ETV Bharat / bharat

7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ: ಮುಂದುವರಿದ ಮತ ಎಣಿಕೆ - 7 States BY Election Result

author img

By ETV Bharat Karnataka Team

Published : Jul 13, 2024, 10:01 AM IST

Updated : Jul 13, 2024, 10:35 AM IST

ಹಿಮಾಚಲ ಪ್ರದೇಶದ ಮೂರು ಸೇರಿದಂತೆ 7 ರಾಜ್ಯಗಳ ಒಟ್ಟು 13 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಫಲಿತಾಂಶ ಇಂದು ಪ್ರಕಟವಾಗಲಿದೆ.

Himachal By election Result
ಹಿಮಾಚಲ ಪ್ರದೇಶದ ಉಪಚುನಾವಣೆಗಳ ಫಲಿತಾಂಶ ಇಂದು ಪ್ರಕಟ (ETV Bharat)

ನವದೆಹಲಿ/ ಶಿಮ್ಲಾ: ದೇಶದ ಏಳು ರಾಜ್ಯಗಳ 13 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಮತ ಎಣಿಕೆ ಕೇಂದ್ರಗಳಿಗೆ ವಿವಿಧ ಪಕ್ಷಗಳ ಏಜೆಂಟರು ಆಗಮಿಸಿದ್ದಾರೆ. ಮತ ಎಣಿಕೆಗೆ ಚುನಾವಣಾ ಆಯೋಗದಿಂದ ವ್ಯಾಪಕ ವ್ಯವಸ್ಥೆ ಮಾಡಲಾಗಿದೆ.

ಜುಲೈ 10 ರಂದು 7 ರಾಜ್ಯಗಳ 13 ವಿಧಾನಸಭಾ ಸ್ಥಾನಗಳಿಗೆ ಶಾಂತಿಯುತ ಉಪಚುನಾವಣೆಗಳು ನಡೆದಿದ್ದವು. ಪಂಜಾಬ್‌ನ ಒಂದು ವಿಧಾನಸಭಾ ಕ್ಷೇತ್ರ, ಉತ್ತರಾಖಂಡದ ಎರಡು, ಹಿಮಾಚಲ ಪ್ರದೇಶದ ಮೂರು, ಪಶ್ಚಿಮ ಬಂಗಾಳದ ನಾಲ್ಕು ಮತ್ತು ಬಿಹಾರ, ಮಧ್ಯಪ್ರದೇಶ ಮತ್ತು ತಮಿಳುನಾಡಿನ ತಲಾ ಒಂದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಈ ಎಲ್ಲಾ ಅಸೆಂಬ್ಲಿ ಕ್ಷೇತ್ರಗಳ ಒಟ್ಟು 121 ಅಭ್ಯರ್ಥಿಗಳು ಹಣೆಬರಹ ಕೆಲವೇ ಗಂಟೆಗಳಲ್ಲಿ ಹೊರ ಬೀಳಲಿದೆ. ಈ ಉಪಚುನಾವಣೆಯಲ್ಲಿ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಸೇರಿದಂತೆ ಅನೇಕ ನಾಯಕರು ಸೇರಿದಂತೆ ಅನೇಕ ನಾಯಕರ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಈ ಸ್ಥಾನಗಳ ಮತ ಎಣಿಕೆ: ಪಶ್ಚಿಮ ಬಂಗಾಳದ ರಾಯಗಂಜ್, ದಕ್ಷಿಣ ರಾಣಾಘಾಟ್, ಬಾಗ್ದಾ ಮತ್ತು ಮಾಣಿಕ್ತಾಲಾ ಕ್ಷೇತ್ರಗಳ ಉಪಚುನಾಚಣೆ ನಡೆದಿದ್ದು, ಮತಎಣಿಕೆ ನಡೆಯುತ್ತಿದೆ. ಉತ್ತರಾಖಂಡದ ಬದರಿನಾಥ್ ಮತ್ತು ಮಂಗಳೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಪಂಜಾಬ್‌ನ ಪಶ್ಚಿಮ ಜಲಂಧರ್ ಕ್ಷೇತ್ರಕ್ಕೆ ಉಪಚುನಾಚವಣೆ ನಡೆದಿದೆ. ಹಿಮಾಚಲ ಪ್ರದೇಶದ ದೆಹ್ರಾ, ಹಮೀರ್‌ಪುರ ಮತ್ತು ನಲಘಡ ಸ್ಥಾನಗಳಿಗೆ ಮತ ಚಲಾವಣೆ ಆಗಿದೆ. ಬಿಹಾರದ ರುಪೌಲಿ, ತಮಿಳುನಾಡಿನ ವಿಕ್ರವಂಡಿ ಮತ್ತು ಮಧ್ಯಪ್ರದೇಶದ ಅಮರವಾಡ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ಮತ ಎಣಿಕೆ ನಡೆಯುತ್ತಿದೆ.

ಹಿಮಾಚಲ ಪ್ರದೇಶದ ಮೂರು ಕ್ಷೇತ್ರಗಳ ವಿವರ:

  • ಹಮೀರ್‌ಪುರ ವಿಧಾನಸಭಾ ಕ್ಷೇತ್ರ: ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಷ್ಪೇಂದ್ರ ವರ್ಮಾ ಮತ್ತು ಬಿಜೆಪಿ ಅಭ್ಯರ್ಥಿ ಆಶಿಶ್ ಶರ್ಮಾ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಆಶಿಶ್ ಶರ್ಮಾ 2022ರಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಹಮೀರ್‌ಪುರ ಕ್ಷೇತ್ರವನ್ನು ಗೆಲ್ಲುವ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಪುಷ್ಪೇಂದ್ರ ವರ್ಮಾ ಅವರು 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು.
  • ದೆಹ್ರಾ ವಿಧಾನಸಭಾ ಕ್ಷೇತ್ರ: ಕಾಂಗ್ರಾ ಜಿಲ್ಲೆಯ ದೆಹ್ರಾ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಸುಖ್ವಿಂದರ್‌ ಸಿಂಗ್ ಸುಖು ಪತ್ನಿ ಕಮಲೇಶ್ ಠಾಕೂರ್ ಮತ್ತು ಬಿಜೆಪಿ ಅಭ್ಯರ್ಥಿ ಹೋಶಿಯಾರ್ ಸಿಂಗ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಹಲವು ವರ್ಷಗಳಿಂದ ಸೋಲು ಕಾಣುತ್ತಿರುವ ದೆಹ್ರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಈ ಬಾರಿ ಸಿಎಂ ಪತ್ನಿಯನ್ನು ಅಭ್ಯರ್ಥಿಯನ್ನಾಗಿ ಸ್ಪರ್ಧೆಗಿಳಿಸಿದೆ. ಮತ್ತೊಂದೆಡೆ, ಹೋಶಿಯಾರ್ ಸಿಂಗ್ 2022ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಇದೀಗ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸಿಎಂ ಪತ್ನಿ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 202ರ ವಿಧಾನಸಭಾ ಚುನಾವಣೆಯಲ್ಲಿ ಈ ಸ್ಥಾನಕ್ಕೆ ಡಾ. ರಾಜೇಶ್ ಶರ್ಮಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದರೂ, ಈ ಬಾರಿ ಹೈಕಮಾಂಡ್ ಅವರ ಬದಲು ಸಿಎಂ ಪತ್ನಿಗೆ ಅವಕಾಶ ನೀಡಿದೆ.
  • ನಲಘಡ ವಿಧಾನಸಭಾ ಕ್ಷೇತ್ರ: ಸೋಲನ್ ಜಿಲ್ಲೆಯ ನಲಘಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರ್ದೀಪ್ ಸಿಂಗ್ ಬವಾ ಮತ್ತು ಬಿಜೆಪಿ ಅಭ್ಯರ್ಥಿ ಕೆಎಲ್ ಠಾಕೂರ್ ನಡುವೆ ನೇರ ಹಣಾಹಣಿ ಇದೆ. ಕೆಎಲ್ ಠಾಕೂರ್ ಅವರು 2022ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೆತ್ರದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಗೆದ್ದಿದ್ದರು. ಕಾಂಗ್ರೆಸ್ ಹರ್ದೀಪ್ ಸಿಂಗ್ ಬವಾ ಮೇಲೆ ವಿಶ್ವಾಸವನ್ನಿಟ್ಟುಕೊಂಡಿದೆ. ಆದ್ರೆ ಹರ್ದೀಪ್ ಅವರು ಎರಡು ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿಸಿದ್ದು, ಇನ್ನೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಉತ್ತರ ಪ್ರದೇಶ ಭೀಕರ ಪ್ರವಾಹ: 8 ಜಿಲ್ಲೆಗಳಲ್ಲಿ ಆವರಿಸಿದ ನೆರೆ, 700ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆ, 11 ಜನ ಸಾವು - Uttar Pradesh severe floods

ಹಿಮಾಚಲ ಪ್ರದೇಶದಲ್ಲಿ ಫೆಬ್ರವರಿ 27ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತ ಚಲಾಯಿಸಿದ ಮೂವರು ಪಕ್ಷೇತರ ಶಾಸಕರಾದ ಹೋಶಿಯಾರ್ ಸಿಂಗ್ (ದೆಹ್ರಾ), ಆಶಿಶ್ ಶರ್ಮಾ (ಹಮೀರ್‌ಪುರ್) ಮತ್ತು ಕೆಎಲ್ ಠಾಕೂರ್ (ನಲಘಡ್) ತಮ್ಮ ಸ್ಥಾನಕ್ಕೆ ಮಾರ್ಚ್​ 22ರಂದು ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಈ ಕ್ಷೇತ್ರಗಳು ತೆರವುಗೊಂಡಿದ್ದವು. ಈ ಹಿನ್ನೆಲೆ, ಉಪಚುನಾವಣೆ ಜರುಗಿದೆ.

Last Updated : Jul 13, 2024, 10:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.