ETV Bharat / bharat

ಅಭಯಾರಣ್ಯದಲ್ಲಿನ ತೋಳಗಳ ನಡವಳಿಕೆ ಅಧ್ಯಯನ: ವರ್ಷಾಂತ್ಯಕ್ಕೆ ವರದಿ ಬಿಡುಗಡೆ - Report on Wolves

author img

By ETV Bharat Karnataka Team

Published : Sep 12, 2024, 7:13 PM IST

ಮಹುವಾದಂಡ್​ ತೋಳ ಅಭಯಾರಣ್ಯದ ತೋಳಗಳ ನಡವಳಿಕೆಯ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.

ಮಹುವಾದಂಡ್​ ತೋಳ ಅಭಯಾರಣ್ಯದಲ್ಲಿ ತೋಳಗಳು
ಮಹುವಾದಂಡ್​ ತೋಳ ಅಭಯಾರಣ್ಯದಲ್ಲಿ ತೋಳಗಳು (aaaaaaa)

ಪಲಮು: ಜಾರ್ಖಂಡ್​ನಲ್ಲಿ ಕಂಡುಬರುವ ತೋಳಗಳು ಉತ್ತರ ಪ್ರದೇಶದ ಬಹ್ರೈಚ್​ನಲ್ಲಿನ ತೋಳಗಳಂತೆ ನರಭಕ್ಷಕಗಳಲ್ಲ. ಜಾರ್ಖಂಡ್​ನ ಮಹುವಾದಂಡ್ ಇಡೀ ದೇಶದಲ್ಲಿರುವ ಏಕೈಕ ತೋಳದ ಅಭಯಾರಣ್ಯವಾಗಿದೆ. ಇಲ್ಲಿ ಅಪರೂಪದ ಭಾರತೀಯ ಬೂದು ತೋಳ ಜಾತಿಯ ತೋಳಗಳಿವೆ. ಮಹುವಾದಂಡ್ ಅಭಯಾರಣ್ಯವನ್ನು ಸುಮಾರು 1970 ರಲ್ಲಿ ರಚಿಸಲಾಯಿತು. ತೋಳಗಳನ್ನು ಸಂರಕ್ಷಿಸಲು ತೋಳ ಅಭಯಾರಣ್ಯಕ್ಕಾಗಿ ಈ ವಿಶೇಷ ಪ್ರದೇಶವನ್ನು ಗುರುತಿಸಲಾಯಿತು.

ಪ್ರಸ್ತುತ, ಮಹುವಾದಂಡ್ ತೋಳ ಅಭಯಾರಣ್ಯದಲ್ಲಿ 70 ರಿಂದ 80 ತೋಳಗಳಿವೆ ಮತ್ತು ಇವುಗಳನ್ನು ನಾಲ್ಕು ವಿಭಿನ್ನ ಗುಂಪುಗಳಾಗಿ ವಿಂಗಡಿಸಲಾಗಿದೆ. ಛತ್ತೀಸ್​​​ಗಢ ಗಡಿಯಲ್ಲಿರುವ ಈ ತೋಳ ಅಭಯಾರಣ್ಯವು 63 ಚದರ ಕಿಲೋಮೀಟರ್ ಪ್ರದೇಶದಲ್ಲಿ ವ್ಯಾಪಿಸಿದೆ.

ಏತನ್ಮಧ್ಯೆ ಉತ್ತರ ಪ್ರದೇಶದ ಬಹ್ರೈಚ್​ನಲ್ಲಿ ತೋಳಗಳು ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿದ ಬಗ್ಗೆ ಅನೇಕ ವರದಿಗಳು ಬಂದಿವೆ. ಆದರೆ, ಕಳೆದ ಹಲವಾರು ದಶಕಗಳಲ್ಲಿ ಜಾರ್ಖಂಡ್​ನ ಮಹುವಾದಂಡ್ ತೋಳ ಅಭಯಾರಣ್ಯ ಮತ್ತು ಪಕ್ಕದ ಪ್ರದೇಶಗಳಲ್ಲಿ ಇಂತಹ ಘಟನೆ ನಡೆದಿಲ್ಲ.

ತೋಳಗಳು ಇಲ್ಲಿ ಎಂದಿಗೂ ಜನವಸತಿ ಪ್ರದೇಶ ಪ್ರವೇಶಿಸಿಲ್ಲ: ಮಹುವಾದಂಡ್ ತೋಳ ಅಭಯಾರಣ್ಯದ ಸುತ್ತಲೂ ಗ್ರಾಮಗಳಿದ್ದು, ಇಲ್ಲಿ ಜನವಸತಿ ಇದೆ. ಆದರೆ ತೋಳಗಳ ಅಭಯಾರಣ್ಯದಿಂದ ಹೊರಬಂದು ಅವು ಗ್ರಾಮೀಣ ವಸತಿ ಪ್ರದೇಶಗಳಿಗೆ ಎಂದಿಗೂ ಪ್ರವೇಶಿಸಿಲ್ಲ. ತೋಳಗಳು ಕಾಡಿನಲ್ಲಿಯೇ ಆಡುಗಳು ಮತ್ತು ಇತರ ಸಣ್ಣ ಜೀವಿಗಳನ್ನು ಬೇಟೆಯಾಡುತ್ತವೆ. ಆದರೆ, ಇವು ಜನವಸತಿ ಪ್ರದೇಶಗಳಿಗೆ ಬಂದು ಯಾವತ್ತೂ ಬೇಟೆಯಾಡಿಲ್ಲ.

ಈ ಬಗ್ಗೆ ಮಾತನಾಡಿದ ವನ್ಯಜೀವಿ ತಜ್ಞ ಡಿ.ಎಸ್. ಶ್ರೀವಾಸ್ತವ, ಬಹ್ರೈಚ್​ನಲ್ಲಿ ತೋಳಗಳ ಆವಾಸಸ್ಥಾನಕ್ಕೆ ಧಕ್ಕೆ ಉಂಟಾಗಿದ್ದರಿಂದ ಅವುಗಳಿಗೆ ಆಹಾರವೂ ಸಿಗುತ್ತಿಲ್ಲ. ಆದರೆ, ಮಹುವಾದಂಡ್​ನಲ್ಲಿ ಇಂಥ ಪರಿಸ್ಥಿತಿ ಇಲ್ಲ. ಕೆಲ ವರ್ಷಗಳ ಹಿಂದೆ, ಮಹುವಾದಂಡ್​ ಗ್ರಾಮಸ್ಥರು ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು ಎಂದು ಹೇಳಿದರು.

ಅಕ್ಟೋಬರ್​​​​ನಲ್ಲಿ ತೋಳಗಳಿಂದ ಸಂತಾನೋತ್ಪತ್ತಿ: ತೋಳಗಳ ಸಂತಾನೋತ್ಪತ್ತಿ ಋತುವು ಅಕ್ಟೋಬರ್​ನಲ್ಲಿ ಪ್ರಾರಂಭವಾಗುತ್ತದೆ ಮತ್ತು ಅವು ಸಂತಾನೋತ್ಪತ್ತಿಗಾಗಿ ಗುಹೆಗೆ ಹೋಗುತ್ತವೆ. ಮಾರ್ಚ್ ವೇಳೆಗೆ ಅವುಗಳ ಮರಿಗಳು ಬೆಳೆದಿರುತ್ತವೆ. ಆಗ ಅವು ಈ ಪ್ರದೇಶಕ್ಕೆ ಮರಳುತ್ತವೆ. ತಜ್ಞರ ಪ್ರಕಾರ, ಒಮ್ಮೆ ಬೆದರಿಕೆಯನ್ನು ಎದುರಿಸಿದ ನಂತರ, ತೋಳಗಳು ತಮ್ಮ ಗುಹೆಗೆ ಹಿಂತಿರುಗುವುದಿಲ್ಲ. ತೋಳಗಳು ಹೆಚ್ಚಾಗಿ ಮೊಲಗಳು, ಇಲಿಗಳುಗಳನ್ನು ಬೇಟೆಯಾಡುತ್ತವೆ ಎಂದು ತಜ್ಞರು ಹೇಳುತ್ತಾರೆ.

1970 ರ ನಂತರ ಮಹುವಾದಂಡ್​ ತೋಳ ಅಭಯಾರಣ್ಯದಲ್ಲಿನ ಚಟುವಟಿಕೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ವನ್ಯಜೀವಿ ಸಂಸ್ಥೆಯಿಂದ ಈ ಮೌಲ್ಯಮಾಪನವನ್ನು ನಡೆಸಲಾಗುತ್ತಿದ್ದು, ಅದರ ವರದಿಯು ವರ್ಷದ ಅಂತ್ಯದ ವೇಳೆಗೆ ಬಿಡುಗಡೆಯಾಗಲಿದೆ. ವನ್ಯಜೀವಿ ಸಂಸ್ಥೆಯ ತಂಡವು ಹಲವಾರು ತಿಂಗಳುಗಳಿಂದ ತೋಳ ಅಭಯಾರಣ್ಯದ ಪ್ರದೇಶದಲ್ಲಿ ಕ್ಯಾಂಪ್ ಹಾಕಿದೆ. ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡಿದ ನಂತರ ಅಭಯಾರಣ್ಯದ ವ್ಯಾಪ್ತಿಯನ್ನು ಹೆಚ್ಚಿಸಬಹುದು ಎಂದು ಪಲಾಮು ಹುಲಿ ಮೀಸಲು ಪ್ರದೇಶದ ನಿರ್ದೇಶಕ ಕುಮಾರ್ ಅಶುತೋಷ್ ಹೇಳಿದ್ದಾರೆ.

ಪಲಾಮು ಹುಲಿ ಮೀಸಲು ಪ್ರದೇಶದ ಉಪ ನಿರ್ದೇಶಕ ಕುಮಾರ್ ಆಶಿಶ್ ಮಾತನಾಡಿ, ಅಭಯಾರಣ್ಯದಲ್ಲಿನ ತೋಳ ಎಂದಿಗೂ ಹಿಂಸಾತ್ಮಕವಾಗಿಲ್ಲ, ಅವುಗಳ ನಡವಳಿಕೆ ಎಂದಿಗೂ ಆತಂಕಕಾರಿಯಾಗಿರಲಿಲ್ಲ. ಸಮೀಕ್ಷೆಯ ವರದಿಯನ್ನು ವರ್ಷದ ಅಂತ್ಯದ ವೇಳೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ತೋಳಗಳನ್ನು ಸಂರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.

ಇದನ್ನೂ ಓದಿ : ಗುಜರಾತ್​ನಲ್ಲಿ ಭಾರಿ ಮಳೆ: ಸರ್ದಾರ್ ಸರೋವರ್ ಅಣೆಕಟ್ಟೆಯಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ - SARDAR SAROVAR DAM

ETV Bharat Logo

Copyright © 2024 Ushodaya Enterprises Pvt. Ltd., All Rights Reserved.