ಹೈದರಾಬಾದ್: ಯಾವುದೇ ಬ್ಯಾಂಕಿನಲ್ಲಿ ಕಳ್ಳತನ ಅಥವಾ ಅಗ್ನಿ ಅನಾಹುತ ಆದ ಸಂದರ್ಭದಲ್ಲಿ ಗ್ರಾಹಕರು ಅಡಮಾನ ಇಟ್ಟ ಚಿನ್ನವನ್ನು ಕಳೆದುಕೊಳ್ಳುತ್ತಾರಾ? ಹಾಗೆಯೇ ಲಾಕರ್‌ನಲ್ಲಿ ಇಟ್ಟಿರುವ ಚಿನ್ನ ಮತ್ತು ಹಣ ಏನಾಗುತ್ತದೆ. ಬ್ಯಾಂಕುಗಳು ಯಾವುದಕ್ಕೆ ಜವಾಬ್ದಾರರಾಗಿರುತ್ತವೆ. ಲಾಕರ್‌ನಲ್ಲಿರುವ ವಸ್ತುಗಳು ಕಳೆದು ಹೋದರೆ ಪರಿಹಾರ ಏನು ಎಂಬ ಬಗ್ಗೆ ಈಗ ತಿಳಿದುಕೊಳ್ಳೋಣ
ಆರ್‌ಬಿಐ ನಿಯಮಾವಳಿಗಳು ಏನು ಹೇಳುತ್ತವೆ?: ಯಾವುದೇ ಬ್ಯಾಂಕ್‌ನಲ್ಲಿ ಕಳ್ಳತನ ಅಥವಾ ಅಗ್ನಿ ಅನಾಹುತ ಸಂಭವಿಸಿದರೆ, ಗ್ರಾಹಕರು ಗಿರವಿ ಇಟ್ಟಿರುವ ಚಿನ್ನಕ್ಕೆ ಹಾನಿಯಾದರೆ, ಬ್ಯಾಂಕ್ ನೀಡಿದ ದಾಖಲೆಗಳ ಅನ್ವಯ ನೂರು ಪ್ರತಿಶತ ವಿಮಾ ಸೌಲಭ್ಯ ಒದಗಿಸಲಾಗುತ್ತದೆ. ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬ್ಯಾಂಕ್‌ಗಳು ಅವರಿಗೆ ಪರಿಹಾರ ನೀಡುತ್ತವೆ.
ಉದಾಹರಣೆಗೆ ಒಬ್ಬ ವ್ಯಕ್ತಿ ಬ್ಯಾಂಕ್‌ನಲ್ಲಿ ಇಟ್ಟಿರುವ 40 ಗ್ರಾಂ ಚಿನ್ನ ಕಳ್ಳತನವಾಗಿದ್ದರೆ ಆತನ ಬಳಿ ಇರುವ ದಾಖಲೆಗಳ ಆಧಾರದ ಮೇಲೆ ಪ್ರಸ್ತುತ ಮಾರುಕಟ್ಟೆ ಬೆಲೆಯ ಪ್ರಕಾರ ಒಟ್ಟು 40 ಗ್ರಾಂ ಚಿನ್ನದ ಮೌಲ್ಯವನ್ನು ಬ್ಯಾಂಕ್ ಪಾವತಿಸುತ್ತದೆ. ಆರ್‌ಬಿಐ ನಿಯಮಗಳ ಪ್ರಕಾರ ಪ್ರತಿ ಇಲಾಖೆಗೆ ವರ್ಷಕ್ಕೊಮ್ಮೆ ವಿಮಾ ಸೌಲಭ್ಯ ನೀಡಲಾಗುತ್ತದೆ. ಇದು ವರ್ಷದಲ್ಲಿ ಬ್ಯಾಂಕಿನ ಸಾಲದ ವಹಿವಾಟುಗಳು ಮತ್ತು ನಗದು ಹರಿವಿನ ಮೇಲೆ ಅವಲಂಬಿತವಾಗಿರುತ್ತದೆ. ಈ ನಿಯಮಗಳ ಪ್ರಕಾರ ಗ್ರಾಹಕರು ಗಿರವಿ ಇಟ್ಟಿರುವ ಚಿನ್ನಕ್ಕೆ ಯಾವುದೇ ದಕ್ಕೆ ಆಗುವುದಿಲ್ಲ ಎನ್ನುತ್ತಾರೆ ಬ್ಯಾಂಕರ್‌ಗಳು.
ವೈಯಕ್ತಿಕ ಲಾಕರ್‌ಗಳಲ್ಲಿನ ಹಣಕ್ಕೆ ಗ್ರಾಹಕರೇ ಜವಾಬ್ದಾರರಾಗಿರುತ್ತಾರೆ: ಗ್ರಾಹಕರು ವೈಯಕ್ತಿಕ ಲಾಕರ್‌ಗಳಲ್ಲಿ ಇರಿಸಲಾಗಿರುವ ಬೆಲೆಬಾಳುವ ಆಭರಣಗಳು, ದಾಖಲೆಗಳು ಮತ್ತು ನಗದಿಗೆ ಅವರೇ ಜವಾಬ್ದಾರರಾಗಿರುತ್ತಾರೆ. ಗ್ರಾಹಕರು ಲಾಕರ್‌ಗಳಲ್ಲಿ ಏನನ್ನು ಇಡುತ್ತಾರೆ ಎಂಬುದನ್ನು ಬ್ಯಾಂಕ್ ಅಧಿಕಾರಿಗಳು ನೋಡುವುದಿಲ್ಲ. ಯಾವುದೇ ಅವಘಡ ಸಂಭವಿಸಿ ಲಾಕರ್ ಗಳಲ್ಲಿದ್ದ ಬೆಲೆಬಾಳುವ ನಗದು ಹಾಗೂ ಚಿನ್ನಾಭರಣ ನಷ್ಟವಾದರೆ ಬ್ಯಾಂಕ್ ಜವಾಬ್ದಾರ ಆಗಿರುವುದಿಲ್ಲ. ವೈಯಕ್ತಿಕ ಲಾಕರ್‌ಗಳಲ್ಲಿ ಹೆಚ್ಚಿನ ಪ್ರಮಾಣದ ನಗದು ಮತ್ತು ಆಭರಣಗಳನ್ನು ಇಡದೇ ಇರುವುದು ಉತ್ತಮ. ಯಾವುದೇ ಅವಘಡ ಸಂಭವಿಸಿದರೆ ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಬ್ಯಾಂಕ್‌ಗಳು ಅದರಲ್ಲಿ ಭಾಗಿಯಾಗುವುದಿಲ್ಲ ಎಂದು ಎಸ್‌ಬಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಸ್‌ಬಿಐ ಬ್ಯಾಂಕ್‌ನಲ್ಲಿ ಕಳ್ಳತನ: ಇತ್ತೀಚೆಗೆ ಕರ್ನಾಟಕದ ದಾವಣಗೆರೆ ನ್ಯಾಮತಿ ಹಾಗೂ ತೆಲಂಗಾಣದ ವರಂಗಲ್ ಜಿಲ್ಲೆಯ ರಾಯಪರ್ತಿ ಮಂಡಲ ಕೇಂದ್ರದಲ್ಲಿರುವ ಎಸ್‌ಬಿಐ ಬ್ಯಾಂಕ್‌ನಲ್ಲಿ ಭಾರಿ ಪ್ರಮಾಣದ ಕಳ್ಳತನ ನಡೆದಿತ್ತು. ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಕಿಟಕಿಯ ಸರಳು ಕಟ್ ಮಾಡಿದ ಖತರ್ನಾಕ್ ಕಳ್ಳರು ಬರೋಬ್ಬರಿ 12.95 ಕೋಟಿ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದರು. ಇದುವರೆಗೂ ಕಳ್ಳರು ಪತ್ತೆಯಾಗಿಲ್ಲ.
ಇನ್ನು ಕಳೆದ ಸೋಮವಾರವಷ್ಟೇ ನಾಲ್ಕೈದು ಮಂದಿ ಕಳ್ಳರು ಮಧ್ಯರಾತ್ರಿ ಬಂದು ಬ್ಯಾಂಕ್ ಲಾಕರ್ ಒಡೆದು 19 ಕೆಜಿ ಚಿನ್ನಾಭರಣ ದೋಚಿದ್ದಾರೆ. ಈ ವಿಷಯ ತಿಳಿದು ಬ್ಯಾಂಕ್‌ನಲ್ಲಿ ಚಿನ್ನ ಇಟ್ಟಿರುವ ಗ್ರಾಹಕರು ಆತಂಕಗೊಂಡಿದ್ದಾರೆ. ನಿಮ್ಮ ಹಣ ಎಲ್ಲಿಯೂ ಹೋಗುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಭರವಸೆ ನೀಡಿದರೂ ಗ್ರಾಹಕರು ಆತಂಕದಲ್ಲಿದ್ದಾರೆ.
ರಾಯಪರ್ತಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಮೂರು ಸುರಕ್ಷತಾ ಲಾಕರ್‌ಗಳನ್ನು ಹೊಂದಿದೆ. ಲಾಕರ್ ಒಂದರಲ್ಲಿ 500 ಮಂದಿಗೆ ಸೇರಿದ ಚಿನ್ನಾಭರಣಗಳನ್ನು ಇಡಲಾಗಿತ್ತು. ಅದರಲ್ಲಿ 497 ಮಂದಿಗೆ ಸೇರಿದ 19 ಕೆಜಿ ಚಿನ್ನವನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಇದರ ಮೌಲ್ಯ 15 ಕೋಟಿ ರೂ. ನಾಲ್ವರು ಕಳ್ಳತನ ಮಾಡಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಮಧ್ಯರಾತ್ರಿಯ ನಂತರ ಕಾರಿನಲ್ಲಿ ಬಂದು ಬ್ಯಾಂಕ್ ಪ್ರವೇಶಿಸಿ ಎರಡು ತಾಸು ತಂಗಿರುವ ಶಂಕೆ ವ್ಯಕ್ತವಾಗಿದೆ.
ಆರೋಪಿಗಳ ಬಂಧನಕ್ಕೆ ತಂಡಗಳ ರಚನೆ: ಕಳ್ಳತನ ಮಾಡಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ಅಭಯ ನೀಡಿದ್ದಾರೆ. ಇದಕ್ಕಾಗಿ ವಿಶೇಷ ತಂಡ ನಿರಂತರ ಶ್ರಮಿಸುತ್ತಿದೆ ಎಂದು ಸಿಪಿ ಅಂಬರ್ ಕಿಶೋರ್ ಝಾ ತಿಳಿಸಿದ್ದಾರೆ. ಬುಧವಾರ ಬ್ಯಾಂಕ್‌ಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಸಿಪಿಯವರೊಂದಿಗೆ ಡಿಸಿಪಿಗಳಾದ ರಾಜಮಹೇಂದ್ರ ನಾಯ್ಕ್, ಶೇಖ್ ಸಲೀಮಾ, ಎಸ್‌ಎಸ್‌ಐಎಲ್‌ಗಳು ಮತ್ತು ಸಿಐಗಳು ಇದ್ದರು