ETV Bharat / bharat

ಸಿಎಎ ಜಾರಿ: ಕೇಂದ್ರದ ನಿರ್ಧಾರಕ್ಕೆ ಪರ- ವಿರೋಧ; ಹೀಗಿದೆ ರಾಜಕೀಯ ನಾಯಕರ ಪ್ರತಿಕ್ರಿಯೆ - CAA implementation by Modi govt

ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸೋಮವಾರ ಸಂಜೆ ಜಾರಿಗೆ ತಂದಿದ್ದು, ಈ ಕುರಿತು ವ್ಯಕ್ತವಾದ ದೇಶದ ರಾಜಕೀಯ ನಾಯಕರ ಅಭಿಪ್ರಾಯ ಹೀಗಿದೆ.

caa-pm-modi-has-delivered-another-commitment-says-amit-shah-opposition-lashes-out-at-centre

author img

By ETV Bharat Karnataka Team

Published : Mar 12, 2024, 1:48 PM IST

ನವದೆಹಲಿ: 2019ರಲ್ಲಿ ಅಂಗೀಕರಿಸಲಾಗಿದ್ದ ಪೌರತ್ವ (ತಿದ್ದುಪಡಿ) ಕಾಯ್ದೆ, 2019 ಯನ್ನು ನರೇಂದ್ರ ಮೋದಿ ಸರ್ಕಾರವು ಸೋಮವಾರ ಜಾರಿಗೆ ತಂದಿದೆ. ಇದು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರು, ಕ್ರಿಶ್ಚಿಯನ್ನರು, ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು ಮತ್ತು ಪಾರ್ಸಿಗಳಿಗೆ ಭಾರತೀಯ ನಾಗರಿಕತ್ವವನ್ನು ನೀಡುವ ಕಾಯ್ದೆಯಾಗಿದೆ.

ಸಿಎಎ ಕುರಿತ ಪ್ರಮುಖ ಪ್ರತಿಕ್ರಿಯೆ:

ಗೃಹ ಸಚಿವ ಅಮಿತ್​ ಶಾ: ಮೋದಿ ಸರ್ಕಾರ ಪೌರತ್ವ (ತಿದ್ಧಪಡಿ) ನಿಯಮ, 2024ರ ಅಧಿಸೂಚನೆ ಹೊರಡಿಸಿದೆ. ಈ ಕಾನೂನು ನಮ್ಮ ದೇಶದ ಪೌರತ್ವ ಬಯಸುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಅಲ್ಪಸಂಖ್ಯಾತರಿಗೆ ಧಾರ್ಮಿಕತೆ ಆಧಾರದ ಮೇಲೆ ಅವಕಾಶವನ್ನು ನೀಡುತ್ತದೆ. ಈ ಕಾನೂನು ಮೂಲಕ ಪ್ರಧಾನಿ ಮೋದಿ ಮತ್ತೊಂದು ಬದ್ಧತೆಯನ್ನು ಪೂರ್ಣಗೊಳಿಸಿದ್ದಾರೆ. ಈ ಮೂರು ದೇಶಗಳಲ್ಲಿ ವಾಸಿಸುತ್ತಿರುವ ಹಿಂದೂ, ಸಿಖ್​, ಬೌದ್ಧರು, ಜೈನರು ಮತ್ತು ಕ್ರಿಶ್ಚಿಯನ್ನರಿಗೆ ನಮ್ಮ ಸಂವಿಧಾನ ರಚನಾಕಾರರ ಭರವಸೆಯನ್ನು ಸಾಕಾರಗೊಳಿಸಿದೆ ಎಂದರು.

ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಸಿವಿ ಆನಂದ್​ ಬೋಸ್​ ಪ್ರತಿಕ್ರಿಯಿಸಿ, ದೇಶದಲ್ಲಿನ ಉತ್ತಮ ಸರ್ಕಾರದ ಸಾಮಾನ್ಯ ಪ್ರಕ್ರಿಯೆ ಭಾಗವಾಗಿ ಇದನ್ನು ನಾನು ಕಾಣುತ್ತಿದ್ದೇನೆ ಎಂದರು.

ಮಧ್ಯ ಪ್ರದೇಶ ಸಿಎಂ ಮೋಹನ್​ ಯಾದವ್​​: ಮತ್ತೊಂದು ಐತಿಹಾಸಿಕ ನಿರ್ಧಾರ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಮತ್ತೊಂದು ಪ್ರಮುಖ ಹೆಜ್ಜೆಯನ್ನು ಇಡಲಾಗಿದ್ದು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದು ಮಾನವೀಯತೆ ಕಲ್ಯಾಣಕ್ಕೆ ಸಮರ್ಪಣೆಯಾಗಿದೆ. ಈ ಐತಿಹಾಸಿಕ ನಿರ್ಧಾರ ನಡೆಸಿದ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್​ ಶಾಗೆ ಶುಭಾಶಯ ಎಂದರು.

ರಾಜಸ್ಥಾನ ಸಿಎಂ ಭಜನ್​ಲಾಲ್​ ಶರ್ಮಾ: ಬಹುದಿನಗಳಿಂದ ಈ ಕಾನೂನು ಜಾರಿಗೆ ಬೇಡಿಕೆ ಇತ್ತು. ಆಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿರುವ ನನ್ನ ಸಹೋದರರಿಗೆ ಸಹಾಯ ಮಾಡುತ್ತಿರುವ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್​ ಶಾಗೆ ಧನ್ಯವಾದಗಳು. ಇದೀಗ ಅವರು ಭಾರತದ ಪೌರತ್ವ ಪಡೆಯುತ್ತಾರೆ.

ಛತ್ತೀಸ್​​ಗಢ​ ವಿಧಾನಸಭೆ ಸ್ಪೀಕರ್​, ಹಿರಿಯ ಬಿಜೆಪಿ ನಾಯಕ ರಮಣ್​ ಸಿಂಗ್​: ಸಿಎಎ ಜಾರಿ ಬಹುದಿನದ ಬೇಡಿಕೆ. ಈ ಸಂಬಂಧ ಪ್ರಧಾನಿ ಮೋದಿ ಮತ್ತು ಗೃಹ ಸಚಿವರಿಗೆ ಅಭಿನಂದನೆಗಳು. ಸಿಎಎ ಎಂಬುದು ಪೌರತ್ವ ನೀಡುವುದಾಗಿದೆ. ಕಸಿದುಕೊಳ್ಳುವುದಲ್ಲ.

ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್​: ಯಾಕೆ ಇಷ್ಟು ವಿಳಂಬ. ಈ ವಿಚಾರ ಕುರಿತು ಸರ್ಕಾರಕ್ಕೆ ನಿಷ್ಠೆ ಇದ್ದಿದ್ದರೆ, ನಾಲ್ಕು ವರ್ಷದ ಹಿಂದೆ ಆದೇಶಿಸಬಹುದಿತ್ತು. ಗಮನ ಸೆಳೆಯಲು ಚುನಾವಣೆಗೆ ಮುನ್ನ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ತಮಿಳುನಾಡು ಸಿಎಂ ಮತ್ತು ಡಿಎಂಕೆ ನಾಯಕ ಎಂಕೆ ಸ್ಟಾಲಿನ್​: ಪೌರತ್ವ ಕಾಯ್ದೆ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ವಿಭಜನೆಗೆ ಮುಂದಾಗಿದೆ. ಮಾನವೀಯತೆಯ ದಾರಿದೀಪದಿಂದ ಧರ್ಮ ಮತ್ತು ಜನಾಂಗದ ಆಧಾರದ ಮೇಲೆ ತಾರತಮ್ಯದ ಸಾಧನವಾಗಿ ಪರಿವರ್ತಿಸಿದೆ. ಇದು ಮುಸ್ಲಿಮರು ಮತ್ತು ಶ್ರೀಲಂಕಾದ ತಮಿಳರಿಗೆ ಮಾಡುತ್ತಿರುವ ದ್ರೋಹವಾಗಿದೆ.

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​: ಕಳೆದ 10 ವರ್ಷದಿಂದ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರ ಇದೀಗ ಚುನಾವಣೆ ಸಂದರ್ಭದಲ್ಲಿ ಸಿಎಎ ಜಾರಿಗೆ ತಂದಿದೆ. ಬಡ ಮತ್ತು ಮಧ್ಯಮ ಜನರು ಹಣದುಬ್ಬರ ಮತ್ತು ನಿರುದ್ಯೋಗದಲ್ಲಿದ್ದಾರೆ. ಇಂತಹ ನೈಜ ಸಮಸ್ಯೆಗಳನ್ನು ಪರಿಹರಿಸುವ ಬದಲಾಗಿ ಇವರು ಸಿಎಎ ಜಾರಿಗೆ ತಂದಿದ್ದಾರೆ ಎಂದು ಟೀಕಿಸಿದ್ದಾರೆ.

ಕೇರಳ ಸಿಎಂ ಪಿಣರಾಯಿ ವಿಜಯನ್​: ಸರ್ಕಾರವೂ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪದೇ ಪದೇ ಹೇಳಿಕೆ ನೀಡುತ್ತಿದೆ. ಇದು ಮುಸ್ಲಿಮ್​ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣುತ್ತಾರೆ. ಕೇರಳದಲ್ಲಿ ಜಾರಿಗೆ ಬಿಡುವುದಿಲ್ಲ. ಕೇರಳದ ಎಲ್ಲಾ ಜನರು ಒಟ್ಟಾಗಿ ಈ ಕೋಮು ವಿಭಜಕ ಕಾನೂನನ್ನು ವಿರೋಧಿಸುತ್ತೇವೆ.

ಎಐಎಂಐಎಂ ಮುಖ್ಯಸ್ಥ ಮತ್ತು ಸಂಸದ ಅಸಾದುದ್ದಿನ್​ ಓವೈಸಿ: ಇವರ ಸಮಯವನ್ನು ಅರಿಯಿರಿ. ಮೊದಲು ಚುನಾವಣೆ ವರ್ಷ ಬರುತ್ತದೆ. ಬಳಿಕ ಸಿಎಎ ಕಾನೂನೂ. ಸಿಎಎ ಕುರಿತು ನಮ್ಮ ಆಕ್ಷೇಪ ಹಾಗೇ ಮುಂದುವರೆಯಲಿದೆ. ಸಿಎಎ ವಿಭಜನೆ ಮತ್ತು ಗೋಡ್ಸೆ ಯೋಚನಾಧರಿತವಾಗಿದ್ದು, ಅವರು ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರಾಗಿ ಕಡಿಮೆ ಮಾಡುತ್ತಾರೆ. ಕಿರುಕುಳಕ್ಕೊಳಗಾದ ಯಾರಿಗಾದರೂ ಆಶ್ರಯ ನೀಡಿ, ಆದರೆ ಧರ್ಮ ಅಥವಾ ರಾಷ್ಟ್ರೀಯತೆ ಆಧಾರವಾಗಿ ಅಲ್ಲ. ಸರ್ಕಾರವೂ ಈ ಕಾಯ್ದೆ ಜಾರಿಗೆ ನಾಲ್ಕು ವರ್ಷ ಸಮಯ ತೆಗೆದುಕೊಂಡಿದ್ದು ಏಕೆ ಎಂಬುದನ್ನು ವಿವರಿಸಲಿ. ಎನ್​ಪಿಆರ್​-ಎನ್​ಆರ್​ಸಿ, ಸಿಎಎ ಮುಸ್ಲಿಮರನ್ನು ಗುರಿಯಾಗಿಸುತ್ತದೆ. ಇದು ಬೇರೆ ಉದ್ದೇಶವನ್ನು ಹೊಂದಿಲ್ಲ.

ಹಿರಿಯ ಕಾಂಗ್ರೆಸ್​ ನಾಯಕ ದಿಗ್ವಿಜಯ ಸಿಂಗ್​: ಯಾಕೆ ಇದು ಇಷ್ಟು ವಿಳಂಬ ಆಯಿತು. ವಿಳಂಬವಾದರೂ, ಚುನಾವಣೆ ಸಮಯದಲ್ಲಿ ಜಾರಿಗೆ ತಂದಿದ್ದೇಕೆ? ಬಿಜೆಪಿ ಏಕೈಕ ಗುರಿ ಎಂದರೆ ಹಿಂದೂ ಮುಸ್ಲಿರನ್ನು ಪ್ರತಿಯೊಂದು ವಿಷಯದಲ್ಲಿ ವಿಭಜನೆ ಮಾಡುವುದು. ಸಂವಿಧಾನವೂ ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ನೀಡುತ್ತದೆ. ಯಾವುದೇ ಕಾನೂನು ಧರ್ಮದ ಆಧಾರದ ಮೇಲೆ ಯಾರು ನಾಗರಿಕರಾಗಬಹುದು ಮತ್ತು ಯಾರು ಸಾಧ್ಯವಿಲ್ಲ ಎಂದು ನಿರ್ಧರಿಸಿದರೆ, ನನ್ನ ಅಭಿಪ್ರಾಯದಲ್ಲಿ ಅದು ಸಂವಿಧಾನಕ್ಕೆ ವಿರುದ್ಧವಾಗಿದೆ.

ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ್​​: ಸಿಎಎ ಮಾರ್ಗಸೂಚಿ ಮತ್ತು ಕಾನೂನನ್ನು ಗೆಜೆಡೆಟ್​ ಮಾಡಿ, ಪ್ರಕಟಿಸಲಾಗಿದೆ. ಸಂಪೂರ್ಣ ಮಾಹಿತಿಯನ್ನು ನೋಡದೇ ಈ ಬಗ್ಗೆ ಹೇಳಿಕೆ ನೀಡುವುದ ಸಾಧ್ಯವಿಲ್ಲ. 2019ರಲ್ಲಿ ಈ ಬಗ್ಗೆ ವಿರೋಧ ವ್ಯಕ್ತವಾಗಿತು. ಇದರ ಹೊರತಾಗಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದ್ದರೆ, ಇದನ್ನು ಪರಿಶೀಲಿಸಿ, ಗಮನಿಸಬೇಕಿದೆ.

ಸಿಪಿಐ (ಎಂ) ನಾಯಕ ಎಂಡಿ ಸಲಿಂ: ಇದನ್ನು ಜಾರಿಗೆ ತರಲು 5 ವರ್ಷ ಬೇಕಾಯಿತಾ, ಯಾಕೆ ಇಷ್ಟು ವಿಳಂಬ? ಜನರಿಗೆ ಉದ್ಯೋಗ ಮತ್ತು ಶಿಕ್ಷಣ ಬೇಕಿದೆ. ಬೆಲೆಗಳು ಏರುತ್ತಿದ್ದು, ಈ ವಿಷಯಗಳ ಕುರಿತು ಮಾತನಾಡುತ್ತಿಲ್ಲ. ಇದೀಗ ಚುನಾವಣೆಯ ಕೊನೆಯ ನಿಲ್ದಾಣದಂತೆ ಇದರ ಜಾರಿ ಮಾಡಿದೆ.

ಕರ್ನಾಟಕ ಸಚಿವ ಪ್ರಿಯಾಂಕ್​ ಖರ್ಗೆ: ಈ ವಿಚಾರ ಕುರಿತು ಕಳೆದೆರಡು ವರ್ಷದಿಂದ ವ್ಯಾಪಕ ಚರ್ಚೆಯಾಗುತ್ತಿದೆ. ಇದೀಗ ಚುನಾವಣೆ ಸಮಯದಲ್ಲಿ ಅವರು ಇದನ್ನು ತಂದಿದ್ದಾರೆ. ಅವರು ಅಭಿವೃದ್ಧಿಯಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ವಿಭಜತೆ ರಾಜಕೀಯ ಬೇಕು ಎಂಬುದನ್ನು ಇದು ಪುರಾವೆಯಾಗಿದೆ.

ಆಫ್ರಿಕನ್​- ಅಮೆರಿಕನ್​ ನಟಿ ಮತ್ತು ಗಾಯಕಿ ಮೇರಿ ಮಿಲ್ಬೆನ್​: ಶಾಂತಿಯ ಕಡೆಗಿನ ಹಾದಿ ಇದಾಗಿದೆ. ಪ್ರಜಾಪ್ರಭುತ್ವದ ನೈಜ ಕಾರ್ಯ ಇದಾಗಿದೆ ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಸಿಎಎ ಜಾರಿ ಪ್ರಜಾಪ್ರಭುತ್ವದ ಅದ್ಭುತ": ಅಮೆರಿಕದ ಗಾಯಕಿಯಿಂದ ಶ್ಲಾಘನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.