ETV Bharat / bharat

ಈದ್​ ಹಬ್ಬದಲ್ಲಿ ಯುಸಿಸಿ, ಎನ್​ಆರ್​ಸಿ, ಸಿಎಎ ವಿರುದ್ಧ ಮತ್ತೆ ಗುಡುಗಿದ ಮಮತಾ ಬ್ಯಾನರ್ಜಿ - Mamata Banerjee On UCC - MAMATA BANERJEE ON UCC

ಈದ್​ ಉಲ್​ ಫಿತರ್​ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ​ ಸಮುದಾಯ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಪಾಲ್ಗೊಂಡಿದ್ದರು.

ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ
author img

By ANI

Published : Apr 11, 2024, 9:17 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ಪಶ್ಚಿಮ ಬಂಗಾಳದಲ್ಲಿ ಅನುಷ್ಠಾನಕ್ಕೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಗುಡುಗಿದ್ದಾರೆ.

ಈದ್ ಉಲ್ ಫಿತರ್ ಹಿನ್ನೆಲೆಯಲ್ಲಿ ಕೋಲ್ಕತ್ತಾದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಾವು ದೇಶಕ್ಕಾಗಿ ರಕ್ತ ಹರಿಸಲು ಸಿದ್ಧರಿದ್ದೇವೆ. ಆದರೆ ದೇಶಕ್ಕಾಗಿ ಶಾಂತಿ ಕದಡಲು ಬಿಡುವುದಿಲ್ಲ. ಹಿಂಸೆಯನ್ನು ಸಹಿಸುವುದಿಲ್ಲ. ಏಕರೂಪ ನಾಗರಿಕ ಸಂಹಿತೆ ಜಾರಿಯನ್ನು ಯಾವುದೇ ಕಾರಣಕ್ಕೂ ನಾವು ಒಪ್ಪಲ್ಲ. ಎಲ್ಲಾ ಧರ್ಮಗಳ ನಡುವೆ ಸಾಮರಸ್ಯವನ್ನು ಬಯಸುತ್ತೇನೆ. ಎಲ್ಲರ ಒಳಿತಿಗಾಗಿ ಎನ್​ಆರ್​ಸಿ, ಸಿಎಎ, ಯುಸಿಸಿಯನ್ನು ರಾಜ್ಯದಲ್ಲಿ ಜಾರಿಗೆ ತರಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ ಮಮತಾ, ಎಲ್ಲಾದರೂ ಸ್ಫೋಟ ಸಂಭವಿಸಿದಲ್ಲಿ ಅಲ್ಲಿಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳವನ್ನು ಕಳುಹಿಸುತ್ತದೆ. ನಿಮ್ಮೆಲ್ಲರನ್ನು ಬಂಧಿಸಲಾಗುತ್ತದೆ. ಹೀಗೆ ಎಲ್ಲರನ್ನೂ ಬಂಧಿಸಿದರೆ ಇಡೀ ದೇಶವೇ ಖಾಲಿಯಾಗುತ್ತದೆ. ನಾವು ಸರ್ವಧರ್ಮಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಣಲು ಬಯಸುತ್ತೇವೆ. ಸುಂದರ ಆಕಾಶ, ಕೂಡಿ ಬಾಳುವ ಸಮಾಜ ನಮ್ಮದಾಗಬೇಕು. ಯಾರಾದರೂ ಗಲಭೆಗೆ ಪ್ರಚೋದಿಸಿದಲ್ಲಿ ನೀವು ಸುಮ್ಮನಿರಿ ಎಂದು ಮುಸ್ಲಿಮರಿಗೆ ಸಲಹೆ ನೀಡಿದರು.

ನಾಯಕರಿಂದ ಈದ್​ ಶುಭಾಶಯಗಳು: ಇಂದು ರಂಜಾನ್​ (ಈದ್​ ಉಲ್​ ಫಿತರ್​) ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವಾರು ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ.

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಹಬ್ಬದ ಶುಭಾಶಯ ಕೋರಿದ್ದಾರೆ. "ಈದ್ ಮುಬಾರಕ್. ಇದು ಸಂತೋಷದ ಹಬ್ಬ, ಶಕ್ತಿ ನೀಡುವ ಈದ್. ಒಂದು ತಿಂಗಳ ಕಾಲ ಉಪವಾಸ ಮಾಡುವ ಮೂಲಕ ಈದ್ ಆಚರಿಸುವುದು ದೊಡ್ಡ ವಿಷಯ. ಹಬ್ಬ ಎಲ್ಲರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ" ಎಂದು ಕೋರಿದ್ದಾರೆ.

ರಂಜಾನ್​ ಹಬ್ಬದ ಹಿನ್ನೆಲೆ: ಈದ್​ ಉಲ್​ ಫಿತರ್​ ತಿಂಗಳ ಉಪವಾಸ ಕೊನೆಗೊಳಿಸುವ ಹಬ್ಬವಾಗಿದೆ. ಹೊಸ ಇಸ್ಲಾಮಿಕ್ ವರ್ಷದ ಆರಂಭವನ್ನು ಇದು ಸೂಚಿಸುತ್ತದೆ. ಈದ್-ಉಲ್-ಫಿತರ್​ನ ಒಂದು ತಿಂಗಳ ಅವಧಿಯ ಉಪವಾಸವು ಇಸ್ಲಾಮಿಕ್ ಕ್ಯಾಲೆಂಡರ್‌ನ ಹತ್ತನೇ ತಿಂಗಳಾಗಿರುವ 'ಶವ್ವಾಲ್‌'ನ ಆರಂಭದ ದ್ಯೋತಕವಾಗಿದೆ.

ಇದನ್ನೂ ಓದಿ: ದೇಶಾದ್ಯಂತ ಇಂದು ಮುಸ್ಲಿಂ ಬಾಂಧವರಿಗೆ ಈದ್ - ಉಲ್ - ಫಿತರ್ ಹಬ್ಬದ ಸಂಭ್ರಮ; ಶುಭಾಶಯಗಳ ವಿನಿಮಯ - Eid al Fitr celebrating

ETV Bharat Logo

Copyright © 2025 Ushodaya Enterprises Pvt. Ltd., All Rights Reserved.