ಜೆಹಾನಾಬಾದ್, ಬಿಹಾರ: ಜಿಲ್ಲೆಯಲ್ಲಿ ಪ್ರೀತಿಯ ಜೋಡಿಯೊಂದು ಅಣ್ಣ-ತಂಗಿ ಸಂಬಂಧಕ್ಕೆ ಕಳಂಕ ತಂದಿದೆ. ಈ ದಂಪತಿ ಸಂಬಂಧದಲ್ಲಿ ಸಹೋದರ-ಸಹೋದರಿಯಾಗಿದ್ದು, ಹಿಮಾಚಲ ಪೊಲೀಸರು ಇಬ್ಬರನ್ನೂ ಹುಡುಕುತ್ತಾ ಜೆಹಾನಾಬಾದ್‌ಗೆ ತಲುಪಿದ್ದರು. ಗುರುವಾರ ರಾತ್ರಿ ಆದರ್ಶ ನಗರ ಪ್ರದೇಶದಿಂದ ಇಬ್ಬರನ್ನೂ ಬಂಧಿಸಿದಾಗ ಈ ರಹಸ್ಯ ಬೆಳಕಿಗೆ ಬಂದಿದೆ. ಇದೇ ಗ್ರಾಮದಲ್ಲಿ ವಾಸವಾಗಿರುವ ಈ ಪ್ರೀತಿಯ ಜೋಡಿ 20 ದಿನಗಳ ಹಿಂದೆಯಷ್ಟೇ ಹಿಮಾಚಲದ ಬಾಘಿಯಿಂದ ಓಡಿ ಹೋಗಿದ್ದರು.
ಮಾಹಿತಿ ಪ್ರಕಾರ ಗಯಾ ಜಿಲ್ಲೆಯ ಬಹನ್‌ಪುರ ಗ್ರಾಮದ ಧನಂಜಯ್ ಕುಮಾರ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಎರಡೂವರೆ ತಿಂಗಳ ಹಿಂದೆ ತಮ್ಮ ಗ್ರಾಮಕ್ಕೆ ಬಂದಿದ್ದ ಅವರು, ಈ ವೇಳೆ ತಮ್ಮ ಸಂಬಂಧಿಯ ಹುಡುಗಿಯನ್ನು ಭೇಟಿಯಾಗಿದ್ದರು. ಇನ್ನು ಆ ಹುಡುಗಿ ಹಿಮಾಚಲ ಪ್ರದೇಶದ ಬಾಘಿಯಲ್ಲಿ ವಾಸಿಸುತ್ತಿದ್ದರು. ಬಳಿಕ ಅವರಿಬ್ಬರ ಭೇಟಿ ಮುಂದುವರಿಯಿತು. ಇಬ್ಬರೂ ಪರಸ್ಪರ ಫೋನ್ ನಂಬರ್ ಹಂಚಿಕೊಂಡರು. ನಂತರ ಇಬ್ಬರೂ ನಿಯಮಿತವಾಗಿ ಮಾತನಾಡಲು ಪ್ರಾರಂಭಿಸಿದರು. ಸಂಭಾಷಣೆ ಶೀಘ್ರದಲ್ಲೇ ಸ್ನೇಹಕ್ಕೆ ತಿರುಗಿತು. ಸ್ನೇಹ ಯಾವಾಗ ಪ್ರೀತಿಗೆ ತಿರುಗಿತು ಎಂಬುದು ಇಬ್ಬರಿಗೂ ತಿಳಿದಿರಲಿಲ್ಲ. ಇಬ್ಬರೂ ಮನೆಯಿಂದ ಓಡಿಹೋಗಿ ಮದುವೆಯಾಗಲು ನಿರ್ಧರಿಸಿದರು.
ದೇವಸ್ಥಾನದಲ್ಲಿ ಮದುವೆ: ಫೆಬ್ರವರಿ 1 ರಂದು, ಹುಡುಗಿ ಹಿಮಾಚಲ ಪ್ರದೇಶದ ತನ್ನ ಮನೆಯಿಂದ ಯುವಕನೊಂದಿಗೆ ಓಡಿಹೋಗಿದ್ದಳು. ಇಬ್ಬರೂ ಬಿಹಾರದ ಜೆಹಾನಾಬಾದ್ ತಲುಪಿ ಬಾಡಿಗೆ ಮನೆಯಲ್ಲಿ ಗಂಡ ಹೆಂಡತಿಯಂತೆ ಬಾಳತೊಡಗಿದರು. ನಗರದ ಗೌರಕ್ಷಿಣಿಯಲ್ಲಿರುವ ಮಾತಾ ಮುಂಡೇಶ್ವರಿ ದೇವಸ್ಥಾನದಲ್ಲಿ ಫೆಬ್ರವರಿ 20 ರಂದು ವಿವಾಹವಾಗಿರುವುದಾಗಿ ಯುವಕ ಹೇಳಿದಾಗ ಪೊಲೀಸರಿಗೆ ಆಶ್ಚರ್ಯವಾಯಿತು. ಇತ್ತ ಹುಡುಗಿ ತನ್ನ ಮನೆಯಿಂದ ಓಡಿ ಹೋಗಿದ್ದರಿಂದ ಆಕೆಯ ಕುಟುಂಬಸ್ಥರು ಆತಂಕಕೊಳಗಾಗಿದ್ದರು.
ಮಗಳು ಕಾಣೆಯಾಗಿರುವ ಬಗ್ಗೆ ಆಕೆಯ ಪೋಷಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಿಮಾಚಲ ಪ್ರದೇಶದ ಬಾಘಿ ಪ್ರದೇಶದಿಂದ ಬಂದಿದ್ದ ಪೊಲೀಸ್ ಅಧಿಕಾರಿ ರತನ್‌ಲಾಲ್, ಈ ಬಗ್ಗೆ ತನಿಖೆ ನಡೆಸಿದಾಗ ಬಿಹಾರದ ಜೆಹಾನಾಬಾದ್‌ನಲ್ಲಿ ಇಬ್ಬರ ಮೊಬೈಲ್ ಸ್ಥಳವನ್ನು ಪತ್ತೆ ಮಾಡಿದ್ದರು. ಹಿಮಾಚಲ ಪ್ರದೇಶ ಪೊಲೀಸರು ತಕ್ಷಣ ಜೆಹಾನಾಬಾದ್‌ಗೆ ತಲುಪಿ ಆದರ್ಶ ನಗರ ಪ್ರದೇಶದ ಮನೆಯಿಂದ ಹುಡುಗ ಮತ್ತು ಹುಡುಗಿಯನ್ನು ತಮ್ಮ ವಶಕ್ಕೆ ಪಡೆದುಕೊಂಡರು.
"ಹುಡುಗಿ ತಪ್ಪಿಸಿಕೊಳ್ಳಲು ಯುವಕನ ಸೋದರಮಾವ ಸಹಾಯ ಮಾಡಿದ್ದಾರೆ ಎಂದು ಯುವತಿಯ ತಾಯಿ ಆರೋಪಿಸಿದ್ದಾರೆ. ಹುಡುಗ ಮತ್ತು ಹುಡುಗಿಯನ್ನು ವಶಪಡಿಸಿಕೊಳ್ಳಲಾಗಿದೆ, ಅವರನ್ನು ಕರೆದುಕೊಂಡು ಹೋಗಲಾಗುತ್ತಿದೆ, ಕಾನೂನು ಪ್ರಕ್ರಿಯೆಯಂತೆ ಕ್ರಮ ಕೈಗೊಳ್ಳಲಾಗುವುದು" ಎಂದು ಬಾಘಿ ಮಹಿಳಾ ಪೊಲೀಸ್ ಠಾಣೆಯ ಎಎಸ್ಐ ರತನ್ ಲಾಲ್ ತಿಳಿಸಿದ್ದಾರೆ.
ಓದಿ: ರಣ ಭೀಕರ ದುರಂತ: ಗಂಗಾ ಸ್ನಾನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ, 7 ಮಕ್ಕಳು ಸೇರಿ 15 ಜನರ ಸಾವು