ETV Bharat / bharat

ಭಾರತೀಯ ಶೌರ್ಯ ಕಥೆಗಳಲ್ಲಿ ಮಿನುಗುವ ನಕ್ಷತ್ರವಾಗಿ ಉಳಿದ ಕ್ಯಾಪ್ಟನ್ ವಿಕ್ರಮ್ ಬಾತ್ರಾ - Captain Vikram Batra - CAPTAIN VIKRAM BATRA

ಕಾರ್ಗಿಲ್ ಯುದ್ಧದ ಬಗ್ಗೆ ಮಾತನಾಡುವಾಗ, ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಉಲ್ಲೇಖವಿಲ್ಲದೆ ಈ ಕಥೆ ಅಪೂರ್ಣವಾಗಿ ಉಳಿಯುತ್ತದೆ. ದೇವಭೂಮಿ ಹಿಮಾಚಲದ ವೀರ ಪುರುಷ ಮತ್ತು ಭಾರತ ಮಾತೆಯ ಮಗ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರು ಕಾರ್ಗಿಲ್ ಶಿಖರಗಳನ್ನು ಶತ್ರುಗಳಿಂದ ಉಳಿಸುವಾಗ ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿ ಶಾಶ್ವತವಾಗಿ ಅಮರರಾಗಿದ್ದಾರೆ. ವಿಕ್ರಮ್ ಬಾತ್ರಾಗೆ ಸಂಬಂಧಿಸಿದ ಕೆಲವು ವಿಶೇಷ ಕಥೆಗಳನ್ನು ನಾವು ತಿಳಿದುಕೊಳ್ಳೋಣ.

captain-vikram-batra
ಕ್ಯಾಪ್ಟನ್ ವಿಕ್ರಮ್ ಬಾತ್ರಾ (ETV Bharat)
author img

By ETV Bharat Karnataka Team

Published : Jul 25, 2024, 5:32 PM IST

Updated : Jul 25, 2024, 5:44 PM IST

ಶಿಮ್ಲಾ (ಹಿಮಾಚಲ ಪ್ರದೇಶ) : ಕಾರ್ಗಿಲ್ ಯುದ್ಧದಲ್ಲಿ ಅದಮ್ಯ ಧೈರ್ಯದ ವೀರ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಪಾಕಿಸ್ತಾನದ ಸೇನೆಯನ್ನು ಹೀನಾಯವಾಗಿ ಸೋಲಿಸಿದ್ದರು. ಈ ಧೈರ್ಯಶಾಲಿ ವ್ಯಕ್ತಿ ಜುಲೈ 7 ರಂದು ಭಾರತ ಮಾತೆಗಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದರು. ಆದರೆ ಈ ಮಹಾನ್ ವೀರ ಭಾರತೀಯ ಶೌರ್ಯ ಕಥೆಗಳಲ್ಲಿ ಶಾಶ್ವತವಾಗಿ ಮಿನುಗುವ ನಕ್ಷತ್ರವಾಗಿ ಇಂದಿಗೂ ಉಳಿದಿದ್ದಾರೆ.

ಈ ಕೆಚ್ಚೆದೆಯ ವ್ಯಕ್ತಿಗೆ ಆಗಿನ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ವಿಪಿ ಮಲಿಕ್ ಹೀಗೆ ಹೇಳಿದ್ದರು, ''ಈ ಹುಡುಗ ಕಾರ್ಗಿಲ್‌ನಿಂದ ಹಿಂತಿರುಗಿದ್ದರೆ, ಅವನು 15 ವರ್ಷಗಳ ನಂತರ ದೇಶದ ಅತ್ಯಂತ ಕಿರಿಯ ಸೇನಾ ಮುಖ್ಯಸ್ಥನಾಗುತ್ತಿದ್ದ. ಕಾರ್ಗಿಲ್ ಶಿಖರಗಳ ಪ್ರತಿ ಕಣದಲ್ಲೂ ವಿಕ್ರಮನ ಶೌರ್ಯದ ಕಥೆ ಹುದುಗಿದೆ. ಆ ಸಾಹಸಗಾಥೆಯ ಪರಿಮಳವನ್ನು ಈಗಲೂ ಅನುಭವಿಸಬಹುದು. ಭಾರತದ ಸೇನಾ ಸಂಪ್ರದಾಯದ ಅತ್ಯುನ್ನತ ಗೌರವವಾದ ಪರಮವೀರ ಚಕ್ರದೊಂದಿಗೆ ವಿಕ್ರಮ್ ಬಾತ್ರಾ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲಾಗಿದೆ. ಈ ಪರಮವೀರನ ಕೆಲವು ಸ್ಪೂರ್ತಿದಾಯಕ ಕಥೆಗಳು ಇಲ್ಲಿವೆ. ಇಂದಿನ ಮತ್ತು ಮುಂದಿನ ಪೀಳಿಗೆ ಈ ಶೌರ್ಯದ ಕಥೆಗಳನ್ನು ನಿರಂತರವಾಗಿ ನೆನಪಿಸಿಕೊಳ್ಳಬೇಕು' ಎಂದಿದ್ದರು.

captain-vikram-batra
ಕ್ಯಾಪ್ಟನ್ ವಿಕ್ರಮ್ ಬಾತ್ರಾ (ETV Bharat)

ಸೆಪ್ಟೆಂಬರ್ 1974 ರಲ್ಲಿ ಜನಿಸಿದ ವಿಕ್ರಮ್ ಬಾತ್ರಾ: ವಿಕ್ರಮ್ ಬಾತ್ರಾ ಅವರು ದೇವಭೂಮಿ ಹಿಮಾಚಲದ ಪಾಲಂಪುರ್‌ನ ಸಣ್ಣ ಹಳ್ಳಿಯಾದ ಘುಗ್ಗರ್‌ನಲ್ಲಿ 1974ರ ಸೆಪ್ಟೆಂಬರ್ 9ರಂದು ಜನಿಸಿದರು.

ವಿಕ್ರಮ್ ಬಾತ್ರಾ ತನ್ನ ತಾಯಿಯ ಗರ್ಭದಿಂದ ಒಬ್ಬಂಟಿಯಾಗಿ ಬಂದಿಲ್ಲ, ವಿಶಾಲ್ ಕೂಡ ವಿಕ್ರಮ್​ನೊಂದಿಗೆ ಅವಳಿ ಸಹೋದರನಾಗಿ ಜನಿಸಿದರು. ತಂದೆ ಜಿ. ಎಲ್ ಬಾತ್ರಾ ಅವರು ವಿಕ್ರಮ್ ಅವರಿಗೆ ಬಾಲ್ಯದಿಂದಲೂ ಮಹಾನ್ ದೇಶಭಕ್ತರ ಮತ್ತು ತ್ಯಾಗದ ಕಥೆಗಳನ್ನು ಹೇಳುತ್ತಿದ್ದರು. ಈ ಕಥೆಗಳನ್ನು ಕೇಳಿದ ನಂತರ ವಿಕ್ರಮ್ ಭಾರತೀಯ ಸೇನೆಗೆ ಸೇರಲು ಪ್ರೇರಣೆಗೊಂಡರು.

captain-vikram-batra
ಸೇನಾ ಸಿಬ್ಬಂದಿಯೊಂದಿಗೆ ಕ್ಯಾಪ್ಟನ್ ವಿಕ್ರಮ್ ಬಾತ್ರಾ (ETV Bharat)

ಪಾಲಂಪುರ್‌ನ ಡಿಎವಿ ಶಾಲೆಯಲ್ಲಿ ಪ್ರಾಥಮಿಕ ಅಧ್ಯಯನದ ನಂತರ, ವಿಕ್ರಮ್ ಬಾತ್ರಾ ಚಂಡೀಗಢಕ್ಕೆ ಬಂದು ಕಾಲೇಜಿನಲ್ಲಿ ಅಧ್ಯಯನ ಮಾಡಲು ಪ್ರಾರಂಭಿಸಿದರು. ನಂತರ 1996ರಲ್ಲಿ ಡೆಹ್ರಾಡೂನ್‌ನ ಮಿಲಿಟರಿ ಅಕಾಡೆಮಿಗೆ ಆಯ್ಕೆಯಾದರು. ನಂತರ ಅವರನ್ನ 13ನೇ ಜಾಕ್ ರೈಫಲ್ಸ್​​ಗೆ ನೇಮಿಸಲಾಯಿತು. ಈ ಮೂಲಕ ವಿಕ್ರಮ್ ಬಾತ್ರಾ ಅವರ ಸೇನಾ ಸೇವೆ ಆರಂಭವಾಯಿತು.

ಪವಿತ್ರ ಮಂತ್ರವಾದ 'ಯೇ ದಿಲ್ ಮಾಂಗೆ ಮೋರ್' : ಪಾಕಿಸ್ತಾನ ಕಾರ್ಗಿಲ್ ಶಿಖರಗಳಲ್ಲಿ ನುಸುಳಿತ್ತು. ಆಗ ಭಾರತೀಯ ಸೇನೆಯು ಯುದ್ಧವನ್ನು ಎದುರಿಸಬೇಕಾಗಿತ್ತು, ಆ ವೇಳೆ ಶತ್ರು ಸೈನಿಕರು ಎತ್ತರದ ಶಿಖರಗಳಲ್ಲಿದ್ದರು. ಭಾರತೀಯ ವೀರರು ನೆಲದಿಂದಲೇ ಯುದ್ಧೋತ್ಸಾಹದಲ್ಲಿ ತೊಡಗಿದ್ದರು. ಕಾರ್ಗಿಲ್ ಶಿಖರಗಳನ್ನು ಶತ್ರುಗಳ ಆಕ್ರಮಣದಿಂದ ಮುಕ್ತಗೊಳಿಸಲು ಭಾರತ ಸರ್ಕಾರವು ಆಗ ಆಪರೇಷನ್ ವಿಜಯ್ ಅನ್ನು ಪ್ರಾರಂಭಿಸಿತು.

ಈ ಕಾರ್ಯಾಚರಣೆಯಲ್ಲಿ ದೇಶಕ್ಕೆ ಜಯ ಸಿಕ್ಕಿತು. ಆದರೆ ಆ ಗೆಲುವಿಗೆ ಭಾರಿ ಬೆಲೆ ತೆರಬೇಕಾಯಿತು. ಕಾರ್ಗಿಲ್‌ನಲ್ಲಿ ಪಾಯಿಂಟ್ 5140 ಅನ್ನು ವಶಪಡಿಸಿಕೊಳ್ಳಲು ವಿಕ್ರಮ್ ಬಾತ್ರಾ ಅವರ ಡೆಲ್ಟಾ ಟೀಂಗೆ ಆದೇಶ ಸಿಕ್ಕಿತು. ಶತ್ರು ಸೇನೆಯ ಪ್ರತಿ ಅಡೆತಡೆಗಳನ್ನು ನಾಶಪಡಿಸಿ, ವಿಕ್ರಮ್ ಬಾತ್ರಾ ಮತ್ತು ಅವರ ಸಹಚರರು ಪಾಯಿಂಟ್ 5140 ರ ಶಿಖರವನ್ನು ವಶಪಡಿಸಿಕೊಂಡರು.

captain-vikram-batra-remains-a-shining-star-in-indian-bravery-stories
ಕಾರ್ಗಿಲ್ ಯುದ್ಧದಲ್ಲಿ ತನ್ನ ಸಹಚರರೊಂದಿಗೆ ಕ್ಯಾಪ್ಟನ್ ವಿಕ್ರಮ್ ಬಾತ್ರಾ (ETV Bharat)

ವಿಕ್ರಮ್ ಬಾತ್ರಾ ಯುದ್ಧದ ಸಮಯದಲ್ಲಿ ಅನೇಕ ಧೈರ್ಯದ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಯುದ್ಧದ ಸಮಯದಲ್ಲಿ, ವಿಕ್ರಮ್ ಬಾತ್ರಾ ಮತ್ತು ಅವರ ಸಹಚರರು ಒಂದರ ನಂತರ ಒಂದರಂತೆ ಯಶಸ್ಸನ್ನು ಪಡೆಯುತ್ತಿದ್ದರು. ಈ ಯಶಸ್ಸಿನ ವೇಳೆ ವಿಕ್ರಮ್ ಬಾತ್ರಾ ಅವರ ಘೋಷಣೆ - 'ಯೇ ದಿಲ್ ಮಾಂಗೆ ಮೋರ್' ಪವಿತ್ರ ಮಂತ್ರವಾಗಿ ಮಾರ್ಪಟ್ಟಿತು.

ಜೂನ್ 20 ರಂದು ಕೈಕೈ ಮಿಲಾಯಿಸಿದ್ದ ಪಾಕಿಸ್ತಾನದ ನಾಲ್ವರು ಸೈನಿಕರು: ವಿಕ್ರಮ್ ಬಾತ್ರಾ ಅವರ ಧೈರ್ಯ ಮತ್ತು ಶೌರ್ಯದ ಪ್ರತಿಧ್ವನಿ ಭಾರತದ ಪ್ರತಿ ಮನೆಯನ್ನು ತಲುಪಿತ್ತು. ಪಾಯಿಂಟ್ 5140 ರ ಯುದ್ಧದಲ್ಲಿ, ವಿಕ್ರಮ್ ಬಾತ್ರಾ ತನ್ನ ಮುಷ್ಠಿಯ ಒಂದು ಹೊಡೆತದಿಂದ ನಾಲ್ವರು ಪಾಕಿಸ್ತಾನಿ ಸೈನಿಕರ ಹೆಣ ಉರುಳಿಸಿದ್ದರು.

ದ್ರಾಸ್ ಸೆಕ್ಟರ್‌ನಲ್ಲಿ ಪಾಯಿಂಟ್ 5140 ಅನ್ನು ವಶಪಡಿಸಿಕೊಂಡ ವಿಕ್ರಮ್ ಬಾತ್ರಾ ಅವರ 13ನೇ ಜಾಕ್ ರೈಫಲ್ಸ್‌ಗೆ ಹೊಸ ಜವಾಬ್ದಾರಿ ಸಿಕ್ಕಿತ್ತು. ಈ ಜವಾಬ್ದಾರಿಯು ಪಾಯಿಂಟ್ 4875 ಅನ್ನು ಸೆರೆಹಿಡಿಯುವುದಾಗಿತ್ತು. ಜುಲೈ 1, 1999 ರಂದು ಬೆಟಾಲಿಯನ್ ವೀರರು ಮಷ್ಕೋ ಕಣಿವೆಯಲ್ಲಿ ಒಟ್ಟುಗೂಡಿದರು. ಮೂರು ದಿನಗಳ ಕಾಲ ಯೋಜನೆ ರೂಪಿಸಿ ದಾಳಿ ನಡೆಸಿದ್ದರು. ಅದೇ ಹೋರಾಟದಲ್ಲಿ ವಿಕ್ರಮ್ ಬಾತ್ರಾ ಅವರ ಇನ್ನೊಬ್ಬ ಸಹಚರ ಮತ್ತು ವೀರಭೂಮಿಯ ಧೈರ್ಯಶಾಲಿ ಪುತ್ರ, ರೈಫಲ್‌ಮ್ಯಾನ್ ಸಂಜಯ್ ಕುಮಾರ್ ಕೂಡ ಇದ್ದರು.

ಪ್ರಸ್ತುತ ಸುಬೇದಾರ್ ಮೇಜರ್ ಆಗಿರುವ ರೈಫಲ್​ಮ್ಯಾನ್ ಸಂಜಯ್ ಕುಮಾರ್ ಪರಮವೀರ ಚಕ್ರವನ್ನು ಅಲಂಕರಿಸಿದ್ದಾರೆ. ಜುಲೈ 4 ರಂದು ರೈಫಲ್‌ಮ್ಯಾನ್ ಸಂಜಯ್ ಕುಮಾರ್ ಪಾಯಿಂಟ್ 4875 ರ ಸಮತಟ್ಟಾದ ಶಿಖರವನ್ನು ವಶಪಡಿಸಿಕೊಳ್ಳಲು ನೆರವಾದರು.

captain-vikram-batra
ಕಾರ್ಗಿಲ್ ಯುದ್ಧದ ಸಮಯದಲ್ಲಿ ತನ್ನ ಸಹಚರರೊಂದಿಗೆ ಕ್ಯಾಪ್ಟನ್ ವಿಕ್ರಮ್ ಬಾತ್ರಾ (ETV Bharat)

ಹೊಳೆಯುವ ನಕ್ಷತ್ರವಾದ ವಿಕ್ರಮ್ : ಸಹಜವಾಗಿ ಕಾರ್ಗಿಲ್ ಯುದ್ಧದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಹುತಾತ್ಮರಾದರು. ಆದರೆ ಅವರ ನಾಯಕತ್ವದಲ್ಲಿ ಸೇನಾ ವೀರರು ಅತ್ಯಂತ ಕಷ್ಟಕರವಾದ 4875 ಅನ್ನು ವಶಪಡಿಸಿಕೊಂಡರು. ಈ ಯುದ್ಧದಲ್ಲಿ ಕ್ಯಾ. ವಿಕ್ರಮ್​ ಅವರ ಅಸಾಧಾರಣ ಶೌರ್ಯದಿಂದ ಗೆಲುವಿನ ಹಾದಿ ಸುಗಮವಾಯಿತು.

ಪಾಕಿಸ್ತಾನದ ಸೈನಿಕರಲ್ಲಿ ವಿಕ್ರಮ್ ಹೆಸರಿನ ಭಯವಿತ್ತು. ವಿಕ್ರಮ್ ಅವರ ಕೋಡ್ ನೇಮ್ ಶೇರ್ಷಾ. ನಿಜವಾಗಿಯೂ ವಿಕ್ರಮ್ ಬಾತ್ರಾ ಕಾರ್ಗಿಲ್ ಸಿಂಹ ಎಂದೇ ಪ್ರಸಿದ್ಧರು. ಯುದ್ಧದ ಸಮಯದಲ್ಲಿ ಟಿವಿಯಲ್ಲಿ ವಿಕ್ರಮ್ ಅವರ ಒಂದು ಸಣ್ಣ ಸಂದರ್ಶನ ಬಂದಿತ್ತು. ಭಾರತಮಾತೆಯ ಈ ಮಗ ಗಡ್ಡವನ್ನು ಬೆಳೆಸಿಕೊಂಡು ಸಾಕ್ಷಾತ್ ಸಿಂಹದಂತೆ ಕಾಣುತ್ತಾ 'ಯೇ ದಿಲ್ ಮಾಂಗೆ ಮೋರ್' ಎಂದು ಘೋಷಿಸಿದಾಗ ಹೊಸ ತಲೆಮಾರಿನ ಯುವಕರಲ್ಲಿ ಭಾರತೀಯ ಸೇನೆಯತ್ತ ಸೇರುವ ಆಕರ್ಷಣೆ ಮತ್ತಷ್ಟು ಹೆಚ್ಚಿತ್ತು.

ವಿಕ್ರಮ್ ಬಾತ್ರಾ ಅವರಂತಹ ಹೀರೋಗಳಿಂದಾಗಿಯೇ ಭಾರತಮಾತೆ ಹೆಮ್ಮೆ ಪಟ್ಟಿದೆ. ವಿಕ್ರಮ್ ಬಾತ್ರಾ ಅವರ ಶೌರ್ಯದ ಕಥೆಯನ್ನು ಪಾಲಂಪುರದಿಂದ ಚಂಡೀಗಢದವರೆಗೆ ಮತ್ತು ಡೆಹ್ರಾಡೂನ್‌ನಿಂದ ಕಾಶ್ಮೀರದವರೆಗೆ ಹಾಡಿ ಹೊಗಳಲಾಗುತ್ತದೆ. ಇಷ್ಟೇ ಅಲ್ಲ, ವಿಶ್ವದ ಮೂಲೆ ಮೂಲೆಗಳಲ್ಲಿ ನಡೆದಿರುವ ಎಲ್ಲ ಸೇನಾ ಕಾರ್ಯಾಚರಣೆಗಳ ನಡುವೆ ಅತ್ಯಂತ ಕಷ್ಟಕರವಾದ ಯುದ್ಧವಾದ ಕಾರ್ಗಿಲ್‌ನ ಉಲ್ಲೇಖವು ವಿಕ್ರಮ್ ಬಾತ್ರಾ ಇಲ್ಲದೆ ಅಪೂರ್ಣವಾಗಿದೆ.

ವಿಕ್ರಮ್ ಸಹೋದರ ವಿಶಾಲ್ ಒಮ್ಮೆ ಸ್ಕಾಟ್ಲೆಂಡ್ ಪ್ರವಾಸಕ್ಕೆ ಹೋಗಿದ್ದರಂತೆ, ಆಗ ಪ್ರವಾಸಿ ಸ್ಥಳದಲ್ಲಿ ವಿಶಾಲ್ ತನ್ನ ಹೆಸರನ್ನು ಸಂದರ್ಶಕರ ಪುಸ್ತಕದಲ್ಲಿ ಬರೆದಾಗ, ಅಲ್ಲಿದ್ದ ಭಾರತೀಯರು ಬಾತ್ರಾ ಉಪನಾಮ ಬರೆದಿರುವುದನ್ನು ನೋಡಿ, 'ನಿಮಗೆ ವಿಕ್ರಮ್ ಬಾತ್ರಾ ಗೊತ್ತಾ?' ಎಂದು ಕೇಳಿದ್ದರು. ಆಗ ವಿಶಾಲ್​ಗೆ ತನ್ನ ಸಹೋದರನ ಬಗ್ಗೆ ಕೇಳಿ ಆಶ್ಚರ್ಯಗೊಂಡು ಒಮ್ಮೆ ಯೋಚಿಸಿದ್ದರು. ವಿಕ್ರಮ್ ಬಾತ್ರಾ ವಿದೇಶದಲ್ಲಿಯೂ ತನ್ನ ಹೆಸರಿನೊಂದಿಗೆ ಜೀವಂತವಾಗಿದ್ದಾರೆ. ಇದಕ್ಕಿಂತ ಹೆಮ್ಮೆ ಬೇರೇನಿದೆ?. ಭಾರತೀಯ ಕೆಚ್ಚೆದೆಯ ಪುತ್ರನಿಗೆ ಸೆಲ್ಯೂಟ್​ ಎನ್ನೋಣ..

ಇದನ್ನೂ ಓದಿ : ನೀರಿನೊಳಗೆ 'ಕಾರ್ಗಿಲ್​ ವೀರ' ವಿಕ್ರಮ್ ಬಾತ್ರಾ ಚಿತ್ರ ಬಿಡಿಸಿದ ಕಲಾವಿದ: ಯುಆರ್​​ಎಫ್​ ವಿಶ್ವ ದಾಖಲೆ

Last Updated : Jul 25, 2024, 5:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.