಗಿದ್ದರು.

ವನಿಶಾ ಮಿತ್ತಲ್ ಮತ್ತು ಅಮಿತ್ ಭಾಟಿಯಾ: (ಅಂದಾಜು ₹240 ಕೋಟಿ)

ಬಿಲಿಯನೇರ್ ಲಕ್ಷ್ಮಿ ಮಿತ್ತಲ್ ಅವರ ಪುತ್ರಿ ವನಿಶಾ ಮಿತ್ತಲ್ ಮತ್ತು ಹೂಡಿಕೆ ಬ್ಯಾಂಕರ್ ಅಮಿತ್ ಭಾಟಿಯಾ ಅವರ ಮದುವೆಯು ವಿಶ್ವದ ಅತ್ಯಂತ ದುಬಾರಿ ವಿವಾಹವಾಗಿತ್ತು. 2004ರಲ್ಲಿ ವರ್ಸೈಲ್ಸ್‌ನಲ್ಲಿ ನಡೆದ ಆರು ದಿನಗಳವರೆಗೆ ಮದುವೆಯ ವಿವಿಧ ಕಾರ್ಯಕ್ರಮಗಳು ನಡೆದವು. ವರ್ಸೈಲ್ಸ್ ಅರಮನೆಯಲ್ಲಿ ನಿಶ್ಚಿತಾರ್ಥದ ಸಮಾರಂಭ ನಡೆದಿತ್ತು. ವರ್ಸೈಲ್ಸ್ ಅರಮನೆಯಲ್ಲಿ ನಡೆದ ಏಕೈಕ ಖಾಸಗಿ ಕಾರ್ಯಕ್ರಮ ಇದಾಗಿತ್ತು. ಮದುವೆಯ ಆರತಕ್ಷತೆಯಲ್ಲಿ ಅತಿಥಿಗಳಾದ ಶಾರುಖ್ ಖಾನ್ ಮತ್ತು ಕೈಲಿ ಮಿನೋಗ್ ಸೇರಿದಂತೆ ವಿಶ್ವದ ಪ್ರಸಿದ್ಧ ಕಲಾವಿದರು ಪಾಲ್ಗೊಂಡಿದ್ದರು.

ಸೋನಮ್ ವಾಸ್ವಾನಿ ಮತ್ತು ನವೀನ್ ಫ್ಯಾಬಿಯಾನಿ: (ಅಂದಾಜು ₹210 ಕೋಟಿ)

2017ರಲ್ಲಿ ಸ್ಟಾಲಿಯನ್ ಗ್ರೂಪ್‌ನ ಸುನಿಲ್ ವಾಸ್ವಾನಿ ಅವರ ಪುತ್ರಿ ಸೋನಮ್ ವಾಸ್ವಾನಿ, ಆಸ್ಟ್ರಿಯಾದ ವಿಯೆನ್ನಾದಲ್ಲಿ ಸ್ಪೇನ್/ಮುಂಬೈ ಉದ್ಯಮಿ ಕಮಲ್ ಫ್ಯಾಬಿಯಾನಿ ಅವರ ಮಗ ನವೀನ್ ಫ್ಯಾಬಿಯಾನಿ ಅವರನ್ನು ವಿವಾಹವಾಗಿದ್ದರು. ಇದು ಕೂಡ ಅಂದಾಜು ₹210 ಕೋಟಿ ರೂ. ವೆಚ್ಚದಲ್ಲಿ ಅದ್ದೂರಿ ಮದುವೆ ನಡೆದಿತ್ತು.

ಸೋನಮ್ ವಾಸ್ವಾನಿ ಮತ್ತು ನವೀನ್ ಫ್ಯಾಬಿಯಾನಿ ಜೋಡಿಯ ವಿವಾಹವು ನೆನಪಿಡುವ ರೀತಿಯಲ್ಲಿ ವಿಶ್ವದ ಅತ್ಯಂತ ಅದ್ಧೂರಿ ಅರಮನೆಗಳಲ್ಲಿ ಒಂದಾದ ವಿಯೆನ್ನಾದ ಬೆಲ್ವೆಡೆರೆ ಪ್ಯಾಲೆಸ್​ನಲ್ಲಿ ನಡೆದಿತ್ತು. ಸೋನಮ್ ವಾಸ್ವಾನಿ ಮತ್ತು ನವೀನ್ ಫ್ಯಾಬಿಯಾನಿ ಅವರ ಅದ್ಧೂರಿ ವಿವಾಹ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಸಂಜಯ್ ಹಿಂದುಜಾ ಮತ್ತು ಅನು ಮಹತಾನಿ: (ಅಂದಾಜು ₹150 ಕೋಟಿ)

ಉದ್ಯಮಿ ಸಂಜಯ್ ಹಿಂದುಜಾ ಅವರು ದೇಶದ ಅತ್ಯಂತ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರು. ಅವರು 2015 ರಲ್ಲಿ ಉದಯಪುರದಲ್ಲಿ ಅದ್ಧೂರಿ ಮತ್ತು ಅತಿರಂಜಿತ ಮದುವೆ ಸಮಾರಂಭದಲ್ಲಿ ತಮ್ಮ ದೀರ್ಘಕಾಲದ ಪ್ರಿಯತಮೆ ಅನು ಮಹತಾನಿ ಅವರನ್ನು ವಿವಾಹವಾಗಿದ್ದರು. ಮದುವೆಯ ಪ್ರಮುಖ ಅಂಶವೆಂದರೆ, ಪಾಪ್ ಸೆನ್ಸೇಷನ್ ಜೆನ್ನಿಫರ್ ಲೋಪೆಜ್ ಹಾಗೂ ಗಾಯಕಿ ನಿಕೋಲ್ ಶೆರ್ಜಿಂಜರ್ ಸಂಗೀತ ಕಾರ್ಯಕ್ರಮ ನೀಡಿದ್ದರು.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ: (ಅಂದಾಜು ₹100 ಕೋಟಿ)

ಡಿಸೆಂಬರ್ 11, 2017 ರಂದು, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಇಟಲಿಯ ಟಸ್ಕನಿಯಲ್ಲಿ ರಹಸ್ಯವಾಗಿ ಮದುವೆಯಾಗಿ ದೇಶವನ್ನು ಅಚ್ಚರಿಗೊಳಿಸಿದ್ದರು. ಹಿಂದೂ ಸಂಪ್ರದಾಯಗಳ ಪ್ರಕಾರ ವಿವಾಹವಾಗಿದ್ದರು. ನಂತರ ಭಾರತದಲ್ಲಿ ಅವರ ವಿವಾಹದ ಆರತಕ್ಷತೆ ಅದ್ಧೂರಿಯಾಗಿ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರು ಭಾಗವಹಿಸಿದ್ದರು.

ಅಡೆಲ್ ಸಜನ್ ಮತ್ತು ಸನಾ ಖಾನ್: (ಅಂದಾಜು ₹100 ಕೋಟಿ)

#DilDhadakneDo ಥೀಮ್‌ನೊಂದಿಗೆ ಸನಾ ಮತ್ತು ಅಡೆಲ್ ಅವರ ನಾಲ್ಕು ದಿನಗಳ ವಿವಾಹ ಕಾರ್ಯಕ್ರಮವು ಕಾನ್ಕಾರ್ಡಿಯಾ - ಕ್ಲಾಸ್ ಕೋಸ್ಟಾ ಫ್ಯಾಸಿನೋಸಾ ಕ್ರೂಸ್ ಲೈನರ್‌ನಲ್ಲಿ ಅದ್ದೂರಿ ಜರುಗಿತ್ತು. ಬಾದ್‌ಶಾ ಮತ್ತು ವಿಶಾಲ್ - ಶೇಖರ್ ಅವರ ಸಂಗೀತ ಪ್ರದರ್ಶನ, ಗೌಹರ್ ಖಾನ್ ಮತ್ತು ಸುಶ್ಮಿತಾ ಸೇನ್ ಅವರ ಭಾಷಣ ಗಮನಸೆಳೆದಿತ್ತು ಮತ್ತು 10 ಲೇಯರ್ ವೆಡ್ಡಿಂಗ್ ಕೇಕ್ ಅನ್ನು ಒಳಗೊಂಡಿತ್ತು.

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ: (ಅಂದಾಜು ₹77 ಕೋಟಿ)

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ 2018 ರಲ್ಲಿ ನವೆಂಬರ್ 14 ಮತ್ತು 15 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿದ್ದರು. ದೀಪಿಕಾ ಪಡುಕೋಣೆ ಅವರ ಕೊಂಕಣಿ ಮತ್ತು ರಣವೀರ್ ಸಿಂಗ್ ಅವರ ಸಿಂಧಿ ಸಂಪ್ರದಾಯದಂತೆ ದಂಪತಿ ಎರಡು ಪ್ರಕಾರದ ವಿವಾಹ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು.

ಇದನ್ನೂ ಓದಿ: ನಟಿ ವರಲಕ್ಷ್ಮಿ ಮದುವೆ ಸಂಭ್ರಮ: ಸಂಗೀತ ಕಾರ್ಯಕ್ರಮದಲ್ಲಿ ತ್ರಿಶಾ ಕೃಷ್ಣನ್ ಮಿಂಚಿಂಗ್​; ಫೋಟೋಗನ್ನು ನೋಡಿ - Varalaxmi Sarathkumar

Last Updated : Jul 2, 2024, 7:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.