ETV Bharat / bharat

ಕೈಕೋಳ ತೊಟ್ಟು ವಿಧಾನಸಭೆಗೆ ಬಂದ ಬಿಆರ್​ಎಸ್ ಶಾಸಕರು.. ಯಾಕೆ ಗೊತ್ತಾ? - BRS MLAS PROTEST

ಕೈಕೋಳ ತೊಟ್ಟು ವಿಧಾನಸಭೆಗೆ ಆಗಮಿಸಿ ಬಿಆರ್​​ಎಸ್ ಶಾಸಕರು ಪ್ರತಿಭಟನೆ ನಡೆಸಿದರು.

ಕೈಕೋಳ ತೊಟ್ಟು ವಿಧಾನಸಭೆಗೆ ಬಂದ ಬಿಆರ್​ಎಸ್ ಶಾಸಕರು
ಕೈಕೋಳ ತೊಟ್ಟು ವಿಧಾನಸಭೆಗೆ ಬಂದ ಬಿಆರ್​ಎಸ್ ಶಾಸಕರು (IANS)
author img

By ETV Bharat Karnataka Team

Published : 3 hours ago

ಹೈದರಾಬಾದ್: ಲಗಚೆರ್ಲಾ ಘಟನೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಲು ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್​​​ ) ಶಾಸಕರು ಮಂಗಳವಾರ ತೆಲಂಗಾಣ ವಿಧಾನಸಭೆಗೆ ಕಪ್ಪು ಶರ್ಟ್ ಮತ್ತು ಕೈಕೋಳ ಧರಿಸಿ ಆಗಮಿಸಿದರು. ಸಂಗಾರೆಡ್ಡಿ ಜೈಲಿನಿಂದ ರೈತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಆತನಿಗೆ ಕೈಕೋಳ ತೊಡಿಸಿದ್ದನ್ನು ವಿರೋಧಿಸಿ ಬಿಆರ್​ಎಸ್ ಶಾಸಕರು ಸತತ ಎರಡನೇ ದಿನವೂ ಪ್ರತಿಭಟನೆ ನಡೆಸಿದರು.

ಕೈಕೋಳ ಮತ್ತು ಕಪ್ಪು ಶರ್ಟ್ ಧರಿಸಿದ ಬಿಆರ್​ಎಸ್ ಶಾಸಕರು 'ರೈತರಿಗೆ ಕೈಕೋಳ ತೊಡಿಸಿದ ಸರ್ಕಾರಕ್ಕೆ ನಾಚಿಕೆಯಾಗಬೇಕು.. ಶೇಮ್ ಶೇಮ್' ಎಂಬ ಘೋಷಣೆಗಳನ್ನು ಕೂಗುತ್ತಾ ಬಿಆರ್​ಎಸ್ ಶಾಸಕರು ವಿಧಾನಸಭೆಗೆ ಪ್ರವೇಶಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್, ಹಿರಿಯ ಮುಖಂಡ ಟಿ. ಹರೀಶ್ ರಾವ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಬಂಧಿತ ಎಲ್ಲ ರೈತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮುಖಂಡರು ಒತ್ತಾಯಿಸಿದರು.

ರೈತರಿಗೆ ನ್ಯಾಯ ಒದಗಿಸುವಂತೆ ಘೋಷಣೆ: ಅಲ್ಲದೇ ಬಿಆರ್​ಎಸ್ ಎಂಎಲ್​​ಸಿಗಳು ಕೂಡ ಕಪ್ಪು ಶರ್ಟ್ ಧರಿಸಿಯೇ ವಿಧಾನ ಪರಿಷತ್ ಕಲಾಪಗಳಿಗೆ ಹಾಜರಾದರು. ಕವಿತಾ ನೇತೃತ್ವದಲ್ಲಿ ವಿಧಾನ ಪರಿಷತ್ ತಲುಪಿದ ಎಂಎಲ್​ಸಿಗಳು ಘೋಷಣೆಗಳನ್ನು ಕೂಗುತ್ತಾ ರೈತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. ರೈತರನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಅವರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.

ಲಗಚೆರ್ಲಾ ಘಟನೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ರೈತರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಬಿಆರ್​ಎಸ್ ಸೋಮವಾರ ಕೂಡ ಪ್ರತಿಭಟನೆ ನಡೆಸಿತ್ತು. ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಬೇಕೆಂದು ವಿರೋಧ ಪಕ್ಷವು ಒತ್ತಾಯಿಸುತ್ತಿದೆ.

ಡಿಸೆಂಬರ್ 12 ರಂದು ಎದೆನೋವು ಕಾಣಿಸಿಕೊಂಡ ನಂತರ ಸಂಗಾರೆಡ್ಡಿ ಜೈಲಿನಲ್ಲಿದ್ದ ರೈತ ಹಿರ್ಯಾ ನಾಯಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಅವರಿಗೆ ಕೈಕೋಳ ತೊಡಿಸಲಾಗಿತ್ತು. ಕಳೆದ ತಿಂಗಳು ವಿಕಾರಾಬಾದ್ ಜಿಲ್ಲೆಯ ಲಗಚೆರ್ಲಾ ಗ್ರಾಮದಲ್ಲಿ ಫಾರ್ಮಾ ಕ್ಲಸ್ಟರ್ ಗಾಗಿ ಭೂಸ್ವಾಧೀನ ಕುರಿತು ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಡಕಟ್ಟು ರೈತ ಹಿರ್ಯಾ ನಾಯಕ್ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ : ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್: ನಾಳೆಯಿಂದ 'ಮಾರ್ಚ್ 2025'ರ ದರ್ಶನ ಟಿಕೆಟ್ ರಿಲೀಸ್​ - TIRUMALA MARCH 2025 QUOTA TICKETS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.