ETV Bharat / bharat

ಮೇಕೆ ಕಳ್ಳತನ ಪ್ರಕರಣ: 36 ವರ್ಷದ ಬಳಿಕ ಹೊರ ಬಿದ್ದ ಮಹಾ ತೀರ್ಪು - Bihar Goat Theft Case

author img

By ETV Bharat Karnataka Team

Published : Sep 10, 2024, 5:44 PM IST

36 ವರ್ಷದ ಪ್ರಕರಣದಲ್ಲಿ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಐದು ಆರೋಪಿಗಳನ್ನು ಖುಲಾಸೆ ಮಾಡಿ ನ್ಯಾಯಾಲಯ ಆದೇಶಿಸಿದೆ

Bihar Goat Theft Case Five Accused Acquitted After 36 Years
ಸಾಂದರ್ಭಿಕ ಚಿತ್ರ (ಎಎನ್​ಐ)

ಔರಂಗಬಾದ್ (ಬಿಹಾರ)​: ಮೇಕೆ ಕಳ್ಳತನ ಪ್ರಕರಣವೊಂದು ಬರೋಬ್ಬರಿ 36 ವರ್ಷಗಳ ಬಳಿಕ ಇತ್ಯರ್ಥಗೊಂಡಿದ್ದು, ಈ ಸಂಬಂಧ ಔರಂಗಬಾದ್​ ಸಿವಿಲ್​ ನ್ಯಾಯಾಲಯ ತೀರ್ಪು ನೀಡಿದೆ. 1988ರ ಪ್ರಕರಣದ 5 ಆರೋಪಿಗಳನ್ನು ಖುಲಾಸೆ ಮಾಡಿ ಕೋರ್ಟ್​​​ ಆದೇಶ ನೀಡಿದೆ.

ಏನಿದು ಘಟನೆ: 1988ರ ಜೂನ್​ 25ರಂದು ಬೆಳ್ಳೆ 5 ಗಂಟೆ ಸುಮಾರಿಗೆ ಔರಂಗಬಾದ್​ನ ಅಸ್ಲೇಂಪುರ್​ ಗ್ರಾಮದ ರಾಜನ್​ ರೈ ಅವರ ಮನೆ ಬಾಗಿಲಿಗೆ ಕಟ್ಟಿ ಹಾಕಿದ್ದ ಮೇಕೆ ಕಳ್ಳತನಕ್ಕೆ 12 ಮಂದಿ ನುಗ್ಗಿದ್ದರು. ಅಂದಿಗೆ 600ರೂ ಮೌಲ್ಯದ ಮೊತ್ತದ ಮೇಕೆ ಕಳ್ಳತನಕ್ಕೆ ಮುಂದಾಗಿದ್ದನ್ನು ರಾಜನ್​ ರೈ, ವಿರೋಧಿಸಿದ್ದಾರೆ.

ಈ ವೇಳೆ, 12 ಜನರ ಗುಂಪು ಆತನ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಮನೆಗೆ ಬೆಂಕಿ ಹಚ್ಚಿ ಓಡಿ ಹೋಗಿದ್ದರು. ಈ ಘಟನೆಯಲ್ಲಿ ರಾಜನ್​ ರೈ ಬಚಾವ್​ ಆಗಿದ್ದು, ದುರುದೃಷ್ಟವಶಾತ್​ ಮನೆ ಮಂದಿ ಬೆಂಕಿಗೆ ಆಹುತಿಯಾಗಿದ್ದಾರೆ. ಈ ಘಟನೆ ಬಳಿಕ ರಾಜಯ್​ ದೌದ್​ನಗರ್​​ ಪೊಲೀಸ್​ ಠಾಣೆಯಲ್ಲಿ 12 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

36 ವರ್ಷ ವಿಚಾರಣೆ: ಪ್ರಕರಣ ದಾಖಲಾದ ಬಳಿಕ ಪೊಲೀಸರು ತನಿಖೆ ನಡೆಸಿದ್ದರು. ಆ ಸಮಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮ ತೀರ್ಪು ನೀಡಿರಲಿಲ್ಲ. ಈ ಪ್ರಕರಣ ತೀರ್ಪು ನೀಡಲು 36 ವರ್ಷ ಸಮಯ ಹಿಡಿಯಿತು. 2024ರಂದು ಸೆಪ್ಟೆಂಬರ್​ 9ರಂದು ಕೋರ್ಟ್​​ ಐತಿಹಾಸಿಕ ತೀರ್ಪು ನೀಡಿ 5 ಆರೋಪಿಗಳನ್ನು ಖುಲಾಸೆ ಮಾಡಿದೆ. ಖುಲಾಸೆಗೊಂಡ ಆರೋಪಿಗಳು ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಸಾಕ್ಷ್ಯ ಕೊರತೆ: ಎಡಿಜೆ ಸೌರಬ್​ ಸಿಂಗ್​​ ಈ ತೀರ್ಪು ನೀಡಿದ್ದಾರೆ. ಸಾಕ್ಷ್ಯಾಧಾರದ ಕೊರತೆಯಿಂದಾಗಿ ಐದು ಆರೋಪಿಗಳಾದ ಮನೋಜ್​ ರೈ, ದೀನ್​ದಯಾಳ್​ ರೈಮ ವಿಷ್ಣುದಯಳ್​​ ರೈಮ ಮದನ್​ ರೈ, ಲಖನ್​ ರೈರನ್ನು ಖುಲಾಸೆ ಮಾಡಲಾಗಿದೆ. ಪ್ರಕರಣದಲ್ಲಿ ಇನ್ನು 5 ಆರೋಪಿಗಳು ಸಾವನ್ನಪ್ಪಿದ್ದು, 2 ಆರೋಪಿಗಳನ್ನು ಪ್ರಕರಣದಿಂದ ಪ್ರತ್ಯೇಕಗೊಳಿಸಲಾಗಿದೆ ಎಂದು ವಕೀಲ ಸತೀಶ್​ ಕುಮಾರ್ ಸ್ನೇಹಿ ತಿಳಿಸಿದ್ದಾರೆ.

36ವರ್ಷದ ಬಳಿಕ ಈ ಮೇಕೆ ಕಳ್ಳತನದ ಪ್ರಕರಣದ ತೀರ್ಪು ಹೊರ ಬಿದ್ದಿರುವುದು, ಇದೀಗ ಜಿಲ್ಲೆಯಲ್ಲಿ ಬಹಳ ಚರ್ಚೆಗೆ ಗುರಿಯಾಗಿದೆ.

ಇದನ್ನೂ ಓದಿ: ಯುಪಿ: ಜನರಲ್ಲಿ ಆತಂಕ ಮೂಡಿಸಿದ್ದ 5ನೇ ತೋಳ ಸೆರೆ; ಮುಂದುವರೆದ ಕಾರ್ಯಾಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.