ETV Bharat / bharat

ಕಸದ ರಾಶಿಯಲ್ಲಿ ಆಯುಷ್​ ಜನೌಷಧಿ: ಮಧ್ಯ ಕಾಶ್ಮೀರದಲ್ಲಿ ನಿರ್ಲಕ್ಷ್ಯವೋ, ಇಲಾಖೆಯ ಭ್ರಷ್ಟಾಚಾರವೋ? - ಗಂದೇರ್​ಬಾಲ್

ಜಮ್ಮು ಮತ್ತು ಕಾಶ್ಮೀರದ ಗಂದೇರ್‌ಬಾಲ್ ಜಿಲ್ಲೆಯಲ್ಲಿ ಭಾರಿ ಮೊತ್ತದ ಆಯುಷ್​ ಜನೌಷಧಿಯು ಉಪಯೋಗವಾದೇ ಕಸದ ರಾಶಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ.

ಜನೌಷಧಿ
ಜನೌಷಧಿ
author img

By ETV Bharat Karnataka Team

Published : Feb 29, 2024, 10:10 AM IST

Updated : Feb 29, 2024, 10:28 AM IST

ಗಂದೇರ್​ಬಾಲ್ (ಜಮ್ಮು ಮತ್ತು ಕಾಶ್ಮೀರ): ಮಧ್ಯ ಕಾಶ್ಮೀರದ ಗಂದೇರ್‌ಬಾಲ್ ಜಿಲ್ಲೆಯಲ್ಲಿ ಆಯುಷ್ ಕೇಂದ್ರಗಳಿಂದ ಉಚಿತವಾಗಿ ಒದಗಿಸಿರುವ ಔಷಧಗಳು ಭಾರೀ ಪ್ರಮಾಣದಲ್ಲಿ ವ್ಯರ್ಥವಾಗುತ್ತಿರುವುದು ಬೆಳಕಿಗೆ ಬಂದಿದೆ.

ayush-medicine-is-wasting
ಅವಧಿ ಮುಗಿಯದ ಜನೌಷಧಿಗಳು

ಇದಕ್ಕೆ ಸಾಕ್ಷಿಯಾಗಿ ಜಿಲ್ಲೆಯ ಮುಲ್ಲಾ ಶಾಹಿ ಬಾಗ್​​ ಪ್ರದೇಶದ ಆಯುಷ್​​​ ಕೇಂದ್ರದ ಬಳಿಯಿರುವ ಕಸದ ರಾಶಿಯಲ್ಲಿ ಆಯುಷ್ ಔಷಧಿಗಳ ಮೂಟೆಗಳು ಪತ್ತೆಯಾಗಿವೆ. ಕಸದ ರಾಶಿಯಲ್ಲಿ ಪತ್ತೆಯಾಗಿರುವ ಕೆಲವು ಔಷಧಿಗಳ ಅವಧಿಯೇ ಮುಗಿದಿಲ್ಲ. ಆದರೆ ಬಹುತೇಕ ಔಷಧಿಗಳು ರೋಗಿಗಳಿಗೆ ಒದಗಿಸದೇ ಇರುವ ಕಾರಣ ಅವಧಿ ಮುಗಿದಿವೆ.

ayush-medicine-is-wasting
ಕಸದ ರಾಶಿ ಮಧ್ಯೆ ಜನೌಷಧಿ

ರಾಷ್ಟ್ರೀಯ ಆಯುಷ್ ಮಿಷನ್​ನ್ನು ಕೇಂದ್ರ ಸರ್ಕಾರವು 2014-15 ರಲ್ಲಿ ಪ್ರಾರಂಭಿಸಿತ್ತು. ಇದರ ಅಡಿಯಲ್ಲಿ ಗಂದೇರ್​ಬಾಲ್ ಜಿಲ್ಲೆಯಲ್ಲಿ 23 ಆಯುಷ್​ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ರೋಗಿಗಳಿಗೆ ಉಚಿತ ಔಷಧಿಗಳು ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತದೆ. ಆದರೆ ಈ ಯೋಜನೆಯಡಿಯಲ್ಲಿ ಸರಬರಾಜು ಮಾಡಲಾದ ಔಷಧಿಗಳು ವ್ಯರ್ಥವಾಗುತ್ತಿದ್ದು, ಆಯುಷ್ ಇಲಾಖೆಯ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರವನ್ನು ತೋರಿಸುತ್ತಿದೆ. ಇಷ್ಟು ಮೊತ್ತದ ಔಷಧಿಗಳನ್ನು ಬಳಕೆ ಮಾಡದೇ ಕಸದೊಂದಿಗೆ ವಿಲೇವಾರಿ ಮಾಡುತ್ತಿರುವ ಕಾರಣ ಅಥವಾ ಉದ್ದೇಶವೇನೆಂಬುದು ಸ್ಪಷ್ಟವಾಗಿಲ್ಲ. ಸಾಮಾನ್ಯವಾಗಿ ಅವಧಿ ಮೀರಿದ ಔಷಧಿಗಳನ್ನು ವಿಲೇವಾರಿ ಮಾಡಲು ಅನುಮತಿ ಮತ್ತು ನಿಯಮ ಇದೆ.

ayush-medicine-is-wasting
ಕಸದ ರಾಶಿ ಮಧ್ಯೆ ಜನೌಷಧಿ

ಈ ಕುರಿತು ಈಟಿವಿ ಭಾರತ್‌ನೊಂದಿಗೆ ಮಾತನಾಡಿರುವ ಸ್ಥಳೀಯ ನಿವಾಸಿಗಳು, "ಲಕ್ಷ ರೂಪಾಯಿಗಳ ಈ ರೀತಿಯ ಔಷಧಗಳನ್ನು ವ್ಯರ್ಥ ಮಾಡುವುದರಿಂದ ಸರ್ಕಾರದ ಯೋಜನೆಯ ಉದ್ದೇಶವನ್ನು ನಾಶಗೊಳಿಸಿದಂತೆ. ಉಚಿತ ಔಷಧಿಗಳನ್ನು ನೀಡುವ ಉದ್ದೇಶ ಬಡ ಜನತೆಗೆ, ಔಷಧಿಗಳ ಅಗತ್ಯವಿರುವವರಿಗೆ ಸಹಾಯ ಮಾಡುವುದಾಗಿದೆ. ಹೀಗಾಗಿ ಇವುಗಳನ್ನು ವ್ಯರ್ಥ ಮಾಡಬಾರದು. ಈ ಬಗ್ಗೆ ಜಿಲ್ಲಾಡಳಿತ ಮತ್ತು ಪ್ರಾಂತೀಯ ಆಡಳಿತ ಕೂಡಲೇ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇನ್ನು ಈಟಿವಿ ಭಾರತ ವರದಿಗಾರರು ಆಯುಷ್ ಯೋಜನೆಯ ನೋಡಲ್ ಅಧಿಕಾರಿ ಡಾ. ಮುಷ್ತಾಕ್ ಅಹಮದ್ ಅವರನ್ನು ಸಂಪರ್ಕಿಸಿದಾಗ, ಅವರು ಕೆಲವು ದಿನಗಳ ಕಾಲ ರಜೆಯಲ್ಲಿರುವುದಾಗಿ ತಿಳಿಸಿದ್ದಾರೆ. ಇನ್ನು ಈ ಕುರಿತು ‘ಇಲಾಖೆ ತನಿಖೆ ನಡೆಸಲಿದ್ದು, ಇದರಲ್ಲಿ ಯಾರೇ ಶಾಮೀಲಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಜಮ್ಮು ಮತ್ತು ಕಾಶ್ಮೀರದ ಆಯುಷ್ ಇಲಾಖೆ ನಿರ್ದೇಶಕ ಡಾ.ಮೋಹನ್ ಸಿಂಗ್ ಭರವಸೆ ನೀಡಿದ್ದಾರೆ.

ಒಟ್ಟಾರೆ ಇಂತಹ ಘಟನೆಗಳನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಇಲ್ಲವಾದರೇ ಇಂಥಹ ರಾಷ್ಟ್ರೀಯ ಆಯುಷ್ ಮಿಷನ್‌ನಂತಹ ಕಲ್ಯಾಣ ಕಾರ್ಯಕ್ರಮಗಳ ನಂಬಿಕೆಗೆ ಕಳಂಕ ತರುತ್ತದೆ.

ಇದನ್ನೂ ಓದಿ: ಸಂದೇಶಖಾಲಿ ಹಿಂಸಾಚಾರ ಪ್ರಕರಣ: ಪ್ರಮುಖ ಆರೋಪಿ ಶೇಖ್ ಷಹಜಹಾನ್ ಬಂಧನ

Last Updated : Feb 29, 2024, 10:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.