ETV Bharat / bharat

ಲೋಕಸಭೆ ಹೀನಾಯ ಸೋಲು: ಪಶ್ಚಿಮಬಂಗಾಳ ರಾಜ್ಯ ಕಾಂಗ್ರೆಸ್​ಗೆ ಶೀಘ್ರ ಹೊಸ ಸಾರಥಿ - west bengal congress new team

ಲೋಕಸಭೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ಪಶ್ಚಿಮಬಂಗಾಳ ರಾಜ್ಯ ಕಾಂಗ್ರೆಸ್​ ಘಟಕವನ್ನು ಪುನರ್​ರಚಿಸಲು ಎಐಸಿಸಿ ಮುಂದಾಗಿದೆ.

ಪಶ್ಚಿಮಬಂಗಾಳ ರಾಜ್ಯ ಕಾಂಗ್ರೆಸ್​ಗೆ ಶೀಘ್ರ ಹೊಸ ಸಾರಥಿ
ಪಶ್ಚಿಮಬಂಗಾಳ ರಾಜ್ಯ ಕಾಂಗ್ರೆಸ್​ಗೆ ಶೀಘ್ರ ಹೊಸ ಸಾರಥಿ (ETV Bharat)
author img

By ETV Bharat Karnataka Team

Published : Jul 30, 2024, 10:04 PM IST

ನವದೆಹಲಿ: I.N.D.I.A ಕೂಟದ ಮಿತ್ರಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್​​ (ಟಿಎಂಸಿ) ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮಬಂಗಾಳದಲ್ಲಿ ಕಾಂಗ್ರೆಸ್​ ಜೊತೆ ಸೀಟು ಹಂಚಿಕೆ ಮಾಡಿಕೊಂಡಿರಲಿಲ್ಲ. ಇದು ಕೈ ಪಕ್ಷಕ್ಕೆ ಭಾರಿ ಹೊಡೆತ ನೀಡಿತ್ತು. ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿತ್ತು. ರಾಜ್ಯದಲ್ಲಿ ಪಕ್ಷದ ಅಡಿಪಾಯ ಅಲುಗಾಡುತ್ತಿದ್ದು, ಬಲವರ್ಧನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಮುಂದಾಗಿದ್ದಾರೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಮಾಜಿ ಸಂಸದ ಅಧೀರ್​​ ರಂಜನ್​​ ಚೌಧರಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ವತಃ ತಾವೇ ಸೋಲು ಕಂಡಿದ್ದರು. ಇದರಿಂದ ಪಕ್ಷಕ್ಕೆ ಭಾರೀ ಇರಿಸುಮುರುಸು ಉಂಟಾಗಿತ್ತು. ಅಧ್ಯಕ್ಷರ ಸೋಲು ಮಾತ್ರವಲ್ಲ ಸ್ಪರ್ಧಿಸಿದ್ದ 14 ಕ್ಷೇತ್ರಗಳ ಪೈಕಿ 1 ರಲ್ಲಿ ಮಾತ್ರ ಜಯ ಸಾಧಿಸಿದೆ. ರಾಜ್ಯದ ಮತದಾನದ ಪೈಕಿ ಕೇವಲ ಶೇಕಡಾ 4 ರಷ್ಟು ಮಾತ್ರ ಮತ ಪಡೆದಿದೆ. ಇದರಿಂದ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ.

ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಖದರ್​​ನ ಮುಂದೆ ಕಾಂಗ್ರೆಸ್​ ಬುಡ ಅಲುಗಾಡುತ್ತಿದೆ. ಇನ್ನೊಂದೆಡೆ ಬಿಜೆಪಿ ಟಿಎಂಸಿಗೆ ನೇರ ಟಕ್ಕರ್​ ನೀಡುತ್ತಿದೆ. ಇದರ ನಡುವೆ ಕಾಂಗ್ರೆಸ್​​ ಬಡವಾಗಿದೆ. ಅಧ್ಯಕ್ಷ ಅಧೀರ್​ ರಂಜನ್​ ಚೌಧರಿ ಅವರ ಸೋತಿದ್ದರಿಂದ ಹೊಸ ಟೀಂ ಕಟ್ಟಲು ಎಐಸಿಸಿ ಚಿಂತಿಸಿದೆ. ಸಂಸತ್ತಿನಲ್ಲಿ ಪಕ್ಷವನ್ನು ಪ್ರಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದ ಅಧೀರ್​​ ಬದಲಿಗೆ ಬೇರೆ ನಾಯಕರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇದೆ.

ಮಲ್ಲಿಕಾರ್ಜುನ್​ ಖರ್ಗೆ ಅವರ ಸೂಚನೆಯ ಮೇರೆಗೆ, ಎಐಸಿಸಿ ಸಂಘಟನಾ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಜುಲೈ 29 ರಂದು ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ಕಾರಣಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಸಭೆಯಲ್ಲಿ ಹಲವು ನಾಯಕರು ಪಕ್ಷವನ್ನು ಪುನರ್​ರಚಿಸಬೇಕಿದೆ. ನಾಯಕತ್ವದ ಬದಲಾವಣೆ ಮಾಡಬೇಕಿದೆ ಎಂದು ಸೂಚಿಸಿದ್ದಾರೆ. ಅಧೀರ್ ರಂಜನ್ ಚೌಧರಿ ಅವರು ಟಿಎಂಸಿ ಅಧ್ಯಕ್ಷೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಪಕ್ಷ ಬಲವರ್ಧನೆ ನಿರ್ಲಕ್ಷಿಸಿದ್ದಾರೆ ಎಂದು ದೂರಿದ್ದಾರೆ.

ಬಿಜೆಪಿ ವಿರುದ್ಧ ಹೋರಾಡಬೇಕಿದೆ; ರಾಜ್ಯದಲ್ಲಿ ಟಿಎಂಸಿ ಆಡಳಿತದಲ್ಲಿದ್ದು, ಬಿಜೆಪಿ ಪ್ರಮುಖ ಪ್ರತಿಪಕ್ಷವಾಗುತ್ತಿದೆ. ಆ ಜಾಗವನ್ನು ಕಾಂಗ್ರೆಸ್​ ಆಕ್ರಮಿಸಬೇಕಿದೆ. ಟಿಎಂಸಿ ಬದಲಿಗೆ ನಾವು ಬಿಜೆಪಿ ವಿರುದ್ಧ ಹೋರಾಡಬೇಕಿದೆ ಎಂದು ಪಕ್ಷದ ಹರಿಯ ನಾಯಕರು ಸಲಹೆ ನೀಡಿದ್ದಾರೆ.

ಪಕ್ಷ ಬಲವರ್ಧನೆಯ ಬಗ್ಗೆ ಮಾತನಾಡಿರುವ ಪಶ್ಚಿಮ ಬಂಗಾಳದ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ಬಿಪಿ ಸಿಂಗ್, ರಾಜ್ಯ ನಾಯಕರ ಜೊತೆ ಚರ್ಚೆ ನಡೆಸಿದ್ದೇವೆ. ಸಮಾಲೋಚನೆಗಳು ನಡೆಯುತ್ತಿವೆ. ಹೊಸ ಅಧ್ಯಕ್ಷರ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ರಾಜ್ಯದಲ್ಲಿ ಬಿಜೆಪಿ ನಮ್ಮ ಪ್ರಮುಖ ಪ್ರತಿಸ್ಪರ್ಧಿಯಾಗಿದೆ ಎಂದು ಹೇಳಿದರು.

ಮಾಜಿ ಸಂಸದ ಅಧೀರ್​ ರಂಜನ್​ ಚೌಧರಿ ಅವರು ಲೋಕಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಹೊಸ ಅಧ್ಯಕ್ಷರ ಆಯ್ಕೆ ನಮ್ಮ ಮುಂದಿದೆ. ಅವರ ಸಲಹೆಯನ್ನೂ ಪರಿಗಣಿಸಿ ಹೊಸ ನಾಯಕರ ಆಯ್ಕೆಯಾಗಲಿದೆ ಎಂದು ಹೇಳಿದರು.

ರೇಸ್​​ನಲ್ಲಿರುವ ನಾಯಕರು: ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥರ ಸಂಭಾವ್ಯ ಹೆಸರುಗಳಲ್ಲಿ ಶಂಕರ್ ಮಾಲಕರ್, ನೇಪಾಳ ಮಹ್ತೋ, ಡಿಪಿ ರೇ ಮತ್ತು ಇಶಾ ಖಾನ್ ಚೌಧರಿ ಇದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಹಿಮ್ಮೆಟ್ಟಬೇಕು. ಮುಂದಿನ ದಿನಗಳಲ್ಲಿ ಮತದಾರರೊಂದಿಗೆ ಸಂಪರ್ಕ ಸಾಧಿಸಲು ಹಲವಾರು ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ವಯನಾಡ್​ನಲ್ಲಿ ರಣಮಳೆಗೆ ಸರಣಿ ಭೂಕುಸಿತ: ಮಕ್ಕಳು ಸೇರಿ 107ಕ್ಕೇರಿದ ಸಾವಿನ ಸಂಖ್ಯೆ, 400ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ - Wayanad Landslides

ETV Bharat Logo

Copyright © 2024 Ushodaya Enterprises Pvt. Ltd., All Rights Reserved.