ETV Bharat / bharat

ಕೈಸರ್‌ಗಂಜ್‌ನಲ್ಲಿ ಬ್ರಿಜ್​ಭೂಷಣ್​ ಸಿಂಗ್ ಪುತ್ರ, ರಾಯ್‌ಬರೇಲಿಯಲ್ಲಿ ದಿನೇಶ್ ಪ್ರತಾಪ್‌ ಸಿಂಗ್‌ಗೆ ಬಿಜೆಪಿ ಟಿಕೆಟ್ - Lok Sabha Election - LOK SABHA ELECTION

ಕುಸ್ತಿ ಕ್ಷೇತ್ರದಲ್ಲಿ ವಿವಾದಕ್ಕೀಡಾಗಿದ್ದ ಬಿಜೆಪಿ ಸಂಸದ ಬ್ರಿಜ್​ ಭೂಷಣ್​ ಸಿಂಗ್ ಅವ​ರಿಗೆ ಟಿಕೆಟ್​ ನಿರಾಕರಿಸಲಾಗಿದೆ. ಇನ್ನೊಂದೆಡೆ, ರಾಯ್​ಬರೇಲಿಯಲ್ಲಿ ಸೋನಿಯಾ ವಿರುದ್ಧ ಸೋತಿದ್ದ ದಿನೇಶ್ ಪ್ರತಾಪ್ ಸಿಂಗ್​​ರನ್ನು ಮತ್ತೆ ಕಣಕ್ಕಿಳಿಸಲಾಗಿದೆ.

Lok Sabha polls
Lok Sabha polls (Etv Bharat)
author img

By ANI

Published : May 2, 2024, 9:42 PM IST

Updated : May 2, 2024, 11:05 PM IST

ಕೈಸರ್‌ಗಂಜ್(ಉತ್ತರ ಪ್ರದೇಶ): ಲೈಂಗಿಕ ಕಿರುಕುಳ ಆರೋಪ ಮತ್ತು ತಾರಾ ಕುಸ್ತಿಪಟುಗಳಿಂದ ಭಾರೀ ಪ್ರತಿಭಟನೆ ಎದುರಿಸಿದ್ದ ಭಾರತೀಯ ಕುಸ್ತಿ ಸಂಸ್ಥೆಯ (ಡಬ್ಲ್ಯುಎಫ್‌ಐ) ಮುಖ್ಯಸ್ಥ, ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್​ ನಿರಾಕರಿಸಿದೆ. ಬದಲಿಗೆ ಅವರ ಪುತ್ರ ಕರಣ್ ಭೂಷಣ್ ಸಿಂಗ್​ ಅವರಿಗೆ ಮಣೆ ಹಾಕಿದೆ.

ಉತ್ತರ ಪ್ರದೇಶದ 80 ಲೋಕಸಭೆ ಕ್ಷೇತ್ರಗಳ ಪೈಕಿ ಕೈಸರ್​ಗಂಜ್​ ಮತ್ತು ರಾಯ್​ಬರೇಲಿಯಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿರಲಿಲ್ಲ. ಕೈಸರ್​ಗಂಜ್​ನ ಹಾಲಿ ಸಂಸದ ಬ್ರಿಜ್​ಭೂಷಣ್ ವಿರುದ್ಧ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್​ ತಡೆಯಲಾಗಿತ್ತು.

ಬ್ರಿಜ್​ಭೂಷಣ್​ಗೆ ಮತ್ತೆ ಟಿಕೆಟ್​ ನೀಡಿದಲ್ಲಿ ಪಕ್ಷಕ್ಕೆ ಮುಜುಗರ ಉಂಟಾಗುವ ಸಾಧ್ಯತೆ ಕಾರಣ, ಅವರ ಬದಲಿಗೆ ಪುತ್ರನಿಗೆ ಟಿಕೆಟ್​ ಪ್ರಕಟಿಸಲಾಗಿದೆ. ಈ ಮೂಲಕ ಎಲ್ಲ ಊಹಾಪೋಹಗಳಿಗೆ ಕಮಲ ಪಕ್ಷ ತೆರೆ ಎಳೆದಿದೆ. ಬ್ರಿಜ್ ಭೂಷಣ್ ಸಿಂಗ್ ಅವರು ಈ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದಾರೆ.

ಟಿಕೆಟ್​ ನಿರಾಕರಣೆಗೆ ಕಾರಣವಿದು: ಬ್ರಿಜ್ ಭೂಷಣ್ ಸಿಂಗ್​ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳ ನಿಡಿದ ಆರೋಪ ಹೊರಿಸಿದ್ದರು. ಅವರ ವಿರುದ್ಧ ತಿಂಗಳುಗಟ್ಟಲೆ ಸ್ಟಾರ್​ ಪೈಲ್ವಾನ್​ಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಇದು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಾಕ್ಷಿ ಮಲಿಕ್, ಭಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಸೇರಿದಂತೆ ಹಲವಾರು ಕ್ರೀಡಾಪಟುಗಳು ಹೋರಾಟ ನಡೆಸಿದ್ದರು. ಬಳಿಕ ಅವರನ್ನು ಕುಸ್ತಿ ಫೆಡರೇಷನ್​ನಿಂದ ಅಮಾನತು ಮಾಡಲಾಗಿತ್ತು.

ರಾಯ್​ಬರೇಲಿ ಟಿಕೆಟ್​ ಘೋಷಣೆ: ಇನ್ನೊಂದೆಡೆ, ಕಾಂಗ್ರೆಸ್​ನ ಭದ್ರಕೋಟೆಯಾದ ರಾಯ್​ಬರೇಲಿಗೂ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. 2019ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸೋತಿದ್ದ ದಿನೇಶ್ ಪ್ರತಾಪ್ ಸಿಂಗ್ ಅವರಿಗೇ ಈ ಬಾರಿಯೂ ಉಮೇದುವಾರಿಕೆ ನೀಡಲಾಗಿದೆ.

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ರಾಜಸ್ಥಾನದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಕಾರಣ ಅವರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿಲ್ಲ. ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನಗಳು ಬಾಕಿ ಉಳಿದಿದ್ದರೂ, ಕಾಂಗ್ರೆಸ್​ ಹುರಿಯಾಳುಗಳನ್ನು ಘೋಷಿಸಿಲ್ಲ. ರಾಯ್​ಬರೇಲಿಯಿಂದ ಪ್ರಿಯಾಂಕಾ ವಾದ್ರಾ ಅವರು ಸ್ಪರ್ಧೆ ಮಾಡುವುದು ದಟ್ಟವಾಗಿದೆ. 2019 ರ ಚುನಾವಣೆಯಲ್ಲಿ ಅಮೇಠಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸೋತಿದ್ದ ರಾಹುಲ್​ ಗಾಂಧಿ ಅವರು ಈ ಬಾರಿಯೂ ಸವಾಲು ಎದುರಿಸುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: 'ಅನುಪಮಾ' ಧಾರಾವಾಹಿ ಖ್ಯಾತಿಯ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ; 'ನಾನು ಮೋದಿಯವರ ದೊಡ್ಡ ಫ್ಯಾನ್'​ ಎಂದ ನಟಿ - Rupali Ganguly

Last Updated : May 2, 2024, 11:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.