ಹೈದರಾಬಾದ್ (ತೆಲಂಗಾಣ): ಸೈಬರ್ ವಂಚಕರ ಜಾಲಕ್ಕೆ ಸಿಕ್ಕಿಬಿದ್ದ ವಿದ್ಯಾರ್ಥಿನಿಯೊಬ್ಬಳು ಸುಮಾರು 1 ಕೋಟಿ ರೂಪಾಯಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾಳೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪೊಲೀಸರ ಪ್ರಕಾರ, ನಗರದ ವಿದ್ಯಾರ್ಥಿನಿಯೊಬ್ಬಳು ಕೊರನಾ ಸಮಯದಲ್ಲಿ ಷೇರು ಮಾರುಕಟ್ಟೆಯಲ್ಲಿ ಆಸಕ್ತಿ ಹೊಂದಿದ್ದರು. ಈ ಕ್ರಮದಲ್ಲಿ ಫೇಸ್ಬುಕ್ನಲ್ಲಿ ‘ಯೂನಿಟಿ ಸ್ಟಾಕ್ಸ್’ ಎಂಬ ಕಂಪನಿಯ ಬಗ್ಗೆ ಬಂದ ಪೋಸ್ಟ್ ನೋಡಿ ಅದರ ಲಿಂಕ್ ಕ್ಲಿಕ್ ಮಾಡಿದ್ದಾಳೆ. ಸ್ವಲ್ಪ ಸಮಯದ ನಂತರ, ಆಕೆಗೆ ಆ ಕಂಪನಿಯಿಂದ ವಾಟ್ಸ್ಆ್ಯಪ್ ಸಂದೇಶ ಬಂದಿದೆ. ಅವರು ತಮ್ಮ ಷೇರು ವ್ಯಾಪಾರದಲ್ಲಿ ನಿಮಗೆ 100 ಪ್ರತಿಶತದಷ್ಟು ಲಾಭವನ್ನು ನೀಡುತ್ತೇವೆ ಎಂದು ಭರವಸೆ ಮೂಡಿಸಿದ್ದಾರೆ.
ಸಂತ್ರಸ್ತೆ ಸೈಬರ್ ಅಪರಾಧಿಗಳು ಕಳುಹಿಸಿದ ಮಾಹಿತಿಯನ್ನು ನಿಜವೆಂದು ನಂಬಿದ್ದಳು. ಅವರು ಹೇಳಿದಂತೆ ಆಧಾರ್ ಮತ್ತು ಪಾನ್ ಕಾರ್ಡ್ ಸಂಖ್ಯೆಯನ್ನು ನೀಡಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಹಣ ಕಳುಹಿಸಲು ಆರಂಭಿಸಿದ್ದಳು. ಮೊದಲು ಆಕೆಗೆ ಲಾಭವಾಯಿತು. ಆ ನಂತರ ಹೂಡಿಕೆ ಮಾಡಿದರೂ ಲಾಭ ಸಿಗದ ಕಾರಣ ಅವರನ್ನು ಪ್ರಶ್ನಿಸಿದ್ದಾಳೆ. ಯಾವುದೇ ಸಂದರ್ಭದಲ್ಲೂ ನಿಮ್ಮ ಹಣ ವಾಪಾಸ್ ಕೋಡುತ್ತೇವೆ. ಆದರೆ ಟ್ರೆಡಿಂಗ್ ಮಾತ್ರ ನಿಲ್ಲಿಸಬೇಡಿ ಎಂದು ಅಪರಾಧಿಗಳು ಹೇಳಿದರು.
ಆರೋಪಿಗಳ ಮಾತನ್ನು ಬಲವಾಗಿ ನಂಬಿದ್ದ ಆಕೆ ತನ್ನ ಬಳಿ ಇದ್ದ ಹಣ ಹಾಗೂ ಪೋಷಕರ ಉಳಿತಾಯದ ಸುಮಾರು 1 ಕೋಟಿ ರೂ.ಗಳನ್ನು ಅಪರಾಧಿಗಳಿಗೆ ಕಳುಹಿಸಿದ್ದಾಳೆ. ಬಳಿಕ ತಾನು ಮೋಸ ಹೋಗಿರುವುದನ್ನು ಅರಿತ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಕೂಡಲೇ ಆಯಾ ಬ್ಯಾಂಕ್‌ಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡಲೇ ತನಿಖೆ ಆರಂಭಿಸಿ ಕಳೆದು ಹೋದ ಮೊತ್ತದಿಂದ ಅಂತಿಮವಾಗಿ 10.24 ಲಕ್ಷ ರೂಪಾಯಿ ವಸೂಲಿ ಮಾಡಲು ಸಾಧ್ಯವಾಗಿದೆ. ಸೈಬರ್ ವಂಚನೆಗಳ ವಿರುದ್ಧ ಜಾಗರೂಕರಾಗಿರಲು ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಓದಿ: ಬಾಲಕಿಯ ಕೈ ಆಪರೇಷನ್ ಮಧ್ಯೆ ಹಸಿವಾಯ್ತೆಂದು 2 ತಾಸು ದೋಸೆ ತಿನ್ನಲು ಹೋದ ವೈದ್ಯ! - jhansi doctor