ಹರಿದ್ವಾರ (ಉತ್ತರಾಖಂಡ): ನಾನಕಮಟ್ಟಾ ಸಾಹಿಬ್ ಗುರುದ್ವಾರದ ದೇರಾ ಕರ್ ಸೇವಾ ಮುಖ್ಯಸ್ಥ ಬಾಬಾ ತಾರ್ಸೆಮ್ ಸಿಂಗ್ ಅವರನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಯನ್ನು ಎಸ್‌ಟಿಎಫ್ ಎನ್‌ಕೌಂಟರ್ ಮಾಡಿದೆ. ಈ ಎನ್‌ಕೌಂಟರ್‌ನಲ್ಲಿ ಒಬ್ಬ ಕ್ರಿಮಿನಲ್ ಸಾವನ್ನಪ್ಪಿದ್ದಾನೆ. ಈತನನ್ನು ಅಮರಜೀತ್ ಸಿಂಗ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಎಸ್‌ಟಿಎಫ್ ಹೇಳಿದೆ.
ಮಾರ್ಚ್ 28ರಂದು ಬಾಬಾ ತಾರ್ಸೆಮ್ ಸಿಂಗ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಹಾಡಹಗಲೇ ನಡೆದ ಹತ್ಯೆಯಿಂದ ಪೊಲೀಸ್ ಇಲಾಖೆ ಕೂಡ ಬೆಚ್ಚಿ ಬಿದ್ದಿತ್ತು. ಇದೀಗ ಎಸ್‌ಟಿಎಫ್ ಮತ್ತು ಹರಿದ್ವಾರ ಪೊಲೀಸರು ಕಾರ್ಯಾಚರಣೆ ಭಗವಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎನ್‌ಕೌಂಟರ್‌ನಲ್ಲಿ ಆರೋಪಿ ಅಮರಜೀತ್ನನ್ನು ಹೊಡೆದುರುಳಿಸಿದ್ದಾರೆ. ಈ ವಿಷಯವನ್ನು ಉತ್ತರಾಖಂಡ ಡಿಜಿಪಿ ಅಭಿನವ್ ಕುಮಾರ್ ಖಚಿತಪಡಿಸಿದ್ದಾರೆ. ಎರಡನೇ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಎಸ್‌ಟಿಎಫ್ ಮತ್ತು ಪೊಲೀಸರು ಶೋಧ ಕಾರ್ಯ ಮುಂದುವರೆದಿದೆ.
ಬಾಬಾ ತಾರ್ಸೆಮ್ ಸಿಂಗ್ ಯಾರು?: ಬಾಬಾ ತಾರ್ಸೆಮ್ ಸಿಂಗ್ ತೇರಾಯ್‌ನಲ್ಲಿ ಸಿಖ್ ಸಮುದಾಯದ ಧಾರ್ಮಿಕ ಮುಖಂಡರಾಗಿದ್ದರು. ನಾನಕಮಟ್ಟ ಪ್ರದೇಶದಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಕೆಲಸಗಳನ್ನು ಮಾಡಿದ್ದರು. ಇದರಿಂದಾಗಿ ಅವರು ಸಿಖ್ ಸಮುದಾಯದಲ್ಲಿ ಹಾಗೂ ಇತರ ಸಮುದಾಯಗಳ ಜನರಲ್ಲಿ ಹೆಸರು ಗಳಿಸಿದ್ದರು.
ಬಾಬಾ ತಾರ್ಸೆಮ್ ಸಿಂಗ್ ಅನೇಕ ರಾಜಕೀಯ ವ್ಯಕ್ತಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಬಿಜೆಪಿ ಜತೆಗೆ ಕಾಂಗ್ರೆಸ್ ಸೇರಿದಂತೆ ಮತ್ತಿತರ ಪಕ್ಷಗಳ ಮುಖಂಡರು ಇವರ ದರ್ಶನಕ್ಕೆ ಬರುತ್ತಿದ್ದರು. ಸಿಎಂ ಧಾಮಿ ಅವರಿಗೂ ಆಪ್ತರಾಗಿದ್ದರು. ಶಾಸಕರಿಂದ ಹಿಡಿದು ಸಿಎಂವರೆಗೂ ಧಾಮಿ ಶಿಬಿರಕ್ಕೆ ಬರುತ್ತಿದ್ದರು. ಬಾಬಾ ತಾರ್ಸೆಮ್ ಸಿಂಗ್ ಹತ್ಯೆಯ ನಂತರ ಸಿಎಂ ಪುಷ್ಕರ್ ಸಿಂಗ್ ನಾನಕಮಟ್ಟಾ ಶಿಬಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಆರೋಪಿಗಳ ವಿರುದ್ಧ ಕಠಿಣ ತೆಗೆದುಕೊಳ್ಳುವುದಾಗಿ ಸಿಎಂ ಹೇಳಿದ್ದರು.
ಓದಿ: ಸಿಎಂ ಸಿದ್ದರಾಮಯ್ಯಗೆ ಭಗವಂತ ದಶಬುದ್ದಿ ನೀಡಲಿ: ಯುಗಾದಿಯಂದು ವಿನೂತನವಾಗಿ ಬಿಜೆಪಿ ಟ್ವೀಟ್ - BJP on CM