ETV Bharat / bharat

ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್ - ರಾಮಮಂದಿರ

ಅಯೋಧ್ಯೆ ರಾಮಮಂದಿರಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಕುಟುಂಬಸಮೇತರಾಗಿ ಬಂದು ದೇವರ ದರ್ಶನ ಪಡೆದರು.

cm-arvind-kejriwal-and-bhagwant-mann-offer-prayers-along-with-family-in-ayodhya-ram-mandir
ರಾಮಲಲ್ಲಾನ ದರ್ಶನ ಪಡೆದ ಸಿಎಂಗಳಾದ ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್
author img

By PTI

Published : Feb 12, 2024, 10:59 PM IST

ಅಯೋಧ್ಯೆ(ಉತ್ತರ ಪ್ರದೇಶ): ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಇಂದು ಕುಟುಂಬಸಮೇತ ರಾಮ ಮಂದಿರಕ್ಕೆ ಭೇಟಿ ನೀಡಿ, ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಆಮ್​ಆದ್ಮಿ ಪಕ್ಷದ ನಾಯಕರ ಕುಟುಂಬಸ್ಥರು ರಾಮಮಂದಿರದಲ್ಲಿ ಸುಮಾರು ಒಂದು ಗಂಟೆ 15 ನಿಮಿಷಗಳ ಕಾಲ ಕಳೆದಿದ್ದಾರೆ.

ದೇವರ ದರ್ಶನದ ಬಳಿಕ ಅರವಿಂದ್ ಕೇಜ್ರಿವಾಲ್ ಮಾತನಾಡಿ, "ಇಂದು ನನಗೆ ರಾಮಲಲ್ಲಾನ ದರ್ಶನ ಪಡೆಯುವ ಸೌಭಾಗ್ಯ ಸಿಕ್ಕಿತು. ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ನನಗೆ ಮನಸ್ಸಿನಲ್ಲಿ ಪ್ರಶಾಂತತೆ ಅನುಭವಾಯಿತು. ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ಸುಂದರವಾದ ಮತ್ತು ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗಿದೆ. ಪ್ರತಿದಿನ ಲಕ್ಷಾಂತರ ರಾಮ ಭಕ್ತರು ಪೂಜೆ ಸಲ್ಲಿಸಲು ಬರುತ್ತಿರುವುದು ಇಡೀ ಜಗತ್ತಿಗೆ ಅದೃಷ್ಟದ ವಿಷಯ. ಪ್ರತಿಯೊಬ್ಬರ ಸಂತೋಷ, ಶಾಂತಿ ಮತ್ತು ಆರೋಗ್ಯಕ್ಕಾಗಿ ನಾವು ದೇವಾಲಯದಲ್ಲಿ ಪ್ರಾರ್ಥಿಸಿದ್ದೇವೆ" ಎಂದರು.

ಪಂಜಾಬ್ ಸಿಎಂ ಭಗವಂತ್ ಮಾನ್ ಮಾತನಾಡಿ, "ಭಾರತವು ಬಹು ಧಾರ್ಮಿಕ ನಂಬಿಕೆಗಳ ದೇಶವಾಗಿದ್ದು, ಇಲ್ಲಿ ಎಲ್ಲಾ ಹಬ್ಬಗಳನ್ನೂ ಒಟ್ಟಿಗೆ ಆಚರಿಸಲಾಗುತ್ತದೆ. ರಾಮಮಂದಿರದಲ್ಲಿ ನಾವು ದೇಶದಲ್ಲಿ ಶಾಂತಿ ಮತ್ತು ಸಹೋದರತ್ವಕ್ಕಾಗಿ ಪ್ರಾರ್ಥಿಸಿದ್ದೇವೆ. ಭಾರತವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುವ ವಿವಿಧ ಬಣ್ಣಗಳ ಹೂವುಗಳ ಗುಚ್ಛ" ಎಂದು ಹೇಳಿದ್ದಾರೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಕೇಜ್ರಿವಾಲ್ ಮತ್ತು ಮಾನ್ ಅವರಿಗೆ ಆತಿಥ್ಯ ನೀಡಿದರು ಎಂದು ಎಎಪಿ ಯುಪಿ ಅಧ್ಯಕ್ಷ ಸಭಾಜೀತ್ ಸಿಂಗ್ ತಿಳಿಸಿದ್ದಾರೆ.

ಸಿಎಂ ಅರವಿಂದ್ ಕೇಜ್ರಿವಾಲ್ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿ, " ನನ್ನ ಹೆತ್ತವರು ಮತ್ತು ನನ್ನ ಹೆಂಡತಿಯೊಂದಿಗೆ ಇಂದು ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ದೈವಿಕ ದರ್ಶನ ಪಡೆಯುವ ಭಾಗ್ಯ ನನಗೆ ಸಿಕ್ಕಿತು. ಈ ವೇಳೆ ಭಗವಂತ್ ಜಿ ಮತ್ತು ಅವರ ಕುಟುಂಬಸ್ಥರೂ ಸಹ ಉಪಸ್ಥಿತರಿದ್ದರು. ಎಲ್ಲರೂ ಒಟ್ಟಾಗಿ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀ ರಾಮ್ ಜಿ ಅವರ ದರ್ಶನವನ್ನು ಪಡೆದೆವು. ದೇಶದ ಪ್ರಗತಿ ಹಾಗೂ ಎಲ್ಲಾರ ಕಲ್ಯಾಣಕ್ಕಾಗಿ ಪ್ರಾರ್ಥಿಸಿದೆವು. ಭಗವಾನ್ ಶ್ರೀ ರಾಮಚಂದ್ರ ಜೀ ಎಲ್ಲರಿಗೂ ಆಶೀರ್ವದಿಸಲಿ ಜೈ ಶ್ರೀ ರಾಮ್" ಎಂದು ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರಾಗಿರುವ ಕೇಜ್ರಿವಾಲ್ ಅವರನ್ನು ಜನವರಿ 22ರಂದು ರಾಮ್ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ಆಹ್ವಾನಿಸಲಾಗಿದ್ದರೂ, ಅವರು ನಂತರ ಕುಟುಂಬಸಮೇತ ಅಲ್ಲಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದರು.

ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಧಾನ ಪರಿಷತ್‌ನ ಮಾಜಿ ಸದಸ್ಯೆ ಶಹನಾಜ್ ಗನೈ ಬಿಜೆಪಿ ಸೇರ್ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.