ETV Bharat / bharat

ಕೆನಡಾದಿಂದ ಭಾರತದ ಬೆನ್ನಿಗೆ ಚೂರಿ, ಖಲಿಸ್ತಾನ್‌ ಎಂಬುದು ಅಪರಾಧಗಳ ವ್ಯವಹಾರ: ಹೈಕಮಿಷನರ್ ವರ್ಮಾ

ಕೆನಡಾ ಭಾರತದ ಬೆನ್ನಿಗೆ ಚೂರಿ ಹಾಕಿದೆ ಎಂದು ಕೆನಡಾದಿಂದ ವಾಪಸು ಕರೆಸಿಕೊಳ್ಳಲಾದ ಭಾರತದ ಹೈಕಮಿಷನರ್ ಸಂಜಯ್ ವರ್ಮಾ ಹೇಳಿದ್ದಾರೆ.

ಹೈಕಮಿಷನರ್ ಸಂಜಯ್ ವರ್ಮಾ
ಹೈಕಮಿಷನರ್ ಸಂಜಯ್ ವರ್ಮಾ (IANS)
author img

By PTI

Published : Oct 24, 2024, 7:55 PM IST

ನವದೆಹಲಿ: ಭಾರತದೊಂದಿಗೆ ಅತ್ಯಂತ ಸ್ನೇಹಪರವಾಗಿ ಇರಬೇಕಾಗಿದ್ದ ಕೆನಡಾ ಭಾರತದ ಬೆನ್ನಿಗೆ ಚೂರಿ ಹಾಕಿದ್ದು, ಅದರ ನಡವಳಿಕೆ ತೀರಾ ನಿರಾಶಾದಾಯಕವಾಗಿದೆ ಎಂದು ಕೆನಡಾದಿಂದ ವಾಪಸು ಕರೆಸಿಕೊಳ್ಳಲಾದ ಭಾರತದ ಹೈಕಮಿಷನರ್ ಸಂಜಯ್ ವರ್ಮಾ ಹೇಳಿದರು.

ಭಾರತವು ಖಲಿಸ್ತಾನಿ ಭಯೋತ್ಪಾದಕ ಎಂದು ಘೋಷಿಸಿರುವ ಕೆನಡಾ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್‌ ಎಂಬಾತನನ್ನು 2023ರ ಜೂನ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ತನಿಖೆಯಲ್ಲಿ ವರ್ಮಾ ಅವರು "ಆಸಕ್ತಿಯ ವ್ಯಕ್ತಿ" ಎಂದು ಕೆನಡಾ ಘೋಷಿಸಿತು. ನಂತರದ ಬೆಳವಣಿಗೆಯಲ್ಲಿ, ಕೆನಡಾ ಮುಂದಿನ ಕ್ರಮ ತೆಗೆದುಕೊಳ್ಳುವ ಮೊದಲೇ ನವದೆಹಲಿಯು ವರ್ಮಾ ಮತ್ತು ಇತರ ಐದು ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿತು. ಇತರ ರಾಜತಾಂತ್ರಿಕರು ಕೂಡ ಹತ್ಯಾ ಪ್ರಕರಣದಲ್ಲಿ ಆರೋಪಿಗಳು ಎಂದು ಕೆನಡಾ ಹೆಸರಿಸಿದೆ.

"ಇದು ತೀರಾ ನಿರಾಶಾದಾಯಕ. ಇದು ದ್ವಿಪಕ್ಷೀಯ ಸಂಬಂಧದಲ್ಲಿ ತೀರಾ ವೃತ್ತಿಪರವಲ್ಲದ ನಡವಳಿಕೆಯಾಗಿದೆ. ರಾಜತಾಂತ್ರಿಕರ ಬಳಿ ರಾಜತಾಂತ್ರಿಕ ಸಾಧನಗಳು ಲಭ್ಯವಿವೆ. ದೇಶದ ಉನ್ನತ ರಾಯಭಾರಿ ಮತ್ತು ಇತರ ರಾಜತಾಂತ್ರಿಕರನ್ನು ವಿಚಾರಣೆಗೆ ಒಳಪಡಿಸುವ ಬದಲು ತನಿಖೆಗಾಗಿ ಆ ಸಾಧನಗಳನ್ನು ಬಳಸಬಹುದಿತ್ತು" ಎಂದು ವರ್ಮಾ ಬುಧವಾರ ಪಿಟಿಐ ವೀಡಿಯೊ ಸಂದರ್ಶನದಲ್ಲಿ ಹೇಳಿದರು.

ಪಿಟಿಐನ ನವದೆಹಲಿಯ ಸ್ಟುಡಿಯೋದಲ್ಲಿ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ ವರ್ಮಾ, ಕೆನಡಾದಲ್ಲಿ ಖಲಿಸ್ತಾನಿ ಚಳವಳಿಯ ಉಗಮ, ಚುನಾವಣಾ ಲಾಭಕ್ಕಾಗಿ ಸ್ಥಳೀಯ ರಾಜಕಾರಣಿಗಳಿಂದ ಅದು ಪಡೆಯುತ್ತಿರುವ ಬೆಂಬಲ ಮತ್ತು ಖಲಿಸ್ತಾನಿಗಳು ತಮ್ಮ ಸಂಖ್ಯೆಯನ್ನು ಹೆಚ್ಚಿಸಲು ನಡೆಸುವ ಅಪರಾಧ ಚಟುವಟಿಕೆಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.

"ಹೆಚ್ಚು ಅಳುವ ಮಗುವಿಗೇ ತಾಯಿ ಮೊದಲಿಗೆ ಆಹಾರ ನೀಡುತ್ತಾಳೆ. ಹಾಗೆಯೇ ಖಲಿಸ್ತಾನಿಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದರೂ, ಅವರು ಹೆಚ್ಚು ಸದ್ದು ಮಾಡುತ್ತಾರೆ ಮತ್ತು ಆ ಮೂಲಕ ಕೆನಡಾದ ರಾಜಕಾರಣಿಗಳಿಂದ ಹೆಚ್ಚಿನ ಬೆಂಬಲ ಪಡೆಯುತ್ತಾರೆ" ಎಂದು ಅವರು ಹೇಳಿದರು.

ಉಗ್ರ ಖಲಿಸ್ತಾನಿಗಳು ಕೇವಲ 10,000ರಷ್ಟಿರಬಹುದು. ಒಟ್ಟು ಸುಮಾರು 8 ಲಕ್ಷ ಸಿಖ್ ಜನಸಂಖ್ಯೆಯಲ್ಲಿ ಬಹುಶಃ 1 ಲಕ್ಷದಷ್ಟು ಜನ ಅವರನ್ನು ಬೆಂಬಲಿಸುತ್ತಿರಬಹುದು ಎಂದು ವರ್ಮಾ ತಿಳಿಸಿದರು.

"ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಅವರು ಅಲ್ಲಿನ ಸಾಮಾನ್ಯ ಸಿಖ್ಖರನ್ನು ಬೆದರಿಸುತ್ತಾರೆ. 'ನಿಮ್ಮ ಮಗಳು ಎಲ್ಲಿ ಓದುತ್ತಿದ್ದಾಳೆಂಬುದು ನಮಗೆ ತಿಳಿದಿದೆ' ಎಂಬಂಥ ಬೆದರಿಕೆಗಳನ್ನು ಹಾಕುತ್ತಾರೆ" ಎಂದು ವರ್ಮಾ ಹೇಳಿದರು.

"ಖಲಿಸ್ತಾನಿಗಳು ಖಲಿಸ್ತಾನ ವಿಷಯವನ್ನು ಕೆನಡಾದಲ್ಲಿ ವ್ಯವಹಾರವನ್ನಾಗಿ ಮಾಡಿಕೊಂಡಿದ್ದಾರೆ. ಖಲಿಸ್ತಾನದ ಹೆಸರಿನಲ್ಲಿ ಅವರು ಮಾನವ ಕಳ್ಳಸಾಗಣೆ, ಮಾದಕವಸ್ತು ಕಳ್ಳಸಾಗಣೆ, ಬಂದೂಕು ಖರೀದಿ ಮತ್ತು ಇನ್ನೂ ಏನೇನೋ ಮಾಡುತ್ತಾರೆ. ಅವರು ಅದರ ಮೂಲಕ ಮತ್ತು ಗುರುದ್ವಾರಗಳ ಮೂಲಕ ಸಾಕಷ್ಟು ಹಣ ಗಳಿಸುತ್ತಾರೆ. ಆ ಹಣದ ಒಂದು ಭಾಗವನ್ನು ತಮ್ಮ ದುಷ್ಕೃತ್ಯಗಳಿಗೆ ಬಳಸುತ್ತಾರೆ" ಎಂದು ಅವರು ಹೇಳಿದರು.

ಇದನ್ನೂ ಓದಿ: ಸೈಬರ್ ವಂಚನೆಯಿಂದ 2.8 ಕೋಟಿ ಲೂಟಿ: ಪೊಲೀಸರ ಸಹಾಯದಿಂದ 53 ಲಕ್ಷ ರೂ. ಮರಳಿ ಪಡೆದ ವ್ಯಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.