ETV Bharat / bharat

ಬೆಂಗಳೂರು IISc ಪ್ರವೇಶ ಪಡೆದ ​ಜೆಇಇ ಅಡ್ವಾನ್ಸ್​ಡ್​ - ನೀಟ್​ ಪರೀಕ್ಷೆಯ ಟಾಪರ್​ - avik das JEE NEET Toper

author img

By ETV Bharat Karnataka Team

Published : Jun 20, 2024, 2:47 PM IST

ಜೆಇಇ ಮತ್ತು ನೀಟ್​ ಪರೀಕ್ಷೆಯ ಟಾಪರ್​ ಆಗಿರುವ ಪಶ್ಚಿಮ ಬಂಗಾಳದ ಅವಿಕ್​ ದಾಸ್​ ತಮ್ಮ ಮುಂದಿನ ಅಭ್ಯಾಸವನ್ನು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ನಲ್ಲಿ ಮಾಡಲಿದ್ದಾರೆ. ಈ ಮೂಲಕ ಅವರ ಬಾಲ್ಯದ ಕನಸು ನನಸಾಗಿದೆ.

ಅವಿಕ್​ ದಾಸ್
ಅವಿಕ್​ ದಾಸ್ (ETV Bharat)

ಕೋಟಾ (ರಾಜಸ್ಥಾನ): ಮೊದಲ ಪ್ರಯತ್ನದಲ್ಲೇ JEE ಮತ್ತು NEETಪರೀಕ್ಷೆಯನ್ನು ತೇರ್ಗಡೆ ಮಾಡುವ ಮೂಲಕ ಸಾಧನೆಗೈದಿದ್ದ 17 ವರ್ಷದ ಟಾಪರ್​ ಅವಿಕ್ ದಾಸ್ ತಮ್ಮ ಮುಂದಿನ ವಿದ್ಯಾಭಾಸವನ್ನು ಬೆಂಗಳೂರಿನಲ್ಲಿ ಮಾಡಲಿದ್ದಾರೆ. ಖಗೋಳ ಭೌತಶಾಸ್ತ್ರಜ್ಞನಾಗುವ ಗುರಿ ಹೊಂದಿರುವ ಅವಿಕ್ ದಾಸ್​​ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ನಲ್ಲಿ ಆಸ್ಟರೋಫಿಸಿಕ್ಸ್​ಗೆ ಪ್ರವೇಶ ಪಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಬಾಲ್ಯದಿಂದಲೂ ನಾನು ಬಾಹ್ಯಾಕಾಶ, ಆಕಾಶಕಾಯಗಳು, ನಕ್ಷತ್ರಗಳು, ಗೆಲಾಕ್ಸಿಗಳು, ಸೂಪರ್​ನೋವಾಗಳು ಮತ್ತು ಕಪ್ಪು ಕುಳಿಗಳ ಬಗ್ಗೆ ಆಸಕ್ತಿ ಹೊಂದಿದ್ದೇನೆ. 5ನೇ ತರಗತಿಯಲ್ಲಿರುವಾಗ ಸ್ಟಿಫನ್ ಹಾಕಿಂಗ್ ಅವರ ಪುಸ್ತಕವನ್ನು ಓದುತ್ತಿದ್ದಾಗ ಅದು ನನಗೆ ಖಗೋಳ ಭೌತಶಾಸ್ತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಪ್ರೇರೇಪಿಸಿತು. ಅಂದಿನಿಂದ ಐಐಎಸ್​ಸಿಗೆ ಪ್ರವೇಶ ಪಡೆಯುವುದು ನನ್ನ ಗುರಿಯಾಗಿತ್ತು. ಇದಕ್ಕಾಗಿ ನಾಲ್ಕು ಪ್ರವೇಶಾತಿ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡಿದ್ದೇನೆ. ಜೆಇಇ, ನೀಟ್, ಜೆಇಇ ಅಡ್ವಾನ್ಸ್ಡ್​ ಮತ್ತು ಐಎಟಿ ಪರೀಕ್ಷೆಗಳನ್ನು ಪಾಸ್​ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಅವಿಕ್​ ಜೆಇಇ ಅಡ್ವಾನ್ಸ್​ಡ್​ನಲ್ಲಿ ಆಲ್​ ಇಂಡಿಯಾ 69ನೇ ರ್ಯಾಂಕ್​ ಪಡೆದರೆ, ನೀಟ್​ ಯುಜಿಯಲ್ಲಿ 720ಕ್ಕೆ 705 ಅಂಕಗಳನ್ನು ಪಡೆಯುವ ಮೂಲಕ ಆಲ್​ ಇಂಡಿಯಾ 200ನೇ ರ್ಯಾಂಕ್​ ಗಳಿಸಿದ್ದಾರೆ. ಆನ್​ಲೈನ್​ ಮೂಲಕ ತರಬೇತಿ ಪಡೆದಿರುವ ಅವಿಕ್​ ಮೊದಲ ಪ್ರಯತ್ನದಲ್ಲೇ ಈ ಎರಡು ಪ್ರವೇಶಾತಿ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದಾರೆ. ಜತೆಗೆ ಪಶ್ಚಿಮ ಬಂಗಾಳದ WB-JEE ಜಂಟಿ ಪ್ರವೇಶಾತಿ ಪರೀಕ್ಷೆಯಲ್ಲಿ ಏಳನೇ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ನೀಟ್​ ಪರೀಕ್ಷೆಯಲ್ಲಿ ಅಕ್ರಮ ಬಯಲು: ಬಿಹಾರದಲ್ಲಿ 11 ಅಭ್ಯರ್ಥಿಗಳಿಂದ ತಲಾ ₹40 ಲಕ್ಷ ಡೀಲ್​, ಇಬ್ಬರ ವಶ - NEET paper leak case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.