ETV Bharat / bharat

ಸಂದೇಶಖಾಲಿ ಪ್ರಕರಣ, ಆರೋಪಿಗಳನ್ನ ಬಂಧಿಸಲು ಸರ್ಕಾರಕ್ಕೆ ಇಷ್ಟವಿಲ್ಲ: ಟಿಎಂಸಿ ವಿರುದ್ಧ ಪ್ರಧಾನಿ ವಾಗ್ದಾಳಿ - ಸಂದೇಶ್​ಖಾಲಿ ಪ್ರಕರಣ

ಸಂದೇಶಖಾಲಿ ವಿಚಾರದಲ್ಲಿ ಟಿಎಂಸಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

PM Modi  Sandeshkhali  Modi lashes out at TMC  ಸಂದೇಶ್​ಖಾಲಿ ಪ್ರಕರಣ  ಪ್ರಧಾನಿ ಮೋದಿ
ಟಿಎಂಸಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
author img

By ETV Bharat Karnataka Team

Published : Mar 2, 2024, 5:46 PM IST

ಕೃಷ್ಣನಗರ, ಪಶ್ಚಿಮ ಬಂಗಾಳ: ಉತ್ತರ 24 ಪರಗಣ ಜಿಲ್ಲೆಯ ಸಂದೇಶ್​ಖಾಲಿ ಪ್ರದೇಶದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆ ಆರೋಪದ ಮೇಲೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಆರೋಪಿಗಳನ್ನು ಬಂಧಿಸುವುದು ಆಡಳಿತ ಪಕ್ಷಕ್ಕೆ ಇಷ್ಟವಿಲ್ಲ ಎಂದು ಆರೋಪಿಸಿದ್ದಾರೆ.

ಕೃಷ್ಣಾನಗರದಲ್ಲಿ ಸಾರ್ವಜನಿಕ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಂದೇಶ್​ಖಾಲಿ ಮಹಿಳೆಯರು ನ್ಯಾಯಕ್ಕಾಗಿ ಕೂಗಿದರೆ, ರಾಜ್ಯದಲ್ಲಿ ಆಡಳಿತ ಪಕ್ಷವು ಬೇರೆಡೆ ನೋಡಿದೆ. ಆಡಳಿತ ಪಕ್ಷವು ಬಂಗಾಳದ ಮಹಿಳೆಯರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡಿದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಆರೋಪಿಸಿದ್ದಾರೆ.

ಮಾ, ಮಾತಿ, ಮಾನುಷ್ ಎಂಬ ಘೋಷಣೆಯನ್ನು ಬಳಸಿಕೊಂಡು ಟಿಎಂಸಿ ಸರ್ಕಾರ ಬಂಗಾಳದ ಮಹಿಳೆಯರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡಿದೆ. ಇಂದು ಮಾ, ಮಾತು ಮತ್ತು ಮಾನುಷ್ ಎಲ್ಲರೂ ಟಿಎಂಸಿ ಆಡಳಿತದಲ್ಲಿದ್ದಾರೆ. ಸಂದೇಶಖಾಲಿಯ ಮಹಿಳೆಯರು ನ್ಯಾಯಕ್ಕಾಗಿ ಕೇಳುತ್ತಲೇ ಇದ್ದಾರೆ, ಆದರೂ ಸರ್ಕಾರ ಮಾತ್ರ ಅವರ ಮಾತು ಕೇಳಲಿಲ್ಲ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಸಂದೇಶಖಾಲಿ ಘಟನೆಯಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸುವ ಉದ್ದೇಶ ಟಿಎಂಸಿಗೆ ಇಲ್ಲ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಆದರೆ, ಬಂಗಾಳದ ನಾರಿ ಶಕ್ತಿಯು ದುರ್ಗಾ (ದುರ್ಗಾ ದೇವತೆ) ಯಂತೆ ನಿಂತಿದ್ದಾಳೆ. ಬಂಗಾಳದಲ್ಲಿ ಅಪರಾಧಿಯನ್ನು ಯಾವಾಗ ಬಂಧಿಸಬೇಕು ಎಂಬುದನ್ನು ಪೊಲೀಸರು ನಿರ್ಧರಿಸುವುದಿಲ್ಲ, ಅಪರಾಧಿಯೇ ಎಲ್ಲವನ್ನೂ ಸ್ವತಃ ನಿರ್ಧರಿಸುತ್ತಾನೆ. ಸಂದೇಶಖಾಲಿ ಘಟನೆಯ ಆರೋಪಿಗಳನ್ನು ಬಂಧಿಸುವುದು ರಾಜ್ಯ ಸರ್ಕಾರಕ್ಕೆ ಇಷ್ಟವಿರಲಿಲ್ಲ ಎಂದು ಪ್ರಧಾನಿ ಮೋದಿ ಟಿಎಂಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಸಂದೇಶ್​ಖಾಲಿ ಮಹಿಳೆಯರ ನ್ಯಾಯಕ್ಕಾಗಿ ಮತ್ತು ಹೋರಾಟದ ಜೊತೆ ನಿಂತಿದ್ದಾರೆ. ನಂತರ ರಾಜ್ಯ ಸರ್ಕಾರವು ಷಹಜಹಾನ್ ಶೇಖ್ ಬಂಧನವನ್ನು ಉಲ್ಲೇಖಿಸಿದೆ. ಷಹಜಹಾನ್ ಶೇಖ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ಇತ್ತೀಚಿನ ದಿನಗಳಲ್ಲಿ ಸಂದೇಶ್​ಖಾಲಿಯ ಜನರು ಕುದಿಯುತ್ತಿದ್ದಾರೆ ಮತ್ತು ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದಾರೆ. ಒಂದು ತಿಂಗಳ ಹಿಂದಿನಿಂದಲೂ ನಾಪತ್ತೆಯಾಗಿದ್ದ ಅವರು, ಈ ವಾರದ ಆರಂಭದಲ್ಲಿ ಬಂಧಿಸಲಾಗಿತ್ತು.

ಕೃಷ್ಣಾನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ರಾಜ್ಯ ನಾಯಕತ್ವವೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಿತು. ಏಪ್ರಿಲ್ - ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ಮೋದಿಯವರ ಭೇಟಿ ಮಹತ್ವ ಪಡೆದುಕೊಂಡಿದೆ.

ಓದಿ: ಉತ್ತರಾಖಂಡ್​: ಹಲ್ದ್ವಾನಿಯಲ್ಲಿ ಮುಂದುವರೆದ ಒತ್ತುವರಿ ತೆರವು ಕಾರ್ಯಾಚರಣೆ, ಮತ್ತೆ ಬುಲ್ಡೋಜರ್​ಗಳ​ ಸದ್ದು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.