ನವದೆಹಲಿ: ಹತ ಪಂಜಾಬಿ ಗಾಯಕ ಸಿಧು ಮೂಸೆವಾಲ ತಾಯಿ ಚರಣ್ ಸಿಂಗ್ ಕೌರ್ ತಮ್ಮ 58ನೇ ವಯಸ್ಸಿನಲ್ಲಿ ಐವಿಎಫ್ (ಇನ್ ವಿಟ್ರೋ ಫರ್ಟಿಲೈಸೆಷನ್) ಮೂಲಕ ಮಗುವಿಗೆ ಜನ್ಮ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವಿವರವಾದ ಮಾಹಿತಿ ನೀಡುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪಂಜಾಬ್ ಸರ್ಕಾರವನ್ನು ಕೋರಿದೆ.
ಪಂಜಾಬ್ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯ, ಪಂಜಾಬಿ ಗಾಯಕ ಸಿಧು ಮೂಸೆವಾಲ ತಾಯಿ 58ನೇ ವಯಸ್ಸಿಗೆ ಐವಿಎಫ್ ಮೂಲಕ ಮಗುವನ್ನು ಪಡೆದಿರುವ ವರದಿಗಳನ್ನು ಉಲ್ಲೇಖಿಸಿದೆ.
ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ಎಆರ್ಟಿ) (ರೆಗ್ಯೂಲೇಷನ್) ಕಾಯ್ದೆ 2021ರ ಪ್ರಕಾರ, ಎಆರ್ಟಿ ಸೇವೆ ಅಂದರೆ, ಐವಿಎಫ್ನಂತಹ ಚಿಕಿತ್ಸೆಗಳನ್ನು ಪಡೆಯಲು ಮಹಿಳೆಯರ ವಯೋಮಿತಿ 21- 50 ವರ್ಷ ಎಂದು ನಿಗದಿ ಮಾಡಲಾಗಿದೆ. ಈ ಸಂಬಂಧ ಲಗತ್ತಿಸಲಾದ ವರದಿ ಅನುಸಾರ ಈ ಪ್ರಕರಣ ಕುರಿತು ನೋಡಲು ಮನವಿ ಮಾಡಲಾಗಿದ್ದು, ಆಆರ್ಟಿ (ರೆಗ್ಯೂಲೇಷನ್ಸ್) ಕಾಯ್ದೆ 2021 ಪ್ರಕಾರ ಕ್ರಮ ನಡೆಸುವಂತೆ ಕೋರಿದೆ. ಈ ಪತ್ರಕ್ಕೆ ಆರೋಗ್ಯ ಸಚಿವಾಲಯದ ಪರವಾಗಿ ಎಸ್ಕೆ ರಂಜನ್ ಸಹಿ ಮಾಡಿದ್ದಾರೆ.
ಪಂಜಾಬ್ನ ಮಾನ್ಸಾದಲ್ಲಿ ಮೂಸೆವಾಲ ಗುಂಡಿಕ್ಕಿ ಹತ್ಯೆಗೊಂಡು ಎರಡು ವರ್ಷದ ಬಳಿಕ ಅವರ ಪೋಷಕರು ಭಾನುವಾರ ಗಂಡು ಮಗುವಿನ ಪೋಷಕರಾಗಿದ್ದಾರೆ. ಬಲ್ಕೌರ್ ಸಿಂಗ್, ಈ ಸಂಬಂಧ ಫೇಸ್ಬುಕ್ ಪೇಜ್ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದರು.
ಎಆರ್ಟಿ (ರೆಗ್ಯೂಲೇಷನ್) ಕಾಯ್ದೆ: ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ ಕ್ಲಿನಿಕ್‌ಗಳು ಮತ್ತು ಬ್ಯಾಂಕ್‌ಗಳನ್ನು ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ಉದ್ದೇಶ ಮತ್ತು ಭಾರತದಲ್ಲಿ ಎಆರ್ಟಿ ಸುರಕ್ಷಿತ ಮತ್ತು ನೈತಿಕ ಅಭ್ಯಾಸಗಳನ್ನು ಖಚಿತಪಡಿಸಿಕೊಳ್ಳಲು 2021 ಡಿಸೆಂಬರ್ 10 ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ರೆಗ್ಯೂಲೇಷನ್) ಕಾಯ್ದೆ 2021 ಪಾಸ್ ಮಾಡಲಾಯಿತು. ಇದು 2022 ಜನವರಿ 25ರಂದು ಜಾರಿಗೆ ತರಲಾಯಿತು. ಈ ಕಾಯ್ದೆಯ ಸೆಕ್ಷನ್ 2(ಸಿ) ಪ್ರಕಾರ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಡಿ ನೋಂದಾಯಿತ ವೈದ್ಯರುಗಳು ಎಆರ್ಟಿ ಕ್ಲಿನಿಕ್‌ಗಳು ಅಗತ್ಯ ಸೌಲಭ್ಯಗಳನ್ನು ಹೊಂದಿರುವ ಸ್ಥಳ ಮತ್ತು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಾರ್ಯ ವಿಧಾನ ಎಂದರು.
ಇನ್- ವಿಟ್ರೊ ಫರ್ಟಿಲೈಸಷನ್ (ಐವಿಎಫ್): ಅನೇಕ ಕಾರ್ಯವಿಧಾನವನ್ನು ಹೊಂದಿರುವ ಕ್ಲಿಷ್ಟಕರ ಸಂತಾನೋತ್ಪತ್ತಿ ಚಿಕಿತ್ಸೆ ಈ ಇನ್ ವಿಟ್ರೋ ಫರ್ಟಿಲೈಸಷನ್ ಆಗಿದೆ. ಈ ಕಾರ್ಯಾಚರಣೆಯೂ ಅಂಡಾಣು ಪ್ರಚೋದನೆಯೊಂದಿಗೆ ಆರಂಭವಾಗುತ್ತದೆ. ಈ ವೇಳೆ, ಹಾರ್ಮೋನಲ್ ಥೆರಪಿ ಬಳಕೆ ಮೂಲಕ ಅಂಡಾಶಯಗಳು ಒಂದು ಅಂಡಾಣು ಬದಲಾಗಿ ಹಲವಾರು ಅಂಡಾಣು ಉತ್ಪಾದನೆ ಮಾಡುವಂತೆ ಮಾಡಲಾಗುವುದು. ಈ ವೇಳೆ ಮಹಿಳೆಯನ್ನು ನಿಯಮಿತ ರಕ್ತ ಪರೀಕ್ಷೆ ಮತ್ತು ಅಲ್ಟ್ರಾ ಸೌಂಡ್ ಇಮೇಜ್ ಮೂಲಕ ಕೋಶಕ ಅಭಿವೃದ್ಧಿ ಮತ್ತು ಹಾರ್ಮೋನ್ ಮಟ್ಟದ ಮೇಲ್ವಿಚಾರಣೆ ನಡೆಸಲಾಗುವುದು. ಈ ಕೋಶಕಗಳು ನಿರ್ದಿಷ್ಟ ಗಾತ್ರ ತಲುಪಿದ ಬಳಿಕ ಅಂಡಾಣುಗಳ ಅಂತಿಮ ಪಕ್ವತೆ ಪ್ರಚೋದಿಸಲು ಪ್ರಚೋದಕ ಹೊಡೆತವನ್ನು ನೀಡಲಾಗುತ್ತದೆ. ಇದಾದ ಬಳಿಕ ಟ್ರಾನ್ಸ್‌ವಾಜಿನಲ್ ಅಲ್ಟ್ರಾಸೌಂಡ್ ಗೈಡೆಡ್ ಫಾಲಿಕಲ್ ಆಸ್ಪಿರೇಶನ್ ವಿಧಾನದ ಮೂಲಕ ಈ ಅಂಡಾಣುಗಳನ್ನು ಹಿಂಪಡೆಯಲಾಗುತ್ತದೆ. ಬಳಿಕ ಈ ಅಂಡಾಣುಗಳನ್ನು ವೀರ್ಯಗಳೊಂದಿಗೆ ಪ್ರಯೋಗಾಲಯದಲ್ಲಿ ಸಂತಾನೋತ್ಪತ್ತಿ ಮಾಡುವಂತೆ ಸಂಯೋಜಿಸಲಾಗುತ್ತದೆ.
ಈ ರೀತಿ ಸಂತಾನೋತ್ಪತ್ತಿಗೆ ಸಿದ್ದವಾದ ಅಂಡಾಣುವನ್ನು ಪ್ರಯೋಗಾಲಯದಲ್ಲಿ ಕೆಲವು ದಿನಗಳ ಕಾಲ ಅಭಿವೃದ್ಧಿ ಪಡಿಸಲಾಗುವುದು. ಇದಾದ ಬಳಿಕ ಸಂಸ್ಕರಿದ ಅವಧಿಯಲ್ಲಿ ಒಂದು ಅಥವಾ ಹೆಚ್ಚು ಭ್ರೂಣವನ್ನು ಆಯ್ಕೆ ಮಾಡಿ ಯೋನಿ ಮೂಲಕ ವರ್ಗಾಯಿಸಲಾಗುವುದು. ಇದಾದ ಬಳಿಕ 10 ರಿಂದ 14 ದಿನದಲ್ಲಿ ಗರ್ಭ ಪರೀಕ್ಷೆ ನಡೆಸಲಾಗುವುದು. ಇದರ ಆಧಾರದ ಮೇಲೆ ಐವಿಎಫ್ ಚಿಕಿತ್ಸೆಯ ಯಶಸ್ಸನ್ನು ನಿರ್ಣಯಿಸಲಾಗುವುದು.
ಭಾರತದಲ್ಲಿ ಐವಿಎಫ್ ಯಶಸ್ಸು: ಭಾರತದಲ್ಲಿ ಐವಿಎಫ್ ಯಶಸ್ಸಿನ ದರವೂ 30-35 ಆಗಿದೆ ಎಂದು ನವದೆಹಲಿಯ ಒಬಿಜಿ ವಿಭಾಗ ಅಂದಾಜಿಸಿದೆ. ಈ ಚಿಕಿತ್ಸೆ ವೇಳೆಗಿನ ಯಶಸ್ಸನ್ನು ಶೇ 40ಕ್ಕೂ ಹೆಚ್ಚಿದೆ. ಆದಾಗ್ಯೂ ಭಾರತದಲ್ಲಿ ಖಾಸಗಿ ಕ್ಲಿನಿಕ್‌ಗಳು ಇದರ ಯಶಸ್ಸಿನ ದರ ಹೆಚ್ಚಿದೆ ಎಂದು ಹೇಳಿಕೊಳ್ಳುತ್ತವೆ. ಖಾಸಗಿ ಐವಿಎಫ್ ಕ್ಲಿನಿಕ್‌ಗಳು 35 ರಿಂದ 40 ವರ್ಷದ ಮಹಿಳೆಯರಲ್ಲಿ ಈ ಯಶಸ್ಸಿನ ದರ ಶೇ 70 ರಿಂದ 80 ಎಂದಿದ್ದು, 40ರ ಬಳಿಕ ಇದರ ಯಶಸ್ಸಿನ ದರ ಶೇ 50ರಷ್ಟು ಎನ್ನುತ್ತವೆ.
ಅಗತ್ಯತೆ ಮತ್ತು ವೆಚ್ಚ: ನೈಸರ್ಗಿಕ ವಿಧಾನದ ಮೂಲಕ ಗರ್ಭ ಧರಿಸಲು ಸಾಧ್ಯವಾಗದೇ ಇರುವಾಗ ಜನರು ಈ ಐವಿಎಫ್ ಮೊರೆ ಹೋಗುತ್ತಾರೆ. ವ್ಯಕ್ತಿ ಅಥವಾ ದಂಪತಿಯಲ್ಲಿ ವಿವರಿಸಲಾಗದ ಫಲವತ್ತತೆ ಕಂಡು ಬಂದಾಗ ಈ ಚಿಕಿತ್ಸೆ ಬೇಡುವುದು ಕಾಣಬಹುದಾಗಿದೆ. ಈ ಐವಿಎಫ್ ಚಿಕಿತ್ಸೆಯೂ ಸೈಕಲ್ಗಳ ಸಂಖ್ಯೆ, ಹೆಚ್ಚುವರಿ ಕಾರ್ಯಾಚರಣೆ ಮತ್ತು ಇತರ ಅಂಶಗಳು ಅಂದರೆ ಸ್ಥಳ ಮತ್ತು ಕ್ಲಿನಿಕ್ನ ಖ್ಯಾತಿ ಮೇಲೆ 1 ರಿಂದ 3.50 ಲಕ್ಷ ರೂವರೆಗೆ ಇರಲಿದೆ.
ತಜ್ಞರ ಅಭಿಪ್ರಾಯ: ಇಂದಿನ ದಿನದಲ್ಲಿ ಹೆಚ್ಚುತ್ತಿರುವ ಒತ್ತಡ ಮತ್ತು ಬಳಲಿಕೆಯಿಂದ ಐವಿಎಫ್ ಚಿಕಿತ್ಸೆ ಸಾಮಾನ್ಯ ಎನ್ನುವಂತಾಗಿದೆ. ದಂಪತಿಗಳಿಗೆ ಈ ಕುರಿತು ಸರಿಯಾದ ಮಾಹಿತಿ ಸೇರಿದಂತೆ ಹಲವು ಸಹಾಯದ ಮೂಲಕ ಚಿಕಿತ್ಸೆ ಕುರಿತು ತಿಳಿ ಹೇಳಲಾಗುವುದು ಎಂದು ಕಮ್ಯೂನಿಟಿ ಮೆಡಿಸಿನ್ನ ಆರೋಗ್ಯ ತಜ್ಞೆ ಡಾ ಸುನೀಲ್ ಗಾರ್ಗ್ ತಿಳಿಸಿದ್ದಾರೆ.
ವ್ಯಕ್ತಿಯ ದೈಹಿಕ ಮತ್ತು ದೇಹ ಸಹಾಯದ ಸಾಮರ್ಥ್ಯದ ಆಧಾರದ ಮೇಲೆ 30 ವರ್ಷಗಳವರೆಗೆ ಈ ಚಿಕಿತ್ಸೆ ಪಡೆಯಬಹುದು. ಆದರೆ ಇತ್ತೀಚಿನ ದಿನದಲ್ಲಿ ಇದು ಆಯ್ಕೆಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪಂಜಾಬಿ ಗಾಯಕ ದಿ.ಸಿಧು ಮೂಸೆವಾಲಾ ಪೋಷಕರಿಗೆ ಗಂಡು ಮಗು ಜನನ