ನವದೆಹಲಿ: ದೆಹಲಿ ಚುನಾವಣಾ ಕಣ ರಂಗೇರುತ್ತಿದೆ. ಚುನಾವಣೆಯನ್ನು ಎದುರಿಸಲು ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಸದ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 21 ಅಭ್ಯರ್ಥಿಗಳ ಹೆಸರುಗಳನ್ನ ಪಕ್ಷ ಪ್ರಕಟಿಸಿದೆ. ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಸಂದೀಪ್ ದೀಕ್ಷಿತ್ ಅವರನ್ನು ಕಣಕ್ಕಿಳಿಸಿದೆ. ಆದರೆ, ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ಅವರಿಗೆ ಬದ್ಲಿಯಿಂದ ಟಿಕೆಟ್ ನೀಡಲಾಗಿದೆ.
Delhi Assembly Election: ಇದಲ್ಲದೇ ಮೊದಲ ಪಟ್ಟಿಯಲ್ಲಿ ಪಟಪರಗಂಜ್ ಕ್ಷೇತ್ರದಿಂದ ಅನಿಲ್ ಚೌಧರಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಈ ಕ್ಷೇತ್ರದಲ್ಲಿ ಅವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅವಧ್ ಓಜಾ ಅವರೊಂದಿಗೆ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ಮುಸ್ತಫಾಬಾದ್‌ನಿಂದ ಅಲಿ ಮೆಹದಿ ಅವರನ್ನು ಕಣಕ್ಕಿಳಿಸಿದೆ. ಇಲ್ಲಿ ಅವರು ಎಎಪಿಯ ಆದಿಲ್ ಅಹ್ಮದ್ ಖಾನ್ ಅವರನ್ನು ಎದುರಿಸಲಿದ್ದಾರೆ. ಇದಲ್ಲದೇ ಅಬ್ದುಲ್ ರೆಹಮಾನ್ರನ್ನು ಸೀಲಾಂಪುರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿದ್ದು, ಇಲ್ಲಿ ಎಎಪಿ ಜುಬೈರ್ ಚೌಧರಿ ಕಣದಲ್ಲಿದ್ದಾರೆ.
Congress releases first list of 21 candidates for Delhi elections.
— ANI (@ANI) December 12, 2024
Delhi Congress chief Devender Yadav to contest from Badli, Ragini Nayak from Wazirpur, Sandeep Dikshit from New Delhi, Abhishek Dutt from Kasturba Nagar. pic.twitter.com/ceb8QcGCkK
ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ನರೇಲಾದಿಂದ ಅರುಣಾ ಕುಮಾರಿ ಅವರನ್ನು ಕಣಕ್ಕಿಳಿಸಿದ್ದು, ಇಲ್ಲಿ ಅವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ದಿನೇಶ್ ಭಾರದ್ವಾಜ್ ಅವರನ್ನು ಎದುರಿಸಲಿದ್ದಾರೆ. ಆದರೆ, ಪಕ್ಷವು ರಾಜಿಂದರ್ ತನ್ವಾರ್ ಅವರನ್ನು ಛತ್ತರ್‌ಪುರದಿಂದ ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಎಎಪಿ ಈ ಕ್ಷೇತ್ರದಿಂದ ಬ್ರಹ್ಮ್ ಸಿಂಗ್ ತನ್ವಾರ್ ಅಭ್ಯರ್ಥಿ ಎಂದು ಘೋಷಿಸಿದೆ.
ಈ 21 ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಂಗ್ರೆಸ್ ಬುರಾರಿಯಿಂದ ಮಂಗೇಶ್ ತ್ಯಾಗಿ, ಆದರ್ಶ ನಗರದಿಂದ ಶಿವಂಕ್ ಸಿಂಘಾಲ್, ಬದ್ಲಿಯಿಂದ ದೇವೇಂದ್ರ ಯಾದವ್, ಸುಲ್ತಾನ್‌ಪುರ ಮಜ್ರಾದಿಂದ ಜೈ ಕಿಶನ್, ನಾಗಲೈ ಜಾಟ್‌ನಿಂದ ರೋಹಿತ್ ಚೌಧರಿ, ಶಾಲಿಮಾರ್‌ಬಾಗ್‌ನಿಂದ ಪ್ರವೀಣ್ ಜೈನ್, ವಜೀರ್‌ಪುರದಿಂದ ರಾಗಿಣಿ ನಾಯಕ್, ಸದರ್ ಬಜಾರ್‌ನಿಂದ ಅನಿಲ್ ಭಾರದ್ವಾಜ, ಚಾಂದಿನಿ ಚೌಕ್‌ನಿಂದ ಮುದಿತ್ ಅಗರ್ವಾಲ್, ಬಲ್ಲಿಮಾರನ್‌ನಿಂದ ಹರುನ್ ಯೂಸುಫ್, ತಿಲಕ್ ನಗರದಿಂದ ಪಿಎಸ್. ಬಾವಾ ಅವರಿಗೆ ಟಿಕೆಟ್ ನೀಡಲಾಗಿದೆ.
ಅದೇ ರೀತಿ ದ್ವಾರಕಾದಿಂದ ಆದರ್ಶ ಶಾಸ್ತ್ರಿ, ನವದೆಹಲಿಯಿಂದ ಸಂದೀಪ್ ದೀಕ್ಷಿತ್, ಕಸ್ತೂರ್ಬಾ ನಗರದಿಂದ ಅಭಿಷೇಕ್ ದತ್, ಛತ್ತರ್‌ಪುರದಿಂದ ರಾಜಿಂದರ್ ತನ್ವರ್, ಅಂಬೇಡ್ಕರ್ ನಗರದಿಂದ ಜೈ ಪ್ರಕಾಶ್, ಗ್ರೇಟರ್ ಕೈಲಾಶ್‌ನಿಂದ ಗರ್ವಿತ್ ಸಿಂಘ್ವಿ, ಪತ್ಪರ್‌ಗಂಜ್‌ನಿಂದ ಅನಿಲ್ ಕುಮಾರ್, ಸೀಲಂಪುರದಿಂದ ಅಬ್ದುಲ್ ರೆಹಮಾನ್ ಮತ್ತು ಮುಸ್ತಫಾಬಾದ್ನಲ್ಲಿ ಅಲಿ ಮೆಹದಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.
ಓದಿ: ಯುಪಿಯಲ್ಲಿ ಟೆಕ್ಕಿ ಅತುಲ್ ಸುಭಾಷ್ ಅಂತ್ಯಸಂಸ್ಕಾರ: ನ್ಯಾಯಕ್ಕಾಗಿ ಚಿತಾಭಸ್ಮ ಹಿಡಿದು ಪತ್ನಿ ಮನೆಗೆ ತೆರಳಿದ ಕುಟುಂಬ