ಪುಣೆ(ಮಹಾರಾಷ್ಟ್ರ): ಕ್ರಿಕೆಟ್ ಆಡುತ್ತಿದ್ದಾಗ ಜನನಾಂಗಕ್ಕೆ ಚೆಂಡು ಬಡಿದು ಬಾಲಕ ಸಾವನ್ನಪ್ಪಿರುವ ಘಟನೆ ಪುಣೆಯ ಲೋಹ್‌ಗಾಂವ್‌ನಲ್ಲಿ ಕಳೆದ ಗುರುವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶಂಭು ಮೃತಪಟ್ಟ ಬಾಲಕ. ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣ ಸಂಜೆಯ ವೇಳೆ ಶಂಭು ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ. ಈ ಸಂದರ್ಭದಲ್ಲಿ ಚೆಂಡು ತೊಡೆಸಂದಿಗೆ ಬಡಿದಿತ್ತು.
ಘಟನೆಯ ನಂತರ ಬಾಲಕ ಕುಸಿದು ಬಿದ್ದಿದ್ದಾನೆ. ಸ್ಥಳೀಯರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನನ್ನು ಪರೀಕ್ಷಿಸಿದ ವೈದ್ಯರು ಆತ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಪುಣೆ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.
ಆಟದ ವೇಳೆ ಎಚ್ಚರಿಕೆ ಇರಲಿ: ಪ್ರಸ್ತುತ ಮೊಬೈಲ್ ಫೋನ್ ಯುಗದಲ್ಲಿ ಹೊರಾಂಗಣ ಆಟಗಳತ್ತ ಮಕ್ಕಳ ಗಮನ ಕಡಿಮೆಯಾಗಿದೆ. ಹೀಗಿದ್ದರೂ ಕೆಲವು ಹೊರಾಂಗಣ ಆಟಗಳನ್ನು ಮಕ್ಕಳು ಹೆಚ್ಚು ಆನಂದಿಸುತ್ತಾರೆ. ಆದರೆ, ಇಂಥ ಆಟಗಳನ್ನು ಆಡುವಾಗ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸಬೇಕು. ಕ್ರಿಕೆಟ್ ಆಡುವಾಗ ಪ್ಯಾಡ್, ಗ್ಲೌಸ್, ಹೆಲ್ಮೆಟ್ ಮುಂತಾದ ಸುರಕ್ಷತಾ ವಸ್ತುಗಳನ್ನು ಬಳಸಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಅಕ್ಕನ ಮದುವೆಗೆ ನೀರು ತರಲು ಹೋಗಿ ಟ್ರ್ಯಾಕ್ಟರ್ ಮಗುಚಿ ಬಿದ್ದು ಐವರು ಮಕ್ಕಳ ದುರ್ಮರಣ - FIVE CHILDRENS DIE