ETV Bharat / bharat

ವಿಕೆ ಸಕ್ಸೇನಾ ಕ್ರಿಮಿನಲ್ ಮಾನನಷ್ಟ ಪ್ರಕರಣ: ಮೇಧಾ ಪಾಟ್ಕರ್‌ಗೆ ಐದು ತಿಂಗಳ ಜೈಲು ಶಿಕ್ಷೆ; ದೆಹಲಿ ಸಾಕೇತ್ ಕೋರ್ಟ್​​ ತೀರ್ಪು - Jail sentence for Medha Patkar - JAIL SENTENCE FOR MEDHA PATKAR

ದೆಹಲಿಯ ಎಲ್‌ಜಿ ವಿನಯ್ ಕುಮಾರ್ ಸಕ್ಸೇನಾ ಅವರು ಸಲ್ಲಿಸಿದ 23 ವರ್ಷದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿಯ ಸಾಕೇತ್ ನ್ಯಾಯಾಲಯವು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌ಗೆ ಐದು ತಿಂಗಳ ಜೈಲು ಶಿಕ್ಷೆ ಮತ್ತು ₹10 ಲಕ್ಷ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500ರ ಅಡಿ ಮೇಧಾ ಪಾಟ್ಕರ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.

SAKET COURT MEDHA PATKAR VK SAXENA  Delhi Saket Court Judgment  VK Saxena Criminal Defamation Case  Medha Patkar
ವಿಕೆ ಸಕ್ಸೇನಾ ಕ್ರಿಮಿನಲ್ ಮಾನನಷ್ಟ ಪ್ರಕರಣ: ಮೇಧಾ ಪಾಟ್ಕರ್‌ಗೆ ಐದು ತಿಂಗಳ ಜೈಲು ಶಿಕ್ಷೆ- ದೆಹಲಿ ಸಾಕೇತ್ ನ್ಯಾಯಾಲಯ ತೀರ್ಪು (ETV Bharat)
author img

By ETV Bharat Karnataka Team

Published : Jul 1, 2024, 6:54 PM IST

ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಅವರಿಗೆ ದೆಹಲಿಯ ಸಾಕೇತ್ ಕೋರ್ಟ್ ಐದು ತಿಂಗಳ ಜೈಲು ಶಿಕ್ಷೆ ಮತ್ತು ₹10 ಲಕ್ಷ ದಂಡ ವಿಧಿಸಿದೆ.

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ ಅವರು, ವಿಕೆ ಸಕ್ಸೇನಾಗೆ ₹10 ಲಕ್ಷ ದಂಡ ಪಾವತಿಸುವಂತೆ ಮೇಧಾ ಪಾಟ್ಕರ್ ಅವರಿಗೆ ಆದೇಶಿಸಿದರು. ಈ ಪ್ರಕರಣದಲ್ಲಿ ಗರಿಷ್ಠ ಎರಡು ವರ್ಷ ಶಿಕ್ಷೆಯಾಗಬಹುದು ಎಂದು ನ್ಯಾಯಾಲಯ ಹೇಳಿದೆ. ಆದರೆ, ಮೇಧಾ ಪಾಟ್ಕರ್ ಅವರ ಆರೋಗ್ಯವನ್ನು ಪರಿಗಣಿಸಿ ಐದು ತಿಂಗಳ ಶಿಕ್ಷೆಯನ್ನು ನೀಡಲಾಗಿದೆ. ಈ ಶಿಕ್ಷೆಯನ್ನು 30 ದಿನಗಳ ಕಾಲ ಅಮಾನತುಗೊಳಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ.

ಇದಕ್ಕೂ ಮುನ್ನ ಜೂನ್ 7ರಂದು ಶಿಕ್ಷೆ ಅವಧಿಯ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿತ್ತು. ಮೇ 30ರಂದು ದೂರುದಾರ ವಿಕೆ ಸಕ್ಸೇನಾ ಪರ ವಾದ ಮಂಡಿಸಿದ ವಕೀಲರು ಮೇಧಾ ಪಾಟ್ಕರ್‌ಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದರು. ಭಾರತೀಯ ದಂಡ ಸಂಹಿತೆ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಒದಗಿಸುತ್ತದೆ. ಮೇ 24 ರಂದು ಸಾಕೇತ್ ನ್ಯಾಯಾಲಯವು ಮೇಧಾ ಪಾಟ್ಕರ್ ಅವರನ್ನು ದೋಷಿ ಎಂದು ಘೋಷಿಸಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500ರ ಅಡಿ ಮೇಧಾ ಪಾಟ್ಕರ್ ಅವರನ್ನು ದೋಷಿ ಎಂದು ನ್ಯಾಯಾಲಯವು ಹೇಳಿತ್ತು. ಮೇಧಾ ಪಾಟ್ಕರ್ ಅವರು ತಮ್ಮ ಪ್ರತಿಷ್ಠೆಗೆ ಹಾನಿ ಮಾಡಲು ಸುಳ್ಳು ಮಾಹಿತಿಯೊಂದಿಗೆ ಆರೋಪ ಮಾಡಿದ್ದಾರೆ.

ಘಟನೆ 2000ನೇ ಇಸವಿಯದ್ದು: 2000ನೇ ಇಸವಿಯ ನವೆಂಬರ್ 25ರಂದು ಮೇಧಾ ಪಾಟ್ಕರ್ ಅವರು ವಿಕೆ ಸಕ್ಸೇನಾ ಅವರು ಹವಾಲಾ ಮೂಲಕ ವಹಿವಾಟು ನಡೆಸಿದ್ದಾರೆ ಎಂದು ಆರೋಪಿಸಿ ಆಂಗ್ಲ ಭಾಷೆಯಲ್ಲಿ ಹೇಳಿಕೆ ನೀಡಿ ಅವರನ್ನು ಹೇಡಿ ಎಂದು ಕರೆದಿದ್ದರು. ವಿಕೆ ಸಕ್ಸೇನಾ ಗುಜರಾತ್‌ನ ಜನರನ್ನು ಮತ್ತು ಅವರ ಸಂಪನ್ಮೂಲಗಳನ್ನು ವಿದೇಶಿ ಹಿತಾಸಕ್ತಿಗಳಿಗೆ ಅಡಮಾನವಿಡುತ್ತಿದ್ದಾರೆ ಎಂದು ಮೇಧಾ ಪಾಟ್ಕರ್ ಹೇಳಿದ್ದರು. ಇಂತಹ ಹೇಳಿಕೆ ವಿಕೆ ಸಕ್ಸೇನಾ ಅವರ ಪ್ರಾಮಾಣಿಕತೆಯ ಮೇಲಿನ ನೇರ ದಾಳಿಯಾಗಿದೆ.

ವಿಕೆ ಸಕ್ಸೇನಾ ಅವರು 2000ನೇ ಇಸವಿಯಿಂದ ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮೇಧಾ ಪಾಟ್ಕರ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರತಿವಾದದಲ್ಲಿ ಹೇಳಿದ್ದಾರೆ. 2002ರಲ್ಲಿ ವಿಕೆ ಸಕ್ಸೇನಾ ಕೂಡ ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು ಎಂದು ಪಾಟ್ಕರ್ ಹೇಳಿದ್ದರು. ನಂತರ ಮೇಧಾ ಅಹಮದಾಬಾದ್‌ನಲ್ಲಿ ಎಫ್‌ಐಆರ್ ದಾಖಲಿಸಿದ್ದರು. ವಿಕೆ ಸಕ್ಸೇನಾ ಕಾರ್ಪೊರೇಟ್ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತು ಅವರು ಸರ್ದಾರ್ ಸರೋವರ ಯೋಜನೆಯನ್ನು ವಿರೋಧಿಸುವವರ ಬೇಡಿಕೆಗಳಿಗೆ ವಿರುದ್ಧವಾಗಿದ್ದಾರೆ ಎಂದು ಮೇಧಾ ನ್ಯಾಯಾಲಯದಲ್ಲಿ ಹೇಳಿದ್ದರು.

2001ರಲ್ಲಿ ಮೇಧಾ ಪಾಟ್ಕರ್ ವಿರುದ್ಧ ಪ್ರಕರಣ ದಾಖಲು: ವಿಕೆ ಸಕ್ಸೇನಾ ಅವರು ಮೇಧಾ ಪಾಟ್ಕರ್ ವಿರುದ್ಧ 2001ರಲ್ಲಿ ಅಹಮದಾಬಾದ್ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಗುಜರಾತ್‌ನ ವಿಚಾರಣಾ ನ್ಯಾಯಾಲಯವು ಈ ಪ್ರಕರಣವನ್ನು ವಿಚಾರಣೆ ಮಾಡಲು ತೆಗೆದುಕೊಂಡಿತು. ನಂತರ 2003 ರಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಗುಜರಾತ್‌ನಿಂದ ದೆಹಲಿಯ ಸಾಕೇತ್ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು.

ಇದನ್ನೂ ಓದಿ: 'ಆಪ್ ಹಿಂದೂ ಹೋ ಹಿ ನಹೀ' ಹೇಳಿಕೆ ವಿಚಾರ: ಕ್ಷಮೆಯಾಚನೆಗೆ ಬಿಜೆಪಿ ಪಟ್ಟು: ನೀಟ್ ಪರೀಕ್ಷೆ ಶ್ರೀಮಂತ ವಿದ್ಯಾರ್ಥಿಗಳಿಗೆ, ಪ್ರತಿಭಾವಂತರಿಗೆ ಅಲ್ಲ: ರಾಗಾ - Rahul Gandhi

ETV Bharat Logo

Copyright © 2025 Ushodaya Enterprises Pvt. Ltd., All Rights Reserved.