ETV Bharat / bharat

ಬಾಂಗ್ಲಾದ ರಾಜಕೀಯ ಬಿಕ್ಕಟ್ಟು ಭಾರತದ ಮೇಲೆ ಪರಿಣಾಮ ಬೀರದು: ಮಾಜಿ ವಿದೇಶಾಂಗ ಕಾರ್ಯದರ್ಶಿ - Bangladeshs Political Turmoil - BANGLADESHS POLITICAL TURMOIL

ಬಾಂಗ್ಲಾ ಬಿಕ್ಕಟ್ಟಿನ ಭಾರವನ್ನು ಭಾರತ ಭರಿಸುವುದಿಲ್ಲ. ಬಾಂಗ್ಲಾದೇಶ ನಮ್ಮ ನೆರೆಯ ದೇಶವಾಗಿದ್ದು, ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆಗಳ ಬಗ್ಗೆ ಚಿಂತೆ ಮೂಡಿದೆ

Bangladesh's Political Turmoil Will Not Impact India: Ex-Foreign Secretary Harsh Vardhan Shringla
ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್​ ಶೃಂಗಲಾ (ಈಟಿವಿ ಭಾರತ್​​)
author img

By ETV Bharat Karnataka Team

Published : Aug 8, 2024, 11:34 AM IST

ಭುವನೇಶ್ವರ್​: ಪ್ರಧಾನಿ ಹುದ್ದೆಗೆ ಶೇಖ್​ ಹಸೀನಾ ರಾಜೀನಾಮೆ ಬಳಿಕ ನಡೆಯುತ್ತಿರುವ ಬಾಂಗ್ಲಾದೇಶದ ರಾಜಕೀಯ ವಿದ್ಯಾಮಾನಗಳು ಭಾರತದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್​ ಶೃಂಗಲಾ ಈ ಟಿವಿ ಭಾರತ್​​ಗೆ​ ತಿಳಿಸಿದ್ದಾರೆ. ಈಟಿವಿ ಭಾರತದೊಂದಿಗೆ ಬಾಂಗ್ಲಾದೇಶದಲ್ಲಿ ಬಿಕ್ಕಟ್ಟಿನಿಂದ ನೆರೆ ದೇಶದೊಂದಿಗಿನ ಭಾರತದ ಸಂಬಂಧಗಳ ಮೇಲೆ ಉಂಟಾಗುವ ಪರಿಣಾಮ ಕುರಿತು ಮಾತನಾಡಿದ ಅವರು, ಈ ಪರಿಸ್ಥಿತಿಯು ಸಂಕೀರ್ಣವಾಗಿದೆ ಎಂದಿದ್ದಾರೆ.

ಪ್ರಧಾನಿ ಶೇಖ್​ ಹಸೀನಾ ಅವರ 15 ವರ್ಷಗಳ ಆಡಳಿತವೂ ಅವರ ರಾಜೀನಾಮೆಯಿಂದ ಅಂತ್ಯಗೊಂಡಿದೆ. ಬಾಂಗ್ಲಾದೇಶದಲ್ಲಿ ಈಗಾಗಲೇ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕಾಗಿ ಸರ್ಕಾರಿ ಉದ್ಯೋಗದಲ್ಲಿ ಶೇ 30ರಷ್ಟು ಮೀಸಲಾತಿ ನಿಯಮವಿದೆ. ಆದಾಗ್ಯೂ ಈ ಯೋಜನೆಯನ್ನು ದೇಶದ ಸಾಮಾನ್ಯ ವಿದ್ಯಾರ್ಥಿಗಳು ಬಲವಾಗಿ ವಿರೋಧಿಸಿದರು. ಈ ಹಿನ್ನೆಲೆಯಲ್ಲಿ 2018 ರಲ್ಲಿ ಈ ಮೀಸಲಾತಿಯನ್ನು ಹಸೀನಾ ಹಿಂಪಡೆಯಲು ನಿರ್ಧರಿಸಿದರು ಎಂದರು.

ಆದಾಗ್ಯೂ, ಬಾಂಗ್ಲಾದೇಶ ಹೈಕೋರ್ಟ್​ ಈ ನಿರ್ಧಾರವನ್ನು ಅಮಾನ್ಯಮಾಡಿ, 1971ರಲ್ಲಿ ದೇಶಕ್ಕೆ ಹೋರಾಡಿದ ಸೇನಾಧಿಕಾರಿಗಳ ಕುಟುಂಬಕ್ಕೆ ಮೀಸಲಾತಿ ನಿಯಮವನ್ನು ಜಾರಿಗೆ ತಂದಿದೆ. ಇದು ವಿದ್ಯಾರ್ಥಿಗಳಲ್ಲಿ ಪ್ರತಿಭಟನೆಯ ಕಿಡಿ ಹೊತ್ತಿಸಿತು.

ಹಸೀನಾ ರಾಜೀನಾಮೆ ಬಳಿಕ ಸೇನಾ ಮುಖ್ಯಸ್ಥ ವಕಾರ್ ಉಜ್ ಜಮಾನ್, ಮಧ್ಯಂತರ ಸರ್ಕಾರ ರಚನೆಯನ್ನು ಘೋಷಿಸಿದರು. ಇದೀಗ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಬಾಂಗ್ಲಾದೇಶದ ಸೇನಾ ಬೆಂಬಲಿತ ಮಧ್ಯಂತರ ಸರ್ಕಾರವನ್ನು ಮುನ್ನಡೆಸಲಿದ್ದಾರೆ. ಪರಿಸ್ಥಿತಿಯು ದುರ್ಬಲವಾಗಿದ್ದು, ನಾವು ನಮ್ಮ ಹೆಜ್ಜೆಗಳ ಬಗ್ಗೆ ಜಾಗರೂಕರಾಗಿರಬೇಕು ಎಂದಿದ್ದಾರೆ.

ಬಾಂಗ್ಲಾದೇಶದೊಂದಿಗಿನ ಭಾರತದ ಸಂಬಂಧಗಳ ಕುರಿತು ಮಾತನಾಡಿದ ಅವರು, ಬಾಂಗ್ಲಾದೇಶ ಭಾರತದ 25ನೇ ದೊಡ್ಡ ವ್ಯಾಪಾರಿ ಪಾಲುದಾರಿಕೆ ದೇಶ. ದ್ವಿಪಕ್ಷೀಯ ವ್ಯಾಪಾರದಲ್ಲಿ ಭಾರತದ ಎಂಟನೇ ಅತಿದೊಡ್ಡ ರಫ್ತು ಪಾಲುದಾರ ಎಂದು ಪರಿಗಣಿಸಲಾಗಿದೆ. ಭಾರತದ ಆಟೋಮೊಬೈಲ್ ರಫ್ತಿಗೆ ಪ್ರಮುಖ ಮಾರುಕಟ್ಟೆಯಾಗಿದ್ದು, ಆರ್ಥಿಕ ಅಸ್ಥಿರತೆಯು ಹಾನಿಕಾರಕವಾಗಿದೆ ಎಂದು ತಿಳಿಸಿದರು.

ಬಾಂಗ್ಲಾದ ರಾಜಕೀಯ ಬಿಕ್ಕಟ್ಟಿನಿಂದ ಭಾರತದ ಮೇಲೆ ಹಾನಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿನ ಬಿಕ್ಕಟ್ಟಿನ ಭಾರವನ್ನು ಭಾರತ ಭರಿಸುವುದಿಲ್ಲ. ಬಾಂಗ್ಲಾದೇಶ ನಮ್ಮ ನೆರೆಯ ದೇಶವಾಗಿದ್ದು, ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆಗಳ ಬಗ್ಗೆ ಚಿಂತೆ ಮೂಡಿದೆ. ಆದಾಗ್ಯೂ ಭಾರತದ ಮೇಲೆ ಇದು ಹೆಚ್ಚಿನ ಪರಿಣಾಮ ಬೀರುವುದಿಲ್ಲ.

ನಾಗರೀಕರು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಅಲ್ಲಿನ ಬೆಳವಣಿಗೆ ಮೇಲೆ ಕಣ್ಣು ನೆಟ್ಟಿದ್ದೇವೆ. ಭವಿಷ್ಯದಲ್ಲಿ ಬಾಂಗ್ಲಾದೇಶ ಜೊತೆಗಿನ ಸಂಬಂಧವನ್ನು ಶಾಂತಿಯುತ ಮತ್ತು ಸ್ನೇಹಯುತವಾಗಿ ಮತ್ತೆ ಮುಂದುವರೆಸಲಿದ್ದೇವೆ ಎಂದರು.

ಇದನ್ನೂ ಓದಿ: ಹಿಂಸೆ ಬಿಡಿ, ಶಾಂತರಾಗಿ ದೇಶ ಕಟ್ಟಲು ಸಜ್ಜಾಗಿ: ಬಾಂಗ್ಲಾ ಹಂಗಾಮಿ ಪ್ರಧಾನಿ ಮುಹಮ್ಮದ್​ ಯೂನಸ್ ಕರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.