ಪಾಟ್ನಾ : 34 ವರ್ಷದ ಹಿಂದಿನ ಪ್ರಕರಣದಲ್ಲಿ 20 ರೂ ಲಂಚ ಪಡೆದ ಪೊಲೀಸ್ ಕಾನ್ಸ್ಟೇಬಲ್ ಬಂಧಿಸುವಂತೆ ಬಿಹಾರ ಕೋರ್ಟ್ ಆದೇಶಿಸಿದೆ. ಸಹರ್ಸ ಜಿಲ್ಲೆಯಲ್ಲಿ 34 ವರ್ಷದ ಹಿಂದೆ ಕಾನ್ಸ್ಟೇಬಲ್ ಮೇಲೆ ಲಂಚ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸಹರ್ಸದ ವಿಶೇಷ ನಿರ್ವಹಣಾ ನ್ಯಾಯಾಲಯ 20 ರೂ ಲಂಚ ಪಡೆದ ಆರೋಪದ ಮೇಲೆ ಬಂಧಿಸುವಂತೆ ಆದೇಶಿಸಿದೆ.
ಏನಿದು ಪ್ರಕರಣ?: 1990ರ ಮೇ 6ರಂದು ಹವಿಲ್ದಾರ್ ಸುರೇಶ್ ಪ್ರಸಾದ್ ಸಹರ್ಸ ರೈಲ್ವೆ ನಿಲ್ದಾಣದಲ್ಲಿ ತರಕಾರಿ ಮಾರುತ್ತಿದ್ದ ಮಹಿಳೆ ಬಳಿ 20 ರೂ ಲಂಚ ಪಡೆದಿದ್ದರು. ಈ ವೇಳೆ, ಪೊಲೀಸ್ ಯೂನಿಫಾರ್ಮ್ನಲ್ಲಿ ಕೆಲಸ ನಿರ್ವಹಿಸುವಾಗಲೇ 20 ರೂ ಹಣ ಪಡೆದ ಹಿನ್ನೆಲೆ ಸಹರ್ಸ ರೈಲ್ವೆ ನಿಲ್ದಾಣದ ಅಧಿಕಾರಿಗಳ ಜೊತೆಗಿನ ಪೊಲೀಸ್ ತಂಡ ಅವರನ್ನು ವಶಕ್ಕೆ ಪಡೆದಿತ್ತು.
ಈ ವೇಳೆ ಹವಿಲ್ದಾರ್ ಅವರನ್ನು ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಸುರೇಶ್ ತಾವು ಸಹರ್ಸನಲ್ಲಿ ಮಹೇಶ್ಕುಂತ್ನಲ್ಲಿನ ವಿಳಾಸ ನೀಡಿದ್ದರು. ಆದರೆ, ಅವರು ಲಖಿಸರೈ ಜಿಲ್ಲೆಯ ಬಿಜೋಯ್ ಗ್ರಾಮದಲ್ಲಿ ನೆಲೆಸಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ, ಸುರೇಶ್ ಕೋರ್ಟ್ಗೆ ಹಾಜರಾಗಿರಲಿಲ್ಲ, ಅಲ್ಲದೇ ತಪ್ಪಾದ ವಿಳಾಸದ ಹಿನ್ನೆಲೆ ಆತನ ಪತ್ತೆ ಕೂಡ ಸಾಧ್ಯವಾಗಿರಲಿಲ್ಲ.
1999ರಲ್ಲಿ ಬಂಧನದ ವಾರಂಟ್ ಜಾರಿ: ಸಮನ್ಸ್ ಬಳಿಕ ಸುರೇಶ್ ಕೋರ್ಟ್ ಮುಂದೆ ಹಾಜರಾಗಲಿಲ್ಲ. 1999ರಲ್ಲಿ ಆತನ ಜಾಮೀನು ಬಾಂಡ್ ಅನ್ನು ಕೋರ್ಟ್ ರದ್ದು ಮಾಡಿ, ಬಂಧನದ ವಾರಂಟ್ ಜಾರಿ ಮಾಡಿತ್ತು. ಈ ವೇಳೆ, ಕೂಡ ಆತ ಎಲ್ಲಿದ್ದಾನೆ ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಬಂಧಿಸಲು ಆಗಿರಲಿಲ್ಲ. ಸೇವಾ ಪುಸ್ತಕದ ತನಿಖೆ ವೇಳೆ ಕಾನ್ಸ್ಟೇಬಲ್ ತಪ್ಪಾದ ವಿಳಾಸ ನೀಡಿದ್ದು ಬಯಲಾಗಿತ್ತು.
ಕಡೆಗೆ ಕಾನ್ಸ್ಟೇಬಲ್ ರಹಸ್ಯ ಬಯಲಾಗಿದೆ. ಸಹರ್ಸದ ವಿಶೇಷ ಮೇಲ್ವಿಚಾರಣಾ ನ್ಯಾಯಾಧೀಶರಾದ ಸುದೇಶ ಶ್ರೀವಾತ್ಸವ್ ಬಿಹಾರ್ ಡಿಜಿಪಿಗೆ ಪತ್ರ ಬರೆದು ನಾಪತ್ತೆಯಾಗಿರುವ ಕಾನ್ಸ್ಟೇಬಲ್ ಬಂಧಿಸಿ, ಕೋರ್ಟ್ಗೆ ಹಾಜರು ಪಡಿಸುವಂತೆ ಸೂಚಿಸಿದರು. 34 ವರ್ಷದ ಹಿಂದಿನ ಪ್ರಕರಣದಲ್ಲಿ 20 ರೂ ಲಂಚ ಪಡೆದ ಆರೋಪದಲ್ಲಿ ಈ ಬಂಧನ ಮಾಡಲಾಗಿದೆ. ನ್ಯಾಯಾಲಯ ತಪ್ಪು ಮಾಡಿದವರಿಗೆ ಶಿಕ್ಷೆ ಖಚಿತ ಎಂಬ ಬಲವಾದ ಸಂದೇಶ ನೀಡಿದೆ. ಆದರೆ, ಪ್ರಕರಣವನ್ನು ಇಷ್ಟು ವರ್ಷ ಎಳೆದ ಕುರಿತು ಪ್ರಶ್ನೆಗಳು ಮೂಡಿವೆ.
ಇದನ್ನೂ ಓದಿ: ಶಿವಸೇನೆ UBT ಮಾಜಿ ಕಾರ್ಪೊರೇಟರ್ ಘೋಸಾಲ್ಕರ್ ಹತ್ಯೆ: ತನಿಖೆಯ ಹೊಣೆ ಸಿಬಿಐಗೆ ವರ್ಗಾವಣೆ