ETV Bharat / bharat

ಶಿಂಧೆ ಇಲ್ಲದೆಯೂ ಸರ್ಕಾರ ರಚಿಸಲು ಬಿಜೆಪಿ ಸಿದ್ಧವಿತ್ತು: ಬಿಜೆಪಿ ವಿರುದ್ಧ ಸಂಜಯ್ ರಾವತ್ ವಾಗ್ದಾಳಿ - MAHARASHTRA POLITICS

ಏಕನಾಥ್ ಶಿಂಧೆ ಇಲ್ಲದೆಯೂ ಸರ್ಕಾರ ರಚಿಸಲು ಬಿಜೆಪಿ ಮುಂದಾಗಿತ್ತು ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಸಂಜಯ್ ರಾವತ್
ಸಂಜಯ್ ರಾವತ್ (IANS)
author img

By PTI

Published : Dec 6, 2024, 1:36 PM IST

ಮುಂಬೈ: ಏಕನಾಥ್ ಶಿಂಧೆ ತಮ್ಮ ಹಟಮಾರಿ ಧೋರಣೆಯನ್ನು ಮುಂದುವರಿಸಿದ್ದೇ ಆದಲ್ಲಿ ಅವರನ್ನು ಹೊರಗಿಟ್ಟು ಪ್ರಮಾಣ ವಚನ ಸಮಾರಂಭ ನಡೆಸಲು ಬಿಜೆಪಿ ನಿರ್ಧರಿಸಿದ್ದರಿಂದಲೇ ಶಿಂಧೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಒಪ್ಪಿಕೊಂಡರು ಎಂದು ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವತ್ ಶುಕ್ರವಾರ ಹೇಳಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಮಹಾಯುತಿ ಭರ್ಜರಿ ಬಹುಮತ ಪಡೆದಿದ್ದರೂ ಈವರೆಗೂ ಪೂರ್ಣ ಪ್ರಮಾಣದ ಕ್ಯಾಬಿನೆಟ್ ರಚಿಸಲು ಸಾಧ್ಯವಾಗದಿರುವುದು ಮೈತ್ರಿಯೊಳಗೆ ಎಲ್ಲವೂ ಸರಿಯಾಗಿಲ್ಲ ಎಂಬುದರ ಸೂಚನೆಯಾಗಿದೆ ಎಂದು ಹೇಳಿದರು. ದೊಡ್ಡ ಜನಾದೇಶವನ್ನು ಹೊಂದಿದ್ದರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ 15 ದಿನಗಳು ಬೇಕಾಯಿತು ಎಂದು ಅವರು ವಾಗ್ದಾಳಿ ನಡೆಸಿದರು.

ಹಠಮಾರಿ ಧೋರಣೆ ಮುಂದುವರಿಸಿದರೆ ಹೀಗಿತ್ತು ವರಿಷ್ಠರ ಸೂಚನೆ: "ಏಕನಾಥ್ ಶಿಂಧೆ ಇಲ್ಲದೆಯೂ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ಬಿಜೆಪಿ ಯೋಜಿಸಿತ್ತು. ಹೀಗಾಗಿ ಏಕನಾಥ್ ಶಿಂಧೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲೇಬೇಕಾಯಿತು. ಬಿಜೆಪಿ ಮೇಲೆ ಒತ್ತಡ ಹೇರುವ ಹಠಮಾರಿ ಧೋರಣೆಯನ್ನು ಅವರು ಮುಂದುವರಿಸಿದ್ದರೆ, ಅವರಿಲ್ಲದೇ ಸರ್ಕಾರ ರಚಿಸುವಂತೆ ಪಕ್ಷದ ವರಿಷ್ಠರು (ರಾಜ್ಯ ನಾಯಕತ್ವಕ್ಕೆ) ತಿಳಿಸಿದ್ದರು" ಎಂದು ರಾವತ್ ಪ್ರತಿಪಾದಿಸಿದರು.

ಮುಂಬೈನ ಆಜಾದ್ ಮೈದಾನದಲ್ಲಿ ಗುರುವಾರ ಸಂಜೆ ನಡೆದ ಭವ್ಯ ಸಮಾರಂಭದಲ್ಲಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಮೂರನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಾಜಿ ಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಮತ್ತು ಎನ್​ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.

ಪಕ್ಷದ ಶಾಸಕರ ಒತ್ತಾಯದಿಂದ ಡಿಸಿಎಂ ಪಟ್ಟ ಒಪ್ಪಿಕೊಂಡ ಶಿಂಧೆ: ಶಿಂಧೆ ಮತ್ತೊಮ್ಮೆ ಉಪಮುಖ್ಯಮಂತ್ರಿಯಾಗಲು ಸಿದ್ಧರಿರಲಿಲ್ಲ, ಆದರೆ ಬಿಜೆಪಿ ಮತ್ತು ಅವರ ಪಕ್ಷದ ಶಾಸಕರ ಒತ್ತಾಯದ ನಂತರ ಉಪಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಿಕೊಂಡರು ಎಂದು ಮೂಲಗಳು ಹೇಳಿವೆ. ಹೊಸ ಸರ್ಕಾರದಲ್ಲಿ ಭಾಗವಾಗುವ ಬಗ್ಗೆ ಅವರು ತುಂಬಾ ದಿನಗಳವರೆಗೆ ಮೌನಿಯಾಗಿರುವುದು ಈ ವಾದಕ್ಕೆ ಪುಷ್ಟಿ ನೀಡಿತ್ತು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಶಿವಸೇನೆ ಶಾಸಕರೊಬ್ಬರು ಶಿಂಧೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ದೃಢಪಡಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ: ಕೇಂದ್ರ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ರಾಜ್ಯದಲ್ಲಿ ಸೇಡಿನ ರಾಜಕೀಯದಲ್ಲಿ ತೊಡಗಿದೆ ಎಂದು ರಾವತ್ ಆರೋಪಿಸಿದರು. ಶಿಂಧೆ ವಿರುದ್ಧ ಪರೋಕ್ಷ ದಾಳಿ ನಡೆಸಿದ ರಾವತ್, ಪ್ರಮಾಣವಚನ ಸಮಾರಂಭದಲ್ಲಿ ಕೆಲವರು ಖುಷಿಯಾಗಿರಲಿಲ್ಲ ಎಂದರು. "2019 ರಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಇವೇ ಮುಖಗಳು ಸಪ್ಪೆಯಾಗಿದ್ದವು" ಎಂದು ಅವರು ಹೇಳಿದರು.

ಇದನ್ನೂ ಓದಿ : ಅಂಬೇಡ್ಕರ್ ಪ್ರತಿಮೆಗೆ 'ಮಹಾ' ಡಿಸಿಎಂ ಏಕ​ನಾಥ್​ ಶಿಂಧೆ ಮಾಲಾರ್ಪಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.